ಉದ್ಯೋಗ ಸ್ಥಳಗಳಲ್ಲಿ ಬ್ಲಾಕ್‌ ಆದ ನಿರ್ದಿಷ್ಟ ವೆಬ್‌ಸೈಟ್‌ಗಳ ಅನ್‌ಬ್ಲಾಕ್‌ ಹೇಗೆ?

By Suneel
|

ಇಂಟರ್ನೆಟ್ ಪ್ರಪಂಚದ ದೊಡ್ಡ ಜ್ಞಾನ ಭಂಡಾರ. ಪ್ರತಿಯೊಬ್ಬ ವ್ಯಕ್ತಿಗೂ ಸಹ ಇದರಲ್ಲಿ ಮಾಹಿತಿ ಲಭ್ಯ. ವಿಜ್ಞಾನ, ಇತಿಹಾಸ, ಗಣಿತ, ಪ್ರಚಲಿತ ವಿದ್ಯಾಮಾನಗಳು, ಕ್ರೀಡೆ, ಮ್ಯೂಸಿಕ್‌ ಮತ್ತು ಇತರೆ ಯಾವುದೇ ಮಾಹಿತಿಗಳು ಸಹ ಇಂಟರ್ನೆಟ್‌ನಲ್ಲಿ ಲಭ್ಯ. ಅಂದಹಾಗೆ ಇತ್ತೀಚೆಗೆ ಇಂಟರ್ನೆಟ್‌ನಿಂದಲೇ ಶಿಕ್ಷಣ ಪಡೆಯುವವರು ಸಹ ಇದ್ದಾರೆ.

ಇಂಟರ್ನೆಟ್‌ನಲ್ಲಿ ಭಾಗಶಃ ಎಲ್ಲಾ ಮಾಹಿತಿಗಳು ಕಾನೂನಿನಾತ್ಮಕವಾಗಿಯೇ ಲಭ್ಯ. ಆದರೆ ಕೆಲವು ಮಾಹಿತಿಗಳು ಮಾತ್ರ ಕಾನೂನಿನಾತ್ಮಕವಾಗಿ ಲಭ್ಯವಿಲ್ಲ. ಉದ್ಯೋಗ ಸ್ಥಳದಲ್ಲಿ ಮತ್ತು ಶಾಲೆಗಳಲ್ಲಿ ಕೆಲವು ಮಾಹಿತಿಗಳು ಮತ್ತು ಕೆಲವು ವೆಬ್‌ಸೈಟ್‌ಗಳ ಆಕ್ಸೆಸ್‌ ಸಾಧ್ಯವಿಲ್ಲ. ಅಂತಹ ವೆಬ್‌ಸೈಟ್‌ಗಳನ್ನು ಮೇಲೆ ತಿಳಿಸಿದ ಪ್ರದೇಶಗಳಲ್ಲಿ ಅಧಿಕೃತ ಅಧಿಕಾರಿಗಳು ಬ್ಲಾಕ್‌ ಮಾಡಿರುತ್ತಾರೆ.

ಅಂದಹಾಗೆ ಅಧಿಕೃತ ಅಧಿಕಾರಿಗಳು ಕೆಲವೊಮ್ಮೆ ಉದ್ಯೋಗಿಗಳಿಗೆ ಅಗತ್ಯವಾದ ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡಿರುತ್ತಾರೆ. ಅಂತಹ ಸಮಯದಲ್ಲಿ ಉದ್ಯೋಗಿಗಳೇ ಮಾಹಿತಿ ಪಡೆಯುವ ಸಲುವಾಗಿ ಕೆಲವು ಹಂತಗಳ ಮೂಲಕ ಬ್ಲಾಕ್‌ ಆದ ವೆಬ್‌ಸೈಟ್‌ ಅನ್ನು ಅನ್‌ಬ್ಲಾಕ್‌ ಮಾಡುವುದು ಹೇಗೆ ಎಂದು ಲೇಖನದಲ್ಲಿ ಓದಿ ತಿಳಿಯಿರಿ.

'ಗೂಗಲ್‌ ಅಲ್ಲೊ' ಆಪ್‌ ಬಳಸುವ ಮುನ್ನ ಈ 8 ಹಂತಗಳನ್ನು ಓದಿಕೊಳ್ಳಿ

ಇಂಟರ್ನೆಟ್‌ ಆಪ್ಶನ್ ಬದಲಿಸಿ

ಇಂಟರ್ನೆಟ್‌ ಆಪ್ಶನ್ ಬದಲಿಸಿ

"Due to Restrictions On This Account," ಎಂದು ಮೆಸೇಜ್‌ ಪ್ರದರ್ಶನವಾದಲ್ಲಿ ನೀವು ಯಾವುದೇ ಬದಲಾವಣೆ ಮಾಡಲು ಸಾಧ್ಯವಾಗದೇ ಇರಬಹುದು. ಆದರೆ ಈ ರೀತಿಯ ಎರರ್‌ ಮೆಸೇಜ್‌ ಪ್ರದರ್ಶನವಾಗದಿದ್ದಲ್ಲಿ, ನಿಮ್ಮ ಕಂಪ್ಯೂಟರ್‌ನಲ್ಲಿ ನೀವೆ ಇಂಟರ್ನೆಟ್‌ ಆಪ್ಶನ್‌ನಿಂದ ವೆಬ್‌ಸೈಟ್‌ ಅನ್‌ಬ್ಲಾಕ್‌ ಮಾಡಬಹುದು.

ಈ ರೀತಿ ಮಾಡಲು Control Panel > Security > Restricted Sites ನಂತರ ಸೈಟ್‌ ಬಟನ್‌ ಕ್ಲಿಕ್‌ ಮಾಡಿ. ಸೈಟ್‌ URL ಅನ್ನು ರೀಮೂವ್ ಮಾಡಿ. ನಂತರ ಸೈಟ್‌ ಆಕ್ಸೆಸ್ ಸಿಗುತ್ತದೆ.

HTTP ಇಂದ HTTPS ಗೆ ಅಥವಾ ಇತರೆ ಬದಲಿಸಿ

HTTP ಇಂದ HTTPS ಗೆ ಅಥವಾ ಇತರೆ ಬದಲಿಸಿ

ನೀವು ಆಕ್ಸೆಸ್ ಮಾಡಬೇಕಿರುವ ವೆಬ್‌ಸೈಟ್ URL ಅನ್ನು ಕಾಪಿ ಮಾಡಿ. ಇದರಲ್ಲಿ 's' ಇದ್ದರೆ 'http' ಗೆ 'https' ಎಂದು ಸೇರಿಸಿ. ಈಗಾಗಲೇ ಹೊಂದಿದ್ದರೆ 's' ರೀಮೂವ್‌ ಮಾಡಿ ಸೈಟ್‌ ಆಕ್ಸೆಸ್ ಮಾಡಿ. ಅಥವಾ 's' ಹೊಂದಿಲ್ಲದಿದ್ದರೇ 's' ಸೇರಿಸಿ ಸೈಟ್‌ ಆಕ್ಸೆಸ್ ಪ್ರಯತ್ನಿಸಿ. ಸಮಸ್ಯೆ ಬಗೆಹರಿಸಿ.

ಪೋರ್ಟೆಬಲ್‌ ಪ್ರಾಕ್ಸಿ ಸರ್ವರ್‌ ಬಳಸಿ

ಪೋರ್ಟೆಬಲ್‌ ಪ್ರಾಕ್ಸಿ ಸರ್ವರ್‌ ಬಳಸಿ

ನಿರ್ಬಂಧನೆಯನ್ನು ಅನ್‌ಬ್ಲಾಕ್ ಮಾಡಲು ನೆಟ್‌ವರ್ಕ್‌ ಅಡ್ಮಿನ್‌ ಮತ್ತು ISP ಸೆಟ್ ಮಾಡಿ. ಇದಕ್ಕಾಗಿ ಪೋರ್ಟೆಬಲ್‌ ಪ್ರಾಕ್ಸಿ ಸರ್ವರ್‌ ಅನ್ನು ಬಳಸಬಹುದು. ಇದು ಎಲ್ಲಾ ನಿರ್ಬಂಧಗಳನ್ನು ತೆಗೆದು ಸೈಟ್‌ ಕಂಟೆಂಟ್‌ಗೆ ಆಕ್ಸೆಸ್‌ ನೀಡುತ್ತದೆ. proxy ಬ್ರೌಸರ್‌ಗೆ ಭೇಟಿ ನೀಡಿ, ವೆಬ್‌ಸೈಟ್‌ URL ಅನ್ನು ಟೈಪಿಸಿ ಆಕ್ಸೆಸ್‌ ಪಡೆಯಿರಿ.

 ಗೂಗಲ್‌ ಭಾಷಾಂತರ ಬಳಸಿ

ಗೂಗಲ್‌ ಭಾಷಾಂತರ ಬಳಸಿ

ಗೂಗಲ್‌ ಭಾಷಾಂತರ ಎಲ್ಲಾ ಮಾಹಿತಿಯನ್ನು ಸ್ವಂತ ಸರ್ವರ್‌ನಲ್ಲಿ ಹಿಂಪಡೆದು, ನಿರ್ದಿಷ್ಟ ವೆಬ್‌ಸೈಟ್‌ ಆಕ್ಸೆಸ್ ನೀಡಲು ಸಹಾಯ ಮಾಡುತ್ತದೆ. ಆದರೆ ನೀವು ಭಾಷಾಂತರದಲ್ಲಿ ಪ್ರಸ್ತುತ ವೆಬ್‌ಸೈಟ್‌ ಭಾಷೆ ಸೇರಿದಂತೆ ಇತರೆ ಭಾಷೆ ಆಡ್‌ ಮಾಡಿ. ನಂತರ ನೀವು ಬಳಸಲು ಬಯಸುವ ವೆಬ್‌ಸೈಟ್‌ ಆಕ್ಸೆಸ್ ಪಡೆಯಿರಿ.

 VPN ಬಳಸಿ

VPN ಬಳಸಿ

ಅಂದಹಾಗೆ ವಿಪಿಎನ್‌ ಅನ್ನು ಬ್ಲಾಕ್‌ ಆದ ಸೈಟ್‌ ಆಕ್ಸೆಸ್‌ಗಾಗಿ ಬಳಸಬಹುದು. ವಿಪಿಎನ್‌'ನಿಂದ ಇತರೆ ದೇಶದ ಸರ್ವರ್‌ ಅಥವಾ ಇತರೆ ಪ್ರದೇಶಕ್ಕೆ ಕನೆಕ್ಟ್‌ ಪಡೆಯಬಹುದು. ಹೀಗೆ ಮಾಡುವುದರಿಂದ ಬ್ಲಾಕ್‌ ಆದ ಸೈಟ್‌ ಕಂಟೆಂಟ್‌ ಮಾಹಿತಿಯನ್ನು ಆಕ್ಸೆಸ್ ಮಾಡಬಹುದು. ಆದರೆ ವಿಪಿಎನ್‌ ಬಳಸುವಾಗ ಇಂಟರ್ನೆಟ್ ವೇಗ ಕುಸಿಯಬಹುದು.

Best Mobiles in India

Read more about:
English summary
5 Simple Tricks to Unblock Particular Websites at Your Workplace. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X