Subscribe to Gizbot

ಆಧಾರ್ ಪೇ: ಬೇಕಾದ್ದು ಖರೀಸಿದಿ, ಹೆಬ್ಬೆಟ್ಟು ಒತ್ತಿ ಸಾಕು

Written By:

ದೇಶದಲ್ಲಿ ಡಿಜಿಟಲ್ ಪಾವತಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೇ ಹಿನ್ನಲೆಯಲ್ಲಿ ಕೇಂದ್ರ ಸರಕಾರವೂ ಆಧಾರ್ ಪಾವತಿಗೆ ಚಾಲನೆ ನೀಡಿದ್ದು, ಗ್ರಾಹಕರು ತಮ್ಮ ಹೆಬ್ಬೆಟು ನೀಡಿ ಹಣವನ್ನು ಪಾವತಿ ಮಾಡಬಹುದಾಗಿದೆ.

ಆಧಾರ್ ಪೇ: ಬೇಕಾದ್ದು ಖರೀಸಿದಿ, ಹೆಬ್ಬೆಟ್ಟು ಒತ್ತಿ ಸಾಕು

ಓದಿರಿ: ಏರ್‌ಟೆಲ್‌ನಿಂದ 150 ರೂಗಳಿಗೆ ಪ್ರತಿನಿತ್ಯ 1GB 4G ಡೇಟಾ.!!

ಸದ್ಯ ಡಿಜಿಟಲ್ ಪೇಮೆಂಟ್‌ಗಾಗಿ ಆಧಾರ್ ಕಾರ್ಡ್ ಜೋಡಣೆ ಮಾಡಿರುವ ಸರಕಾರವು, ಗ್ರಾಹಕರು ಆಧಾರ್‌ ಸಂಖ್ಯೆ ನಮೂದಿಸಿ, ಹಣ ಪಾವತಿ ಮಾಡಲು ಅವಕಾಶ ಮಾಡಿಕೊಟ್ಟಿದೆ.

ಗ್ರಾಹಕರು ಖರೀದಿಯ ಬದಲಾಗಿ ಹಣವನ್ನು ನೀಡಲು ಅಂಗಡಿಗಳಲ್ಲಿ ಆಧಾರ ಸಂಖ್ಯೆಯನ್ನು ದಾಖಲು ಮಾಡಿ, ಹಣವನ್ನು ಬಳಸುವ ಬ್ಯಾಂಕ್‌ ಆಯ್ಕೆ ಮಾಡಬೇಕು. ನಂತರ ಬೆರಳಿನ ಸ್ಕ್ಯಾನ್‌ ಮಾಡಿ ಪಾಸ್‌ವರ್ಡ್‌ ನೀಡಬೇಕಿದೆ.

ಓದಿರಿ: ಮಾರ್ಚ್ 31ರ ಒಳಗೆ ದುಡ್ಡು ನೀಡದೆ ನಿಮ್ಮ ಜಿಯೋ ಸಿಮ್ ರದ್ದುಗೊಳಿಸುವುದೇಗೆ..?

ಇದಕ್ಕಾಗಿಯೇ ಆಪ್ ತಯಾರಿಸಲಾಗಿದ್ದು, ಈ ಆಪ್‌ ಅನ್ನು ಸ್ಮಾರ್ಟ್‌ಫೋನ್‌ ಗಳಲ್ಲಿ ಬಳಸಿ ಹಣ ಪಾವತಿ ಮಾಡಬಹುದಾಗಿದ್ದು, ಇದಕ್ಕಾಗಿ ಯಾವುದೇ ಹೆಚ್ಚಿನ ಶುಲ್ಕವನ್ನು ನೀಡುವ ಅವಶ್ಯಕತೆಯೂ ಇಲ್ಲ ಎನ್ನಲಾಗಿದೆ.

ಡೆಬಿಟ್ ಇಲ್ಲವೇ ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿ ಮಾಡಿದಾಗ ಹೆಚ್ಚಿನ ಶುಲ್ಕವನನ್ನು ನೀಡಬೇಕಾಗಿದ್ದು, ಆದರೆ ಆಧಾರ ಮೂಲಕ ಶುಲ್ಕ ರಹಿತ ವಹಿವಾಟು ನಡೆಸಬಹುದಾಗಿದೆ.

ಆಧಾರ್ ಪೇ: ಬೇಕಾದ್ದು ಖರೀಸಿದಿ, ಹೆಬ್ಬೆಟ್ಟು ಒತ್ತಿ ಸಾಕು

ಓದಿರಿ: ಡುಯಲ್ 4G ಸಿಮ್ ಸಪೋರ್ಟ್ ಮಾಡುವ ಐವೋಮಿ iV505: ಬೆಲೆ 3,999

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಈ ಆಪ್‌ಅನ್ನು ವ್ಯಾಪಾರಿಗಳು ಡೌನ್‌ಲೋಡ್‌ ಮಾಡಿಕೊಂಡು ಬಯೋಮೆಟ್ರಿಕ್‌ ರೀಡರ್‌ ಸಂಪರ್ಕಿಸಿಕೊಂಡು ಪಾವತಿ ಮಾಡುವ ಗ್ರಾಹಕರ ಬೆರಳಚ್ಚು ಪಡೆಯಬೇಕಾಗಿದೆ ಅಷ್ಟೆ.

Read more about:
English summary
An Aadhaar-based app has been launched that will not only do away with the need to carry debit or credit cards, but also cellphones. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot