ಜಿಯೋದ 7 ಟ್ಯಾರಿಪ್ ಪ್ಲಾನ್‌ಗಳಲ್ಲಿ ಉಚಿತ ವಾಯ್ಸ್ ಕರೆ ಮತ್ತು ರೋಮಿಂಗ್ ಆಫರ್!

By Suneel
|

ರಿಲಾಯನ್ಸ್ ಜಿಯೋ 4G ಅಧಿಕೃತವಾಗಿ ಲಾಂಚ್‌ ಆದ ನಂತರ ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಆದ 'ಮುಕೇಶ್ ಅಂಬಾನಿ'ರವರು ಜಿಯೋದ ಎಲ್ಲಾ ಸೇವೆಗಳನ್ನು ಸ್ಪಷ್ಟಪಡಿಸಿದ್ದಾರೆ. ಜಿಯೋ ಸೇವೆಯು ದೇಶದಾದ್ಯಂತ ಇತರೆ ಟೆಲಿಕಾಂಗಳಿಗಿಂತ ಕಡಿಮೆಯೇ ಆಗಿದೆ.

ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಉಚಿತ ವಾಯ್ಸ್‌ ಕರೆಗಳು ಮತ್ತು ರೋಮಿಂಗ್‌ ಸೇವೆ ಲಭ್ಯವಾಗುವ 7 ರಿಲಾಯನ್ಸ್ ಜಿಯೋ ಟ್ಯಾರಿಫ್‌ ಪ್ಲಾನ್‌ಗಳ ಬಗ್ಗೆ ತಿಳಿಸುತ್ತಿದ್ದೇವೆ. ಗ್ರಾಹಕರು ರಿಲಾಯನ್ಸ್ ಜಿಯೋ ಟ್ಯಾರಿಫ್ ಪ್ಲಾನ್‌ ರೀಚಾರ್ಜ್ ಪಡೆಯುವ ಮುನ್ನ ಈ ಮಾಹಿತಿಯನ್ನು ತಿಳಿಯಲೇ ಬೇಕಿದೆ. ಮಾಹಿತಿಗಾಗಿ ಕೆಳಗಿನ ಸ್ಲೈಡರ್‌ಗಳನ್ನು ಓದಿರಿ.

ಈ 8 ಹಂತಗಳನ್ನು ಪಾಲಿಸಿ ಯಾವುದೇ ಆಂಡ್ರಾಯ್ಡ್‌ನಲ್ಲಿ ಜಿಯೋ 4G ಸಿಮ್ ಬಳಸಿ

ಟ್ಯಾರಿಫ್‌ ಪ್ಲಾನ್ ರೂ.149

ಟ್ಯಾರಿಫ್‌ ಪ್ಲಾನ್ ರೂ.149

ಟ್ಯಾರಿಫ್‌ ಪ್ಲಾನ್ ರೂ.149 ರಲ್ಲಿ ರಿಲಾಯನ್ಸ್ ಉಚಿತ ವಾಯ್ಸ್ ಕರೆಗಳ ಜೊತೆಗೆ ಲೋಕಲ್‌ ಮತ್ತು ಎಸ್‌ಟಿಡಿ ಮತ್ತು 0.3 GB ಡಾಟಾ ನೀಡುತ್ತದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಇರುತ್ತದೆ. ಪ್ಯಾಕ್‌ ಲೋಕಲ್ ಮತ್ತು ನ್ಯಾಷನಲ್‌ 100 ಉಚಿತ ಎಸ್‌ಎಂಎಸ್‌ಗಳನ್ನು ಒಳಗೊಂಡಿದೆ.

ಟ್ಯಾರಿಫ್‌ ಪ್ಲಾನ್ ರೂ.499

ಟ್ಯಾರಿಫ್‌ ಪ್ಲಾನ್ ರೂ.499

ಟ್ಯಾರಿಫ್‌ ಪ್ಲಾನ್ ರೂ.499 ಮೂಲಕ ರಿಲಾಯನ್ಸ್ ಜಿಯೋ ಅನ್‌ಲಿಮಿಟೆಡ್ ಮತ್ತು ಉಚಿತ ವಾಯ್ಸ್ ಕರೆಗಳು, ಎಸ್‌ಎಂಎಸ್ ಮತ್ತು 4GB ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತದೆ. ಅಲ್ಲದೇ ವೈಫೈ ಹಾಟ್‌ಸ್ಪಾಟ್‌ ಮೂಲಕ 8GB ಡಾಟಾವನ್ನು ಜಿಯೋ ನೀಡುತ್ತದೆ. ಅನ್‌ಲಿಮಿಟೆಡ್ ರಾತ್ರಿ ಡಾಟಾ ಬಳಕೆಯು ಒಳಗೊಂಡಿದೆ.

ಟ್ಯಾರಿಫ್‌ ಪ್ಲಾನ್ ರೂ.999

ಟ್ಯಾರಿಫ್‌ ಪ್ಲಾನ್ ರೂ.999

ರಿಲಾಯನ್ಸ್ ಜಿಯೋ ಈ ಟ್ಯಾರಿಫ್‌ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಮತ್ತು ಉಚಿತ ವಾಯ್ಸ್ ಕರೆಗಳು ಮತ್ತು ಉಚಿತ ಎಸ್‌ಎಂಎಸ್‌, 10GB ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ಈ ಸೇವೆಯು 20GB ಡಾಟಾವನ್ನು ವೈಫೈ ಹಾಟ್‌ಸ್ಪಾಟ್‌ಗಳ ಮೂಲಕ ನೀಡುತ್ತಿದೆ. ರಾತ್ರಿ ಡಾಟಾ ಬಳಕೆಯು ಒಳಗೊಂಡಿದೆ.

ಟ್ಯಾರಿಫ್‌ ಪ್ಲಾನ್ ರೂ.1,499

ಟ್ಯಾರಿಫ್‌ ಪ್ಲಾನ್ ರೂ.1,499

ಈ ಪ್ಲಾನ್‌ ಅಡಿಯಲ್ಲಿ ರಿಲಾಯನ್ಸ್ ಜಿಯೋ ಅನ್‌ಲಿಮಿಟೆಡ್ ವಾಯ್ಸ್ ಕರೆ, ಉಚಿತ ಎಸ್‌ಎಂಎಸ್, 20GB ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. 40GB ಡಾಟಾ ಆಫರ್ ವೈಫೈ ಹಾಟ್‌ಸ್ಪಾಟ್‌ನಿಂದ ದೊರೆಯುತ್ತದೆ. ರಾತ್ರಿ ಉಚಿತ ಡಾಟಾವು ಒಳಗೊಂಡಿರುತ್ತದೆ.

ಟ್ಯಾರಿಫ್‌ ಪ್ಲಾನ್ ರೂ.2,499

ಟ್ಯಾರಿಫ್‌ ಪ್ಲಾನ್ ರೂ.2,499

ಟ್ಯಾರಿಫ್‌ ಪ್ಲಾನ್ ರೂ.2,499 ಪ್ರಕಾರ, ರಿಲಾಯನ್ಸ್ ಜಿಯೋ ಅನ್‌ಲಿಮಿಟೆಡ್‌ ಉಚಿತ ವಾಯ್ಸ್ ಕರೆ, ಎಂಎಸ್‌ಎಸ್‌ ಮತ್ತು 35GB ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ವಿಶೇಷವಾಗಿ 70GB ಡಾಟಾವು ವೈಫೈ ಹಾಟ್‌ಸ್ಪಾಟ್‌ನೊಂದಿಗೆ ಸಿಗುತ್ತದೆ. ರಾತ್ರಿ ಡಾಟಾವು ಸಹ ಒಳಗೊಂಡಿದೆ.

ಟ್ಯಾರಿಫ್‌ ಪ್ಲಾನ್ ರೂ.3,999

ಟ್ಯಾರಿಫ್‌ ಪ್ಲಾನ್ ರೂ.3,999

ಪ್ಲಾನ್ ರೂ.3,999'ನಲ್ಲಿ ರಿಲಾಯನ್ಸ್ ಜಿಯೋ ಅನ್‌ಲಿಮಿಟೆಡ್ ಮತ್ತು ಉಚಿತ ವಾಯ್ಸ್ ಕರೆ, ಎಸ್‌ಎಂಎಸ್ ಮತ್ತು 60GB ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ಅಲ್ಲದೇ 120GB ಡಾಟಾವು ವೈಫೈ ಹಾಟ್‌ಸ್ಪಾಟ್‌ ಮೂಲಕ ದೊರೆಯಲಿದೆ. ಅನ್‌ಲಿಮಿಟೆಡ್‌ ರಾತ್ರಿ ಡಾಟಾ ಬಳಕೆ ಉಚಿತವಾಗಿರುತ್ತದೆ.

 ಟ್ಯಾರಿಫ್‌ ಪ್ಲಾನ್ ರೂ.4,999

ಟ್ಯಾರಿಫ್‌ ಪ್ಲಾನ್ ರೂ.4,999

ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಮತ್ತು ಉಚಿತ ವಾಯ್ಸ್ ಕರೆ ಸೇವೆ, ಉಚಿತ ಎಸ್‌ಎಂಎಸ್, 75GB ಡಾಟಾ 28 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ವೈಫೈ ಹಾಟ್‌ಸ್ಪಾಟ್‌ ಮೂಲಕ 150GB ಡಾಟಾ ಆಫರ್‌ ಮತ್ತು ರಾತ್ರಿ ಡಾಟಾ ಸೇವೆ ಲಭ್ಯವಿರುತ್ತದೆ.

Best Mobiles in India

English summary
Get Free Voice Calls and Roaming with These 7 Reliance Jio Tariff Plans. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X