ನೆಕ್ಸಸ್‌ 10 ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆ

Posted By:

ಗೂಗಲ್‌ನ ದೊಡ್ಡ ಗಾತ್ರದ ಟ್ಯಾಬ್ಲೆಟ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ನ್ಯೂಸ್‌. ಹತ್ತು ಇಂಚು ಸ್ಕ್ರೀನ್‌ ಹೊಂದಿರುವ 16 GBಯ ನೆಕ್ಸಸ್‌ 10 ಟ್ಯಾಬ್ಲೆಟ್‌ಗೆ 29,999 ಬೆಲೆಯನ್ನು ಗೂಗಲ್‌ ನಿಗದಿ ಮಾಡಿದ್ದು, ಪ್ಲೇ ಸ್ಟೋರ್‌ನಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದೆ.

ಎರಡು ಆಂತರಿಕ ಮೆಮೊರಿಯಲ್ಲಿ ಈ ಟ್ಯಾಬ್ಲೆಟ್‌ ಬಿಡುಗಡೆಯಾಗಿದ್ದು 16 GB ದರವನ್ನು ಮಾತ್ರ ಪ್ರಕಟಿಸಿದ್ದು 32 GBಯ ಟ್ಯಾಬ್ಲೆಟ್‌ಗೆ ಬೆಲೆ ಪ್ರಕಟಿಸಿಲ್ಲ. ಈ ಟ್ಯಾಬ್ಲೆಟ್‌ ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದು ಒಂದು ವರ್ಷದ ಬಳಿಕ ಟ್ಯಾಬ್ಲೆಟ್‌‌ ಭಾರತದ ಮಾರುಕಟ್ಟೆಗೆ ಬಂದಿದೆ.

ಗೂಗಲ್‌ನ ಈಗಾಗಲೇ ನೆಕ್ಸಸ್‌ 7 ಟ್ಯಾಬ್ಲೆಟ್‌ 2(2013) ಮತ್ತು ಹೊಸದಾಗಿ ಬಿಡುಗಡೆಯಾದ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಿಸ್ಟ್‌ ಆಗಿದೆ. ಸದ್ಯದಲ್ಲೇ ಆನ್‌ಲೈನ್‌ ಶಾಪಿಂಗ್‌ ಮತ್ತು ರಿಟೇಲ್‌ ಅಂಗಡಿಗಳಲ್ಲಿ ಟ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನ್‌ ಲಭ್ಯವಾಗಲಿದೆ.

ಇದನ್ನೂ ಓದಿ: ಗೂಗಲ್‌ ನಿಮ್ಮ ಮಾಹಿತಿಯನ್ನು ಎಲ್ಲಿ ರಕ್ಷಿಸುತ್ತಿರುತ್ತದೆ?
ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ

ವಿವಿಧ ಕಂಪೆನಿಗಳ ಆಕರ್ಷ‌ಕ ಟ್ಯಾಬ್ಲೆಟ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಕ್ರೀನ್‌ ಮತ್ತು ಗಾತ್ರ

ನೆಕ್ಸಸ್‌ 10 ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆ


10.055 ಇಂಚಿನ ಟಿಎಫ್‌ಟಿ ಕೆಪಾಸಿಟಿವ್‌ ಟಚ್‌ ಸ್ಕ್ರೀನ್‌(2560 x 1600 ಪಿಕ್ಸೆಲ್‌,300 ಪಿಪಿಐ) 263.9 x 177.6 x 8.9 ಮಿ.ಮೀ ಗಾತ್ರ, 603 ಗ್ರಾಂ ತೂಕವನ್ನು ಈ ಟ್ಯಾಬ್ಲೆಟ್‌ ಹೊಂದಿದೆ.

 ಕ್ಯಾಮೆರಾ

ನೆಕ್ಸಸ್‌ 10 ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆ


5 ಎಂಪಿ ಹಿಂದುಗಡೆ,ಮುಂದುಗಡೆ 1.9 ಕ್ಯಾಮೆರಾವನ್ನು ಟ್ಯಾಬ್ಲೆಟ್‌ ಹೊಂದಿದೆ.

 ಆಪರೇಟಿಂಗ್‌ ಸಿಸ್ಟಂ

ನೆಕ್ಸಸ್‌ 10 ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆ


ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌ ಹೊಂದಿದ್ದು, 4.3 ಜೆಲ್ಲಿ ಬೀನ್‌ ಓಎಸ್‌ ಅಪ್‌ಡೇಟ್‌ ಮಾಡಬಹುದಾಗಿದೆ.ಜೊತೆಗೆ ಕೆಲವೇ ವಾರದಲ್ಲಿ ಹೊಸ ಕಿಟ್‌ ಕ್ಯಾಟ್‌ ಓಎಸ್‌ಗೂ ಅಪ್‌ಡೇಟ್‌ ಆಗಲಿದೆ.

 ಪ್ರೊಸೆಸರ್‌,ಮೆಮೊರಿ,ರ್‍ಯಾಮ್‌

ನೆಕ್ಸಸ್‌ 10 ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆ


1.7 GHz Cortex-A15 ಡ್ಯುಯಲ್‌ ಕೋರ್‌ ಪ್ರೊಸೆಸರ್‌,Mali-T604 ಗ್ರಾಫಿಕ್‌ ಪ್ರೊಸೆಸರ್‌ 16/32 GB ಆಂತರಿಕ ಮೆಮೊರಿ, 2 GB ರ್‍ಯಾಮ್‌ನ್ನು ಈ ಟ್ಯಾಬ್ಲೆಟ್‌ ಹೊಂದಿದೆ.

 ಸೆನ್ಸರ್‌

ನೆಕ್ಸಸ್‌ 10 ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆ


ಎಕ್ಸಲರೋ ಮೀಟರ್‌,ಗೈರೋ,ಪ್ರಾಕ್ಸಿಮಿಟಿ,ಕಂಪಾಸ್‌,ಬ್ಯಾರೋ ಮೀಟರ್‌ ಸೆನ್ಸರ್‌ಗಳು ಟ್ಯಾಬ್ಲೆಟ್‌‌ನಲ್ಲಿದೆ.

 ಕನೆಕ್ಟಿವಿಟಿ ಮತ್ತು ಬ್ಯಾಟರಿ

ನೆಕ್ಸಸ್‌ 10 ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆ


ಬ್ಲೂಟೂತ್‌,ವೈಫೈ,ಜಿಪಿಎಸ್‌,ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ,ಮೈಕ್ರೋ ಎಚ್‌ಡಿಎಂಐ ಕನೆಕ್ಟಿವಿಟಿ ವಿಶೇಷತೆ, 9000 mAh ಬ್ಯಾಟರಿಯನ್ನು ಟ್ಯಾಬ್ಲೆಟ್‌ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot