ಎಲ್‌ಟಿಇ ನೆಟ್‌ವರ್ಕ್ ಲಾಕ್ ಮಾಡಿ ಜಿಯೋ 4ಜಿ ಸ್ಪೀಡ್ ವರ್ಧಿಸಿ
ರಿಲಾಯನ್ಸ್ ಜಿಯೋದ 4ಜಿ ನೆಟ್‌ವರ್ಕ್ ವೇಗವನ್ನು ನೀವು ಹೆಚ್ಚಿಸಬೇಕು ಎಂದಾದಲ್ಲಿ, ಇಂಟರ್ನೆಟ್‌ನಲ್ಲಿ ಕಂಡು ಬರುತ್ತಿರುವ ಕೆಲವೊಂದು ಟ್ರಿಕ್ಸ್‌ಗಳನ್ನು ನೀವು ಅನುಸರಿಸಬಹುದಾಗಿದೆ. ಆದರೆ ಈ ಎಲ್ಲಾ ಸಲಹೆಗಳು ಅಷ್ಟೊಂದು ಸರಳವಾಗಿಲ್ಲ. ಇದರಲ್ಲಿ ಒಂದು ಸಲಹೆ ಎಂದರೆ ಎಲ್‌ಟಿಇ ನೆಟ್‌ವರ್ಕ್ ಬ್ಯಾಂಡ್ 3 ಯನ್ನು 5 ಅಥವಾ 40 ಗೆ ಲಾಕ್ ಮಾಡುವುದಾಗಿದೆ.
ಓದಿರಿ: ಬಿಎಸ್‌ಎನ್‌ಎಲ್ ಇಂಟರ್ನೆಟ್ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ?
ಜಿಯೋ 4ಜಿ ಸೇವೆಯೊಂದಿಗೆ, ಎಲ್‌ಟಿಇ ನೆಟ್‌ವರ್ಕ್ ಎಲ್ಲಾ ಮೂರು ಬ್ಯಾಂಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನುವುದಾಗಿದೆ. ಇದು ಮೂರು ಬ್ಯಾಂಡ್‌ಗಳನ್ನು ಹೆಚ್ಚುವರಿ ವೇಗ ಮತ್ತು ಬಳಕೆದಾರರ ಉತ್ತಮ ಕವರೇಜ್ ರೀತಿಯಲ್ಲಿ ಸಹಾಯ ಮಾಡಲಿದೆ. ಆದರೆ ಇನ್ನೂ ಕೆಲವೊಂದು ಸಮಸ್ಯೆಗಳು 4ಜಿ ಕವರೇಜ್‌ನಲ್ಲಿದೆ.
ಓದಿರಿ: ಜಿಯೋ ವೈಫೈ ಹಾಟ್‌ಸ್ಪಾಟ್‌ಗೆ ಕನೆಕ್ಟ್ ಆಗುವುದು ಹೇಗೆ?

ಜಿಯೋ ನಿಧಾನಗತಿಯಲ್ಲಿದೆ
ವೇಗದ ವಿಷಯಕ್ಕೆ ಬಂದಾಗ ಜಿಯೋ 50 MBPS ಸ್ಪೀಡ್ ಅನ್ನು 40 ಯೊಂದಿಗೆ 2300 Mhz ಫ್ರಿಕ್ವೆನ್ಸಿಯೊಂದಿಗೆ ನೀಡುತ್ತಿದ್ದು, ಬ್ಯಾಂಡ್ 3 ರಲ್ಲಿ 1800 mhz ಮತ್ತು ಬ್ಯಾಂಡ್ 5 ನಲ್ಲಿ 850 mhz ಫ್ರಿಕ್ವೆನ್ಸಿಯಲ್ಲಿ ಒದಗಿಸುತ್ತಿದೆ. ಎಲ್‌ಟಿಇ ಫೋನ್‌ಗಳು ಉತ್ತಮ ಕವರೇಜ್ ಮತ್ತು ವೇಗವನ್ನು ನೀಡುತ್ತವೆ. ಬ್ಯಾಂಡ್ 5 ಉತ್ತಮ ಕವರೇಜ್ ಅನ್ನು ಒದಗಿಸುತ್ತಿದ್ದರೆ, ನಂತರದ ಸ್ಥಾನ ಬ್ಯಾಂಡ್ 3 ಮತ್ತು ಬ್ಯಾಂಡ್ 40 ಗೆ ಆಗಿದೆ. ಜಿಯೋ ಬಳಕೆದಾರರು ಇದಕ್ಕಿಂತ ಹೆಚ್ಚಿನ ವೇಗವನ್ನು ಪಡೆದುಕೊಳ್ಳಲಾರರು.

ಉತ್ತಮ ವೇಗ ಮತ್ತು ಕವರೇಜ್ ಪಡೆದುಕೊಳ್ಳುವುದು ಸಾಧ್ಯವೇ?
ಎಲ್‌ಟಿಇ ಬೆಂಬಲಿತ ಸ್ಮಾರ್ಟ್‌ಫೋನ್‌ಗಳು ಉತ್ತಮ ಕವರೇಜ್ ಅನ್ನು ಹೊಂದಾಣಿಕೆ ವೇಗದಲ್ಲಿ ಪಡೆದುಕೊಳ್ಳಲಿರುವಿರಿ. ನಿರ್ದಿಷ್ಟ ಬ್ಯಾಂಡ್‌ಗೆ ಎಲ್‌ಟಿಇ ನೆಟ್‌ವರ್ಕ್ ಅನ್ನು ಲಾಕ್ ಮಾಡುವುದರ ಮೂಲಕ ಉತ್ತಮ ವೇಗವನ್ನು ಹೊಂದಬಹುದಾಗಿದೆ.

ನೆಟ್‌ವರ್ಕ್ ವಿಧವನ್ನು ಎಲ್‌ಟಿಇಗೆ ಹೊಂದಿಸಿ
ಎಲ್‌ಟಿಇ ಓನ್ಲೀ ಮೋಡ್ ಅನ್ನು ಆಯ್ಕೆಮಾಡಬೇಕು. *#*#4636#*# ಅನ್ನು ಡಯಲ್ ಮಾಡುವುದರ ಮೂಲಕ ಹೊಂದಿಸಬಹುದಾಗಿದೆ. ಮೆನುವಿನಲ್ಲಿ ಫೋನ್ ಮಾಹಿತಿಯನ್ನು ಆರಿಸಿ ಮತ್ತು ಆದ್ಯತೆಯ ನೆಟ್‌ವರ್ಕ್ ವಿಧ ಎಲ್‌ಟಿಇ ಓನ್ಲೀ ಎಂದಾಗಿರಲಿ.

ಕ್ವಾಲ್‌ಕಾಮ್ ಆಧಾರಿತ ಫೋನ್‌ಗಳಿಗೆ ಪರಿಹಾರ
ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಕ್ವಾಲ್‌ಕಾಮ್ ಚಿಪ್‌ಸೆಟ್ ಅನ್ನು ಬಳಸುತ್ತವೆ ಮತ್ತು ಸರ್ವೀಸ್ ಮೆನುವೆಂಬ ಮರೆಯಾದ ಕಾನ್ಫಿಗರೇಶನ್‌ಗೆ ಪ್ರವೇಶವನ್ನು ನೀಡುತ್ತದೆ. ಎಲ್‌ಟಿಇ ಬ್ಯಾಂಡ್‌ನಿಂದ ವರ್ಕ್‌ಗೆ ಆರಿಸಲು ನಿಮ್ಮನ್ನು ಅನುಮತಿಸುತ್ತದೆ ಮತ್ತು ಉಳಿದ ಹಂತಗಳನ್ನು ಸಕ್ರಿಯವಲ್ಲದ ಎಂಬುದಾಗಿ ಮಾಡಿ.

ಶಾರ್ಟ್ ಕಟ್ ಮಾಸ್ಟರ್ ಅಪ್ಲಿಕೇಶನ್
ಶಾರ್ಟ್ ಕಟ್ ಮಾಸ್ಟರ್ ಅಪ್ಲಿಕೇಶನ್ ಎಲ್‌ಟಿಇ ಬ್ಯಾಂಡ್ ಅನ್ನು ಬದಲಾಯಿಸುವಲ್ಲಿ ನಿಮಗೆ ಸಹಾಯ ಮಾಡಲಿದೆ. ಅಪ್ಲಿಕೇಶನ್ ತೆರೆಯಿರಿ ಮತ್ತು ಮೆನುಗೆ ಹೋಗಿ 'ಸರ್ವೀಸ್ ಮೆನು ಅಥವಾ ಇಂಜಿನಿಯರಿಂಗ್ ಮೋಡ್' ಅನ್ನು ಹುಡುಕಾಡಿ ಮತ್ತು ಸಿಸ್ಟಮ್ ಅಪ್ಲಿಕೇಶನ್ ಆರಿಸಿ. ಎಲ್‌ಟಿಇ ಬ್ಯಾಂಡ್ ಅನ್ನು ಇಲ್ಲಿಂದ ಬದಲಾಯಿಸಿ.

ಮೀಡಿಯಾ ಟೆಕ್ ಚಿಪ್‌ಸೆಟ್ ಆಧಾರಿತ ಫೋನ್‌ಗಳು
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೀಡಿಯಾ ಟೆಕ್ ಚಿಪ್‌ಸೆಟ್ ಇದ್ದರೆ, ಎಮ್‌ಟಿಕೆ ಇಂಜಿನಿಯರಿಂಗ್ ಮೋಡ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ಈ ಅಪ್ಲಿಕೇಶನ್ ರನ್ ಮಾಡಿ ಮತ್ತು 'ಎಮ್‌ಟಿಕೆ ಸೆಟ್ಟಿಂಗ್ಸ್' ಆರಿಸಿ. ಬ್ಯಾಂಡ್ ಮೋಡ್ ಆಯ್ಕೆಮಾಡಿ ಮತ್ತು ಸಿಮ್ ಸ್ಲಾಟ್ ಆರಿಸಿ ನಿಮಗೆ ಬೇಕಾದ ನೆಟ್‌ವರ್ಕ್‌ನಲ್ಲಿ ಎಲ್‌ಟಿಇ ಬ್ಯಾಂಡ್ ಲಾಕ್ ಮಾಡಿ. ಎಲ್‌ಟಿಇ ಮೋಡ್‌ಗೆ ಸ್ಕ್ರಾಲ್ ಡೌನ್ ಮಾಡಿ ಹಾಗೂ ಬ್ಯಾಂಡ್ 4೦ ಗೆ ಪರಿಶೀಲಿಸಿ.


Click it and Unblock the Notifications








