Subscribe to Gizbot

ಭಾರತದಲ್ಲಿ ಆ್ಯಪಲ್ ಐಫೋನ್ 7 ಹಾಗು 7ಪ್ಲಸ್ ಫೋನುಗಳ ಬೆಲೆ ಎಷ್ಟಿರುತ್ತದೆ ಗೊತ್ತಾ?

Written By:

ಆ್ಯಪಲ್ ಕಂಪನಿಯು ಸೆಪ್ಟೆಂಬರ್ 7ರ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಯನ್ನು ಮಾಧ್ಯಮಗಳಿಗೆ ಕಳುಹಿಸಲಾರಂಭಿಸಿದ ನಂತರ, ಈ ಸ್ಮಾರ್ಟ್ ಫೋನುಗಳ ಬೆಲೆ ಎಷ್ಟಿರಬಹುದೆಂಬ ಕುತೂಹಲ ಹೆಚ್ಚಾಗಿದೆ.

ಭಾರತದಲ್ಲಿ ಆ್ಯಪಲ್ ಐಫೋನ್ 7 ಹಾಗು 7ಪ್ಲಸ್ ಫೋನುಗಳ ಬೆಲೆ ಎಷ್ಟಿರುತ್ತದೆ ಗೊತ್ತಾ?

ಹೊಸ ಫೋನಿಗೆ ಆ್ಯಪಲ್ ಏನು ಹೆಸರು ಕೊಡುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವರು ಇದಕ್ಕೆ ಆ್ಯಪಲ್ ಐಫೋನ್ 7 ಎಂದು ಹೆಸರಿಡಬಹುದು ಎಂದರೆ ಇನ್ನೂ ಕೆಲವು ಗಾಳಿ ಸುದ್ದಿಗಳು ಇದರ ಹೆಸರು ಐಫೋನ್ 6ಎಸ್.ಇ ಎಂದಿರುತ್ತದೆ ಎನ್ನುತ್ತವೆ. ಆ್ಯಪಲ್ ಕಂಪನಿಯು ಐಫೋನ್ ಎಸ್ಇ ಬಿಡುಗಡೆಗೊಳಿಸಿದ ಎರಡು ವರುಷಗಳ ನಂತರ ಐಫೋನ್ ಎಸ್ಇ ಹೊರತಂದಿದ್ದನ್ನು ನೋಡಿದರೆ ಹೊಸ ಐಫೋನಿನ ಹೆಸರು ಐಫೋನ್ 7 ಎಂದೇ ಇರುತ್ತದೆ.

ಓದಿರಿ: 50 ರೂಪಾಯಿಗೆ 1ಜಿಬಿ ಡೇಟಾ ಜಿಯೋ ಆಫರ್

ಭಾರತದಲ್ಲಿ ಐಫೋನುಗಳ ಬೆಲೆಯನ್ನು ಹೆಚ್ಚಾಗಿಯೇ ಇರುತ್ತದೆ. ವಿಶ್ವದಾದ್ಯಂತ ಒಂದೇ ಬೆಲೆಯಿದ್ದರೆ ಅದು ಭಾರತದಲ್ಲಿನ ಬೆಲೆಗಿಂತ ಕಡಿಮೆಯೇ ಇರುತ್ತದೆ.

ಓದಿರಿ: ಇಂಟೆಕ್ಸ್ 'ಆಕ್ವಾ 4.5 3G' ಸ್ಮಾರ್ಟ್‌ಫೋನ್‌ ರೂ.3,349 ಕ್ಕೆ ಲಾಂಚ್‌

ಆ್ಯಪಲ್ ತನ್ನ ಐಫೋನ್ ಎಸ್ಇ ಫೋನನ್ನು ಮಧ್ಯ ಮಾರ್ಗದ ಫೋನ್ ಎಂದೇ ಹೇಳಿತ್ತಾದರೂ ಅದರ ಬೆಲೆ ಹೆಚ್ಚಿತ್ತು. 39,999 ರುಪಾಯಿಗಳಿಂದ ಪ್ರಾರಂಭವಾಗುತ್ತಿದ್ದ ಈ ಫೋನು ಬಳಕೆದಾರರಲ್ಲಿ ನಂಬುಗೆ ಮೂಡಿಸಲಿಲ್ಲ, ಹೀಗಾಗಿ ದೇಶದಲ್ಲಿ ಆ್ಯಪಲ್ ಮಾರಾಟ ಕುಸಿತ ಕಂಡಿತು.

ಓದಿರಿ: ರಿಲಾಯನ್ಸ್ ಜಿಯೋ 4ಜಿ ಟ್ರಯಲ್ ಸೇವೆ ಇಂದಿನಿಂದ ಆರಂಭ

ಐಫೋನ್ ಎಸ್ಇಗೂ ಮೊದಲು ಕಂಪನಿಯು ಐಫೋನ್ 5ಸಿ ಅನ್ನು ಹೊರತಂದಿದ್ದು, ಅದರ ಬೆಲೆ ಕಡಿಮೆಯಿರುತ್ತದೆ ಎನ್ನಲಾಗಿತ್ತು, ಆದರೆ ಅದೂ ನಡೆಯಲಿಲ್ಲ. ಈಗ ಕ್ಯುಪರ್ಟಿನೋ ದೈತ್ಯ ಹೊಸ ಐಫೋನನ್ನು ಬಿಡುಗಡೆಗೊಳಿಸಲು ಅಣಿಯಾಗುತ್ತಿದೆ.

ಸೋರಿಕೆಯಾದ ಮಾಹಿತಿಯ ಪ್ರಕಾರ 2016ರ ಐಫೋನುಗಳು ಭಾರತದಲ್ಲಿ ಹೆಚ್ಚಿನ ಬೆಲೆಯಲ್ಲೇ ಮಾರಾಟವಾಗುತ್ತದೆ, ಇದೇನೂ ನಮ್ಮ ಗ್ರಾಹಕರಿಗೆ ಹೊಸತಲ್ಲ. ಹೊಸ ಐಫೋನುಗಳ ಸಂಭಾವ್ಯ ಬೆಲೆಯ ಬಗ್ಗೆ ಇಲ್ಲಿ ತಿಳಿಸುತ್ತಿದ್ದೇವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆ್ಯಪಲ್ ಐಫೋನ್ 7 ಬೆಲೆ.

ಆ್ಯಪಲ್ ಐಫೋನ್ 7 ಬೆಲೆ.

16ಜಿಬಿಯ ಆ್ಯಪಲ್ ಐಫೋನ್ 6ಎಸ್ ನ ಬೆಲೆ 53,500 ರುಪಾಯಿಯಷ್ಟಿತ್ತು, ದುಬಾರಿ ಫೋನದು. ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಕೂಡ ನಮ್ಮ ಜೇಬುಗಳಿಗೆ ಕತ್ತರಿ ಹಾಕುವಂತೆ 59,990 ರುಪಾಯಿದ್ದಾಗಿತ್ತು.

ಆ್ಯಪಲ್ ಖಂಡಿತವಾಗಿ ನೋಟ್ 7 ಜೊತೆಗೆ ಪೈಪೋಟಿ ನೀಡುವಂತಹ ಬೆಲೆಯನ್ನೇ ಇಡುತ್ತದೆ. ಜೊತೆಗೆ 2016ರ ಐಫೋನುಗಳಲ್ಲಿ ಕನಿಷ್ಟ 32ಜಿಬಿ ಸಂಗ್ರಹ ಸಾಮರ್ಥ್ಯವಿರುತ್ತದೆ.

32ಜಿಬಿಯ ಫೋನಿಗೆ 62,000 ರುಪಾಯಿ.

32ಜಿಬಿಯ ಫೋನಿಗೆ 62,000 ರುಪಾಯಿ.

ಮೊದಲೇ ಹೇಳಿದಂತೆ ಆ್ಯಪಲ್ ತನ್ನ ಹೊಸ ಫೋನುಗಳ ಬೆಲೆಯನ್ನು ನೋಟ್ 7ಗೆ ಪೈಪೋಟಿ ಕೊಡುವಂತೆಯೇ ಇಡುತ್ತದೆ. 32ಜಿಬಿಯ ಫೋನಿಗೆ ಸರಿಸುಮಾರು 53,000 ರುಪಾಯಿಗಳಷ್ಟಾಗುತ್ತದೆ ಎನ್ನುತ್ತದೆ ವ್ಯೀಬೋದ ಲೇಖನ. 64ಜಿಬಿಯ ಫೋನಿಗೆ 61,000 ರುಪಾಯಿ ಹಾಗೂ 256ಜಿಬಿಯ ಫೋನಿಗೆ 71,000 ರುಪಾಯಿಗಳಾಗುತ್ತದೆ.

ವ್ಯೀಬೋದ ಬೆಲೆಗಳು 'ಯುವಾನ್' ನಲ್ಲಿದ್ದವು

ವ್ಯೀಬೋದ ಬೆಲೆಗಳು 'ಯುವಾನ್' ನಲ್ಲಿದ್ದವು

ವ್ಯೀಬೋದ ಲೇಖನದಲ್ಲಿ ಐಫೋನಿನ ಬೆಲೆಗಳು ಚೀನಾದ ಯುವಾನ್ ಕರೆನ್ಸಿಯಲ್ಲಿದ್ದವು. ಆ್ಯಪಲ್ ವಿಶ್ವ ಮಾರುಕಟ್ಟೆಯ ದರದಂತೆ ಭಾರತದಲ್ಲಿ ತನ್ನ ಫೋನುಗಳನ್ನು ಬಿಡುಗಡೆ ಮಾಡುವುದಿಲ್ಲ. ಯಾವಾಗಲೂ ಹೊರಗಡೆಗಿಂತ ಭಾರತದಲ್ಲೇ ಐಫೋನಿನ ಬೆಲೆ ಹೆಚ್ಚಿರುತ್ತದೆ.

ಇದೇ ಟ್ರೆಂಡ್ ಮುಂದುವರೆದರೆ 32ಜಿಬಿಯ ಐಫೋನ್ 7ರ ಬೆಲೆ 62,000ದ ಆಸುಪಾಸಿನಲ್ಲಿರುತ್ತದೆ.

ಐಫೋನ್ 7ಪ್ಲಸ್ 62,000 ರುಪಾಯಿಯಿಂದ ಪ್ರಾರಂಭವಾಗುತ್ತದೆ.

ಐಫೋನ್ 7ಪ್ಲಸ್ 62,000 ರುಪಾಯಿಯಿಂದ ಪ್ರಾರಂಭವಾಗುತ್ತದೆ.

ವ್ಯೀಬೋದ ಲೇಖನದ ಪ್ರಕಾರ 32ಜಿಬಿಯ ಐಫೋನ್ 7 ಪ್ಲಸ್ ಗೆ 62,000 ರುಪಾಯಿಗಳಾಗುತ್ತದೆ.64ಜಿಬಿಯ ಫೋನಿಗೆ 70,000 ರುಪಾಯಿ ಮತ್ತು 256 ಜಿಬಿಯ ಫೋನಿಗೆ 79,000 ರುಪಾಯಿಗಳಾಗುತ್ತದೆ.

ಇದು ಅಂತಿಮ ಬೆಲೆಯೇನಲ್ಲ.

ಇದು ಅಂತಿಮ ಬೆಲೆಯೇನಲ್ಲ.

ಐಫೋನ್ 6ಎಸ್ ಮತ್ತು ಐಫೋನ್ 6ಎಸ್ ಪ್ಲಸ್ ಬಿಡುಗಡೆಯಾಗುವ ಮುನ್ನವೂ ಇದೇ ರೀತಿಯ ಬೆಲೆ ಲೆಕ್ಕಾಚಾರ ನಡೆದಿತ್ತು. ಆದರೆ ಐಫೋನ್ ಆ ಲೆಕ್ಕಾಚಾರಗಳಿಗಿಂತ ಹೆಚ್ಚಿನ ಬೆಲೆಯನ್ನು ನಿಗದಿಗೊಳಿಸಿತ್ತು.

ಉಳಿದ ಐಫೋನುಗಳಂತೆ, ಐಫೋನ್ 7ರ ಬೆಲೆಯೂ ಭಾರತದಲ್ಲಿ ಹೆಚ್ಚೇ ಇರುತ್ತದೆ. ಸ್ಮಾರ್ಟ್ ಫೋನ್ ಅಧಿಕೃತವಾಗಿ ಬಿಡುಗಡೆಯಾಗುವವರೆಗೆ ಕಾಯಬೇಕಷ್ಟೇ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Ever since Apple started rolling out the media invites for the September 7 event, the focus is now shifted over to the pricing of the smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot