Home
ಕಂಪ್ಯೂಟರ್‌‌

ಆಪಲ್ ನ್ಯೂ ಐಪ್ಯಾಡ್ ಗೆ ಚಿತ್ರಹಿಂಸೆ ಕೊಟ್ಟು ಪರೀಕ್ಷೆ

By Super
ಆಪಲ್ ನ್ಯೂ ಐಪ್ಯಾಡ್ ಗೆ ಚಿತ್ರಹಿಂಸೆ ಕೊಟ್ಟು ಪರೀಕ್ಷೆ

ಒಳ್ಳೆಯ ವ್ಯಕ್ತಿಗೆ ಮೇಲಿಂದ ಮೇಲೆ ದೇವರು ಪರೀಕ್ಷಿಸುತ್ತಾನೆ ಅಂತ ದೊಡ್ಡವರು ಹೇಳುವುದನ್ನು ನಾವು ಕೇಳೇ ಇರುತ್ತೀವಿ. ಹಾಗೇನೆ ಯಾವುದಾದರೂ ಉತ್ಪನ್ನ ಬಂದು ಅದು ತುಂಬಾ ಫೇಮಸ್ ಆದರೆ ಅದನ್ನು ವಿಧವಿಧವಾಗಿ ಪರೀಕ್ಷಿಸಿ ಹೇಗಿದೆ ಎಂದು ಕೆಲವು ಕಂಪನಿಗಳು ವಿಶ್ಲೇಷಣೆ ಮಾಡುತ್ತವೆ.

ಈ ರೀತಿ ಪರೀಕ್ಷೆಗೆ ಒಳಗಾದ ಆಪಲ್ ನ ಐಪ್ಯಾಡ್ ಟ್ಯಾಬ್ಲೆಟ್, ಗೂಗಲ್ ನೆಕ್ಸಸ್ 7 ಟ್ಯಾಬ್ಲೆಟ್, ಐಫೋನ್, ಗ್ಯಾಲಕ್ಸಿ S3, ಮುಂತಾದ ಗ್ಯಾಡ್ಜೆಟ್ ಗಳನ್ನು ಪರೀಕ್ಷಿಸಿರುವ ವೀಡಿಯೋಗಳನ್ನು ನಮ್ಮಲ್ಲಿ ನೋಡಿದ್ದೀರ.

ಈಗ ಆಪಲ್ ನ ನ್ಯೂ ಐಪ್ಯಾಡ್ ಅನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದ ವೀಡಿಯೂ ಒಂದು ಇಂಟರ್ನೆಟ್ ತುಂಬೆಲ್ಲಾ ಹರಿದಾಡುತ್ತಿದೆ. Cnet ಎಂಬ ಕಂಪನಿ ನಡೆಸಿರುವ ಈ ಟಾರ್ಚರ್ ಟೆಸ್ಟ್ ನೋಡಿದರೆ ಆಪಲ್ ಅಭಿಮಾನಿಗಳಿಗೆ ಖುಷಿಯಾಗುವುದು ಗ್ಯಾರಂಟಿ. ಏಕೆಂದರೆ ಈ ಟ್ಯಾಬ್ಲೆಟ್ ಅನ್ನು ಐಸ್ ನಲ್ಲಿ,ಮೈಕ್ರೋವೇವ್ ಅವನ್ ನಲ್ಲಿ ಇಟ್ಟು ಪರೀಕ್ಷಿಸಿದರೂ ಕೂಡ ಆಪಲ್ ನ್ಯೂಪ್ಯಾಡ್ ಕೆಲಸ ಮಾಡಿತು.

ಇದಷ್ಟೇ ಅಲ್ಲದೆ ಇದನ್ನು ಮೂರು ಬಾರಿ, ಬೇರೆ ಬೇರೆ ರೀತಿಯಲ್ಲಿ ಬೀಳಿಸಲಾಯಿತು. ಆದರೂ ಐಪ್ಯಾಡ್ ಕಾರ್ಯಕ್ಷಮತೆಗೆ ಏನೂ ಕುಂದುಂಟಾಗಳಿಲ್ಲ. ನೀರಿನಲ್ಲಿ ಒಂದು ಬಾರಿ ಅದ್ದಿದರೂ ಏನಾಗಲಿಲ್ಲ. ಇಷ್ಟೆಲ್ಲಾ ಅಗ್ನಿ ಪರೀಕ್ಷೆ ಮಾಡಿದ ಮೇಲೂ ಆಪಲ್ ನ ಹೊಸ ನ್ಯೂ ಐಪ್ಯಾಡ್ ( 3ನೆ ಆವೃತ್ತಿಯ ಐಪ್ಯಾಡ್) ಸಮರ್ಪಕವಾಗಿ ಕೆಲಸ ಮಾಡಿ ಎಲ್ಲ ಪರೀಕ್ಷೆಗಳಲ್ಲೂ ಗೆದ್ದು, ಆಪಲ್ ಉತ್ಪನ್ನ ಯಾಕೆ ಅಷ್ಟು ಫೇಮಸ್ ಎಂದು ಮತ್ತೆ ಸಾಬೀತು ಪಡಿಸಿತು.

ಹಾಗಿದ್ದರೆ, ಈ ಪರೀಕ್ಷೆಯನ್ನು ಹೇಗೆ ಮಾಡಲಾಯಿತು, ಹೇಗೆ ಆಪಲ್ ನ್ಯೂಪ್ಯಾಡ್ ಗೆದ್ದು ಬಂದು ಎಂಬುದನ್ನು ನೀವು ಈ ಮಜವಾದ ವೀಡಿಯೋವನ್ನು ನೋಡಿಯೇ ತಿಳಿಯಬೇಕು.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+