2016 ಅಂತ್ಯಕ್ಕೆ ವಾಟ್ಸಾಪ್ ಹಳೆಯ ಫೋನ್‌ಗಳಲ್ಲಿ ಸಪೋರ್ಟ್ ಆಗುವುದಿಲ್ಲ: ಅವು ಯಾವುವು ಗೊತ್ತೇ?

ಹಳೆಯ ಫೋನ್‌ಗಳನ್ನು ಈಗಲೇ ಅಪ್‌ಗ್ರೇಡ್‌ ಮಾಡಿಕೊಳ್ಳಿ. ವಾಟ್ಸಾಪ್ 2017 ರ ಆರಂಭದಿಂದ ಹಳೆಯ ಫೋನ್‌ಗಳಲ್ಲಿ ಸಪೋರ್ಟ್‌ ಆಗುವುದಿಲ್ಲ.

By Suneel
|

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಇದೊಂದು ಶಾಕಿಂಗ್ ನ್ಯೂಸ್. ಅದರಲ್ಲೂ ವಾಟ್ಸಾಪ್‌ ಬಳಕೆದಾರರಿಗಂತು ಅತಿ ದೊಡ್ಡ ಶಾಕಿಂಗ್ ನ್ಯೂಸ್. ಪ್ರಖ್ಯಾತ ಮೆಸೇಜಿಂಗ್ ಆಪ್‌ ಆದ ವಾಟ್ಸಾಪ್‌ 2016 ರ ಅಂತ್ಯಕ್ಕೆ ದಶಲಕ್ಷಗಳಷ್ಟು ಸ್ಮಾರ್ಟ್‌ಫೋನ್‌ಗಳಲ್ಲಿ, ಅಪ್‌ಗ್ರೇಡ್ ಆಗದ ಡಿವೈಸ್‌ಗಳಲ್ಲಿ ವರ್ಕ್‌ ಆಗುವುದನ್ನು ನಿಲ್ಲಿಸುತ್ತಿದೆ ಎಂದು ಅಧಿಕೃತ ಸುದ್ದಿ ಮೂಲದಿಂದ ತಿಳಿಯಲಾಗಿದೆ.

'ದಿ ಮಿರರ್' ವರದಿ ಪ್ರಕಾರ, ತಿಂಗಳಿಗೆ 1 ಶತಕೋಟಿಗಿಂತ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್, ಹಳೆಯ ಫೋನ್‌ಗಳಲ್ಲಿ ಟೆಕ್ನಾಲಜಿ ಅಪ್‌ಗ್ರೇಡ್‌ ಸಮಸ್ಯೆಯಿಂದ ವರ್ಕ್‌ ಆಗುವಲ್ಲಿ ಸಮಸ್ಯೆ ಎದುರಿಸುತ್ತಿದೆ ಎಂದು ಹೇಳಲಾಗಿದೆ. ಯಾವ ಫೋನ್‌ಗಳಲ್ಲಿ ವಾಟ್ಸಾಪ್‌ ಸಪೋರ್ಟ್ ಆಗುವುದು ನಿಲ್ಲುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.

ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್‌ ಬಳಕೆ ಹೇಗೆ?

ವಾಟ್ಸಾಪ್‌ ಹೇಳಿದ್ದೇನು?

ವಾಟ್ಸಾಪ್‌ ಹೇಳಿದ್ದೇನು?

ಅಂದಹಾಗೆ ಈ ಶಾಕ್‌ ನ್ಯೂಸ್‌ನ ಮುಖ್ಯ ಅಂಶವೆಂದರೆ ಹಳೆಯ ಸ್ಮಾರ್ಟ್‌ಫೋನ್‌ಗಳು. "ಹಳೆಯ ಸ್ಮಾರ್ಟ್‌ಫೋನ್‌ಗಳು ನಮ್ಮ(ವಾಟ್ಸಾಪ್‌) ಆಪ್‌ನ ಫೀಚರ್‌ಗಳನ್ನು ವಿಸ್ತರಿಸಲು ಹೊಂದಾಣಿಕೆ ಆಗುವ ಸಾಮರ್ಥ್ಯವನ್ನು ಹೊಂದಿಲ್ಲ", ಎಂದು ವಾಟ್ಸಾಪ್‌ ವಕ್ತಾರರು ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2017 ಕ್ಕೆ ಹಲವು ಫೀಚರ್‌ಗಳು ಅಂತ್ಯ

2017 ಕ್ಕೆ ಹಲವು ಫೀಚರ್‌ಗಳು ಅಂತ್ಯ

2017 ಕ್ಕೆ ಹಲವು ಹಳೆಯ ಸೇವೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಕಂಪನಿ ಹೇಳಿದೆ. "ಮುಂದಿನ 7 ವರ್ಷಗಳ ಕಾಲ, ನಮ್ಮ ಹಲವು ಹೊಸ ಪ್ರಯತ್ನಗಳನ್ನು ಬಹುತೇಕ ಜನರು(ಗರಿಷ್ಟ) ಬಳಸುವ ಮೊಬೈಲ್‌ ವೇದಿಕೆಯಲ್ಲಿ ಮಾತ್ರ ಗಮನಹರಿಸುತ್ತೇವೆ" ಎಂದು ವಾಟ್ಸಾಪ್‌ ಕಂಪನಿ ವಕ್ತಾರ ಹೇಳಿದ್ದಾರೆ.

ಯಾವ ಮೊಬೈಲ್‌ ವೇದಿಕೆಗಳಲ್ಲಿ ವಾಟ್ಸಾಪ್ ಸಪೋರ್ಟ್‌ ಆಗುವುದಿಲ್ಲ?

ಯಾವ ಮೊಬೈಲ್‌ ವೇದಿಕೆಗಳಲ್ಲಿ ವಾಟ್ಸಾಪ್ ಸಪೋರ್ಟ್‌ ಆಗುವುದಿಲ್ಲ?

ಬ್ಲಾಗ್‌ನಲ್ಲಿ ಕಂಪನಿ ವಾಟ್ಸಾಪ್‌ ಸಪೋರ್ಟ್‌ ಆಗದ ಹಲವು ಮೊಬೈಲ್‌ ವೇದಿಕೆಗಳನ್ನು ಪಟ್ಟಿ ಮಾಡಿದ್ದು, ಅವುಗಳಲ್ಲಿ ಆಂಡ್ರಾಯ್ಡ್ 2.1 ಮತ್ತು ಆಂಡ್ರಾಯ್ಡ್ 2.2, ವಿಂಡೋಸ್ ಫೋನ್ 7 ಮತ್ತು ಐಫೋನ್ 3GS ಅಥವಾ ಐಒಎಸ್ 6 ಸೇರಿದಂತೆ ಇನ್ನೂ ಹಲವು ಇವೆಯಂತೆ.

ವರದಿಯಲ್ಲಿ ಹೇಳಿದ್ದೇನು?

ವರದಿಯಲ್ಲಿ ಹೇಳಿದ್ದೇನು?

ವರದಿ ಪ್ರಕಾರ, ಯಾವುದೇ ಐಫೋನ್ 4, 4s ಅಥವಾ 5 ಹೊಸ ಆಪರೇಟಿಂಗ್‌ ಸಿಸ್ಟಮ್‌ಗೆ ಅಪ್‌ಗ್ರೇಡ್‌ ಆಗಿಲ್ಲ. ಐಓಏಸ್ 10 ಸಹ ವಾಟ್ಸಾಪ್ ಸಪೋರ್ಟ್ ಮಾಡದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ವಾಟ್ಸಾಪ್‌ ಸಪೋರ್ಟ್ ಯಾವುದರಲ್ಲಿ?

ವಾಟ್ಸಾಪ್‌ ಸಪೋರ್ಟ್ ಯಾವುದರಲ್ಲಿ?

ಬ್ಲ್ಯಾಕ್‌ಬೆರಿ ಓಎಸ್, ಬ್ಲ್ಯಾಕ್‌ಬೆರಿ 10, ನೋಕಿಯಾ ಎಸ್‌40 ಮತ್ತು ನೋಕಿಯಾ ಸಿಂಬಿಯನ್ ಎಸ್‌360 ವೇದಿಕೆಗಳಿಗೆ ವಾಟ್ಸಾಪ್‌ ಸಪೋರ್ಟ್ ಮಾಡುವುದನ್ನು ಕಂಪನಿ ವಿಸ್ತರಣೆ ಮಾಡಿದೆ.

ಗಿಜ್‌ಬಾಟ್ ಸಲಹೆ: ವಾಟ್ಸಾಪ್ ಪ್ರಿಯರು ವಾಟ್ಸಾಪ್ ಆಪ್‌ ಬಳಸದೇ ಬಿಟ್ಟಿರಲು ಸಾಧ್ಯವಾಗುವುದಿಲ್ಲ ಎನ್ನುವವರು ತಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಈ ಹೊಸ ವರ್ಷದ ಸಮಯದಲ್ಲಿ ಎಕ್ಸ್‌ಚೇಂಜ್‌ ಆಫರ್‌ನೊಂದಿಗೆ ಹಿಂದಿರಿಗಿಸಿ, ಹೊಸ ಫೋನ್‌ಗಳನ್ನು ಖರೀದಿಸಬಹುದು. ಎಕ್ಸ್‌ಚೇಂಜ್‌ ಆಫರ್‌ ಮತ್ತು ಹೊಸ ವರ್ಷದ ವಿವಿಧ ಆಫರ್‌ಗಳಲ್ಲಿ ಮೊಬೈಲ್ ಖರೀದಿ ಮಾಹಿತಿಗಾಗಿ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Upgrade your phone: WhatsApp will stop working on older ones in 2017. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X