ಗೂಗಲ್‌ ಕ್ರೋಮ್‌ ಬ್ರೌಸರ್‌ನಲ್ಲಿ ಸುಲಭವಾಗಿ ಸರ್ಚ್‌ ಮಾಡಲು ಟಿಪ್ಸ್‌

Posted By:

ಗೂಗಲ್‌ನ ಕ್ರೋಮ್‌ ಬ್ರೌಸರ್‌ಗೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಪಿನ್ ಟ್ಯಾಬ್‌ ಹೇಗೆ ಮಾಡುವುದು ಎನ್ನುವುದನ್ನು ತಿಳಿದಿದ್ದೀರಿ. ಇಂದು ಬ್ರೌಸರ್‌ ಟಿಪ್ಸ್‌ಗೆ ಸಂಬಂಧಿಸಿದಂತೆ ಮತ್ತಷ್ಟು ಉಪಯುಕ್ತ ಮಾಹಿತಿಗಳು ಇಲ್ಲಿವೆ.

ಒಂದೊಂದೆ ಪುಟವನ್ನು ತಿರುಗಿಸಿಕೊಂಡು ನೋಡಿಕೊಂಡು ಹೋಗಿ. ನಂತರ ನೀವು ಈ ರೀತಿ ಸೆಟ್ಟಿಂಗ್ಸ್‌ ಮಾಡಿ ಕ್ರೋಮ್‌ ಬ್ರೌಸರ್‌ನಲ್ಲಿ ವೇಗವಾಗಿ ಮಾಹಿತಿಯನ್ನು ಹುಡುಕಿ.

ಇದನ್ನೂ ಓದಿ:ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ! ಸುದ್ದಿಯನ್ನು ಶೇರ್‌ ಮಾಡಿ

ಇದನ್ನೂ ಓದಿ: ಉಳಿದ ಕಂಪೆನಿಗಳಿಗಿಂತ ಗೂಗಲ್‌ ಎಷ್ಟು ಮುಂದಿದೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಹೋಮ್‌ ಬಟನ್‌

ಹೋಮ್‌ ಬಟನ್‌

ಗೂಗಲ್‌ ಕ್ರೋಮ್‌ ಬ್ರೌಸರ್ ಟಿಪ್ಸ್‌


ಬ್ರೌಸರ್‌ನಲ್ಲಿ ಹೊಸ ಟ್ಯಾಬ್‌ ಓಪನ್‌ ಮಾಡಬೇಕಿದ್ದಲ್ಲಿ ಟೈಟಲ್‌ ಬಾರ್‌ ಓಪನ್‌ ಆಗಿರುವ ಪೇಜ್‌ನ ಬಲಭಾಗದಲ್ಲಿರುವ new tab ಆಯ್ಕೆಯನ್ನು ಆರಿಸಿ ಹೊಸ ಟ್ಯಾಬ್‌‌ ಓಪನ್‌ ಮಾಡಬಹುದು. ಆದರೆ ಇದಕ್ಕಿತಲೂ ಸುಲಭವಾಗಿ ಬ್ರೌಸರ್‌ನಲ್ಲಿ ಹೋಮ್‌ ಬಟನ್‌ ಸೇರಿಸುವ ಮೂಲಕ ಹೊಸ ಟ್ಯಾಬ್‌ ಓಪನ್‌ ಮಾಡಬಹುದು.

ಹೋಮ್‌ ಬಟನ್‌

ಹೋಮ್‌ ಬಟನ್‌

ಗೂಗಲ್‌ ಕ್ರೋಮ್‌ ಬ್ರೌಸರ್ ಟಿಪ್ಸ್‌


ಕ್ರೋಮ್‌ ಬ್ರೌಸರ್‌ನಲ್ಲಿ ಬೈ ಡಿಫಾಲ್ಟ್‌ ಆಗಿ ಹೋಮ್‌ ಬಟನ್‌ ಕಾಣುದಿಲ್ಲ. ಹೀಗಾಗಿ ಬ್ರೌಸರ್‌ನಲ್ಲಿ ಹೋಮ್‌ ಬಟನ್‌ ಕಾಣಲು ಕ್ರೋಮ್‌ ಬ್ರೌಸರ್‌ನ ಬಲಭಾಗದ ಎಡಗಡೆಯಿರುವ 'Wrench Icon' ಹೋಗಿ ಅಲ್ಲಿ ಸೆಟ್ಟಿಂಗ್ಸ್‌ ಆಯ್ಕೆಯನ್ನು ಆರಿಸಿ.

ಹೋಮ್‌ ಬಟನ್‌

ಹೋಮ್‌ ಬಟನ್‌

ಗೂಗಲ್‌ ಕ್ರೋಮ್‌ ಬ್ರೌಸರ್ ಟಿಪ್ಸ್‌


ನಂತರ Appearance ವಿಭಾಗಕ್ಕೆ ಹೋಗಿ 'Show Home button' ಆಯ್ಕೆಯನ್ನು ಆರಿಸಿ. ಈಗ ನಿಮ್ಮ ಬ್ರೌಸರ್‌ನಲ್ಲಿ ಹೋಮ್‌ ಬಟನ್‌ ಕಾಣುತ್ತಿರುತ್ತದೆ.

ಕ್ಲೋಸ್‌ ಆಗಿರುವ ಟ್ಯಾಬ್‌ನ್ನು ಈ ರೀತಿ ಓಪನ್‌ ಮಾಡಿ

ಕ್ಲೋಸ್‌ ಆಗಿರುವ ಟ್ಯಾಬ್‌ನ್ನು ಈ ರೀತಿ ಓಪನ್‌ ಮಾಡಿ

ಗೂಗಲ್‌ ಕ್ರೋಮ್‌ ಬ್ರೌಸರ್ ಟಿಪ್ಸ್‌


ಕೆಲವೊಮ್ಮೆ ಯಾವುದೇ ಟ್ಯಾಬ್‌ನ್ನು ಕ್ಲೋಸ್‌ ಮಾಡುವ ಸಂದರ್ಭದಲ್ಲಿ ಗೊತ್ತಿಲ್ಲದೇ ಬೇಕಾಗಿರುವ ಟ್ಯಾಬ್‌ನ್ನು ಕ್ಲೋಸ್‌ ಮಾಡಿರುತ್ತೇವೆ. ಕ್ಲೋಸ್‌ ಮಾಡಿದ ಮೇಲೆ ಮತ್ತೇ ಪುನಃ ಆ ಟ್ಯಾಬ್‌ ಪಡೆಯಲು ಹೆಸರು ಟೈಪ್‌ ಮಾಡಿ ಓಪನ್‌ ಮಾಡಬೇಕಾದ ಅನಿವಾರ್ಯ‌ತೆ ಇಲ್ಲ. ಟೈಟಲ್‌ ಬಾರ್‌ಗೆ ಹೋಗಿ 'Re open closed' ಟ್ಯಾಬ್‌ ಆಯ್ಕೆಯನ್ನು ಆರಿಸಿದರೆ ಕ್ಲೋಸ್‌ ಆಗಿರುವ ಟ್ಯಾಬ್‌ನ್ನು ಮತ್ತೆ ಪುನಃ ಓಪನ್‌ ಆಗುವಂತೆ ಮಾಡಬಹುದು.

 ಒಮ್ನಿ ಬಾರ್‌ನಲ್ಲಿ ಸರ್ಚ್ ಇಂಜಿನ್‌ ಬದಲಾಯಿಸಿ

ಒಮ್ನಿ ಬಾರ್‌ನಲ್ಲಿ ಸರ್ಚ್ ಇಂಜಿನ್‌ ಬದಲಾಯಿಸಿ

ಗೂಗಲ್‌ ಕ್ರೋಮ್‌ ಬ್ರೌಸರ್ ಟಿಪ್ಸ್‌


ಅಡ್ರೆಸ್‌ ಬಾರ್‌ನಲ್ಲೇ ಬೇಕಾದ ವೆಬ್‌ಸೈಟ್‌ನ ಹೆಸರು ಟೈಪ್‌ ಮಾಡಿ ಆ ವೆಬ್‌ಸೈಟ್‌ ಒಳಗಡೆ ಇರುವ ಮಾಹಿತಿಯನ್ನು ನೀವು ಹುಡುಕಬಹುದು. ಉದಾ: ಫ್ಲಿಪ್‌ಕಾರ್ಟ್‌‌ನಲ್ಲಿ ನೆಕ್ಸಸ್‌ ಸ್ಮಾರ್ಟ್‌‌ಫೋನ್‌ ಹುಡುಕುತ್ತೀರಿ ಅಂತ ಇಟ್ಟುಕೊಳ್ಳಿ. ಫ್ಲಿಪ್‌ಕಾರ್ಟ್‌ ಹೆಸರು ಟೈಪ್‌ ಮಾಡಿ ನಂತರ ಆ ಪೇಜ್‌ ಓಪನ್‌ ಆಗಿ ಅಲ್ಲಿ ನೆಕ್ಸಸ್‌ ಹೆಸರು ಟೈಪ್‌ ಮಾಡಿದ ಮೇಲೆ ನಿಮಗೆ ಬೇಕಾದ ಪೇಜ್‌ ಓಪನ್‌‌ ಆಗತ್ತದೆ. ಇಷ್ಟೆಲ್ಲ ಕಷ್ಟ ಪಡದೇ ನೀವು ಸುಲಭವಾಗಿ ಬ್ರೌಸರ್‌ನಲ್ಲೇ ಹುಡಕಬಹುದು.

 ಒಮ್ನಿ ಬಾರ್‌ ಹುಡುಕಲು ಹೀಗೆ ಮಾಡಿ

ಒಮ್ನಿ ಬಾರ್‌ ಹುಡುಕಲು ಹೀಗೆ ಮಾಡಿ

ಗೂಗಲ್‌ ಕ್ರೋಮ್‌ ಬ್ರೌಸರ್ ಟಿಪ್ಸ್‌


ಮೊದಲು ಅಡ್ರೆಸ್‌ ಬಾರ್‌ನಲ್ಲಿ ಫ್ಲಿಪ್‌ಕಾರ್ಟ್‌ ಹೆಸರನ್ನು ಟೈಪಿಸಿ ನಂತರ ಟ್ಯಾಬ್‌ ಕೀ ಒತ್ತಿ. ಬಳಿಕ ನೆಕ್ಸಸ್‌4 ಎಂದು ಟೈಪ್‌ ಮಾಡಿ. ನಿಮಗೆ ಬೇಕಾಗಿರುವ ಫ್ಲಿಪ್‌ಕಾರ್ಟ್‌ನ ಪೇಜ್‌ ಓಪನ್‌ ಆಗಿರುತ್ತದೆ.

 ಅರ್ಥ/ಮಾಹಿತಿ ಹುಡುಕಿ

ಅರ್ಥ/ಮಾಹಿತಿ ಹುಡುಕಿ

ಗೂಗಲ್‌ ಕ್ರೋಮ್‌ ಬ್ರೌಸರ್ ಟಿಪ್ಸ್‌


ಇನ್ನೂ ಕ್ರೋಮ್‌, ಮೊಜಿಲ್ಲಾ ಬ್ರೌಸರ್‌ನಲ್ಲಿ ಗೊತ್ತಿಲ್ಲದ ಪದಗಳ ಅರ್ಥ/ಮಾಹಿತಿ ಹುಡುಕುವುದು ಸುಲಭ. ಓಪನ್‌ ಆಗಿರುವ ವೆಬ್‌ ಪೇಜ್‌ನ ಪದಗಳನ್ನು ಸೆಲೆಕ್ಟ್‌‌‌ ಮಾಡಿ ನಂತರ ಮೌಸ್‌ನ ಬಲಗಡೆಯ ಬಟನ್‌ ಒತ್ತಿ "Search google for" ಆರಿಸಿದಾಗ ಬೇಕಾದ ಪದಗಳಿರುವ ಮಾಹಿತಿಯ ಪುಟ ಇನ್ನೊಂದು ಟ್ಯಾಬ್‌ನಲ್ಲಿ ಓಪನ್‌ ಆಗಿರುತ್ತದೆ.

ಇದನ್ನೂ ಓದಿ: ಗೂಗಲ್‌ನಲ್ಲಿ ಸುಲಭವಾಗಿ ಸರ್ಚ್‌ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot