Subscribe to Gizbot

ಐಪ್ಯಾಡ್ 2 vs ಜ್ವಾಲಾಮುಖಿಯ ಲಾವಾ. ಏನಿದು?

Posted By: Varun
ಐಪ್ಯಾಡ್ 2 vs ಜ್ವಾಲಾಮುಖಿಯ ಲಾವಾ. ಏನಿದು?

ಜಗತ್ತಿನಲ್ಲಿ ಎಂತೆಂಥಾ ಹುಚ್ಚರು ಇರುತ್ತಾರಪ್ಪ. ಪೆಟ್ರೋಲನ್ನು ಕುಡಿಯುವರಿದ್ದಾರೆ, ಗಾಜನ್ನು ತಿನ್ನುವವರಿದ್ದಾರೆ, ನೆಚ್ಚಿನ ತಾರೆಗೊಸ್ಕರ ಪ್ರಾಣ ಬಿಡುವವರಿದ್ದಾರೆ. ಆದರೆ ತೆಗೆದುಕೊಂಡ ಹೊಸ ಆಪಲ್ ಐಪ್ಯಾಡ್ ಅನ್ನು ಜ್ವಾಲಾಮುಖಿಯಿಂದ ಹೊರಬರುವ ಲಾವಾರಸದ ಮೇಲೆ ಇಟ್ಟು ಏನಾಗುತ್ತೆ ನೋಡೋಣ ಎಂದು ಪರೀಕ್ಷೆ ಮಾಡಿದ್ದನ್ನು ಎಲ್ಲಾದರೂ ನೋಡಿದ್ದೀರಾ?

ಅಲ್ರೀ ಹೊಸ ಐಪ್ಯಾಡ್ ಸಿಕ್ರೆ ಆಪ್ಸ್ ಡೌನ್ಲೋಡ್ ಮಾಡೋದೋ, ವೀಡಿಯೋಗಳನ್ನು ನೋಡೋದೋ ಇಲ್ಲಾ ಮಜವಾಗಿರೋ ಗೇಮ್ ಆಡೋದೋ ಮಾಡ್ತೀವಿ, ಈ ಥರ ಯಾರೂ ವೇಸ್ಟ್ ಮಾಡಲ್ಲ ಅಂತೀರಾ? ಏನು ಮಾಡೋದು ಸ್ವಾಮಿ, ಕೆಲವರು ಹಾಗೆ ಇರ್ತಾರೆ. ಏನಾದರೂ ಹೊಸಾದು ಟ್ರೈ ಮಾಡೋಣ ಅಂತ.

ಈ ಥರ ಲಾವಾ ಮೇಲಿಟ್ಟು ಪರೀಕ್ಷೆ ಮಾಡಿದ ವ್ಯಕ್ತಿಯ ಹೆಸರು ಟಿಮ್ ಏಂಜಲ್ ಅಂತ. ಈತ ZooGue ಎಂಬ ಕಂಪನಿಯ CEO. ಆಪಲ್ ಐಪ್ಯಾಡ್ 2 ಖರೀದಿಸಿದೊಡನೆ ಈತನಿಗೆ ಏನಾದರೂ ಡಿಫರೆಂಟ್ ಆಗಿ ಮಾಡಬೇಕೆನಿಸಿ ಸೀದಾ ಫ್ಲೈಟ್ ಹತ್ತಿ ಹವಾಯಿ ದ್ವೀಪಕ್ಕೆ ಹೊರಟೇ ಹೋದ, ಇನ್ನೂ ಕವರ್ ಕೂಡಾ ಬಿಚ್ಚಿಲ್ಲದ ಐಪ್ಯಾಡ್ 2 ತೆಗೆದುಕೊಂಡು.

ಸೀದಾ ಹೋಗಿದ್ದೇ, ಐಪ್ಯಾಡ್ 2 ಅನ್ನು ಚೈನಿಗೆ ನೇತು ಹಾಕಿ ಲಾವಾರಸದ ಮೇಲೆ ಇಟ್ಟೇಬಿಟ್ಟ. ಮುಂದೆ ಏನಾಗಿರುತ್ತೆ ಅಂತಾ ನಿಮಗೆ ಚೆನ್ನಾಗೇ ಗೊತ್ತಿರುತ್ತೆ. ಕಲ್ಲೇ ಕರಗುವಷ್ಟು ತಾಪಮಾನ ಈ ಜ್ವಾಲಾಮುಖಿಯಲ್ಲಿ ಇರಬೇಕಾದರೆ, ಇನ್ನು ಈ ಟ್ಯಾಬ್ಲೆಟ್ ಉಳಿಯುತ್ತಾ. ಅದೂ ಮಟಾಶ್ ಆಯಿತು.

ಆದರೆ ಈ ಭೂಪ ಇದನ್ನು ವೀಡಿಯೋ ಮಾಡಿ ತನ್ನ ಕಂಪನಿಯ ಪ್ರಚಾರಕ್ಕೆ ಉಪಯೋಗಿಸಿಕೊಂಡ. ಇದನ್ನೇ ಅಲ್ಲವೆ ಬಿಸಿನೆಸ್ ತಲೆ ಅನ್ನೋದು. 30 ಸಾವಿರ ಹೋದ್ರೆ ಹೋಗ್ಲಿ, ವೆಬ್ಸೈಟ್ ಲಾಂಚ್ ಮಾಡುವುದಕ್ಕೆ ಸೂಪರ್ ಆದ ವೀಡಿಯೋ ಸಿಕ್ತಲ್ಲ. ಈ ರೀತಿ ತಲೆ ಓಡಿಸಿದ ಟಿಮ್ ಏಂಜಲ್ ಗೆ ಒಂದು ಸಲ್ಯೂಟ್ ಹೊಡೆಯಲೇಬೇಕು.

"ಐಪ್ಯಾಡ್ ಕರಗುವ ಸಮಯ" ವೀಡಿಯೋವನ್ನು ನೋಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot