Subscribe to Gizbot

ಗೂಗಲ್ ಟ್ಯಾಬ್ಲೆಟ್ ಅನ್ನು ಬಿಚ್ಚಿ ನೋಡಿದ iFixit

Posted By: Varun
ಗೂಗಲ್ ಟ್ಯಾಬ್ಲೆಟ್ ಅನ್ನು ಬಿಚ್ಚಿ ನೋಡಿದ iFixit

ಯಾವುದೇ ಹೊಸ ಟ್ಯಾಬ್ಲೆಟ್ ಆಗಲಿ, ಸ್ಮಾರ್ಟ್ ಫೋನ್ ಆಗಲಿ, ಅದು ಬಿಡುಗಡೆಯಾದ ತಕ್ಷಣ ಅವುಗಳ ಬಿಡಿ ಭಾಗಗಳನ್ನು ಪರಿಶೀಲಿಸಿ, ಯಾವ ಯಾವ ಭಾಗಗಳನ್ನು ಉಪಯೋಗಿಸಲಾಗಿದೆ, ರಿಪೇರಿ ಮಾಡಲು ಯಾವ ಬಿಡಿ ಭಾಗಗಳನ್ನು ಸುಲಭವಾಗಿ ತೆಗೆಯಬಹುದಾಗಿದೆ ಎಂದು ವಿಶ್ಲೇಷಣೆ ಮಾಡಿ ಅಂಕ ಕೊಡುತ್ತದೆ.

iFixit ಇದೇ ರೀತಿ ಆಪಲ್ ನ ನ್ಯೂಪ್ಯಾಡ್ ಅನ್ನೂ ವಿಶ್ಲೇಷಣೆ ಮಾಡಿ ಯಾವ ಯಾವ ಬಿಡಿ ಭಾಗಗಳನ್ನು ಆಪಲ್ ಬಳಸಿಕೊಂಡಿದೆ ಎಂಬ ವೀಡಿಯೋವನ್ನು ಕನ್ನಡ ಗಿಜ್ಬಾಟ್ ಪ್ರಕಟಿಸಿತ್ತು.

ಈಗ ಅದೇ ಕಂಪನಿ ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ತಂತ್ರಾಂಶವಿರುವ ನೆಕ್ಸಸ್ 7 ಟ್ಯಾಬ್ಲೆಟ್ ನ ಭಾಗಗಳನ್ನು ಬಿಚ್ಚಿ ಅದನ್ನು ವಿಶ್ಲೇಷಣೆ ಮಾಡಿದೆ. ಹಾಗು ರಿಪೇರಿ ಮಾಡುವ ವಿಷಯಕ್ಕೆ ಬಂದರೆ ಈ ಟ್ಯಾಬ್ಲೆಟ್ ಅನ್ನು ಸುಲಭವಾಗಿ ಬಿಡಿ ಭಾಗಗಳನ್ನು ಬಿಚ್ಚಿ ಸರಿ ಮಾಡಬಹುದೆಂದು ಹತ್ತಕ್ಕೆ ಹತ್ತು ಅಂಕ ಕೊಟ್ಟಿದೆ.

ಅದೇ ಆಪಲ್ ನ ನ್ಯೂ ಐಪ್ಯಾಡ್ ಗೆ ಇದೇ ವಿಷಯಕ್ಕೆ ಕೇವಲ 3 ಅಂಕ ಕೊಟ್ಟಿತ್ತು ಎಂಬುದನ್ನು ಗಮನಿಸಬೇಕು.

ಹಾಗಿದ್ದರೆ, ನೆಕ್ಸಸ್ 7 ಒಳಗಡೆ ಏನಿದೆ ಎಂದು ನೋಡಿ ಈ ವೀಡಿಯೋದ ಮೂಲಕ.

--

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot