Home
Social media

ಫೇಸ್‌ಬುಕ್,ಇನ್‌ಸ್ಟಾಗ್ರಾಮ್ ಜಾಗತಿಕ ಸ್ಥಗಿತ; ಜುಕರ್‌ಬರ್ಗ್‌ಗೆ ಆದ ನಷ್ಟ ಎಷ್ಟು ಗೊತ್ತಾ? ಶಾಕ್‌ ಅಗ್ತೀರಾ...

ಮೆಟಾ ಒಡೆತನದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ (Facebook and Instagram) ಜಾಗತಿಕ ಸ್ಥಗಿತವನ್ನು ಎದುರಿಸಿದ್ದು ನಿಮ್ಮೆಲ್ಲರಿಗೂ ತಿಳಿದೇ ಇದೆ. ಫೇಸ್‌ಬುಕ್‌ನಲ್ಲಿ ಸಮಸ್ಯೆ ಆದಾಗ ಬಳಕೆದಾರರು ಎಲ್ಲಿ ತಮ್ಮ ಖಾತೆ ಹ್ಯಾಕ್‌ ಆಯ್ತೋ ಅನ್ನೋ ಭಯದಲ್ಲೇ ಇದ್ದರು. ಇದಾದ ಕೆಲವೇ ಸಮಯದಲ್ಲಿ ಮೆಟಾ ಈ ಸಂಬಂಧ ಸ್ಪಷ್ಟನೆ ನೀಡಿ ಸಮಾಧಾನ ಪಡಿಸಿತ್ತಿ. ಆದರೆ, ಈ ಸಮಸ್ಯೆಯಿಂದ ಮೆಟಾ ಬರೋಬ್ಬರಿ 300 ಕೋಟಿ ನಷ್ಟ ಅನುಭವಿಸಿದೆ.

ಹೌದು, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಜಾಗತಿಕ ಸ್ಥಗಿತದ (Facebook, Instagram global shutdown) ನಂತರ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರ ನಿವ್ವಳ ಮೌಲ್ಯವು ಒಂದೇ ದಿನದಲ್ಲಿ ಸುಮಾರು 3 ಬಿಲಿಯನ್‌ ಡಾಲರ್‌ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಮೆಟಾ ಷೇರುಗಳು ಕುಸಿದಿದ್ದರಿಂದ ಈ ನಷ್ಟ ಎದುರಿಸುವಂತೆ ಆಗಿದೆ. ಹಾಗಿದ್ರೆ, ಈ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಕಂಡುಬಂದ ಸಮಸ್ಯೆಗಳು ಏನು?, ಇದು ಜುಕರ್‌ಬರ್ಗ್ಗೆ ಹೇಗೆಲ್ಲಾ ಹೊಡೆತ ನೀಡಿದೆ ತಿಳಿಯೋಣ ಬನ್ನಿ.

ಫೇಸ್‌ಬುಕ್,ಇನ್‌ಸ್ಟಾಗ್ರಾಮ್ ಸ್ಥಗಿತ; ಜುಕರ್‌ಬರ್ಗ್‌ಗೆ ಆದ ನಷ್ಟ ಎಷ್ಟು ಗೊತ್ತಾ?

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಜಾಗತಿಕ ಸ್ಥಗಿತ: ಪ್ರಮುಖ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಜಾಗತಿಕ ಸ್ಥಗಿತವನ್ನು ಎದುರಿಸಿದ ಬಳಿಕ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಒಂದು ದಿನದಲ್ಲಿ ಸುಮಾರು 3 ಬಿಲಿಯನ್ ಡಾಲರ್‌ ಕಳೆದುಕೊಂಡಿದ್ದಾರೆ. ಅಂದರೆ ಮಾರ್ಚ್ 6, 2024 ರಂತೆ, ಮಾರ್ಕ್ ಜುಕರ್‌ಬರ್ಗ್ ಅವರ ನಿವ್ವಳ ಮೌಲ್ಯವು ಒಂದು ದಿನದಲ್ಲಿ $2.79 ಶತಕೋಟಿಗಳಷ್ಟು ಕಡಿಮೆಯಾಗಿದ್ದು, ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ $176 ಬಿಲಿಯನ್ ತಲುಪಿದೆ. ಅದಾಗ್ಯೂ ಅವರು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಒಂದು ಗಂಟೆ ಅವಧಿಯ ಜಾಗತಿಕ ನಿಲುಗಡೆಯ ನಂತರ, ಮೆಟಾ ಷೇರುಗಳು ಶೇಕಡಾ 1.6 ರಷ್ಟು ಕುಸಿದವು, ಇದು ಮಾರ್ಕ್ ಜುಕರ್‌ಬರ್ಗ್ ಅವರ ನಿವ್ವಳ ಮೌಲ್ಯದಲ್ಲಿ ಕುಸಿತಕ್ಕೆ ಕಾರಣವಾಗಿದೆ. 2021 ರಲ್ಲಿ ಒಮ್ಮೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಅನ್ನು 7 ಗಂಟೆಗಳ ಕಾಲ ಸ್ಥಗಿತಗೊಳಿದಿದ್ದಾಗಲೂ ಇದೇ ರೀತಿ ನಷ್ಟ ಅನುಭವಿಸಿದ್ದರು. ಆದರೆ ಈ ಬಾರಿ ಕೇವಲ 2 ಗಂಟೆಗಳಲ್ಲಿ ಸಮಸ್ಯೆ ಬಗೆಹರಿದಿದೆ.

ಫೇಸ್‌ಬುಕ್,ಇನ್‌ಸ್ಟಾಗ್ರಾಮ್ ಸ್ಥಗಿತ; ಜುಕರ್‌ಬರ್ಗ್‌ಗೆ ಆದ ನಷ್ಟ ಎಷ್ಟು ಗೊತ್ತಾ?

ಇನ್ನು ಈ ಸ್ಥಗಿತದ ಸಮಸ್ಯೆಯ ಸಮಯದಲ್ಲಿ ಅವರ ಆಂತರಿಕ ವ್ಯವಸ್ಥೆಯೂ ಸ್ಥಗಿತಗೊಂಡಿತ್ತು ಎಂದು ಫೇಸ್‌ಬುಕ್‌ನ ಅಧಿಕಾರಿಯೊಬ್ಬರು ಪ್ರಮುಖ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ಮೆಟಾದ ಸೇವಾ ಡ್ಯಾಶ್‌ಬೋರ್ಡ್ ಅನೇಕ ಸೇವೆಗಳಿಗೆ ಪ್ರಮುಖ ಅಡಚಣೆಯ ಮೆಸೆಜ್‌ಗಳನ್ನು ಆ ವೇಳೆ ನೀಡಿತ್ತು. ಕೋಡಿಂಗ್ ದೋಷಗಳಿಂದಾಗಿ ಮೆಟಾದ ಪ್ಲಾಟ್‌ಫಾರ್ಮ್‌ನಲ್ಲಿ ಸಮಸ್ಯೆ ಉಮಟಾಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಥ್ರೆಡ್‌ಗಳ ಬಳಕೆದಾರರು ವಿವಿಧ ರೀತಿಯಲ್ಲಿ ಇವುಗಳನ್ನು ಪ್ರವೇಶಿಸಲು ತೊಂದರೆಗಳನ್ನು ಅನುಭವಿಸಿದರು. ಹೆಚ್ಚುವರಿಯಾಗಿ, ಮೆಟಾ ಕ್ವೆಸ್ಟ್ ಬಳಕೆದಾರರು ತಮ್ಮ ಹೆಡ್‌ಸೆಟ್‌ಗಳಿಗೆ ಲಾಗ್ ಇನ್ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅಂದರೆ ಲೋಡ್ ಮಾಡುವಲ್ಲಿ ವಿಫಲತೆಯನ್ನು ಅನುಭವಿಸಿದ್ದಾರೆ. ಜೊತೆಗೆ ಸ್ಥಗಿತದ ಸಮಯದಲ್ಲಿ ಅನೇಕ ಫೇಸ್‌ಬುಕ್ ಖಾತೆಗಳು ಆಟೋಮ್ಯಾಟಿಕ್‌ ಆಗಿ ಲಾಗ್ ಔಟ್ ಆಗಿವೆ.

ಫೇಸ್‌ಬುಕ್,ಇನ್‌ಸ್ಟಾಗ್ರಾಮ್ ಸ್ಥಗಿತ; ಜುಕರ್‌ಬರ್ಗ್‌ಗೆ ಆದ ನಷ್ಟ ಎಷ್ಟು ಗೊತ್ತಾ?

ಸ್ಥಗಿತದ ವೇಳೆ ಸಾಕಷ್ಟು ನೆಟ್ಟಿಗರು ಎಕ್ಸ್ ಕಡೆ ವಾಲಿದ್ದಾರೆ. ಅಲ್ಲಿ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್ ಪ್ರತಿಸ್ಪರ್ಧಿ ಮೆಟಾವನ್ನು ತೀವ್ರ ರೀತಿಯಲ್ಲಿ ಅಪಹಾಸ್ಯ ಮಾಡಿದ್ದಾರೆ. ಇದೆಲ್ಲಾ ಆದ ಮೇಲೆ ನೀವು ಈ ಪೋಸ್ಟ್ ಅನ್ನು ಓದುತ್ತಿದ್ದರೆ, ನಮ್ಮ ಸರ್ವರ್‌ಗಳು ಕಾರ್ಯನಿರ್ವಹಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಎಕ್ಸ್‌ನಲ್ಲಿ ಮಸ್ಕ್ ಪೋಸ್ಟ್‌ ಮಾಡಿದ್ದಾರೆ. ಈ ಮೂಲಕ ಕೆಲಕಾಲದ ಆತಂಕಕ್ಕೆ ತೆರೆ ಎಳೆಯಲಾಗಿದೆ.

Best Mobiles in India

English summary
After the Facebook and Instagram global shutdown , the net worth of Meta CEO Mark Zuckerberg decreased by 3 billion dollars in a single day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+