ನಿಮ್ಮ ಫಿಟ್‌ನೆಸ್‌ ಗುರುವಾಗಲಿದೆ ಕ್ಸಿಯೋಮಿ ಸ್ಮಾರ್ಟ್ ಶೂ..!!

Written By:

ಸ್ಮಾರ್ಟ್‌ಪೋನ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ಚೀನಾ ಮೂಲದ ಕ್ಸಿಯೋಮಿ ಕಂಪನಿ ಅನೇಕ ಸ್ಮಾರ್ಟ್‌ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, ಅದರದೇ ಒಂದು ಭಾಗವಾಗಿ ಇಂಟೆಲ್ ಜೋತೆ ಸೇರಿ ಸ್ಮಾರ್ಟ್‌ಶೂವೊಂದನ್ನು ಬಿಡುಗಡೆ ಮಾಡಿದೆ.

ನಿಮ್ಮ ಫಿಟ್‌ನೆಸ್‌ ಗುರುವಾಫಿಟ್‌ನೆಸ್‌ ಗುರುವಾಗಲಿದೆ ಕ್ಸಿಯೋಮಿ ಸ್ಮಾರ್ಟ್ ಶೂ..!!

ಓದಿರಿ: ಜಿಯೋ ಪ್ರೈಮ್ ಮೆಂಬರ್‌ಶಿಪ್ ಆರಂಭ: ನೀವು ತಿಳಿಯಬೇಕಾದ ವಿಷಯಗಳು.!!!

ಕ್ಸಿಯೋಮಿ, ಇಂಟೆಲ್ ಜೋತೆ ಸೇರಿ ಹೊಸದಾಗಿ ನಿರ್ಮಿಸಿರುವ '90 ಮಿನಿಟ್ಸ್ ಅಲ್ಟ್ರಾ ಸ್ಮಾರ್ಟ್‌ ಸ್ಪೋಟ್ಸ್‌ವೇರ್' ಎಂಬ ಹೊಸದೊಂದು ಶೂ ವನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಕ್ಸಿಯೋಮಿ ಶೂನಲ್ಲಿ ಇಂಟೆಲ್ ಚಿಪ್ ಅಳವಡಿಸಲಾಗಿದ್ದು, ಇದು ನಡೆದ ದೂರ, ಎಷ್ಟು ಕ್ಯಾಲೋರಿ ಬರ್ನ್ ಆಗಿದೆ ಎಂಬ ವಿಷಯಗಳ ಕುರಿತು ಮಾಹಿತಿ ನೀಡಲಿದೆ.

ಓದಿರಿ: ಪೇಟಿಎಂ ಬಳಕೆದಾರರೇ ಈ ಸ್ಟೋರಿ ನೋಡಿ: ನೀವು 2% ಶುಲ್ಕ ಕಟ್ಟಬೇಕಾದಿತು..!!

ಈ ಸ್ಮಾರ್ಟ್‌ ಶೂ ನಲ್ಲಿ 60 ದಿನಗಳ ಬ್ಯಾಟರಿ ಪ್ಯಾಕಪ್ ಇರುವ ಬ್ಯಾಟರಿಯಲ್ಲಿ ಅಳವಡಿಸಲಾಗಿದ್ದು, ಇದರಿಂದ ಕಾರ್ಯನಿರ್ವಹಿಸುವ ಇಂಟೆಲ್ ಚಿಪ್ ನಿಮ್ಮ ಫಿಟೆನೆಸ್ ಮಾಹಿತಿಗಳನ್ನು ಸ್ಟೋರ್ ಮಾಡಿಕೊಳ್ಳಿದೆ. ಅಲ್ಲದೇ ಇದನ್ನು ಪ್ರೋಫೆಷನಲ್ ರನ್‌ಗಳಿಗಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಅಂಟಿ ಸ್ಕಿಡ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.

ಈ ಕ್ಸಿಯೋಮಿ ಸ್ಮಾರ್ಟ್‌ ಶೂ ಅನ್ನು ವಾಕಿಂಗ್, ರನ್ನಿಂಗ್ ಮತ್ತು ಕಂಬ್ಲಿಂಗ್ ಗಳಿಗೆ ಬಳಸಬಹುದಾಗಿದ್ದು, ಇದು ಬ್ಲಾಕ್ ಮತ್ತು ಬ್ಲೂ ಬಣ್ಣದಲ್ಲ ಲಭ್ಯವಿರಲಿದೆ. ಅಲ್ಲದೇ ಮಹಿಳೆಯರಿಗಾಗಿ ಬ್ಲಾಕ್ ಮತ್ತು ಪಿಂಕ್ ಬಣ್ಣದಲ್ಲಿ ದೊರೆಯಲಿದೆ.

ನಿಮ್ಮ ಫಿಟ್‌ನೆಸ್‌ ಗುರುವಾಫಿಟ್‌ನೆಸ್‌ ಗುರುವಾಗಲಿದೆ ಕ್ಸಿಯೋಮಿ ಸ್ಮಾರ್ಟ್ ಶೂ..!!

ಓದಿರಿ: ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಏಪ್ರಿಲ್ 15 ರಿಂದ ಚೀನಾ ಮಾರುಕಟ್ಟೆಗೆ ಬರಲಿರುವ ಈ ಶೂ ಬೆಲೆ ಸುಮಾರು 2,900 ರೂಗಳಾಗಲಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Read more about:
English summary
There are very few companies that can boast of a product portfolio as diverse as Xiaomi. to know more visit kannada.gizot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot