Subscribe to Gizbot

ಜೆಲ್ಲಿ ಬೀನ್‌ನಿಂದ ಕಿಟ್‌ಕ್ಯಾಟ್‌ ಓಎಸ್‌ಗೆ ಟ್ಯಾಬ್ಲೆಟ್‌ ಅಪ್‌ಡೇಟ್‌ ಮಾಡಿ

Written By:

ನೆಕ್ಸಸ್‌ 7 ಮತ್ತು ನೆಕ್ಸಸ್‌ 10 ಟ್ಯಾಬ್ಲೆಟ್‌ ಹೊಂದಿರುವ ಬಳಕೆದಾರರಿಗೆ ಗುಡ್‌ ನ್ಯೂಸ್‌. ನಿಮ್ಮಲ್ಲಿರುವ ಟ್ಯಾಬ್ಲೆಟ್‌ನ್ನು ಜೆಲ್ಲಿಬೀನ್‌ನಿಂದ ಗೂಗಲ್‌ನ ಹೊಸ ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಡೇಟ್‌ ಮಾಡಬಹುದು.

ಗೂಗಲ್‌ ಇಂದು ಅಧಿಕೃತವಾಗಿ ತನ್ನ ಗೂಗಲ್‌ ಪ್ಲಸ್‌,ಮತ್ತು ಟ್ವೀಟರ್‌ನಲ್ಲಿ ಘೋಷಣೆ ಮಾಡಿದ್ದು ವೈಫೈ ಹೊಂದಿರುವ ನೆಕ್ಸಸ್‌ 7(2012,2013),ನೆಕ್ಸಸ್‌ 10 ಟ್ಯಾಬ್ಲೆಟ್‌ಗಳನ್ನು ಈಗ ಕಿಟ್‌ಕ್ಯಾಟ್‌ಗೆ ಅಪ್‌ಡೇಟ್‌ ಮಾಡಬಹುದು. ಅಲ್ಲದೇ ಮುಂದಿನ ಕೆಲವೇ ದಿನದಲ್ಲಿ ನೆಕ್ಸಸ್‌ 4 ಸ್ಮಾರ್ಟ್‌ಫೋನ್‌ ಮತ್ತು 3ಜಿ ಸಂಪರ್ಕ ಹೊಂದಿರುವ ನೆಕ್ಸಸ್‌ 7‌ಸಿ ಟ್ಯಾಬ್ಲೆಟ್‌ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಡೇಟ್‌ ಅಗಲಿದೆ ಎಂದು ಗೂಗಲ್‌ ಹೇಳಿದೆ.

Starting today, Nexus 7 (2012 and 2013) and Nexus 10 will be getting a tasty update to Android 4.4, KitKat
— Android (@Android) November 13, 2013

ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆಯಾದ ಸಂದರ್ಭದಲ್ಲಿ ಹೊಸ ಓಎಸ್‌ನ್ನು ಗೂಗಲ್‌ ಬಿಡುಗಡೆ ಮಾಡಿತ್ತು.ಹೊಸ ಕಾಲರ್‌ ಐಡಿ,ಗೂಗಲ್‌ ಕ್ಲೌಡ್‌ ಪ್ರಿಂಟರ್‌,ಸ್ಕ್ರೀನ್‌ ರೆಕಾರ್ಡಿಂಗ್‌ನಂತ ಹೊಸ ವಿಶೇಷತೆಗಳು ಕಿಟ್‌ಕ್ಯಾಟ್‌ ಓಎಸ್‌ನಲ್ಲಿದೆ. ಹೊಸ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಕಿಟ್‌ಕ್ಯಾಟ್‌‌‌ ಎಸ್‌‌ ಹೊಂದಿದ್ದು ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ನೆಕ್ಸಸ್‌ 7 ಟ್ಯಾಬ್ಲೆಟ್‌2(2013) ಮತ್ತು ನೆಕ್ಸಸ್‌ 10 ಟ್ಯಾಬ್ಲೆಟ್‌ಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ.ಈಗಾಗಲೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ನೆಕ್ಸಸ್‌ 7 ಟ್ಯಾಬ್ಲೆಟ್‌ 32GB ಆಂತರಿಕ ಮೆಮೊರಿಯ ಟ್ಯಾಬ್ಲೆಟ್‌ ಬೆಲೆ ಪ್ರಕಟಗೊಂಡಿದ್ದು,25,999 ಬೆಲೆಯನ್ನು ನಿಗದಿ ಮಾಡಿದೆ.ಹತ್ತು ಇಂಚು ಸ್ಕ್ರೀನ್‌ ಹೊಂದಿರುವ 16 GB ಆಂತರಿಕ ಮೆಮೊರಿಯ ನೆಕ್ಸಸ್‌ 10 ಟ್ಯಾಬ್ಲೆಟ್‌ಗೆ 29,999 ಬೆಲೆಯನ್ನು ಗೂಗಲ್‌ ನಿಗದಿ ಮಾಡಿದ್ದು, ಪ್ಲೇ ಸ್ಟೋರ್‌ನಲ್ಲಿ  ಮಾಹಿತಿ ಪ್ರಕಟಿಸಿದೆ.

Stay tuned, Nexus 4 and Nexus 7 versions with mobile data will be getting the update soon! http://t.co/TTRzORl4js
— Android (@Android) November 13, 2013

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot