Home
ಟೆಕ್ ನೌಕರಿ

ಸ್ಮಾರ್ಟ್‌ಫೋನ್ ಸ್ಕ್ರೀನ್ ಫ್ರೀಜ್ ಆದಲ್ಲಿ ಈ ಕ್ರಮ ಅನುಸರಿಸಿ

By Shwetha

ದಿನದಿಂದ ದಿನಕ್ಕೆ ಹೆಚ್ಚು ಸ್ಮಾರ್ಟ್ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಜೀವನದಲ್ಲಿ ಅತಿಮುಖ್ಯ ಎಂದೆನಿಸಿಬಿಟ್ಟಿವೆ. ಕರೆಗಳ ಸ್ವೀಕಾರ, ಇಮೇಲ್ ಪರಿಶೀಲನೆ, ಸಾಮಾಜಿಕ ತಾಣಗಳ ಬಳಕೆಗೆ ಹೀಗೆ ಹತ್ತು ಹಲವು ಕಾರ್ಯಗಳನ್ನು ನಮ್ಮ ಫೋನ್ ಮಾಡುತ್ತದೆ. ಅದಾಗ್ಯೂ ನಿರಂತರವಾಗಿ ದುಡಿಯುವ ಸ್ಮಾರ್ಟ್‌ಫೋನ್ ಕೂಡ ಕಾಯಿಲೆಗಳಿಂದ ಬಳಲುತ್ತದೆ. ಅದರಲ್ಲಿ ಸ್ಮಾರ್ಟ್‌ಫೋನ್ ಸ್ಕ್ರೀನ್ ಹ್ಯಾಂಗಿಂಗ್ ಸಮಸ್ಯೆ ಕೂಡ ಒಂದು.

ಓದಿರಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಕೀಲಿಕೈ ಈ 10 ಅಂಶಗಳು

ಇಂತಹ ಫೋನ್ ಸ್ಕ್ರೀನ್ ಹ್ಯಾಂಗಿಂಗ್‌ಗೆ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳಲಿದ್ದೇವೆ. ಸರಳ ಹಂತಗಳನ್ನು ಪಾಲಿಸುವುದರ ಮೂಲಕ ಸ್ಕ್ರೀನ್ ಹ್ಯಾಂಗಿಂಗ್ ಸಮಸ್ಯೆಗೆ ಅಂತ್ಯವನ್ನು ಹಾಡಬಹುದಾಗಿದೆ.

ಓದಿರಿ: ಜಿಯೋಫೈ, ವರ್ಸಸ್ 4ಜಿ ಸ್ಮಾರ್ಟ್‌ಫೋನ್ ನಿಮ್ಮ ಆಯ್ಕೆ ಯಾವುದು?

ನಿಮ್ಮ ಫೋನ್ ಅನ್ನು ಚಾರ್ಜರ್‌ಗೆ ಕನೆಕ್ಟ್ ಮಾಡಿ

ನಿಮ್ಮ ಫೋನ್ ಅನ್ನು ಚಾರ್ಜರ್‌ಗೆ ಕನೆಕ್ಟ್ ಮಾಡಿ

ಇಂತಹ ಸಮಸ್ಯೆ ಎದುರಾದಾಗಲೆಲ್ಲಾ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜರ್‌ಗೆ ಕನೆಕ್ಟ್ ಮಾಡಿ. ನಿಮ್ಮ ಫೋನ್‌ನಲ್ಲಿ ಬ್ಯಾಟರಿ ಕಡಿಮೆಯಾಗಿ ಈ ಸಮಸ್ಯೆ ಉಂಟಾಗುತ್ತಿದ್ದಲ್ಲಿ ಅದು ನಿವಾರಣೆಯಾಗುತ್ತದೆ.

ಫೋನ್ ಸ್ವಿಚ್ ಆಫ್ ಮಾಡಿ

ಫೋನ್ ಸ್ವಿಚ್ ಆಫ್ ಮಾಡಿ

ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಲು ನೀವು ಬಿಟ್ಟ ಸ್ವಲ್ಪ ಹೊತ್ತಿನಲ್ಲೇ ಅದನ್ನು ಸ್ವಿಚ್ ಆಫ್ ಮಾಡಲು ಪ್ರಯತ್ನಿಸಿ. ಪವರ್ ಆಫ್ ಬಟನ್ ತೋರುವವರೆಗೂ ಪವರ್ ಬಟನ್ ಅನ್ನು ದೀರ್ಘವಾಗಿ ಒತ್ತಿಹಿಡಿದು ಇದನ್ನು ನಿರ್ವಹಿಸಬಹುದಾಗಿದೆ. ಹೀಗೆ ಆಗುತ್ತಿಲ್ಲ ಎಂದಾದಲ್ಲಿ ಮುಂದಿನ ಹಂತಕ್ಕೆ ಹೋಗಿ.

ಫೋರ್ಸ್ ರಿಸ್ಟಾರ್ಟ್ ಮಾಡಿ

ಫೋರ್ಸ್ ರಿಸ್ಟಾರ್ಟ್ ಮಾಡಿ

ಮೇಲಿನ ಹಂತಗಳು ವಿಫಲವಾಯಿತು ಎಂದಾದಲ್ಲಿ, ಪವರ್ ಮತ್ತು ವಾಲ್ಯೂಮ್ ಅಪ್ ಬಟನ್‌ಗಳನ್ನು 10 ಸೆಕೆಂಡ್‌ಗಳ ಕಾಲ ದೀರ್ಘವಾಗಿ ಒತ್ತಿಹಿಡಿದು ಫೋರ್ಸ್ ರಿಸ್ಟಾರ್ಟ್ ಮಾಡಿ.

(ಸಾಧ್ಯವಾದಲ್ಲಿ) ಬ್ಯಾಟರಿ ರಿಮೂವ್ ಮಾಡಿ

(ಸಾಧ್ಯವಾದಲ್ಲಿ) ಬ್ಯಾಟರಿ ರಿಮೂವ್ ಮಾಡಿ

ನಿಮ್ಮ ಫೋನ್ ಅನ್ನು ಫೋರ್ಸ್ ರಿಸ್ಟಾರ್ಟ್ ಮಾಡಲು ಆಗುತ್ತಿಲ್ಲ ಎಂದಾದಲ್ಲಿ ಫೋನ್‌ನಿಂದ ಬ್ಯಾಟರಿ ಹೊರತೆಗೆಯಿರಿ ಮತ್ತು ಹಿಂದಕ್ಕೆ ತಿರುಗಿಸಿ.

ತೊಂದರೆಯನ್ನುಂಟು ಮಾಡುತ್ತಿರುವ ಅಪ್ಲಿಕೇಶನ್ ನಿವಾರಿಸಿ

ತೊಂದರೆಯನ್ನುಂಟು ಮಾಡುತ್ತಿರುವ ಅಪ್ಲಿಕೇಶನ್ ನಿವಾರಿಸಿ

ನಿರ್ದಿಷ್ಟ ಅಪ್ಲಿಕೇಶನ್ ಬಳಸುತ್ತಿರುವಾಗ ಫೋನ್ ಫ್ರೀಜ್ ಆಗುತ್ತಿದೆಯೇ ಎಂಬುದನ್ನು ಕಂಡುಕೊಳ್ಳಿ. ಹೀಗೆ ಆಗುತ್ತಿದೆ ಎಂದಾದಲ್ಲಿ ಅಪ್ಲಿಕೇಶನ್ ಅನ್‌ಇನ್‌ಸ್ಟಾಲ್ ಮಾಡಿ ಮತ್ತು ಸಮಸ್ಯೆಗೆ ಕಾರಣವಾಗಿರುವ ಅಪ್ಲಿಕೇಶನ್ ತೆಗೆದುಹಾಕಿದರೆ ಈ ಸಮಸ್ಯೆ ಬರುವುದಿಲ್ಲ.

Best Mobiles in India

English summary
So, the next time you face this issue try to follow the simple tricks stated below.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+