ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

Posted By:

ಇತ್ತೀಚಿಗಷ್ಟೇ ಉಸೇನ್‌ ಬೋಲ್ಟ್‌ ಮೀರಿಸುವ ರೊಬೋಟ್‌ ಸುದ್ದಿ ಓದಿರಬಹುದು.ಈಗ ಇನ್ನೊಂದು ರೊಬೋಟ್‌ ಬಂದಿದೆ.ನಿಮ್ಮಲ್ಲಿ ಆಪಲ್‌ ಕಂಪೆನಿಯ ಐ ಫೋನ್‌ ಇದ್ದಲ್ಲಿ ಈ ರೊಬೋಟ್‌ ನಿಮ್ಮ ಮನೆಯಲ್ಲಿ ಕೆಲಸ ಮಾಡುತ್ತದೆ.! ಹೌದು ರೊಮೊಟಿವ್‌(romotive) ಎನ್ನುವ ಒಂದು ಕಂಪೆನಿ ಹೊಸದೊಂದು ಐ ಫೋನ್‌ ಆಪ್‌ ಮೂಲಕ ನಿಯಂತ್ರಣ ಮಾಬಹುದಾದ ಹೊಸದೊಂದು ಸಾಧನ ತಯಾರಿಸಿದೆ. ಈ ಸಾಧನದ ಮೂಲಕ ನೀವು ಮಾತಿನಲ್ಲೇ ನಿಮ್ಮಲ್ಲಿರುವ ಆಪಲ್‌ ಉತ್ಪನ್ನಗಳನ್ನು ನಿಯಂತ್ರಿಸಬಹುದು. ಜೊತೆಗೆ ಅದನ್ನು ಚಲಿಸುವಂತೆ ಮಾಡಬಹುದು. ಹಾಗಾದ್ರೆ ಈ ಹೊಸ ರೊಬೋಟ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೀವು ತಿಳಿಯಬೇಕು ತಾನೆ? ಹಾಗಾಗಿ ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಇದನ್ನೂ ಓದಿ : ಆಪಲ್‌ ಕಂಪೆನಿ ಹಿಂದೆ ಬಿದ್ದಿದ್ದು ಯಾಕೆ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ರೊಮೊಟಿವ್‌ ಕಂಪೆನಿಯ ಹೊಸದಾಗಿ ರೊಮೊ ಎನ್ನುವ ಒಂದು ಅಪ್ಲಿಕೇಶನ್‌ ತಯಾರಿಸಿದ್ದು,ಈ ಅಪ್ಲಿಕೇಶನ್‌ನ್ನು ಐ ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿ ಆಪ್‌ಲ್‌ ಸಾಧನಗಳನ್ನು ನಿಯಂತ್ರಿಸಬಹುದು.

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ಆಪ್‌ನಲ್ಲಿರುವ ಫೇಸ್ ರೆಕಗ್ನಿಷನ್ ಮತ್ತು ವಾಯ್ಸ್‌ ರೆಕಗ್ನಿಷನ್‌ ತಂತ್ರಜ್ಞಾನದ ಮೂಲಕ ಆಪಲ್‌ ಸಾಧನಗಳನ್ನು ನೀವು ಹೇಳಿದಂತೆ ನಿಯಂತ್ರಿಸಬಹುದು.

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ರೊಮೊಟಿವ್‌ ಕಂಪೆನಿ ನಾಲ್ಕು ಚಕ್ರದ ಸಣ್ಣಗಾಡಿಯಂತಿರುವ ಐಫೋನ್‌ ಡಕ್‌ ತಯಾರಿಸಿದ್ದು,ಇದರಲ್ಲಿ ಆಪಲ್‌ ಸಾಧನಗಳನ್ನು ಇಡಬಹುದು.

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ಈ ಪುಟ್ಟ ಗಾಡಿ ನ್ಯಾವಿಗೇಷನ್ ಸಿಸ್ಟಂ ತಂತ್ರಜ್ಞಾನ ಹೊಂದಿದ್ದು ಚಲಿಸುತ್ತಿರುವಾಗ ಎದುರುಗಡೆ ತಡೆಗಳಿದ್ದರೆ, ತಾನಾಗಿಯೇ ಸ್ವಲ್ಪ ಬದಲಾವಣೆ ಮಾಡಿ ತಡೆಯನ್ನು ದಾಟಿ ಮುಂದುವರೆಯುತ್ತದೆ.

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ಈ ಹೊಸ ಐಫೋನ್‌ ರೊಬೋಟ್‌ ಮನೆಯಲ್ಲಿದ್ದರೆ ಸಣ್ಣ ಮಕ್ಕಳ ಬುದ್ದಿ ಚುರುಕಾಗುತ್ತದೆ ಎಂದು ಕಂಪೆನಿ ಹೇಳಿದೆ.

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ರೊಮೋ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಐಫೋನ್‌ 4, ಐಫೋನ್‌ 4 ಎಸ್‌,ಐಪಾಡ್‌ ಟಚ್‌ 4 ಅವಶ್ಯಕವಾಗಿ ನಿಮ್ಮಲ್ಲಿರಬೇಕು.

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ಈ ಡಕ್‌ನಲ್ಲಿ ಐಪಾಡ್‌ ಟಚ್‌ 4 ಮತ್ತು ನಂತರ ಆವೃತ್ತಿಗಳು, ಐಫೋನ್‌ 4, ಐಫೋನ್‌ 4 ಎಸ್‌, ಐಫೋನ್‌ 5, ಐಪ್ಯಾಡ್‌ 2,ಹೊಸ ಐಪ್ಯಾಡ್‌,ಐಪ್ಯಾಡ್‌ ರಿಟಿನಾ ನಿಯಂತ್ರಿಸಬಹುದು.

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ಈ ಸಾಧನದ ಬೆಲೆ 149ಡಾಲರ್‌, ರೂಪಾಯಿಯಲ್ಲಿ ಹೇಳುವುದಿದ್ದರೆ ಅಂದಾಜು 8350 ರೂ.

ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌

ಜೂನ್‌ ತಿಂಗಳಿನಿಂದ ಈ ರೊಮೊಟಿವ್‌ ರೊಬೊ ಡಕ್‌ ವಿಶ್ವದೆಲ್ಲೆಡೆ ಲಭ್ಯವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot