Home
ಟೆಕ್ ನೌಕರಿ

ಡಾಂಗಲ್ ಡಾಟಾ ಕಾರ್ಡ್‌ನಲ್ಲಿ ಇಂಟರ್ನೆಟ್ ಸಿಗ್ನಲ್‌ ಅಧಿಕಗೊಳಿಸುವುದು ಹೇಗೆ?

By Suneel

ಡಾಟಾ ಕಾರ್ಡ್ ಮತ್ತು USB ಡಾಂಗಲ್‌ ಬಳಸಿ ಇಂಟರ್ನೆಟ್ ಬಳಸುವವರು ಅತ್ಯುತ್ತಮ ಇಂಟರ್ನೆಟ್ ಸಿಗ್ನಲ್‌ ಅನ್ನು ಪಡೆಯುತ್ತಾರೆ. ಡಾಂಗಲ್ ಬಳಸುವ ಭಾಗಶಃ ಇಂಟರ್ನೆಟ್ ಬಳಕೆದಾರರಿಗೆ ನೆಟ್‌ವರ್ಕ್‌ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ.

ಆದರೆ, ನೆಟ್‌ವರ್ಕ್‌ ಸೇವೆಯೇ ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿ, ಹೆಚ್ಚು ಜನದಟ್ಟಣೆ ಪ್ರದೇಶಗಳಲ್ಲಿ USB ಡಾಂಗಲ್‌ಗಳು ಮತ್ತು ಡಾಟಾ ಕಾರ್ಡ್ ಬಳಸುವವರಂತೂ ಕಡಿಮೆ ಇಂಟರ್ನೆಟ್ ಸಿಗ್ನಲ್‌ ಬಗ್ಗೆ ದೂರು ನೀಡುವುದರಲ್ಲಿ ಹಿಂದೆ ಉಳಿದಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಲು ಹಲವು ಬ್ರ್ಯಾಂಡೆಡ್‌ ಮತ್ತು ನಾನ್-ಬ್ರ್ಯಾಂಡೆಡ್ ಬೂಸ್ಟರ್‌ಗಳು ಲಭ್ಯವಿವೆ. ಆದರೆ ನೆಟ್‌ವರ್ಕ್‌ ಬೂಸ್ಟರ್‌ಗಳನ್ನು ಬಳಸಲು ಹೆಚ್ಚು ಹಣ ವೆಚ್ಚವಾಗುತ್ತದೆ.

ಎಲ್‌ಟಿಇ ನೆಟ್‌ವರ್ಕ್ ಲಾಕ್ ಮಾಡಿ ಜಿಯೋ 4ಜಿ ಸ್ಪೀಡ್ ವರ್ಧಿಸಿ

ನೀವು ಯಾವುದೇ ಡಾಟಾ ಕಾರ್ಡ್ ಅಥವಾ USB ಡಾಂಗಲ್‌(Dongle) ಬಳಸುತ್ತಿದ್ದರೂ, ಇಂಟರ್ನೆಟ್ ಸಿಗ್ನಲ್ ನೀವಿರುವ ಪ್ರದೇಶದ ಆಧಾರದಲ್ಲಿ ಸಿಗ್ನಲ್‌ ಕಡಿಮೆ ಆಗಬಹುದು. ಆದ್ದರಿಂದ ಇಂದಿನ ಲೇಖನದಲ್ಲಿ ಸಿಗ್ನಲ್‌ ಹೆಚ್ಚಿಸಲು, ಬೂಸ್ಟರ್‌ ಅನ್ನು ಮನೆಯಲ್ಲಿನ ಕೆಲವು ವಸ್ತುಗಳನ್ನು ಬಳಸಿ ಹೇಗೆ ಸಿಗ್ನಲ್‌ ಬೂಸ್ಟರ್‌ ಕ್ರಿಯೇಟ್ ಮಾಡಬಹುದು ಎಂದು ತಿಳಿಸುತ್ತಿದ್ದೇವೆ. ನೀವು ಸಹ ದಿನನಿತ್ಯ ಇಂಟರ್ನೆಟ್ ಸಿಗ್ನಲ್ ಸಮಸ್ಯೆ ಎದುರಿಸುತ್ತಿದ್ದಲ್ಲಿ, ಇಂದಿನ ಲೇಖನದ ಮಾಹಿತಿ ಓದಿ ಉಚಿತವಾಗಿ ಸಿಗ್ನಲ್‌ ಅಧಿಕಗೊಳಿಸಿ.

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?

ಹಂತ 1ː  ಸಿಗ್ನಲ್‌ ಅಧಿಕಗೊಳಿಸಲು ಬೇಕಾದ ವಸ್ತುಗಳು

ಹಂತ 1ː ಸಿಗ್ನಲ್‌ ಅಧಿಕಗೊಳಿಸಲು ಬೇಕಾದ ವಸ್ತುಗಳು

ನಿಮ್ಮ ಅಡಿಗೆ ಮನೆಯಲ್ಲಿನ ಲೋಹದ ಜರಡಿ(Metal sieve, ones we use making tea) ಮತ್ತು ಅಲ್ಯೂಮಿನಿಯಂ ಹಾಳೆ ತೆಗೆದುಕೊಳ್ಳಿ. ಸಣ್ಣ ಕ್ಯಾಮೆರಾ ಟ್ರೈಪಾಡ್‌ ಮತ್ತು USB ಎಕ್ಸ್ಟೆನ್ಶನ್ (Male to female) ತೆಗೆದುಕೊಳ್ಳಿ.

ಹಂತ 2ː

ಹಂತ 2ː

USB ಎಕ್ಸ್ಟೆನ್ಶನ್ ಫಿಟ್ ಮಾಡಲು ಅನುಕೂಲವಾಗುವಂತೆ ಲೋಹದ ಜರಡಿ ತಳಭಾಗದಲ್ಲಿ ರಂಧ್ರ ಮಾಡಿ.

ಹಂತ 3ː  USB ಎಕ್ಸ್ಟೆನ್ಶನ್ ನಿಂದ ಕಂಪ್ಯೂಟರ್‌ಗೆ USB ಕನೆಕ್ಟ್ ಮಾಡಿ

ಹಂತ 3ː USB ಎಕ್ಸ್ಟೆನ್ಶನ್ ನಿಂದ ಕಂಪ್ಯೂಟರ್‌ಗೆ USB ಕನೆಕ್ಟ್ ಮಾಡಿ

ನಂತರದಲ್ಲಿ, 3G ಡಾಂಗಲ್‌ ಅನ್ನು USB ಎಕ್ಸ್ಟೆನ್ಶನ್ ಕೇಬಲ್‌ಗೆ ಕನೆಕ್ಟ್ ಮಾಡಿ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಸಂಪರ್ಕಿಸಿ. ಅಂದಹಾಗೆ ಸಣ್ಣ ಕ್ಯಾಮೆರಾ ಟ್ರೈಪಾಡ್ ಸ್ಟ್ಯಾಂಡ್ ಆಗಿ ವರ್ಕ್‌ ಅಗುತ್ತದೆ.

ಹಂತ 4ː  ಅಲ್ಯೂಮಿನಿಯಂ ಹಾಳೆಯನ್ನು ಜರಡಿಗೆ ಸುತ್ತಿ

ಹಂತ 4ː ಅಲ್ಯೂಮಿನಿಯಂ ಹಾಳೆಯನ್ನು ಜರಡಿಗೆ ಸುತ್ತಿ

ಅಲ್ಯೂಮಿನಿಯಂ ಹಾಳೆಯಿಂದ ಜರಡಿಯ ಪ್ರತಿ ಸೈಡ್‌ ಅನ್ನು ಸುತ್ತಿ. ನಂತರ ಇದು ಮಿನಿ ಉಪಗ್ರಹದ ರೀತಿಯೇ ಕಾಣುತ್ತದೆ.

ಹಂತ 5ː   ಉತ್ತಮ ಸ್ಥಳದಲ್ಲಿ ಇಡಿ

ಹಂತ 5ː ಉತ್ತಮ ಸ್ಥಳದಲ್ಲಿ ಇಡಿ

ದಟ್ಸ್ ಆಲ್. ನಂತರದಲ್ಲಿ ನೀವು ಜರಡಿಯನ್ನು ಎಲ್ಲ ವ್ಯವಸ್ಥೆ ಸಹಿತ ಸಿಗ್ನಲ್‌ ಉತ್ತಮವಾಗಿ ಸಿಗುವ ಸ್ಥಳಕ್ಕೆ ಇಡಿ. ಒಟ್ಟಾರೆ ಈ ಪ್ರಕ್ರಿಯೆಗೆ ಗರಿಷ್ಟ 150 ರೂ ವೆಚ್ಚವಾಗಬಹುದು. ಮನೆಯಲ್ಲೇ ಕ್ರಿಯೇಟ್ ಮಾಡಿದ ಈ ಬೂಸ್ಟರ್ 4G LTE ಡಾಂಗಲ್‌ಗಳಿಗೂ ಸಹ ಬಳಕೆ ಆಗುತ್ತದೆ.

Best Mobiles in India

English summary
How to Improve Signal Reception on Dongle Data Card. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+