ಆಪಲ್ ಐಫೋನ್ 4S vs ಗ್ಯಾಲಕ್ಸಿ S3 ಶಾಕ್ ಟೆಸ್ಟ್

Posted By: Varun
ಆಪಲ್ ಐಫೋನ್ 4S vs ಗ್ಯಾಲಕ್ಸಿ S3 ಶಾಕ್ ಟೆಸ್ಟ್

ಸ್ಯಾಮ್ಸಂಗ್ ಹಾಗು ಆಪಲ್ ಕಂಪನಿಗಳು ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಜಿದ್ದಾ ಜಿದ್ದಿನ ಹೋರಾಟ ನಡೆಸುತ್ತಿದ್ದು, ಮೊನ್ನೆ ಬಿಡುಗಡೆಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ S3, ಕಳೆದ ವರ್ಷ ಬಿಡುಗಡೆಯಾದ ಆಪಲ್ ನ 4S ಗಿಂತಾ ಫೀಚರುಗಳ ಲೆಕ್ಕದಲ್ಲಿ ಉತ್ತಮವಾಗಿದ್ದು ಈಗ ಆಪಲ್ ಹಾಗು ಸ್ಯಾಮ್ಸಂಗ್ ಅಭಿಮಾನಿಗಳು ಯಾವುದು ಉತ್ತಮ ಎಂದು ಪರಸ್ಪರ ಕಚ್ಚಾಡುತ್ತಿದ್ದಾರೆ.

ಆದರೆ ಆಪಲ್ ನ ಉತ್ಪನ್ನಗಳು ಹಲವಾರು ಶಾಕ್ ಟೆಸ್ಟ್ ಗಳನ್ನು ಈಗಾಗೆಲೇ ಹಲವಾರು ಜನ ನಡೆಸಿದ್ದು, ಆಪಲ್ ನ ಐಪ್ಯಾಡ್ ಅನ್ನು 10 ಸಾವಿರ ಅಡಿಯಿಂದ ಬೀಳಿಸಿದ ವೀಡಿಯೋ ಇರಬಹುದು, ಇಲ್ಲವೆ ಅದನ್ನು ಜ್ವಾಲಾಮುಖಿಯ ಲಾವಾರಸದ ಮೇಲೆ ಇಟ್ಟು ವೀಡಿಯೋ ತೆಗೆದ ಬಗ್ಗೆ ಓದಿದ್ದೀರಿ.

ಈಗ ಅದೇ ರೀತಿಯ ಶಾಕ್ ಟೆಸ್ಟ್ ಅನ್ನು ನಡೆಸಿರುವ ವೀಡಿಯೋ ಒಂದು ಯೂಟ್ಯೂಬ್ ನಲ್ಲಿ ತುಂಬಾ ಫೇಮಸ್ ಆಗಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ S3 ಹಾಗು ಆಪಲ್ ನ ಐಫೋನ್ 4S ಅನ್ನು ಒಟ್ಟಿಗೆ ಶಾಕ್ ಟೆಸ್ಟ್ ಗೆ ಒಳಪಡಿಸಲಾಯಿತು.ಎರಡೂ ಮೊಬೈಲುಗಳನ್ನು 3 ರೀತಿಯಲ್ಲಿ ಬೀಳಿಸಿ ಪರೀಕ್ಷಿಸಲಾಯ್ತು.

ಮೊದಲಿಗೆ ವಕ್ರವಾಗಿ ಬೀಳಿಸಲಾಯಿತು. ಬೀಳಿಸಿದ ಎರಡೂ ಸ್ಮಾರ್ಟ್ ಫೋನುಗಳನ್ನು ಪರೀಕ್ಷಿಸಿದಾಗ,ಸ್ವಲ್ಪ ತರಚು ಆಗಿದ್ದು ಬಿಟ್ಟರೆ ಸರಿಯಾಗಿ ಕೆಲಸ ಮಾಡಿದವು. ಅದೇ ರೀತಿ ವಾರೆಯಾಗಿ ಬೀಳಿಸಲಾಯಿತು. ಆಗಲೂ ಎರಡೂ ಫೋನುಗಳು ಸಮರ್ಪಕವಾಗಿ ಕೆಲಸ ಮಾಡಿದವು. ಆದರೆ ಸ್ಕ್ರೀನ್ ಅನ್ನು ನೇರವಾಗಿ ಬೀಳುವಂತೆ ಮಾಡಿದಾಗ ಏನಾಯಿತು ಎಂಬುದು ನೋಡಿದರೆ ಆಪಲ್ ಅಭಿಮಾನಿಗಳಿಗೆ ನಿಜಕ್ಕೂ ಖುಷಿಯಾಗುತ್ತೆ. ಅದೆನಾಯ್ತು ಅಂತ ತಿಳಿದುಕೊಳ್ಳಲು ಈ ವೀಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot