ಗೂಗಲ್ ನಿಂದ ಸ್ಮಾರ್ಟ್‌ ಜಾಕೆಟ್: ಇದು ಹೇಗೆ ಕಾರ್ಯನಿರ್ವಹಿಸುತ್ತೇ ನೀವೆ ನೋಡಿ..!!

Written By:

ಇಂದಿನ ದಿನಗಳಲ್ಲಿ ಕೈಯಲ್ಲಿ ಹಿಡಿದ ಮೊಬೈಲ್‌ನಿಂದ ಹಿಡಿದು, ವಾಚು, ಟಿವಿ, ಕಾರು, ಮನೆ, ಲೈಟು ಸೇರಿದಂತೆ ಎಲ್ಲಾ ವಸ್ತುಗಳು ಸ್ಮಾರ್ಟ್‌ ಆಗುತ್ತಿದೆ. ಈಗ ಇದೇ ಸಾಲಿಗೆ ಸೇರುತ್ತಿದೆ ನಾವು ತೊಡುವ ಬಟ್ಟೆ. ಈ ಹಿಂದೆ ಮಾರುಕಟ್ಟೆಗೆ ಬಂದ ಸ್ಮಾರ್ಟ್‌ ಶರ್ಟ್ ಮಾದರಿಯಲ್ಲೇ ಸ್ಮಾರ್ಟ್‌ ಜಾಕೆಟ್ ತಯಾರಾಗಿದೆ.

ಗೂಗಲ್ ನಿಂದ ಸ್ಮಾರ್ಟ್‌ ಜಾಕೆಟ್: ಇದು ಹೇಗೆ ಕಾರ್ಯನಿರ್ವಹಿಸುತ್ತೇ ನೀವೆ ನೋಡಿ..!!

ಓದಿರಿ: ಗೂಗಲ್ ಜೊತೆ ಸೇರಿದ ಜಿಯೋ: ಮುಂದಿನ ಪ್ಲಾನ್‌ ಕೇಳಿದ್ರೆ ಶಾಕ್ ಆಗ್ತಿರಾ..!!

ಸರ್ಚ್ ಇಂಜಿನ್ ದೈತ್ಯ ಗೂಗಲ್. ಬಟ್ಟೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಲಿವಿಸ್ ಕಂಪನಿಯೊಂದಿಗೆ ಸೇರಿ ಸ್ಮಾರ್ಟ್‌ ಜಾಕೆಟ್ ವೊಂದನ್ನು ತಯಾರಿಸಿದ್ದು, ಸದ್ಯದ ಹಾಟ್ ಟಾಪಿಕ್ ಆಗಿದೆ. ಇದಕ್ಕೆ 'ಕಮ್ಯೂಟರ್ ಟ್ರಕರ್ ಜ್ಯಾಕೆಟ್' ಎಂದು ಹೆಸರಿಡಲಾಗಿದೆ.

ಗೂಗಲ್ ಅಭಿವೃದ್ಧಿ ಪಡಿಸಿರುವ ಈ ಸ್ಮಾರ್ಟ್‌ ಜಾಕೆಟ್ ಅನ್ನು ನಿಮ್ಮ ಸ್ಮಾರ್ಟ್‌ಪೋನ್‌ನೊಂದಿಗೆ ಕನೆಕ್ಟ್ ಮಾಡಬಹುದಾಗಿದೆ, ಇದು ನಿಮಗೆ ಬರುವ ಕಾಲ್‌ಗಳನ್ನು ಕಂಟ್ರೋಲ್ ಮಾಡಬಹುದಾಗಿದೆ. ಸದ್ಯ ಈ ಜಾಕೆಟ್ ಬೆಲೆ $ 350 ಡಾಲರ್‌ಗಳಾಗಿದ್ದು, ಭಾರತೀಯ ಬೆಲೆಯಲ್ಲಿ 23,000 ರೂ. ಗಳಾಗಿದೆ.

ಗೂಗಲ್ ನಿಂದ ಸ್ಮಾರ್ಟ್‌ ಜಾಕೆಟ್: ಇದು ಹೇಗೆ ಕಾರ್ಯನಿರ್ವಹಿಸುತ್ತೇ ನೀವೆ ನೋಡಿ..!!

ಓದಿರಿ: ಸ್ಮಾರ್ಟ್‌ಪೋನಿನಲ್ಲಿ ಡಿಲೀಟ್ ಮಾಡಿದ ಫೈಲ್‌ಗಳನ್ನು ಮತ್ತೆ ಪಡೆಯುವುದು ಹೇಗೆ...?

ಸದ್ಯ ಟೆಕ್ಸ್‌ಟೆಲ್ ಉದ್ಯಮವೂ ಸ್ಮಾರ್ಟ್‌ ಆಗುತ್ತಿದ್ದು, ಈ ಹಿನ್ನಲೆಯಲ್ಲಿ ಈ ಹೊಸ ಆವಿಷ್ಕಾರ ಹೊಸದೊಂದು ಇತಿಹಾಸವನ್ನು ನಿರ್ಮಿಸಲಿದೆ. ಗೂಗಲ್ ಆಡ್‌ವಾನ್ಸ್ ಟೆಕ್ನಾಲಜಿ ಅಂಡ್ ಪ್ರಾಜೆಕ್ಟ್ ಅಡಿಯಲ್ಲಿ ಈ ಜಾಕೆಟ್ ತಯಾರಾಗಿದೆ ಎನ್ನಲಾಗಿದೆ.

ಈ ಜಾಕೆಟ್‌ನಲ್ಲಿ ಸೆನ್ಸಾರ್‌ಗಳನ್ನು ಹೊಂದಿದ್ದು, ಜಾಕೆಟ್ ಒಗೆಯುವ ಸಂದರ್ಭದಲ್ಲಿ ಅದನ್ನು ತೆಗೆಯಬಹುದಾಗಿದೆ. ಇದಲ್ಲದೇ ಈ ಜಾಕೆಟ್‌ನಲ್ಲಿ ಸರ್‌ಕ್ಯೂಟ್ ಬೋರ್ಡ್‌ನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್ ಜಾಕೆಟ್‌ನ ಕೈ ಭಾಗದಲ್ಲಿ ಅಳವಡಿಸಿರುವ ಬಟನ್ ಬಳಿ ಡಬ್ಬಲ್ ಟಾಪ್‌ ಮಾಡುವ ಮೂಲಕ ನಿಮ್ಮ ಸ್ಮಾರ್ಟ್ ಪೋನನ್ನು ಬಳಸಬಹುದಾಗಿದೆ.

ಓದಿರಿ: ಜಿಯೋ, ಏರ್‌ಟೆಲ್, ವೋಡೋಪೋನ್‌ಗಳ ಉಚಿತ ಡೇಟಾ ಪ್ಲಾನ್‌ಗಳ ಹಿಂದಿನ ಮರ್ಮ.?!

ಈ ಸ್ಮಾರ್ಟ್ ಜಾಕೆಟ್ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ.

 

 

Read more about:
English summary
The company has launched a working product now, the 'Commuter Trucker Jacket'. Connected to your smartphone, jacket can control calls and do a bunch of other things. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot