Home
Apps

ಜೈಲ್ ಬ್ರೇಕ್ ಮಾಡದೆ ಆ್ಯಪಲ್ ಐಪ್ಯಾಡ್ ನಲ್ಲಿ ವಾಟ್ಸಪ್ ಉಪಯೋಗಿಸುವುದು ಹೇಗೆ?

By Ashok

ವಾಟ್ಸಪ್ ಅತ್ಯಂತ ಹೆಚ್ಚು ಉಪಯೋಗಿಸಲ್ಪಡುವ ಮೆಸೇಜಿಂಗ್ ತಂತ್ರಾಂಶ ಅನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಈ ವರುಷದ ಪ್ರಾರಂಭದಲ್ಲಿ, ಫೇಸ್ ಬುಕ್ ಒಡೆತನದ ವಾಟ್ಸಪ್ ತನ್ನ ಬಳಕೆದಾರರ ಸಂಖೈ 2015ರಲ್ಲಿ 700 ಮಿಲಿಯನ್ ಇದ್ದರೆ ಫೆಬ್ರವರಿ 2016ರಷ್ಟರಲ್ಲಿ ಒಂದು ಬಿಲಿಯನ್ ಗಿಂತಲೂ ಹೆಚ್ಚಿದೆ ಎಂದು ಘೋಷಿಸಿತ್ತು.

ಜೈಲ್ ಬ್ರೇಕ್ ಮಾಡದೆ ಆ್ಯಪಲ್ ಐಪ್ಯಾಡ್ ನಲ್ಲಿ ವಾಟ್ಸಪ್ ಉಪಯೋಗಿಸುವುದು ಹೇಗೆ?

ಪ್ರತಿ ದಿನವೂ ವಾಟ್ಸಪ್ ಬಳಕೆದಾರರ ಸಂಖೈ ಹೆಚ್ಚುತ್ತಲೇ ಇದೆ. ಆದರೆ ಕಂಪನಿಯು ಒಂದು ಅಂಶವನ್ನು ಗುರುತಿಸುವಲ್ಲಿ ವಿಫಲವಾಗಿದೆ.
ಓದಿರಿ: ರಿಲಾಯನ್ಸ್ ಜಿಯೋ 4G ಇಂಟರ್ನೆಟ್ ಅನ್ನು ಪಿಸಿ/ಲ್ಯಾಪ್‌ಟಾಪ್‌ಗಳಲ್ಲಿ ಬಳಕೆ ಹೇಗೆ?

ಈ ಮೆಸೇಜಿಂಗ್ ತಂತ್ರಾಂಶವು ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳು, ಆ್ಯಪಲ್ ಐಫೋನುಗಳು ಮತ್ತು ವಿಂಡೋಸ್ ಫೋನುಗಳಿಗೆ ಕೂಡ ಲಭ್ಯವಿದೆ. ಕಂಪನಿಯು ಇತ್ತೀಚೆಗೆ ಮ್ಯಾಕ್ ಮತ್ತು ಪಿಸಿಗಳಿಗೆ ವೆಬ್ ಆವೃತ್ತಿಯನ್ನೂ ಬಿಡುಗಡೆಗೊಳಿಸಿದೆ. ಆದರೆ, ಆ್ಯಪಲ್ ಐಪ್ಯಾಡಿನಲ್ಲಿ ವಾಟ್ಸಪ್ ಇನ್ಸ್ಟಾಲ್ ಮಾಡಲು ಸಾಧ್ಯವಿಲ್ಲ.

ಜೈಲ್ ಬ್ರೇಕ್ ಮಾಡದೆ ಆ್ಯಪಲ್ ಐಪ್ಯಾಡ್ ನಲ್ಲಿ ವಾಟ್ಸಪ್ ಉಪಯೋಗಿಸುವುದು ಹೇಗೆ?

ಹಾಗಿದ್ದರೂ, ನಿಮ್ಮ ಐಪ್ಯಾಡಿನಲ್ಲಿ ವಾಟ್ಸಪ್ ಉಪಯೋಗಿಸಲೊಂದು ದಾರಿ ಇದೆ. ಅದೇನೆಂದು ತಿಳಿಯಲು ಈ ಲೇಖನ ಓದಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜೈಲ್ ಬ್ರೇಕ್ ಮಾಡದೆ ಆ್ಯಪಲ್ ಐಪ್ಯಾಡ್ ನಲ್ಲಿ ವಾಟ್ಸಪ್ ಉಪಯೋಗಿಸುವುದು ಹೇಗೆ?

ಹಂತ 1: ಸಫಾರಿ ಬ್ರೌಸರ್ ತೆರೆಯಿರಿ.

ನಿಮ್ಮ ಐಪ್ಯಾಡಿನಲ್ಲಿ ನೀವು ಮಾಡಬೇಕಿರುವ ಮೊದಲ ಕೆಲಸವೆಂದರೆ ಸಫಾರಿ ಬ್ರೌಸರನ್ನು ತೆರೆಯುವುದು.

ಜೈಲ್ ಬ್ರೇಕ್ ಮಾಡದೆ ಆ್ಯಪಲ್ ಐಪ್ಯಾಡ್ ನಲ್ಲಿ ವಾಟ್ಸಪ್ ಉಪಯೋಗಿಸುವುದು ಹೇಗೆ?

ಹಂತ 2: ವಾಟ್ಸಪ್ಪಿನ ವೆಬ್ ಆವೃತ್ತಿಗೆ ಭೇಟಿ ಕೊಡಿ.

ಸರ್ಚ್ ಬಾರಿನಲ್ಲಿ web.whatsapp.com ಎಂದು ಟೈಪಿಸಿ. ವಾಟ್ಸಪ್ಪಿನ ಅಧಿಕೃತ ವೆಬ್ ಪುಟ ತೆರೆದುಕೊಳ್ಳುತ್ತದೆ.

ಹಂತ 3: ಡೆಸ್ಕ್ ಟಾಪ್ ವರ್ಷನ್ ಅನ್ನು ಆಯ್ಕೆ ಮಾಡಿ.

ನಿಮ್ಮ ಐಪ್ಯಾಡಿನಲ್ಲಿ ವಾಟ್ಸಪ್ ಉಪಯೋಗಿಸಬೇಕೆಂದರೆ ವೆಬ್ ಆವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಿ. ಇದನ್ನು ಮಾಡಲು ಮೇಲಿನ ಬಲ ತುದಿಯಲ್ಲಿರುವ ರೆಫ್ರೆಶ್ ಬಟನ್ ಅನ್ನು ದೀರ್ಘವಾಗಿ ಒತ್ತಿ ಹಿಡಿಯಿರಿ. 'ರಿಕ್ವೆಷ್ಟ್ ಡೆಸ್ಕ್ ಟಾಪ್ ಸೈಟ್' ಆಯ್ಕೆಯನ್ನು ಕ್ಲಿಕ್ಕಿಸಿ.

ಹಂತ 4: ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ.

ನಂತರ ನಿಮ್ಮ ಐಪ್ಯಾಡ್ ಪರದೆಯಲ್ಲಿ ಕ್ಯೂ.ಆರ್ ಕೋಡ್ ಕಾಣಿಸುತ್ತದೆ. ಸ್ಮಾರ್ಟ್ ಫೋನ್ ಬಳಸಿ ಅದನ್ನು ಸ್ಕ್ಯಾನ್ ಮಾಡಿ.

ಹಂತ 5: ಈಗ ವಾಟ್ಸಪ್ ಬಳಸಿ.

ಮೇಲಿನ ಎಲ್ಲಾ ಹಂತಗಳನ್ನೂ ನೀವು ಸರಿಯಾಗಿ ಪಾಲಿಸಿದ್ದರೆ, ನಿಮ್ಮ ವಾಟ್ಸಪ್ಪಿನ ಸಂವಹನಗಳು ಕಾಣಿಸುತ್ತವೆ, ಮೆಸೇಜು ಮಾಡಲು ಪ್ರಾರಂಭಿಸಿ!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
WhatsApp is undoubtedly the most used cross-platform messaging app. Earlier this year, the Facebook-owned company announced that it's user base has grown from 700 million in 2015 to more than 1 billion monthly active users (February 2016).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+