ವಾಟ್ಸ್‌ಆಪ್ ನಲ್ಲಿ ಮತ್ತಷ್ಟು ಹೊಸ ಆಯ್ಕೆಗಳು..!!!
ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಲೈವ್ ಲೋಕೆಷನ್ ಆಪ್‌ಡೇಟ್ ಮಾಡುವ ಆಯ್ಕೆಯನ್ನು ನೀಡಲು ಮುಂದಾಗಿದೆ.
ದಿನೇ ದಿನೇ ಒಂದೊಂದು ಹೊಸ ಹೊಸ ಆಯ್ಕೆಯನ್ನು ನೀಡಲು ಮುಂದಾಗಿರುವ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ಆಪ್ ಲೈವ್ ಲೋಕೆಷನ್ ಆಪ್‌ಡೇಟ್ ಮಾಡುವ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದು ಈಗಾಗಲೇ ಗೂಗಲ್ ಪ್ಲೇ ಸ್ಟೋರಿನಲ್ಲಿ ಬೀಟಾ ಸೇವೆಯನ್ನು ಕಾರ್ಯಾರಂಭಿಸಲಿದೆ.

ಓದಿರಿ: ಶೀಘ್ರವೇ ರಸ್ತೆಗೆ ಇಳಿಯಲಿದೆ ಸೆಲ್ಪ್ ಡ್ರೈವಿಂಗ್ ಟ್ರಕ್ಗಳು..!!!
ಲೈವ್ ಲೋಕೆಷನ್ ಆಯ್ಕೆಯನ್ನು ವಾಟ್ಸ್ಆಪ್ ತನ್ನ ಬಳಕೆದಾರಿಗೆ ನೀಡಲು ಮುಂದಾಗಿದೆ. ಈ ಆಪ್‌ಡೇಟ್ ನಲ್ಲಿ ನೀವು ಚಾಟ್ ಮಾಡುತ್ತಿರುವ ಸಂದರ್ಭದಲ್ಲಿ ಲೈವ್ ಲೋಕೆಷನ್ ಶೇರ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದನ್ನು ಪ್ರೈವಸಿ ಸೆಟಿಂಗ್ಸ್ ಎನೆಬಲ್ ಮಾಡಿಕೊಳ್ಳುವ ಮೂಲಕ ಬದಲಾಯಿಸಿಕೊಳ್ಳಬಹುದಾಗಿದೆ.
ಇದನ್ನು ಬಳಸಿಕೊಳ್ಳುವವರು ಬಳಸಿಕೊಳ್ಳಬಹುದು, ಇಲ್ಲವಾದರೆ ಅದನ್ನು ಡಿಸೆಬಲ್ ಮಾಡಿಕೊಳ್ಳಬಹುದಾಗಿದೆ. ಅದನ್ನು ಎನೆಬಲ್ ಮತ್ತು ಡಿಸೆಬಲ್ ಮಾಡಿಕೊಳ್ಳುವ ಅವಕಾಶವನ್ನು ಬಳಕೆದಾರಿಗೆ ಬಿಟ್ಟುಕೊಟ್ಟಿದೆ.

ಓದಿರಿ: ZTE ನುಬಿಯಾ Z17 ಸ್ಮಾರ್ಟ್ಫೋನಿನಲ್ಲಿದೆ 8GB RAM ಇನ್ನು ಹಲವು..!!!
ಇದರೊಂದಿಗೆ ನ್ಯೂ ಟೆಕ್ಟ್ ಸ್ಟೆಟಸ್ ಎನ್ನುವ ಹೊಸದೊಂದು ಆಯ್ಕೆಯನ್ನು ವಾಟ್ಸ್ಆಪ್ ಬಳಕೆದಾರರಿಗೆ ನೀಡಲು ಮುಂದಾಗಿದೆ. ಇದನ್ನು ಪ್ರೈವಸಿ ಸೆಟ್ಟಿಂಗ್ಸ್ ನಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಬಳಕೆದಾರರು ಫಾಂಟ್ ಗಳನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ. ಅಲ್ಲದೇ ಅದರ ಬಣ್ಣಗಳನ್ನು ಬದಲಾಯಿಸಬಹುದಾಗಿದೆ. ಜೊತೆಗೆ ಎಮೋಜಿಗಳನ್ನು ಅಲ್ಲಿ ಉಪಯೋಸುವ ಸಾಧ್ಯತೆಯೂ ಇದೆ.
ಅಲ್ಲದೇ ತಾವು ಹಾಕುವ ಸ್ಟೆಟಸ್ ಗಳನ್ನು ಬೇರೆಯವರಿಗೆ ಮೇಸೆಜ್ ಮಾದರಿಯಲ್ಲಿ ಕಳುಹಿಸುವ ಅವಕಾಶವನ್ನು ವಾಟ್ಸಆಪ್ ಮಾಡಿಕೊಟ್ಟಿದೆ. ಈ ಮೂಲಕ ನಿಮ್ಮ ಸ್ಟೆಟಸ್ ಗಳು ಮಿಸ್ ಆಗದೇ ಪ್ರೀತಿ ಪಾತ್ರರಿಗೆ ಕಳುಹಿಸಬಹುದಾಗಿದೆ.


Click it and Unblock the Notifications