ಗೂಗಲ್‌ ನಿಮ್ಮ ಮಾಹಿತಿಯನ್ನು ಎಲ್ಲಿ ರಕ್ಷಿಸುತ್ತಿರುತ್ತದೆ?

Posted By:

ಗೂಗಲ್‌ನಲ್ಲಿ ದಾಖಲಾಗುವ ಮಾಹಿತಿಗಳು ಎಲ್ಲವೂ ಅವರ ಸರ್ವರ್‌ನಲ್ಲಿ ದಾಖಲಾಗುತ್ತದೆ ಎನ್ನುವುದನ್ನು ನೀವು ತಿಳಿದಿರಬಹುದು. ಹೀಗಾಗಿ ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು. ಈ ಮಾಹಿತಿಗಳನ್ನು ಗೂಗಲ್‌ ಎಲ್ಲಿ ರಕ್ಷಿಸುತ್ತಿರುತ್ತದೆ? ನಮ್ಮ ಮಾಹಿತಿಗಳನ್ನು ನಾವು ನೋಡಬಹುದಾ? ಈ ರೀತಿಯ ನಿಮ್ಮ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ ಗಿಝ್‌ಬಾಟ್‌ ಕೆಲವು ಮಾಹಿತಿಗಳನ್ನು ತಂದಿದೆ.

ಗೂಗಲ್‌ ಅಕೌಂಟ್‌ ಮೂಲಕ ನಿಮ್ಮ ಎಲ್ಲಾ ಕಾರ್ಯ‌ಚಟುವಟಿಕೆಗಳನ್ನು ದಾಖಲಿಸಲು ಗೂಗಲ್‌ ವಿವಿಧ ರೀತಿಯಲ್ಲಿ ರಕ್ಷಿಸುತ್ತಿರುತ್ತದೆ. ಹೀಗಾಗಿ ಎಲ್ಲಿ ಆ ದಾಖಲೆಗಳು ಎಲ್ಲಿ ಇರುತ್ತವೆ ಎನ್ನುವುದಕ್ಕೆ ಗೂಗಲ್‌ನ ಆ ಪ್ರೊಡಕ್ಟ್‌ಗಳ ಮಾಹಿತಿ ಇಲ್ಲಿದೆ. ಒಂದೊಂದೆ ಪುಟವನ್ನು ನೋಡಿಕೊಂಡು ಹೋಗಿ.

ಇದನ್ನೂ ಓದಿ: ನೀವು ತಿಳಿಯದ ಗೂಗಲ್‌ ಪ್ರೊಡಕ್ಟ್‌ಗಳು

ಇದನ್ನೂ ಓದಿ: ಫೇಸ್‌ಬುಕ್‌ ಡೇಟಾ ಸೆಂಟರ್ ರೂಮ್ ಹೇಗಿದೆ ಗೊತ್ತಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Me on the Web

Me on the Web

ನಿಮ್ಮ ಖಾಸಗಿ ಮಾಹಿತಿಯನ್ನು ನಿಮ್ಮ ಅನುಮತಿಯಿಲ್ಲದೇ ಯಾರು ಬೇಕಾದ್ರೂ ಇಂಟರ್‌ನೆಟ್‌ನಲ್ಲಿ ಹಾಕಬಹುದು. ಹೀಗಾಗಿ ಯಾರೆಲ್ಲ ಅನುಮತಿಯಿಲ್ಲದೇ ನಿಮ್ಮ ಮಾಹಿತಿ ಉದಾ. ಇಮೇಲ್‌,ಫೋನ್‌ ನಂಬರ್‌ ಇತ್ಯಾದಿ ಮಾಹಿತಿಗಳು ಆನ್‌ಲೈನ್‌ ಪಬ್ಲಿಷ್‌ ಆಗಿದ್ದಲ್ಲಿ ಆ ಮಾಹಿತಿಯನ್ನು ಗೂಗಲ್‌ನಲ್ಲಿ ತಿಳಿಯಬಹುದು. ಅದಕ್ಕಾಗಿ ಗೂಗಲ್‌ ಆಲರ್ಟ್‌ ಸೇವೆಯನ್ನು ಆರಂಭಿಸಿದ್ದು ನಿಮ್ಮ ಮಾಹಿತಿಯನ್ನು ಈ ವಿಭಾಗದಲ್ಲಿ ದಾಖಲಿಸಿದ್ದರೆ ಸುಲಭವಾಗಿ ಯಾರೆಲ್ಲ ನಿಮ್ಮ ವೆಬ್‌ಸೈಟ್‌‌,ಹೆಸರು ದಾಖಲಿಸಿದ್ದಾರೆ ಎನ್ನುವುದನ್ನು ತಿಳಿಯಬಹುದು.

ಈ ವಿಭಾಗಕ್ಕೆ ಹೋಗಿ ನೀವು ನಿಮ್ಮ ಅಲರ್ಟ್‌ ಮಾಹಿತಿಯನ್ನು ದಾಖಲಿಸಬಹುದು: 'Me on the Web'

 ಡ್ಯಾಶ್‌‌ಬೋರ್ಡ್‌

ಡ್ಯಾಶ್‌‌ಬೋರ್ಡ್‌


ಗೂಗಲ್‌ ಇತರ ಪ್ರೊಡಕ್ಟ್‌‌ಗಳಲ್ಲಿ ನೀವು ಏನೇನು ಇಲ್ಲಿಯವರಗೆ ಆಕ್ಟಿವಿಟಿ ಮಾಡಿದ್ದೀರಿ ಆ ಎಲ್ಲಾ ಮಾಹಿತಿಗಳು ನಿಮಗೆ ಒಂದೇ ಪುಟದಲ್ಲಿ ಈ ಡ್ಯಾಶ್‌ಬೋರ್ಡ್‌‌ನಲ್ಲಿ ಸುಲಭವಾಗಿ ಸಿಗುತ್ತದೆ.

 ಗೂಗಲ್‌ ಅನಾಲಿಟಿಕ್ಸ್‌

ಗೂಗಲ್‌ ಅನಾಲಿಟಿಕ್ಸ್‌ಮುದ್ರಣ ಮಾಧ್ಯಮದ ಪತ್ರಿಕೆ ಪ್ರಸಾರದ ಮಾಹಿತಿ ತಿಳಿಯುವುದು ಎಬಿಸಿ ರಿಪೋರ್ಟ್‌ನಿಂದ.ವಾಹಿನಿಗಳ ಪ್ರಸಾರದ ಮಾಹಿತಿ ಟಿಆರ್‌ಪಿ ರೇಟಿಂಗ್‌ನಿಂದ ತಿಳಿದರೆ ವೆಬ್‌ಸೈಟ್‌‌ಗಳಿಗೆ ಓದುಗರ ಮಾಹಿತಿ ತಿಳಿಯುವುದು ಗೂಗಲ್‌ ಅನಾಲಿಟಿಕ್ಸ್‌ನಿಂದ.ಒಂದು ವೆಬ್‌ಸೈಟ್‌‌ಗೆ ಎಷ್ಟು ಜನ(ಟ್ರಾಫಿಕ್‌) ಬರುತ್ತಿದ್ದಾರೆ ಎಂದು ಆ ವೆಬ್‌ಸೈಟ್‌ಗೆ ತಿಳಿಸುವುದು ಗೂಗಲ್‌ ಅನಾಲಿಟಿಕ್ಸ್‌. ಒಂದು ಸುದ್ದಿಯನ್ನು ಸದ್ಯ ಎಷ್ಟು ಜನ ಓದುತ್ತಿದ್ದಾರೆ? ದೇಶದ ಯಾವ ಮೂಲೆಯಲ್ಲಿ ಓದುತ್ತಿದ್ದಾರೆ? ಯಾವ ಬ್ರೌಸರ್‌ ಮೂಲಕ ವೆಬ್‌ಸೈಟ್‌ ಬಂದಿದ್ದಾರೆ ಸೇರಿದಂತೆ ಆ ವೆಬ್‌ಸೈಟ್‌‌ನ ಪೇಜ್‌ ವ್ಯೂನ ಸಂಪೂರ್ಣ‌ ಮಾಹಿತಿ ಈ ಗೂಗಲ್‌ ಅನಾಲಿಟಿಕ್ಸ್‌ನಲ್ಲಿ ಕಾಣುತ್ತಿರುತ್ತದೆ.

 ಯೂ ಟ್ಯೂಬ್‌ ಸೆಟ್ಟಿಂಗ್ಸ್‌

ಯೂ ಟ್ಯೂಬ್‌ ಸೆಟ್ಟಿಂಗ್ಸ್‌

ಯೂಟ್ಯೂಬ್‌ ವೀಡಿಯೋ ಅಪ್‌ಲೋಡ್‌ ಮಾಡುವಾಗಲೂ ಪ್ರವೈಸಿ ಸೆಟ್ಟಿಂಗ್ಸ್‌ ಮಾಡಿಕೊಂಡು ವೀಡಿಯೋ ಅಪ್‌ಲೋಡ್‌ ಮಾಡಬಹುದು. ಪಬ್ಲಿಕ್‌ ಆಯ್ಕೆಯನ್ನು ಆರಿಸಿದ್ದಲ್ಲಿ ಯಾರು ಬೇಕಾದ್ರೂ ವೀಡಿಯೋ ವೀಕ್ಷಿಸಬಹುದು. ಪ್ರೈವೆಟ್‌ ಆಯ್ಕೆ ಆರಿಸಿದ್ದಲ್ಲಿ ಅಪ್‌ಲೋಡ್‌ ಮಾಡಿರುವ ವ್ಯಕ್ತಿ ಯಾರಿಗೆ ವೀಡಿಯೋ ನೋಡಲು ಅನುಮತಿ ನೀಡುತ್ತಾನೋ ಆ ವ್ಯಕ್ತಿ ಮಾತ್ರ ವೀಡಿಯೋ ವೀಕ್ಷಿಸಬಹುದಾಗಿದೆ.

 ಅಕೌಂಟ್‌ ಅಕ್ಟಿವಿಟಿ

ಅಕೌಂಟ್‌ ಅಕ್ಟಿವಿಟಿ


ಗೂಗಲ್‌ ಅಕೌಂಟ್‌ ಮೂಲಕ ಎಲ್ಲಿ ಯಾವ ಬ್ರೌಸರ್‌ ಮೂಲಕ ಕೆಲಸ ಮಾಡಿದ್ದೀರಿ ಎನ್ನುವುದನ್ನು ನೀವು ನೋಡಬಹುದು. ಜೊತೆಗೆ ಎಷ್ಟು ಇಮೇಲ್‌‌ ಕಳುಹಿಸಿದ್ದೀರಿ? ಎಷ್ಟು ಇಮೇಲ್‌ ನಿಮ್ಮ ಅಕೌಂಟ್‌ಗೆ ಬಂದಿದೆ ಎನ್ನುವುದನ್ನು ನೋಡಬಹುದು.

 ಗೂಗಲ್‌ ಪ್ಲಸ್‌ ಸರ್ಕಲ್‌

ಗೂಗಲ್‌ ಪ್ಲಸ್‌ ಸರ್ಕಲ್‌


ಗೂಗಲ್‌ ಪ್ಲಸ್‌ನಲ್ಲಿ ನೀವು ಸರ್ಕ‌ಲ್‌ ಒಳಗಡೆ ಫ್ರೆಂಡ್ಸ್‌ ಮಾಡುವುದರ ಜೊತೆಗೆ ಅವರೂ ಶೇರ್‌ ಮಾಡಿರುವ ಜಿ+ ಪೋಸ್ಟ್‌ಗಳನ್ನು ಯೂ ಟ್ಯೂಬ್‌ ವೀಡಿಯೋಗಳನ್ನು ಅವರು ನಿಮ್ಮ ಅಕೌಂಟ್‌ಗೆ ಶೇರ್‌ ಮಾಡಿದ್ದಲ್ಲಿ ನೀವು ಅವರ ವೀಡಿಯೋ ,ಪೋಸ್ಟ್‌‌ಗಳನ್ನು ವೀಕ್ಷಿಸಬಹುದು.

 ಗೂಗಲ್‌ ವೆಬ್‌ ಹಿಸ್ಟರಿ

ಗೂಗಲ್‌ ವೆಬ್‌ ಹಿಸ್ಟರಿ

ಬ್ರೌಸರ್‌ ಮೂಲಕ ನೀವು ಯಾವೆಲ್ಲ ವೆಬ್‌ಸೈಟ್‌ನ್ನು ಸರ್ಚ್‌ ಮಾಡಿದ್ದೀರಿ ಎನ್ನುವುದನ್ನು ನೀವು ನೋಡಿರಬಹುದು. ಅದೇ ರೀತಿಯಾಗಿ ಗೂಗಲ್‌ ಅಕೌಂಟ್‌ ಮೂಲಕ ನೀವು ಯಾವೆಲ್ಲ ವೆಬ್‌ಸೈಟ್‌ನ್ನು ಪ್ರತಿದಿನ ನೋಡಿದ್ದೀರಿ, ಯಾವ ಕೆಟಗರಿಯ ಮಾಹಿತಿಯನ್ನು ಓದಿದ್ದೀರಿ ಎನ್ನುವುದನ್ನು ಗೂಗಲ್‌ ವೆಬ್‌ ಹಿಸ್ಟರಿ ಮೂಲಕ ತಿಳಿಯಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot