ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಕೀಲಿಕೈ ಈ 10 ಅಂಶಗಳು

By Shwetha
|

ನೀವು ಬಳಸುತ್ತಿರುವ ನಿಮ್ಮ ಆಂಡ್ರಾಯ್ಡ್ ಫೋನ್ ಎಷ್ಟೇ ದುಬಾರಿಯದ್ದಾಗಿದ್ದರೂ ಇದು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದಾದಲ್ಲಿ ನೀವು ಕೆಲವೊಂದು ನಿಯಮಗಳನ್ನು ಅನುಷ್ಟಾನಕ್ಕೆ ತರಬೇಕು. ನಿಮ್ಮ ಫೋನ್ ನಿಮ್ಮ ಅತ್ಯಮೂಲ್ಯ ಸಂಗಾತಿಯಾಗಿರುತ್ತದೆ. ಬರಿಯ ಕರೆ, ಸಂದೇಶ ರವಾನೆ, ಸಾಮಾಜಿಕ ತಾಣಗಳ ಬಳಕೆ, ಫೋಟೋಗ್ರಫಿ ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡುವುದರ ಜೊತೆಗೆ ನಿಮ್ಮ ಗೌಪ್ಯ ಮಾಹಿತಿಗಳನ್ನು ಸಂಗ್ರಹಿಸಿ ನಿಮ್ಮನ್ನು ಕಾಪಾಡುತ್ತದೆ.

ಓದಿರಿ: ರೂ 25 ಕ್ಕೆ 3/4ಜಿ ಡೇಟಾ, ವೊಡಾಫೋನ್ ಆಫರ್ಸ್: ನಿಮ್ಮನ್ನು ದಂಗುಬಡಿಸುವುದು ಖಂಡಿತ

ಹಾಗಿದ್ದಾಗ ನಿಮ್ಮ ಫೋನ್‌ಗೂ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಬೇಕಾ ಬಿಟ್ಟಿ ನಿಮ್ಮ ಫೋನ್ ಅನ್ನು ಬಳಸದೇ ಉತ್ತಮವಾಗಿ ವ್ಯವಸ್ಥಿತಿ ರೀತಿಯಲ್ಲಿ ಡಿವೈಸ್‌ನ ಬಳಕೆಯನ್ನು ಮಾಡಬೇಕು ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೋಡಲಿದ್ದೇವೆ.

ಗೂಗಲ್ ಖಾತೆ ಸೆಟಪ್

ಗೂಗಲ್ ಖಾತೆ ಸೆಟಪ್

ನೀವು ಹೊಸ ಆಂಡ್ರಾಯ್ಡ್ ಫೋನ್ ಅನ್ನು ಖರೀದಿಸುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಗೂಗಲ್ ಖಾತೆಗೆ ನೀವು ಮರೆಯದೇ ಸೈನ್ ಇನ್ ಆಗಬೇಕಾಗಿರುವುದಾಗಿದೆ.

ಕ್ಲೀನ್ ಹೋಮ್ ಸ್ಕ್ರೀನ್

ಕ್ಲೀನ್ ಹೋಮ್ ಸ್ಕ್ರೀನ್

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸಾಕಷ್ಟು ಅಪ್ಲಿಕೇಶನ್‌ಗಳು ರಾಶಿ ಬಿದ್ದಿರಬಹುದು. ಹೋಮ್ ಸ್ಕ್ರೀನ್‌ನಲ್ಲಿ ಹೆಚ್ಚಿನ ರಾಶಿಗಳನ್ನು ಇರಿಸಿಕೊಳ್ಳಬೇಡಿ.

ಬ್ಲೋಟ್ ವೇರ್ ರಿಮೂವ್ ಮಾಡಿ

ಬ್ಲೋಟ್ ವೇರ್ ರಿಮೂವ್ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚಿನ ಅಪ್ಲಿಕೇಶನ್‌ಗಳೊಂದಿಗೆ ಬಂದಿರುತ್ತದೆ ಇದರಲ್ಲಿ ಹೆಚ್ಚಿನದು ನಿಮ್ಮ ಉಪಯೋಗಕ್ಕೆ ಬೇಕಾಗಿರುವುದಿಲ್ಲ. ಇಂತಹ ಪ್ರಿ ಇನ್‌ಸ್ಟಾಲ್ ಮಾಡಿರುವ ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಅಥವಾ ನಿಷ್ಕ್ರಯಗೊಳಿಸಬಹುದಾಗಿದೆ. ಡಿವೈಸ್ ಸೆಟ್ಟಿಂಗ್ಸ್‌ಗೆ ಹೋಗಿ ಅಪ್ಲಿಕೇಶನ್ ಮ್ಯಾನೇಜರ್‌ಗೆ ನ್ಯಾವಿಗೇಟ್ ಮಾಡಿ ಹಾಗೂ ಪ್ರಿ ಇನ್‌ಸ್ಟಾಲ್ ಆಗಿರುವ ಅಪ್ಲಿಕೇಶನ್ ನಿಷ್ಕ್ರಿಯಗೊಳಿಸಿ.

ಜಿಮೇಲ್ ಸೆಟ್ಟಿಂಗ್ಸ್‌ನೊಂದಿಗೆ ಟ್ವೀಕ್ ಮಾಡಿ

ಜಿಮೇಲ್ ಸೆಟ್ಟಿಂಗ್ಸ್‌ನೊಂದಿಗೆ ಟ್ವೀಕ್ ಮಾಡಿ

ಆಂಡ್ರಾಯ್ಡ್‌ನಲ್ಲಿ ಜಿಮೇಲ್ ಅದ್ಭುತ ಫೀಚರ್‌ಗಳೊಂದಿಗೆ ಬಂದಿರುತ್ತದೆ. ಆದರೆ ಸೆಟ್ಟಿಂಗ್‌ಗಳನ್ನು ನೀವು ಟ್ವೀಕ್ ಮಾಡಿರಬೇಕು. ಅಪ್ಲಿಕೇಶನ್ ತೆರೆದು ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ನಿಮ್ಮ ಇಮೇಲ್ ವಿಳಾಸ ಸ್ಪರ್ಶಿಸಿ ನಿಮ್ಮ ಆದ್ಯತೆಗೆ ಅನುಗುಣವಾಗಿ ಸೆಟ್ಟಿಂಗ್ಸ್ ಬದಲಾಯಿಸಿ.

ಫೋನ್ ಬ್ಯಾಕಪ್ಸ್ ಹೊಂದಿಸಿ

ಫೋನ್ ಬ್ಯಾಕಪ್ಸ್ ಹೊಂದಿಸಿ

"ಫೋಟೋಸ್" ಎಂಬ ಹೊಸ ಅಪ್ಲಿಕೇಶನ್ ಅನ್ನು ಗೂಗಲ್ ಪರಚಯಿಸಿದೆ. ನಿಮ್ಮೆಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ಕ್ಲೌಡ್‌ನಲ್ಲಿ ಉಚಿತವಾಗಿ ಇದು ಬ್ಯಾಕಪ್ ಮಾಡುತ್ತದೆ.

ಗೂಗಲ್ ಪ್ಲೇ ಸ್ಟೋರ್ ಸೆಟ್ಟಿಂಗ್ಸ್

ಗೂಗಲ್ ಪ್ಲೇ ಸ್ಟೋರ್ ಸೆಟ್ಟಿಂಗ್ಸ್

ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ, ಬಲಕ್ಕೆ ಸ್ವೈಪ್ ಮಾಡಿ ಮತ್ತು ಪಟ್ಟಿಯಿಂದ ಸೆಟ್ಟಿಂಗ್ಸ್ ಆಯ್ಕೆಮಾಡಿ. ಪಾಸ್‌ವರ್ಡ್‌ನಂತಹ ಅಗತ್ಯ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ.

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್

ಆಪಲ್‌ನ ಫೈಂಡ್ ಮೈ ಫೋನ್‌ಗೆ ಸಮನಾಗಿ ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಕಾರ್ಯನಿರ್ವಹಿಸುತ್ತದೆ. ನಿಮ್ಮ ಫೋನ್ ಕಳೆದು ಹೋದಾಗ ಪತ್ತೆಹಚ್ಚಲು ಇದು ನೆರವಾಗುತ್ತದೆ. ಡಿವೈಸ್ ಸೆಟ್ಟಿಂಗ್ಸ್‌ಗೆ ಹೋಗಿ ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಹೊಂದಿಸಿ.

ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಈಗ ನಿಮ್ಮ ಫೋನ್ ಸೆಟಪ್ ಆಗಿದೆ. ಪ್ಲೇ ಸ್ಟೋರ್ ಲಾಂಚ್ ಮಾಡಿ ಮತ್ತು ನೀವು ಬಳಸಲು ಇಚ್ಛಿಸುವ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

ವಿಡ್ಜೆಟ್ಸ್ ಪ್ಲೇಸ್ ಮಾಡಿ

ವಿಡ್ಜೆಟ್ಸ್ ಪ್ಲೇಸ್ ಮಾಡಿ

ಕ್ಲಾಕ್, ಗೂಗಲ್ ಸರ್ಚ್ ಬಾರ್, ವಾಟ್ಸಾಪ್, ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್ನಷ್ಟು ವಿಡ್ಜೆಟ್‌ಗಳನ್ನು ಪ್ಲೇಸ್ ಮಾಡಿ.

ಅಧಿಸೂಚನೆಗಳನ್ನು ನಿರ್ವಹಿಸಿ

ಅಧಿಸೂಚನೆಗಳನ್ನು ನಿರ್ವಹಿಸಿ

ನೀವೀಗ ಸಾಕಷ್ಟು ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿದ್ದೀರಿ, ಇದು ಬೇಡದೇ ಇರುವ ಅಧಿಸೂಚನೆಗಳನ್ನು ತಂದು ಕಿರಿಕಿರಿ ಉಂಟುಮಾಡುತ್ತದೆ. ನೋಟಿಫಿಕೇಶನ್ ಪ್ಯಾನಲ್‌ನಲ್ಲಿ ಐಕಾನ್‌ಗಳನ್ನು ನಿಮಗೆ ಸುಲಭವಾಗಿ ನಿಷ್ಕ್ರಿಯಗೊಳಿಸಬಹುದಾಗಿದೆ ಮತ್ತು ಅಪ್ಲಿಕೇಶನ್ ಸೆಟ್ಟಿಂಗ್ಸ್ ಟ್ವೀಕ್ ಮಾಡಿ ನೋಟಿಫಿಕೇಶನ್ ಮ್ಯೂಟ್ ಮಾಡಿ.

Best Mobiles in India

English summary
We have listed some tips that you should look forward before setting up your new Android smartphone. Take a look at the slider below to know more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X