ಭವಿಷ್ಯದ ಹೊಸ ತಂತ್ರಜ್ಞಾನದೊಂದಿಗೆ ಬರಲಿರುವ ಗ್ಯಾಜೆಟ್‌ಗಳು

By Ashwath
|

ಈ ತಂತ್ರಜ್ಞಾನ ಯುಗದಲ್ಲಿ ಪ್ರತಿದಿನವು ಜಗತ್ತಿನಲ್ಲಿ ವಿವಿಧ ರೀತಿಯ ಸಂಶೋಧನೆಗಳು ನಡೆಯುತ್ತಲೇ ಇರುತ್ತದೆ. ಹೀಗಾಗಿ ಇಂದು ಕಂಡುಹಿಡಿದ ತಂತ್ರಜ್ಞಾನಗಳು ಮುಂದಿನ ದಿನಗಳಲ್ಲಿ ಹಳೇಯದಾಗಲಿದೆ. ಹಾಗಾಗಿ ಪ್ರತಿಯೊಬ್ಬರು ಭವಿಷ್ಯದ ತಂತ್ರಜ್ಞಾನದ ಬಗ್ಗೆ ಒಂದು ಕಣ್ಣನ್ನಿಟ್ಟಿರುತ್ತಾರೆ. ಭವಿಷ್ಯದಲ್ಲಿ ಬರುವ ಹೊಸ ತಂತ್ರಜ್ಞಾನ ಹೇಗಿರುತ್ತದೆ ಎನ್ನುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ.

ಈ ಗೂಗಲ್‌ ಗ್ಲಾಸ್‌ ಮಾರುಕಟ್ಟೆಗೆ ಬರುವ ಮೊದಲು ಕಣ್ಣಿನಲ್ಲೇ ಇಂಟರ್‌ನೆಟ್‌ ಸಾಧ್ಯವೇ ಎಂದು ಸಂದೇಹ ಆರಂಭದಲ್ಲಿ ಮೂಡಿತ್ತು.ಆದರೆ ಈಗ ಗೂಗಲ್‌ ಗ್ಲಾಸ್‌ ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಈಗ ನಾವು ಬಳಸುತ್ತಿರುವ ಸ್ಮಾರ್ಟ್‌ಫೋನ್‌,ಗೂಗಲ್‌ ಗ್ಲಾಸ್‌ ಕಾಂಟಕ್ಟ್‌ ಲೆನ್ಸ್‌,ಮೈಕ್ರೋವೇವ್ ಅವೆನ್‌ಗಳು ಭವಿಷ್ಯದಲ್ಲಿ ಬದಲಾಗಿ ಬರುತ್ತಂತೆ. ಈಗ ಇರುವ ತಂತ್ರಜ್ಞಾನದ ಬದಲಾಗಿ ಈ ಸಾಧನಗಳು ಹೊಸ ರೀತಿಯಲ್ಲಿ ಬರುತ್ತಂತೆ. ಏನೆಲ್ಲ ಹೊಸ ತಂತ್ರಜ್ಞಾನಗಳಲ್ಲಿ ಈ ಸಾಧನಗಳು ಬರಲಿದೆ ಎಂಬುದಕ್ಕೆ ಮುಂದಿನ ಪುಟದಲ್ಲಿ ವಿವರಿಸಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ ಕೊನೆಗೆ ಈ ಭವಿಷ್ಯದ ತಂತ್ರಜ್ಞಾನದ ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್‌ ಬಾಕ್ಸ್‌ನಲ್ಲಿ ದಾಖಲಿಸಿ.

ಇದನ್ನೂ ಓದಿ : ಭವಿಷ್ಯದ ಟ್ಯಾಬ್ಲೆಟ್‌ನಲ್ಲಿ ಏನೆಲ್ಲಾ ಹೊಸ ತಂತ್ರಜ್ಞಾನವಿರುತ್ತೆ ಗೊತ್ತಾ?

ಒಂದು ಮಾತ್ರೆಯಲ್ಲಿ ಮೂರು ಹೊತ್ತಿನ ಆಹಾರ!

ಒಂದು ಮಾತ್ರೆಯಲ್ಲಿ ಮೂರು ಹೊತ್ತಿನ ಆಹಾರ!

ಮೂರು ಹೊತ್ತು ಆಹಾರ ಸೇವಿಸುವ ಪದ್ದತಿ ಮುಂದಿನ ದಿನಗಳಲ್ಲಿ ಕಾಣೆಯಾದ್ರೂ ಆಶ್ಚರ್ಯ‌ವಿಲ್ಲ. ಯಾಕೆಂದರೆ ವಿಜ್ಞಾನಿಗಳು ಒಂದೇ ಮಾತ್ರೆಯಲ್ಲಿ ಮೂರು ಹೊತ್ತಿನ ಆಹಾರವನ್ನು ತಯಾರಿಸಲು ಮುಂದಾಗಿದ್ದಾರೆ. ಚಾಕಲೇಟ್‌ನಂತಿರುವ ಈ ಮಾತ್ರೆಯನ್ನು ಒಂದು ಬಾರಿ ಸೇವಿಸಿದ್ದರೆ ಮತ್ತೆ ದಿನದಲ್ಲಿ ಯಾವುದೇ ಆಹಾರವನ್ನು ಸೇವಿಸುವ ಅಗತ್ಯವಿಲ್ಲವಂತೆ. ಊಟ,ತಿಂಡಿ,ಮಾಂಸ,ಹಣ್ಣುಗಳಲ್ಲಿರುವ ಪೌಷ್ಟಿಕಾಂಶಗಳು ಈ ಮಾತ್ರೆಯಲ್ಲೇ ಇರುತ್ತಂತೆ.ಈ ಆಹಾರ ಮಾತ್ರೆಗಳ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಒಂದು ವೇಳೆ ಈ ಸಂಶೋಧನೆ ಯಶಸ್ವಿಯಾದಲ್ಲಿ ವಿಶ್ವದ ಆಹಾರ ಕ್ರಮದಲ್ಲಿ ಭಾರೀ ಬದಲಾವಣೆಯಾಗಲಿದೆ.

 ಪರ್ಫೆ‌ಕ್ಟ್‌ ಮೈಕ್ರೋವೇವ್ ಅವೆನ್

ಪರ್ಫೆ‌ಕ್ಟ್‌ ಮೈಕ್ರೋವೇವ್ ಅವೆನ್

ಮೈಕ್ರೋವೇವ್‌ಗಳು ಈ ಬಂದು 60 ವರ್ಷ‌ಗಳಗಿವೆ. ಆದರೂ ಆಹಾರ ವನ್ನು ಬಿಸಿ ಮಾಡುವುದರಲ್ಲಿಇಂದಿಗೂ ಹಳೇ ತಂತ್ರಜ್ಞಾನವನ್ನೇ ಬಳಸುತ್ತಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಪರ್ಫೆ‌ಕ್ಟ್‌ ಮೈಕ್ರೋವೇವ್ ಅವೆನ್‌ಗಳನ್ನು ನಾವು ಆನ್‌ ಇಷ್ಟು ಪ್ರಮಾಣದ ಡಿಗ್ರಿಯಲ್ಲಿ ಬೇಯಿಸಬೇಕಾದ ಪ್ರಮೇಯ ಬರುದಿಲ್ವಂತೆ. ಅದೇ ಆಹಾರವನ್ನು ನೋಡಿ ಆಹಾರಕ್ಕೆ ಬೇಯಿಸಲು ಎಷ್ಟು ಪ್ರಮಾಣ ತಾಪಮಾನ ಬೇಕೋ ಮೈಕ್ರೋವೇವ್‌ ತಾನಾಗಿ ತಿಳಿದುಕೊಂಡು ಕೆಲಸ ಮಾಡುತ್ತದೆ. ಉದಾ: ಈಗ ಟೊಮೊಟೊ ಬೇಯಿಸಲು ಕಡಿಮೆ ಪ್ರಮಾಣದ ಬಿಸಿ ಸಾಕು, ಆದೇ ಆಲುಗಡ್ಡೆ ಬೇಯಿಸಲು ಹೆಚ್ಚಿನ ಬಿಸಿ ಬೇಕು. ಇದೇ ವೈತ್ಯಾಸವನ್ನು ಗುರುತಿಸಿ ಆಯಾ ಆಹಾರಕ್ಕೆ ಅನುಗುಣವಾಗಿ ಈ ಪರ್ಫೆ‌ಕ್ಟ್‌ ಮೈಕ್ರೋವೇವ್ ಕೆಲಸ ಮಾಡುವುವಂತೆ ಸಂಶೋಧನೆ ನಡೆಯುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌!

ಹೊಸ ಸ್ಮಾರ್ಟ್‌ಫೋನ್‌!

ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆ ಬಂದಿವೆ. ಆದರೆ ಈ ಸ್ಮಾರ್ಟ್‌ಫೋನ್‌ಗಳು ಸ್ಮಾರ್ಟ್‌‌ಫೋನ್‌ ಅಂತ ಹೆಸರಿಸಬೇಕಾದ್ರೆ ಇನ್ನೊಂದು ಅಂಶವಿರಬೇಕಂತೆ.ಈಗಿನ ಸ್ಮಾರ್ಟ್‌ಫೋನ್‌ಗಳಲ್ಲಿ ವಾಯ್ಸ್‌ ರೆಕಗ್ನಿಷನ್‌ ಮುಖಾಂತರ ನಮ್ಮ ಕೆಲಸ ಮಾಡಬಬಹುದು. ಆದರೆ ಮುಂದಿನ ದಿನ ಸ್ಮಾರ್ಟ್‌ಫೋನ್‌ ನಾವು ಏನ್‌ ಆಲೋಚನೆ ಮಾಡುತ್ತೇವೋ ಅದನ್ನು ಗ್ರಹಿಸಿ ಕೆಲಸ ಮಾಡುತ್ತವಂತೆ. ಆಲೋಚನೆಯನ್ನುಗ್ರಹಿಸುವ ಶಕ್ತಿ ಸ್ಮಾರ್ಟ್‌ಫೋನ್‌ಗೆ ಇದ್ದಲ್ಲಿ ಆಗ ಅದು ಸ್ಮಾರ್ಟ್‌ಫೋನ್‌ ಅಂತ ಕರೆಯಬಹುದಂತೆ.ಈ ಹೊಸ ತಂತ್ರಜ್ಞಾನದ ಸಾಫ್ಟ್‌ವೇರ್‌ ರೂಪಿಸಿಲು ಸಂಶೋಧನೆ ನಡೆಯುತ್ತಿದೆ.

ಕನಸನ್ನು ನನಸು ಮಾಡುವ ಯಂತ್ರಗಳು

ಕನಸನ್ನು ನನಸು ಮಾಡುವ ಯಂತ್ರಗಳು

ಪ್ರತಿಯೊಬ್ಬರಿಗೂ ಕನಸು ಬೀಳುತ್ತೆ. ಆದರೆ ಈ ಕನಸುಗಳಲ್ಲಿ ಕೆಲವು ಕನಸುಗಳು ನನಸಾಗಬೇಕು ಎಂದು ಯೋಚಿಸುತ್ತಿರುತ್ತಾರೆ. ಹೀಗಾಗಿ ನಿಮ್ಮ ಕನಸನ್ನು ನನಸು ಮಾಡಲು ಕಂಪ್ಯೂಟರ್‍ ಯಂತ್ರಗಳು ಬರಲಿವೆಯಂತೆ. ಹೆಲ್ಮೆಟ್‌ ರೀತಿಯ ಸಾಧನಗಳನ್ನು ಧರಿಸಿ ಮಲಗಿದ್ರೆ, ಆ ಹೆಲ್ಮೆಟ್‌ ಮಲಗಿದಾಗ ಬಿದ್ದ ಕಸನುಗಳು ಗ್ರಹಿಸಿ, ಅದನ್ನು ಅನಿಮೇಷನ್‌ ರೂಪಕ್ಕೆ ಇಳಿಸುತ್ತಂತೆ! ಈಗಗಲೇ ಮೆದುಳನ್ನು ಗ್ರಹಿಸಿ ಕೆಲಸ ಮಾಡುವ ಸಾಧನಗಳು ಮಾರುಕಟ್ಟೆಗೆ ಬಂದಿವೆ. ಹೀಗಾಗಿ ಈ ಕಸನ್ನು ನನಸು ಮಾಡುವ ಯಂತ್ರಗಳು ಮುಂದಿನ ದಿನದಲ್ಲಿ ಬಂದರೂ ಆಶ್ಚರ್ಯ‌ವಿಲ್ಲ.

ಗೂಗಲ್‌ ಗ್ಲಾಸ್‌ ಕಾಂಟಕ್ಟ್‌ ಲೆನ್ಸ್‌:

ಗೂಗಲ್‌ ಗ್ಲಾಸ್‌ ಕಾಂಟಕ್ಟ್‌ ಲೆನ್ಸ್‌:

ಗೂಗಲ್‌ ಗ್ಲಾಸ್‌ನಲ್ಲಿ ಕಣ್ಣಿನಲ್ಲೇ ಇಂಟರ್‌ನೆಟ್‌ ಕೆಲಸ ಮಾಡಬಹುದು. ಆದರೆ ಇನ್ನು ಮುಂದೆ ಹೊಸ ಕಾಂಟಕ್ಟ್‌ ಲೆನ್ಸ್‌ ಬರಲಿದೆಯಂತೆ. ಮೂರು ಸಲ ಕಣ್ಣನ್ನು ಪಟಪಟ ಮುಚ್ಚಿದ್ರೆ ಇಂಟರ್‌ನೆಟ್‌‌ ಓಪನ್‌ ಆಗುತ್ತಂತೆ. ಜೊತೆಗೆ ಈ ಲೆನ್ಸ್‌ ಗ್ಲಾಸ್‌ನಲ್ಲಿ ವ್ಯಕ್ತಿಯನ್ನು ನೋಡಿದ್ರೆ ಆ ವ್ಯಕ್ತಿಯ ಸಂಪೂರ್ಣ‌ ಜೀವನಚರಿತ್ರೆ,ವೆಬ್‌ಸೈಟ್‌ ಓಪನ್‌ ಆಗುತ್ತಂತೆ. ಇನ್ನೊಂದು ವಿಶೇಷತೆ ಅಂದ್ರೆ ಇಲ್ಲಿಯವರಗೆ ಗೂಗಲ್‌ ಭಾಷಾಂತರ ಸೇವೆ ಪದಗಳನ್ನು ಮಾತ್ರ ಸಿಮೀತವಾಗಿತ್ತು. ಆದರೆ ಇನ್ನೂ ಮುಂದೆ ಬದಲಾಗುತ್ತಂತೆ. ಬೇರೆ ಬೇರೆ ಭಾಷೆಯನ್ನಾಡುವ ಮಂದಿಯೂ ಸುಲಭವಾಗಿ ಮಾತನಾಡಬಹುದಂತೆ. ಈ ಲೆನ್ಸ್‌ನಲ್ಲಿ ಮಾತನಾಡಿದ್ರೆ, ಹೇಗೆ ಬೇರೆ ಭಾಷೆಯ ಸಿನಿಮಾಗಳ ಸಂಭಾಷಣೆಗಳು ಇಂಗ್ಲಿಷ್‌ನಲ್ಲಿ ಬರುತ್ತವೋ ಅದೇ ರೀತಿಯಾಗಿ ವ್ಯಕ್ತಿಗಳ ಮಾತುಗಳು ಲೆನ್ಸ್‌ ಸ್ಕ್ರೀನ್‌ನಲ್ಲಿ ಮೂಡುತ್ತವೆಯಂತೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X