ಫೋನ್ ನಂಬರ್ ಇಲ್ಲದೆಯೇ ಫೇಸ್‌ಬುಕ್ ಖಾತೆ ರಚಿಸುವುದು ಹೇಗೆ?

By Shwetha
|

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಾಣಗಳಲ್ಲಿ ನಮ್ಮ ಫೋನ್ ಸಂಖ್ಯೆಯನ್ನು ನೀಡುವುದು ಹೆಚ್ಚು ಅಪಾಯಕಾರಿ ಎಂದೆನಿಸಿದೆ. ಫೇಸ್‌ಬುಕ್‌ನಂತಹ ತಾಣದಲ್ಲಿ ಕೂಡ ನಿಮ್ಮ ವೈಯಕ್ತಿಕ ಸಂಖ್ಯೆಯನ್ನು ನೀಡದೆಯೇ ನೀವು ಮುಂದುವರಿಯುವುದು ಹೆಚ್ಚು ಉತ್ತಮ ಎಂದೇ ನಾವು ಸಲಹೆ ನೀಡುತ್ತಿದ್ದೇವೆ. ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಆದಷ್ಟು ಈ ತಾಣಗಳಲ್ಲಿ ಗೌಪ್ಯವಾಗಿರಿಸುವುದೇ ಉತ್ತಮ ಎಂಬುದಾಗಿ ನಾವು ಸಲಹೆ ನೀಡುತ್ತಿದ್ದೇವೆ.

ಓದಿರಿ: ಐಡಿಯಾದಿಂದ ರೂ 1 ಕ್ಕೆ ಅನಿಯಮಿತ 4ಜಿ ಡೇಟಾ ಆಫರ್ ಪಡೆದುಕೊಳ್ಳುವುದು ಹೇಗೆ?

ಹಾಗಿದ್ದರೆ ನಿಮ್ಮ ಫೋನ್ ಸಂಖ್ಯೆಯನ್ನು ನೀಡದೆಯೇ ಫೇಸ್‌ಬುಕ್ ಖಾತೆಯನ್ನು ರಚಿಸುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ತ್ರೊವೆಮೇಲ್

ತ್ರೊವೆಮೇಲ್

ಈ ವೆಬ್‌ಸೈಟ್ ತಾತ್ಕಾಲಿಕ ಇಮೇಲ್ ವಿಳಾಸವನ್ನು ರಚಿಸುತ್ತದೆ. throwawaymail.com ಗೆ ಹೋಗಿ ಮತ್ತು ಬಾಕ್ಸ್‌ನಲ್ಲಿ ಜನರೇಟ್ ಆದ ಇಮೇಲ್ ವಿಳಾಸವನ್ನು ಕಾಪಿ ಮಾಡಿ.

ಫೇಸ್‌ಬುಕ್‌ನಲ್ಲಿ ಖಾತೆ ರಚಿಸಿ

ಫೇಸ್‌ಬುಕ್‌ನಲ್ಲಿ ಖಾತೆ ರಚಿಸಿ

ಫೇಸ್‌ಬುಕ್ ವೆಬ್‌ಸೈಟ್‌ನಲ್ಲಿ, ಸೈನ್ ಅಪ್‌ಗಾಗಿ ವಿವರಗಳನ್ನು ದಾಖಲಿಸಿ. ಇಮೇಲ್ ಐಡಿಯನ್ನು ನಮೂದಿಸುವಾಗ throwawaymail.com ನಿಂದ ಲಭಿಸಿದ ತಾತ್ಕಾಲಿಕ ಐಡಿ ಪೇಸ್ಟ್ ಮಾಡಿ, ನಂತರ ಸೈನ್ ಅಪ್ ಆಗಿ.

ರಿಕವರ್ ಫೋನ್ ನಂಬರ್ ಆಪ್ಶನ್ ಸ್ಕಿಪ್ ಮಾಡಿ

ರಿಕವರ್ ಫೋನ್ ನಂಬರ್ ಆಪ್ಶನ್ ಸ್ಕಿಪ್ ಮಾಡಿ

ಮೇಲಿನ ಪ್ರಕ್ರಿಯೆಯನ್ನು ನೀವು ಒಮ್ಮೆ ಪೂರ್ಣಗೊಳಿಸಿದ ನಂತರ, ನಿಮ್ಮ ಖಾತೆಯ ತ್ವರಿತ ರಿಕವರಿಗಾಗಿ ಫೋನ್ ಸಂಖ್ಯೆಯನ್ನು ನಮೂದಿಸಲು ಫೇಸ್‌ಬುಕ್ ನಿಮ್ಮನ್ನು ಕೇಳುತ್ತದೆ. ಈ ಹಂತವನ್ನು ಬಿಡಿ.

ದೃಢೀಕರಣ

ದೃಢೀಕರಣ

ಈಗ, ಫೇಸ್‌ಬುಕ್ ನೀಡಿರುವ ಇಮೇಲ್ ವಿಳಾಸಕ್ಕೆ ದೃಢೀಕರಣ ಮೇಲ್ ಅನ್ನು ಕಳುಹಿಸುತ್ತದೆ. throwawaymail.com ಗೆ ಹಿಂತಿರುಗಿ ಮತ್ತು ಮೇಲ್‌ಗೆ ಕ್ಲಿಕ್ ಮಾಡಿ. ಫೇಸ್‌ಬುಕ್ ವೆಬ್‌ಸೈಟ್‌ನಲ್ಲಿ ಡಯಲಾಗ್ ಬಾಕ್ಸ್‌ನಲ್ಲಿ ನಮೂದಿಸಿರುವ ವೆರಿಫಿಕೇಶನ್ ಸಂಖ್ಯೆ ದೊರೆಯುತ್ತದೆ. ಇದು ಆಯಿತು ಎಂದಾದಲ್ಲಿ ನೀವು ಮುಂದುವರಿಯಬಹುದಾಗಿದೆ.

Best Mobiles in India

English summary
So here is a way you can avoid providing your personal contact details to Facebook and still create an account.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X