Subscribe to Gizbot

ZTE ನುಬಿಯಾ Z17 ಸ್ಮಾರ್ಟ್‌ಫೋನಿನಲ್ಲಿದೆ 8GB RAM ಇನ್ನು ಹಲವು..!!!

Written By:

ZTE ಕಂಪನಿಯ ಸ್ಮಾರ್ಟ್‌ಫೋನ್ ಬ್ರಾಂಡ್ ನುಬಿಯಾ ಮತ್ತೊಂದು ಟಾಪ್‌ ಎಂಡ್ ಸ್ಮಾರ್ಟ್‌ಫೋನ್‌ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದ್ದು, ನುಬಿಯಾ Z17 ಎಂದು ಹೆಸರಿಟ್ಟಿದೆ. ಈ ಸ್ಮಾರ್ಟ್‌ಫೋನ್ ಸದ್ಯ ಚೀನಾ ಮಾರುಕಟ್ಟೆಯಲ್ಲಿ ಮಾತ್ರವೇ ಲಾಂಚ್ ಆಗಿದ್ದು, ಭಾರತೀಯ ಮಾರುಕಟ್ಟೆಗೆ ಶೀಘ್ರವೇ ಕಾಲಿಡಲಿದೆ.

ZTE ನುಬಿಯಾ Z17 ಸ್ಮಾರ್ಟ್‌ಫೋನಿನಲ್ಲಿದೆ 8GB RAM ಇನ್ನು ಹಲವು..!!!

ಓದಿರಿ: ಗೂಗಲ್ ನಿಂದ ಬಂಪರ್ ಆಫರ್: ಆಂಡ್ರಾಯ್ಡ್ ನಲ್ಲಿ ಬಗ್ ಕಂಡುಹಿಡಿಯಿರಿ 1.5 ಕೋಟಿ ಬಹುಮಾನ ಪಡೆಯಿರಿ

ನುಬಿಯಾ Z17 ಸ್ಮಾರ್ಟ್‌ಫೋನ್ ಸೋಲಾರ್ ಗೊಲ್ಡ್, ಬ್ಲಾಕ್ ಗೋಲ್ಡ್, ಫ್ಲೆಮ್ ರೆಡ್, ಬ್ಲಾಕ್ ಮತ್ತು ಬ್ಲೂ ಬಣ್ಣಗಳಲ್ಲಿ ದೊರೆಯಲಿದ್ದು, ಚೀನಾ ಮಾರುಕಟ್ಟೆಯಲ್ಲಿ 3,999 ಯನ್ ಗಳಿಗೆ ಮಾರಾಟವಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದು ಹತ್ತಿರ ಹತ್ತಿರ ರೂ.37,000ಕ್ಕೆ ಲಾಂಚ್ ಆಗುವ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೂರು ಮಾದರಿಯಲ್ಲಿ ಲಭ್ಯ:

ಮೂರು ಮಾದರಿಯಲ್ಲಿ ಲಭ್ಯ:

ನುಬಿಯಾ Z17 ಸ್ಮಾರ್ಟ್‌ಫೋನ್ ಮೂರು ಮಾದರಿಯಲ್ಲಿ ಲಭ್ಯವಿರಲಿದೆ. 8GB RAM ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ, 6GB RAM ಮತ್ತು 128GB ಇಂಟರ್ನಲ್ ಮೆಮೊರಿ ಜೊತೆಗೆ ಹಾಗೂ 6GB RAM ಮತ್ತು 64GB ಇಂಟರ್ನಲ್ ಮೊಮೊರಿಯ ಮತ್ತೊಂದು ಆವೃತ್ತಿಯೂ ದೊರೆಯಲಿದೆ.

ನುಬಿಯಾ Z17 ಸ್ಮಾರ್ಟ್‌ಫೋನ್ ವಿಶೇಷತೆಗಳು:

ನುಬಿಯಾ Z17 ಸ್ಮಾರ್ಟ್‌ಫೋನ್ ವಿಶೇಷತೆಗಳು:

ನುಬಿಯಾ Z17 ಸ್ಮಾರ್ಟ್‌ಫೋನ್‌ನಲ್ಲಿ ಸ್ಪೋಟ್ಸ್ ಮೆಟಲ್ ಗ್ಲಾಸ್ ವಿನ್ಯಾಸ ಹೊಂದಿದ್ದು, 5.5 ಇಂಚಿನ FHD ಡಿಸ್‌ಪ್ಲೇ ಇದರಲ್ಲಿದೆ. ಅಲ್ಲದೇ ವೇಗದ ಕಾರ್ಯಚರಣೆಗೆ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 835 ಚಿಪ್ ಸೆಟ್ ಇದರಲ್ಲಿದೆ. 2.45 GHz ವೇಗದಲ್ಲಿ ಇದು ಕಾರ್ಯನಿರ್ವಹಿಸಲಿದೆ.

 ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ನುಬಿಯಾ Z17 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12 MP ಮತ್ತು 20 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ 16 MP ಕ್ಯಾಮೆರಾವು ಇದೆ. ಇದಲ್ಲದೇ ಆಂಡ್ರಾಯ್ಡ್ ನ್ಯಾಗದಲ್ಲಿ ಇದು ಕಾರ್ಯಚರಣೆ ನಡೆಸಲಿದೆ. ಇದಲ್ಲದೇ 3200 mAh ಬ್ಯಾಟರಿಯನ್ನು ಇದರಲ್ಲಿ ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Nubia Z17 with a whopping 8GB of RAM and the latest Qualcomm Snapdragon 835 chipset has been launched. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot