ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ಹಣ ಕೊಡಬೇಕಾದ ಆಪ್ ಗಳನ್ನು ಉಚಿತವಾಗಿ ಸ್ಥಾಪಿಸಲು ಹೀಗೆ ಮಾಡಿ

By Super Admin
|

ಮೊಬೈಲ್ ಫೋನ್, ಅದರಲ್ಲೂ ಸ್ಮಾರ್ಟ್ ಫೋನುಗಳು ಜನಸಾಮಾನ್ಯರೂ ಹೊಂದುವಂತಾಗಿರಲು ಅತ್ಯಂತ ಪ್ರಮುಖ ಕಾರಣವೆಂದರೆ ಆಂಡ್ರಾಯ್ಡ್ ತಂತ್ರಜ್ಞಾನವನ್ನು ಮುಕ್ತವಾಗಿ ಮತ್ತು ಉಚಿತವಾಗಿ ನೀಡಿರುವುದು. ಅಲ್ಲದೇ ಇದರಲ್ಲಿರುವ ಸಾವಿರಾರು ಉಚಿತ ಆಪ್ ಗಳ ಮೂಲಕ ಒಂದೊಮ್ಮೆ ಶ್ರೀಮಂತರ ಪ್ರತಿಷ್ಠೆಯ ವಿಷಯವಾಗಿದ್ದ ಉಪಕರಣಗಳನ್ನೂ ಸಾಮಾನ್ಯಜನರು ಬಳಸಲು ಸಾಧ್ಯವಾಗಿದೆ.

ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ಹಣ ಕೊಡಬೇಕಾದ ಆಪ್ ಗಳನ್ನು ಉಚಿತವಾಗಿ

ಉದಾಹರಣೆಗೆ ಜಿಪಿಎಸ್ ತಂತ್ರಜ್ಞಾನ. ಆದರೆ ಈ ತಂತ್ರಜ್ಞಾನಗಳು ಉಚಿತವಾಗಿ ದೊರಕುತ್ತಿರುವುದೇಕೆ ಗೊತ್ತೇ? ಇದಕ್ಕೆ ಕಾರಣ ಇದರ ಪ್ರಾಯೋಜಕರು. ಇವುಗಳಲ್ಲಿ ನಮಗೆ ಅರಿವೇ ಇಲ್ಲದಂತೆ ಪ್ರಾಯೋಜಕರ ಜಾಹೀರಾತುಗಳನ್ನು ಅಳವಡಿಸಲಾಗಿರುತ್ತದೆ. ಇವು ನಡುನಡುವೆ ಎದ್ದು ಹಲವು ಸೇವೆಗಳ ಬಗ್ಗೆ ವಿವರಿಸಿ ಗ್ರಾಹಕರನ್ನು ಸೆಳೆಯುತ್ತವೆ.

ಓದಿರಿ: ರಿಲಾಯನ್ಸ್ ಜಿಯೋ e-KYC ಆಕ್ಟಿವೇಶನ್: ಸಿಮ್ 15 ನಿಮಿಷದಲ್ಲಿ ಆಕ್ಟಿವೇಟ್‌ ಆಗುತ್ತದೆ!

ಇನ್ನೂ ಕೆಲವು ಆಪ್ ಗಳು ಉಚಿತವಾಗಿರದೇ ಕೊಂಚ ಹಣವನ್ನು ನೀಡಬೇಕಾಗುತ್ತದೆ. ಏಕೆಂದರೆ ಇವುಗಳಲ್ಲಿ ಹಲವು ವೈಶಿಷ್ಟ್ಯಗಳನು ಅಳವಡಿಸಲು ಪ್ರೋಗ್ರಾಮರ್ ಗಳು ಹೆಚ್ಚು ಕಾಲ ಶ್ರಮಿಸಬೇಕಾಗುತ್ತದೆ. ಅಂತೆಯೇ ಹೆಚ್ಚು ಹಣ ಖರ್ಚಾಗಿದ್ದು ಇದನ್ನು ಬಳಕೆದಾರರಿಂದ ಸಂಗ್ರಹಿಸಲಾಗುತ್ತದೆ.

ಓದಿರಿ: ಹೆಚ್ಚು ಬ್ಯಾಟರಿ ಬಾಳಿಕೆಯುಳ್ಳ ಲ್ಯಾಪ್‌ಟಾಪ್ಸ್ ಖರೀದಿಸಲು ಮರೆಯದಿರಿ

ಕೆಲವು ಸಂಸ್ಥೆಗಳು ತಮ್ಮದೇ ಆಪ್ ಗಳನ್ನು ನೇರವಾಗಿಯೇ ಇನ್ಸ್ಟಾಲ್ ಮಾಡಲು ಪ್ರಾರಂಭಿಸಿವೆ. ಜೊತೆಗೇ ಕೆಲವು ಖ್ಯಾತ ಅಥವಾ ಹಣ ನೀಡಬೇಕಾದ ಆಪ್ ಗಳನ್ನು ಉಚಿತವಾಗಿ ನೀಡುತ್ತಿವೆ. ಈ ಆಪ್ ಗಳನ್ನು ಉಚಿತವಾಗಿ ಬಳಸಬೇಕೆಂದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ.

ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ಹಣ ಕೊಡಬೇಕಾದ ಆಪ್ ಗಳನ್ನು ಉಚಿತವಾಗಿ

ಇದಕ್ಕೂ ಮೊದಲು ನಿಮ್ಮ ಮೊಬೈಲಿನಲ್ಲಿ ಥರ್ಡ್ ಪಾರ್ಟಿ ಅಂದರೆ ಗೂಗಲ್ ಪ್ಲೇ ಹೊರತಾದ ಆಪ್ ಗಳನ್ನು ಸ್ಥಾಪಿಸಲು ಅನುಮತಿ ಒದಗಿಸಬೇಕು. ಏಕೆಂದರೆ ಪೂರ್ವ ಅಣತಿಯಂತೆ ನಿಮ್ಮ ಆಂಡ್ರಾಯ್ಡ್ ಮೊಬೈಲಿನಲ್ಲಿ ಹೊರಗಿನ ಆಪ್ ಸ್ಥಾಪಿಸುವಂತಿಲ್ಲ. ಈ ಅನುಮತಿ ಪಡೆಯಲು Menu >> Settings >> Security ಸೆಟ್ಟಿಂಗ್ ಗೆ ಹೋಗಿ "Unknown Sources" ಎಂದಿರುವನ್ನು ಆಯ್ಕೆ ಮಾಡಿ ಟಿಕ್ ಮಾಡಿ. ಈಗ ನಿಮ್ಮ ಮೊಬೈಲಿನಲ್ಲಿ ಹೊರಗಿನ ಆಪ್ ಗಳನ್ನೂ ಸ್ಥಾಪಿಸಬಹುದು.

ಓದಿರಿ: ಭಾರತದಲ್ಲಿ ಆ್ಯಪಲ್ ಐಫೋನ್ 7 ಹಾಗು 7ಪ್ಲಸ್ ಫೋನುಗಳ ಬೆಲೆ ಎಷ್ಟಿರುತ್ತದೆ ಗೊತ್ತಾ?

ಅಷ್ಟೇ ಅಲ್ಲ, ಹಿಂದಿನ ವಿಧಾನವಾದ .apk ಎಕ್ಸ್ ಟೆನ್ಷನ್ ಇರುವ ಫೈಲುಗಳನ್ನು ಡೌನ್ ಲೋಡ್ ಮಾಡಿಯೂ ಸ್ಥಾಪಿಸಬಹುದು. ಪ್ಲೇ ಸ್ಟೋರ್ ಗೆ ಒಂದು ಅತ್ಯುತ್ತಮ ಪರ್ಯಾಯ ವ್ಯವಸ್ಥೆ ಎಂದರೆ 'Aptoide' ಈ ಆಪ್ ಸ್ಥಾಪಿಸಿದ ಬಳಿಕ ಇತರ ಬಳಕೆದಾದರು ತಮ್ಮ ಆಪ್ ಗಳನ್ನು ಅಲ್ಪೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಅಂದರೆ ನಿಮ್ಮದೇ ಯಾವುದಾದರೂ ಆಪ್ ಇದ್ದರೆ ನೀವೂ ಅಪ್ಲೋಡ್ ಮಾಡಬಹುದು. ಹೇಗೇ ನಿಮ್ಮಂತೆಯೇ ತಮ್ಮ ತಮ್ಮ ಆಪ್ ಗಳನ್ನು ನಿರ್ಮಿಸಿ ಅಪ್ಲೋಡ್ ಮಾಡಿರುತ್ತಾರೆ. ಈ ಆಪ್ ಗಳನ್ನೇ ಡೌನ್ ಲೋಡ್ ಮಾಡಬಹುದು. ಇದಕ್ಕೆ app repositories ಎಂದು ಕರೆಯುತ್ತಾರೆ.

ಓದಿರಿ: ಜಿಯೋ 4G ನೆಟ್‌ವರ್ಕ್‌ ಮತ್ತು ಡೌನ್‌ಲೋಡ್‌ ಸಮಸ್ಯೆಗೆ ಪರಿಹಾರ ಏನು ಗೊತ್ತೇ?

ಬನ್ನಿ ಈಗ ಆಪ್ ಗಳನ್ನು ಡೌನ್ ಲೋಡ್ ಮಾಡುವುದು ಹೇಗೆ ಎಂಬುದನ್ನು ನೋಡೋಣ:

ಹಂತ 1: ನಿಮ್ಮ ಮೊಬೈಲಿನ ಬ್ರೌಸರ್ ತೆಗೆದು m.aptoide.com ಎಂದು ಟೈಪ್ ಮಾಡಿ

ಹಂತ 2: ಪುಟ ತೆರೆದ ಬಳಿಕ Aptoide ಎಂಬ .apk ಎಕ್ಸ್ ಟೆನ್ಷನ್ ಇರುವ ಫೈಲು ಆರಿಸಿ ಇನ್ಸ್ಟಾಲ್ ಮಾಡಿ

ಹಂತ 3: ಈಗ ಅಪ್ಲಿಕೇಶನ್ ಇನ್ಸ್ಟಾಲ್ ಮಾಡುವ ಪರದೆ ತೆರೆದುಕೊಳ್ಳುತ್ತದೆ. ಒಂದು ವೇಳೆ ನಿಮ್ಮ ಫೋನ್ ನಲ್ಲಿ ಇತರ .apk ಎಕ್ಸ್ ಟೆನ್ಷನ್ ಇರುವ ಫೈಲು ಇದ್ದರೆ ಯಾವ ಫೈಲ್ ಆಯ್ದುಕೊಳ್ಳಬೇಕೆಂದು ಕೇಳುತ್ತದೆ. ಸರಿಯಾದ ಫೈಲ್ ಆಯ್ದುಕೊಳ್ಳಿ.

ಹಂತ 4: ಇನ್ಸ್ಟಾಲ್ ಆದ ಬಳಿಕ Aptoide App store ಎಂದಿರುವುದನ್ನು ತೆರೆಯಿರಿ. ಕೆಲವೊಮ್ಮೆ ನಿಮ್ಮ ಸಂಗ್ರಹದ ಆಪ್ ಗಳನ್ನು ಸೇರಿಸಲು ಕೇಳಬಹುದು. ಇದ್ದರೆ ಸೇರಿಸಬಹುದು, ಇಲ್ಲದಿದ್ದರೆ ಇಲ್ಲ ಎಂದು ಹೇಳಿ ಮುಂದುವರೆಯಬಹುದು.

ಹಂತ 5: ಎಲ್ಲಾ ಮುಗಿದ ಬಳಿಕ ಪರದೆಯ ಬಲಬದಿಯ ಮೇಲೆ ಇರುವ search ಎಂಬ ಹುಡುಕಾಟದ ಸ್ಥಳದಲ್ಲಿ ನಿಮಗೆ ಯಾವ ಆಪ್ ಬೇಕು ಅದರ ಹೆಸರು ಟೈಪ್ ಮಾಡಿ ಹುಡುಕಿ. ಕೆಲವೊಮ್ಮೆ ಹುಡುಕಾಟ ಸಫಲವಾಗದಿದ್ದರೆ Search More ಎಂಬ ಬಟನ್ ಒತ್ತಿ.

ಹಂತ 6: ನಿಮಗೆ ಅಗತ್ಯವಿರುವ ಆಪ್ ಸಿಕ್ಕಿದ ಬಳಿಕ ಇದನ್ನು ಆಯ್ದುಕೊಳ್ಳಿ. ಈ ಆಪ್ ಸ್ಥಾಪಿಸಬೇಕೇ ಎಂದು ಡಯಲಾಗ್ ಬಾಕ್ಸ್ ಕೇಳುತ್ತದೆ. ಓಕೆ ಎಂದಿರುವಲ್ಲಿ ಕ್ಲಿಕ್ ಮಾಡಿ.

ಹಂತ 7: ಬಳಿಕ ನಿಮ್ಮಲ್ಲಿ ಆಪ್ ಅಥವಾ app repository ಗಳಿದ್ದರೆ ಸೇರಿಸಿ ಎಂದು ಇನ್ನೊಮ್ಮೆ ನೆನಪು ಮಾಡುತ್ತದೆ. ಇಲ್ಲವೆಂದಾದಲ್ಲಿ ಮುಂದುವರೆಯಿರಿ.

ಹಂತ 8: ಕೊಂಚ ಹೊತ್ತಿನ ಬಳಿಕ ನಿಮ್ಮ ಮೊಬೈಲಿನಲ್ಲಿ ಇನ್ಸ್ಟಾಲ್ ಆಗುತ್ತದೆ. ಬಳೀಕ ಓಕೆ ಒತ್ತಿ ನಿರ್ಗಮಿಸಿ. ಅಷ್ಟೇ, ಹಣ ಕೊಡದೇ ದುಬಾರಿ ಮತ್ತು ಶ್ರೀಮಂತರ ಪ್ರತಿಷ್ಠೆಯ ಸಲಕರಣೆ ಈಗ ನಿಮ್ಮದಾಗುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Obviously, the Android platform is one of the best in the mobile application with a sea of applications in varieties of the category. Further, Google Play Store has been the popular app market for the Android smartphones and tablets, but it ain't the only one in the market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X