Subscribe to Gizbot

ಆಕಾಶ್‌ ಟ್ಯಾಬ್ಲೆಟ್‌ ವಿಳಂಬ -ಕೆಲವು ಇಲಾಖೆಯ ಅಸಹಕಾರ ಕಾರಣ: ಸಿಬಲ್‌

Posted By:

ಕಾಲೇಜ್‌ ವಿದ್ಯಾರ್ಥಿ‌ಗಳಿಗೆ ಕಡಿಮೆ ಬೆಲೆಯಲ್ಲಿ ಆಕಾಶ್‌ ಟ್ಯಾಬ್ಲೆಟ್‌ ವಿತರಿಸುವ ಕನಸು ಕಂಡಿದ್ದ ಕೇಂದ್ರ ದೂರಸಂಪರ್ಕ ಸಚಿವ ಕಪಿಲ್‌ ಸಿಬಲ್‌ ಯೋಜನೆ ಸಂಪೂರ್ಣ‌ ಯಶಸ್ವಿಯಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ e-inclusion ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಕಪಿಲ್‌ ಸಿಬಲ್‌ ಸರ್ಕಾರದ ಕೆಲವೊಂದು ಇಲಾಖೆಗಳು ಸರಿಯಾದ ಸಹಕಾರ ನೀಡದ ಕಾರಣ ಯೋಜನೆ ತಡವಾಯಿತು.ನಾಲ್ಕನೇಯ ಸರಣಿಯ ಆಕಾಶ್‌ ಟ್ಯಾಬ್ಲೆಟ್‌ನ ವಿಶೇಷತೆಗಳು ಪ್ರಕಟಗೊಂಡಿದೆ. ಈ ಟ್ಯಾಬ್ಲಟ್‌ಗೆ ಟೆಂಡರ್‌ನ್ನು ಡಿಜಿಎಸ್‌ಡಿ(Directorate General of Supplies and Disposal) ಪ್ರಕಟಿಸಿದ್ದು, ಜನವರಿಯಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣ‌ಗೊಳ್ಳಲಿದೆ ಎಂದು ಸಿಬಲ್‌ ಹೇಳಿದ್ದಾರೆ.

ಆಕಾಶ್‌ ಟ್ಯಾಬ್ಲೆಟ್‌ ವಿಳಂಬ -ಕೆಲವು ಇಲಾಖೆಯ ಅಸಹಕಾರ ಕಾರಣ: ಸಿಬಲ್‌

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಕಪಿಲ್ ಸಿಬಲ್‌‌ ವಿದ್ಯಾರ್ಥಿ‌‌ಗಳಿಗೆ ಕಡಿಮೆ ಬೆಲೆಯ ಆಕಾಶ್ ಟ್ಯಾಬ್ಲೆಟ್‌‌‌ ವಿತರಿಸುವ ಕನಸು ಕಂಡಿದ್ದರು. ಆರಂಭದಲ್ಲಿ ಭಾರತೀಯ ಮೂಲದ ಎಚ್‌ಸಿಎಲ್ ಕಂಪೆನಿ ಕಡಿಮೆ ಬೆಲೆಯ ಸಾಕ್ಷತ್‌ ಹೆಸರಿನ ಟ್ಯಾಬ್ಲೆಟ್‌ ಅಭಿವೃದ್ಧಿ ಪಡಿಸಿತ್ತು.ಆಂಡ್ರಾಯ್ಡ್‌‌ ಫ್ರೋ ಓಎಸ್‌ ಹೊಂದಿದ್ದ ಈ ಟ್ಯಾಬ್ಲೆಟ್‌ ಬಿಡುಗಡೆಯಾಗುವ ಮೊದಲೇ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಟ್ಯಾಬ್ಲೆಟ್‌‌‌ನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರಲಿಲ್ಲ.

ಎಚ್‌ಸಿಎಲ್‌ ಕಂಪೆನಿಯ ಬಳಿಕ ಆಕಾಶ್‌ ಟ್ಯಾಬ್ಲೆಟ್‌ನ ಗುತ್ತಿಗೆಯನ್ನು ಕೆನಡಾ ಮೂಲದ ಡೇಟಾವಿಂಡ್‌ ಪಡೆದುಕೊಂಡಿತ್ತು.ಮೊದಲ ಆಕಾಶ್‌ ಟ್ಯಾಬ್ಲೆಟ್‌ 2011 ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಬಳಿಕ ಇದರಲ್ಲೂ ಸಾಕಷ್ಟು ತೊಂದರೆ ಕಾಣಿಸಿಕೊಂಡಿತ್ತು.

ಆಕಾಶ್ ಟ್ಯಾಬ್ಲೆಟ್‌ ಉತ್ಪಾದನೆ ಸರಿಯಾಗಿ ಆಗದೇ ವಿದ್ಯಾರ್ಥಿ‌ಗಳ ಕೈಗೆ ಹೇಳಿದ ಸಮಯಕ್ಕೆ ಟ್ಯಾಬ್ಲೆಟ್‌ನ್ನು ವಿತರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿರಲಿಲ್ಲ.ಇದೇ ಅಗಸ್ಟ್‌‌ನಲ್ಲಿ ಹೊಸದಾಗಿ ಬಿಡುಗಡೆಯಾಗಲಿರುವ ಆಕಾಶ್‌-4 ಟ್ಯಾಬ್ಲೆಟ್‌ನ್ನು ಜನವರಿಯಲ್ಲಿ ಬಿಡುಗಡೆ ಮಾಡುವುದಾಗಿ ಕಪಿಲ್‌ ಸಿಬಲ್‌ ಪ್ರಕಟಿಸಿದ್ದರು. ಆದರೆ ಇಂದು ಈ ಆಕಾಶ್‌ ಟ್ಯಾಬ್ಲೆಟ್‌‌ಗೆ ಸಂಬಂಧಿಸಿದಂತೆ ಸರ್ಕಾರ ಕೆಲವು ಇಲಾಖೆಯ ಅಸಹಕಾರದ ವಿಷಯವನ್ನು ಬಹಿರಂಗ ಪಡಿಸುವುದರೊಂದಿಗೆ ಕಪಿಲ್ ಸಿಬಲ್‌ ವಿದ್ಯಾರ್ಥಿ‌ಗಳಿಗೆ ನೀಡಿದ್ದ ಅಶ್ವಾಸನೆ ಮತ್ತೆ ಸುಳ್ಳಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot