ವಾಟ್ಸ್ಆಪ್ ಗ್ರೂಪ್ ಆಡ್ಮಿನ್‌ಗಳೇ ಎಚ್ಚರ: ನೀವು ಜೈಲು ಸೇರಬೇಕಾದಿತು..!!!

ಜನಸಾಮಾನ್ಯರು ಬಳಸುತ್ತಿರುವ ಸ್ಮಾರ್ಟ್‌ಫೋನುಗಳಲ್ಲಿ ವಾಟ್ಸ್‌ಆಪ್ ಇದ್ದೇ ಇರಲಿದೆ ಎಂದರೆ ತಪ್ಪಾಗುವುದಿಲ್ಲ. ವೃದ್ಧರಿಂದ ಹಿಡಿದು ಯುವಕರು, ಮಹಿಳೆಯರು ಹಾಗೂ ಮಕ್ಕಳು ಸಹ ವಾಟ್ಸ್ ಆಪ್ ಬಳಕೆ ಮಾಡುತ್ತಿದ್ದಾರೆ.

|

ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್ ಸೋಶಿಯಲ್ ಮೆಸೇಂಜಿಗ್ ಆಪ್ ಭಾರತದಲ್ಲಿ ಬಹು ಖ್ಯಾತಿಯನ್ನು ಪಡೆದುಕೊಂಡಿದೆ. ಜನಸಾಮಾನ್ಯರು ಬಳಸುತ್ತಿರುವ ಸ್ಮಾರ್ಟ್‌ಫೋನುಗಳಲ್ಲಿ ವಾಟ್ಸ್‌ಆಪ್ ಇದ್ದೇ ಇರಲಿದೆ ಎಂದರೆ ತಪ್ಪಾಗುವುದಿಲ್ಲ. ವೃದ್ಧರಿಂದ ಹಿಡಿದು ಯುವಕರು, ಮಹಿಳೆಯರು ಹಾಗೂ ಮಕ್ಕಳು ಸಹ ವಾಟ್ಸ್ ಆಪ್ ಬಳಕೆ ಮಾಡುತ್ತಿದ್ದಾರೆ.

ವಾಟ್ಸ್ಆಪ್ ಗ್ರೂಪ್ ಆಡ್ಮಿನ್‌ಗಳೇ ಎಚ್ಚರ: ನೀವು ಜೈಲು ಸೇರಬೇಕಾದಿತು..!!!

ಓದಿರಿ: (ವಿಡಿಯೋ) ಹೇಗಿದೆ ಗೊತ್ತಾ ಜಿಯೋ DTH..? ಹೇಗೆ ಕಾರ್ಯನಿರ್ವಹಿಸುತ್ತೆ..? ಇಲ್ಲಿದೇ ಸಂಪೂರ್ಣ ವಿವರ

ಹೀಗೆ ವಾಟ್ಸ್‌ಆಪ್ ಬಳಕೆದಾರು ನೂರಾರು ಗ್ರೂಪ್‌ಗಳಲ್ಲಿ ಸದಸ್ಯರಾಗಿರುತ್ತಾರೆ, ಇಲ್ಲವೇ ಕೆಲವು ಗ್ರೂಪ್‌ಗಳಿಗೆ ಆಡ್ಮಿನ್ ಸಹ ಆಗಿರುತ್ತಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡುವುದು, ತೇಜೋವಧೆ ಮಾಡುವುದು, ಸುಳ್ಳು ಸುದ್ದಿಯನ್ನು ಬಿತ್ತುವುದು, ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಇದನ್ನು ತಡೆಗಟ್ಟಲು ಗ್ರೂಪ್್ ಆಡ್ಮಿನ್ ಗಳನ್ನು ಹೊಣೆ ಮಾಡಲಾಗುತ್ತಿದೆ.

ಓದಿರಿ: ಆಧಾರ್ ಕಾರ್ಡ್ ಕಳೆದ ಹೋದರೆ ಮಾಡಬೇಕಾದ್ದೇನು..?

ವಾಟ್ಸ್‌ಆಪ್ ಗ್ರೂಪ್ ಆಡ್ಮಿನ್‌ಗಳೇ ಹೊಣೆ:

ವಾಟ್ಸ್‌ಆಪ್ ಗ್ರೂಪ್ ಆಡ್ಮಿನ್‌ಗಳೇ ಹೊಣೆ:

ಈ ಕಾರ್ಯದಲ್ಲಿ ವಾಟ್ಸ್ಆಪ್ ಪಾತ್ರವು ಪ್ರಮುಖವಾಗಿದೆ ಎಂದರೆ ತಪ್ಪಾಗುವುದಿಲ್ಲ. ಹಾಗಾಗಿ ಇಂಹತ ಕೃತ್ಯಗಳಿಗೆ ವಾಟ್ಸ್‌ಆಪ್ ಗ್ರೂಪ್‌ಗಳು ಬಳಕೆಯಾಗುತ್ತಿರುವುದರಿಂದ ಮುಂದೆ ಈ ರೀತಿಯ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವ ವಾಟ್ಸ್ಆಪ್ ಗ್ರೂಪ್‌ ಗಳ ಮೇಲೆ ಕೇಸು ದಾಖಲಿಸುವುದಲ್ಲದೇ ಆಡ್ಮಿನ್‌ಗಳನ್ನೇ ಹೊಣೆ ಮಾಡಲಾಗುವುದು ಎನ್ನಲಾಗಿದೆ.

ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದೇನು..?

ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದೇನು..?

ಈ ಕುರಿತು ಆದೇಶವೊಂದನ್ನು ಹೊರಡಿಸಿರುವ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಯೋಗೆಶ್ವರ್ ರಾಮ್ ಮಿಶ್ರಾ ಮತ್ತು ಹಿರಿಯ ಪೊಲೀಸ್ ಅಧೀಕ್ಷಕ ನಿತೀನ್ ತಿವಾರಿ, ರೂಮರ್ ಹಬ್ಬಿಸುವ ಮತ್ತು ಸುಳ್ಳು ಸುದ್ದಿಗಳನ್ನು ಎಲ್ಲೆಡೆ ಪ್ರಸರಿಸಲು ಕಾರಣವಾಗುವ ಸೋಶಿಯಲ್ ಮೀಡಿಯಾ ಗ್ರೂಪ್‌ಗಳ ಮೇಲೆ FIR ದಾಖಲಿಸಲಾಗುವುದು ಎಂದಿದ್ದಾರೆ.

ವಾಟ್ಸ್‌ಆಪ್‌ ಗ್ರೂಪ್‌ಗಳ ಮೇಲೆ ಆಡ್ಮಿನ್ ಹಿಡಿತ ಇರಬೇಕು:

ವಾಟ್ಸ್‌ಆಪ್‌ ಗ್ರೂಪ್‌ಗಳ ಮೇಲೆ ಆಡ್ಮಿನ್ ಹಿಡಿತ ಇರಬೇಕು:

ರೂಮರ್ ಹಬ್ಬಿಸುವ ಮತ್ತು ಸುಳ್ಳು ಸುದ್ದಿಗಳನ್ನು ಗ್ರೂಫ್‌ಗಳಲ್ಲಿ ಹಾಕುವಂತಹ ಸದಸ್ಯರನ್ನು ಗ್ರೂಪ್‌ನಿಂದ ಕಿತ್ತು ಹಾಕುವುದಲ್ಲದೇ ಅಂತಹವರ ವಿರುದ್ಧ ಫೋಲಿಸರಿಗೆ ಮಾಹಿತಿಯನ್ನು ನೀಡಬೇಕು, ಆ ಮೂಲಕ ಸಮಾಜದಲ್ಲಿ ಅಶಾಂತಿ ವಾತಾವಣದ ನಿರ್ಮಾಣಕ್ಕೆ ಅಸ್ಪದ ನೀಡಬಾರದು ಎಂದಿದ್ದಾರೆ.

 ತಪ್ಪು ಸಂದೇಶ ರವಾನೆಯಾಗಬಾರದು:

ತಪ್ಪು ಸಂದೇಶ ರವಾನೆಯಾಗಬಾರದು:

ಯಾವುದೇ ವಿಷಯದ ಸತ್ಯ ಅಸತ್ಯತೆಯನ್ನು ಅರಿಯದೆ ಯಾವುದೇ ಕಾರಣಕ್ಕೂ ಸುದ್ದಿಯನ್ನಾಗಲಿ, ಅಭಿಪ್ರಾಯವನ್ನು ಗ್ರೂಪ್‌ಗಳಲ್ಲಿ ದಾಖಲಿಸಬಾರದು. ಅಲ್ಲದೇ ಅದನ್ನು ಗ್ರೂಪ್‌ನಿಂದ ಗ್ರೂಪ್‌ಗೆ ಕಳುಹಿಸಲೇಬಾರದು, ಹೀಗೆ ಮಾಡುವುದರಿಂದ ತಪ್ಪು ಸಂದೇಶ ರವಾನೆಯಾಗಿ ತೊಂದರೆ ಉಂಟಾಗಲಿದೆ.

ಧಾರ್ಮಿಕ ನಂಬಿಕೆಗಳನ್ನ ಕೆರಳಿಸಬಾರದು:

ಧಾರ್ಮಿಕ ನಂಬಿಕೆಗಳನ್ನ ಕೆರಳಿಸಬಾರದು:

ಸದ್ಯ ದೇಶದಲ್ಲಿ ಜನರನ್ನು ಕೆರಳಿಸುವ ಏಕೈಕ ಮಾರ್ಗ ಎಂದರೆ ಅವರ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸುವುದು ಇಲ್ಲವೇ ಅವರ ಧಾರ್ಮಿಕ ನಂಬಿಕೆಗಳ ಮೇಲೆ ಟೀಕೆ ಮಾಡುವುದು. ಹೀಗೆ ಮಾಡುವುದರಿಂದ ಧರ್ಮ ಧರ್ಮಗಳ ನಡುವೆ ಕಲಹ ಏರ್ಪಡಲು ವೇದಿಕೆ ನಿರ್ಮಾಣವಾಗುತ್ತಿದೆ. ಹೀಗಾಗಿ ಸೋಶಿಯಲ್ ಮೀಡಿಯಾ ಗ್ರೂಪ್‌ಗಳು ಇದಕ್ಕೆ ಅವಕಾಶ ಮಾಡಿಕೊಡಬಾದರು. ಇದಕ್ಕೆ ಆಡ್ಮಿನ್‌ಗಳು ತಡೆಹಾಕಬೇಕು.

ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಗುತ್ತದೆ:

ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಗುತ್ತದೆ:

ಹೀಗೆ ತಮ್ಮ ಗ್ರೂಪ್‌ಗಳಲ್ಲಿ ನಡೆಯುವ ಅಹಿತಕಾರಿ ಚರ್ಚೆ-ವಿಚಾರ ವಿನಿಮಯಗಳು ನಡೆಯುತ್ತಿದ್ದರು ಇದಕ್ಕೆ ತಡೆಯೊಡ್ಡದ ಕಾರಣವನ್ನು ನೀಡಿ ಗ್ರೂಪ್‌ ಆಡ್ಮಿನ್‌ಗಳನ್ನು ಜೈಲಿಗಟ್ಟಬಹುದಾಗಿದೆ, ಅಲ್ಲದೇ ಇದಕ್ಕಾಗಿ ನ್ಯಾಯಾಲದ ಮೆಟ್ಟಿಲು ಹತ್ತಬೇಕಾಗುತ್ತದೆ ಇದರಿಂದಾಗಿ ನೀವು ಎಚ್ಚರದಿಂದ ಇರುವುದೇ ಒಳ್ಳೆಯದು.

ಏಜೆಂಟ್ ಸಹಾಯವಿಲ್ಲದೇ ಆನ್‌ಲೈನಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..?ಏಜೆಂಟ್ ಸಹಾಯವಿಲ್ಲದೇ ಆನ್‌ಲೈನಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..?

Best Mobiles in India

Read more about:
English summary
rumour or misleading information on a social media group could result in an FIR against the group administrator. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X