Subscribe to Gizbot

ಗೂಗಲ್‌ ನೆಕ್ಸಸ್‌ ಟ್ಯಾಬ್ಲೆಟ್‌ ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆ

Posted By:

ಗೂಗಲ್‌ ಹೊಸ ನೆಕ್ಸಸ್‌ 7 ಟ್ಯಾಬ್ಲೆಟ್‌ 2 ಭಾರತದಲ್ಲಿ ಖರೀದಿಸಬೇಕು ಎಂದು ಯೋಚಿಸುತ್ತಿರುವ ನೆಕ್ಸಸ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.ಗೂಗಲ್‌ ನೆಕ್ಸಸ್‌ ಟ್ಯಾಬ್ಲೆಟ್‌ 2 ಈ ತಿಂಗಳು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.ಏಸಸ್‌ ಗೂಗಲ್‌ ನೆಕ್ಸಸ್‌ ಟ್ಯಾಬ್ಲೆಟ್‌ ಕಳೆದ ಜುಲೈನಲ್ಲಿ ಆಂಡ್ರಾಯ್ಡ್ ಜೆಲ್ಲಿ ಬೀನ್‌ 4.3 ಅಪ್‌ಡೇಟ್‌ ಆವೃತ್ತಿ ಬಿಡುಗಡೆಯಾದ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು.ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ಲಭ್ಯವಿದ್ದರೆ ಭಾರತದ ಮಾರುಕಟ್ಟೆಯಲ್ಲಿ ಇನ್ನೂ ಬಿಡುಗಡೆಯಾಗಿರಲಿಲ್ಲ.ಈಗ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 32GB ಆಂತರಿಕ ಮೆಮೋರಿಯ ಟ್ಯಾಬ್ಲೆಟ್‌ ಬೆಲೆ ಪ್ರಕಟಗೊಂಡಿದ್ದು, ಗೂಗಲ್‌ ಭಾರತದಲ್ಲಿ ಟ್ಯಾಬ್ಲೆಟ್‌ಗೆ 25,999 ಬೆಲೆಯನ್ನು ನಿಗದಿ ಮಾಡಿದೆ.

ಗೂಗಲ್‌ ಭಾರತದ ಮಾರುಕಟ್ಟೆಗೆ ನೆಕ್ಸಸ್‌ ಸರಣಿಯ ಯಾವುದೇ ಹೊಸ ಸ್ಮಾರ್ಟ್‌ಫೋನ್‌‌ ಮತ್ತು ಟ್ಯಾಬ್ಲೆಟ್‌ ಬಿಡುಗಡೆಯಾದ ಮೂರೇ ತಿಂಗಳಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಉದಾಹರಣೆ ಇಲ್ಲ.ಈ ಹಿಂದೆ ಬಿಡುಗಡೆಯಾದ ನೆಕ್ಸಸ್‌ 7 ಟ್ಯಾಬ್ಲೆಟ್‌ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾದ 9 ತಿಂಗಳ ಬಳಿಕ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಆದರೆ ಆಪಲ್‌ ಈಗಾಗಲೇ ಐಫೋನ್‌ 5 ಎಸ್‌ ಮತ್ತು 5 ಸಿ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಈ ಹೊಸ ಟ್ಯಾಬ್ಲೆಟ್‌ನ್ನು ಗೂಗಲ್‌ ಬಿಡುಗಡೆ ಮಾಡಲು ಮುಂದಾಗುತ್ತಿದೆ.ಹೀಗಾಗಿ ಹೊಸದಾಗಿ ಬೆಂಗಳೂರು ಮತ್ತು ನೋಯ್ಡಾದಲ್ಲಿ ಆರಂಭವಾಗಿರುವ ಆಂಡ್ರಾಯ್ಡ್‌ಲ್ಯಾಂಡ್‌ನಲ್ಲಿ ಈ ಟ್ಯಾಬ್ಲೆಟ್‌ ಆರಂಭದಲ್ಲಿ ಲಭ್ಯವಾಗಲಿದೆ.

ನೆಕ್ಸಸ್‌ 7 ಟ್ಯಾಬ್ಲೆಟ್‌ 2 ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಗೂಗಲ್‌ ನೆಕ್ಸಸ್‌ ಟ್ಯಾಬ್ಲೆಟ್‌ ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆ

ನೆಕ್ಸಸ್‌ 7 ಟ್ಯಾಬ್ಲೆಟ್‌ 2
ವಿಶೇಷತೆ:
7 ಇಂಚಿನ ಎಚ್‌ಡಿ ಐಪಿಎಸ್‌ಸ್ಕ್ರೀನ್‌(1920x1200 ಪಿಕ್ಸೆಲ್)
ಆಂಡ್ರಾಯ್ಡ್‌ 4.3 ಜೆಲ್ಲಿಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೊಸೆಸರ್‍
16/32GB ಆಂತರಿಕ ಮೆಮೋರಿ
2GB RAM
1.2 ಎಂಪಿ ಮುಂದುಗಡೆ ಕ್ಯಾಮೆರಾ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮೈಕ್ರೋ ಯುಎಸ್‌ಬಿ,ಬ್ಲೂಟೂತ್‌,ವೈಫೈ,ಎನ್‌ಎಫ್‌ಸಿ,ಜಿಪಿಎಸ್‌
3950 mAh ಬ್ಯಾಟರಿ

ಇದನ್ನೂ ಓದಿ: ಗೂಗಲ್‌ ನೆಕ್ಸಸ್‌ ಟ್ಯಾಬ್ಲೆಟ್‌ ಬೆಲೆ ದಿಢೀರ್‌ ಇಳಿಕೆ

ಇದನ್ನೂ ಓದಿ:ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ ಒಳಗಡೆ ಹೇಗಿದೆ ನೋಡಿದ್ದೀರಾ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot