ರಿಲಾಯನ್ಸ್ ಜಿಯೋ 4G ಸಿಮ್: 7 ಸಾಮಾನ್ಯ ಪ್ರಶ್ನೆಗಳು ಮತ್ತು ಉತ್ತರಗಳು

By Suneel
|

ರಿಲಾಯನ್ಸ್ ಜಿಯೋ 4G ಸಿಮ್ ಖರೀದಿ ಕುತೂಹಲ ಇನ್ನೂ ಸಹ ಜನರಲ್ಲಿ ಹೆಚ್ಚುತ್ತಲೇ ಇದೆ. ಕಾರಣ ಸಬ್‌ಸ್ಕ್ರೈಬರ್‌ಗಳಿಗೆ ಜಿಯೋ ನೀಡುತ್ತಿರುವ ಬೆನಿಫಿಟ್‌ಗಳು.

ಬಹುಸಂಖ್ಯಾತರು ರಿಲಾಯನ್ಸ್(Reliance) ಜಿಯೋ ಸಿಮ್ ಅನ್ನು ಆದಷ್ಟು ಬೇಗ ಖರೀದಿಸಿ ಜಿಯೋ ನೀಡುವ ಬೆನಿಫಿಟ್‌ಗಳನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬಳಸಲು ಕಾತುರರಾಗಿದ್ದಾರೆ. ಆದರೆ ಜಿಯೋ(Jio) ಸಿಮ್ ಖರೀದಿಸಬೇಕು ಎಂದುಕೊಂಡಿರುವವರು ಇಂದಿಗೂ ಹಲವು ಪ್ರಶ್ನೆಗಳನ್ನು ಹೊಂದಿದ್ದಾರೆ. ಜಿಯೋ ಸಿಮ್ ಖರೀದಿಸಲು ಬಯಸುವ ಉತ್ಸಾಹಿಗಳ ಹಲವು ಪ್ರಶ್ನೆಗಳು ಏನು ಎಂದು ನಾವು ಕೇಳಿದ್ದು, ಅವರ ಪ್ರಶ್ನೆಗಳು ಮತ್ತು ಪ್ರಶ್ನೆಗಳಿಗೆ ಉತ್ತರಗಳನ್ನು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ. ಮಾಹಿತಿಗಾಗಿ ಕೆಳಗಿನ ಸ್ಲೈಡರ್‌ಗಳನ್ನು ಓದಿರಿ.

ಶೀಘ್ರವಾಗಿ ರಿಲಾಯನ್ಸ್ ಜಿಯೋ 4G ಸಿಮ್ ಖರೀದಿ ಹೇಗೆ? 15 ನಿಮಿಷದಲ್ಲಿ ಆಕ್ಟಿವೇಟ್ ಹೇಗೆ?

 ವೆಲ್ಕಮ್‌ ಆಫರ್‌ ಮುಗಿದ ಮೇಲೆ ರಿಲಾಯನ್ಸ್ ಜಿಯೋ 4G ಸಿಮ್ ಸೇವೆಗೆ ಎಷ್ಟು ಹಣ ಪಾವತಿಸಬೇಕು?

ವೆಲ್ಕಮ್‌ ಆಫರ್‌ ಮುಗಿದ ಮೇಲೆ ರಿಲಾಯನ್ಸ್ ಜಿಯೋ 4G ಸಿಮ್ ಸೇವೆಗೆ ಎಷ್ಟು ಹಣ ಪಾವತಿಸಬೇಕು?

2016 ಡಿಸೆಂಬರ್ 31 ಕ್ಕೆ ವೆಲ್ಕಮ್‌ ಆಫರ್ ಅಂತ್ಯಗೊಳ್ಳುತ್ತದೆ. ನಂತರದಲ್ಲಿ ಉಚಿತ ಕರೆ, ಮೆಸೇಜ್‌ ಮತ್ತು ರಾತ್ರಿ ಡಾಟಾವನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಆದರೆ ನೀವು 4G ಡಾಟಾಗೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಹಣ ಪಾವತಿಸಬೇಕು ಅಷ್ಟೆ. ಟ್ರಾರಿಫ್‌ ಪ್ಲಾನ್‌ ರೂ.149 ರಿಂದ ಪ್ರಾರಂಭವಾಗಿ ರೂ.4,999 ವರೆಗೂ ಇದೆ.

ಜಿಯೋ ಸಿಮ್ ಆಕ್ಟಿವೇಶನ್‌ಗೆ ಎಷ್ಟು ದಿನಗಳು ಬೇಕು?

ಜಿಯೋ ಸಿಮ್ ಆಕ್ಟಿವೇಶನ್‌ಗೆ ಎಷ್ಟು ದಿನಗಳು ಬೇಕು?

ರಿಲಾಯನ್ಸ್ ಜಿಯೋ ಸಿಮ್ eKYC ಆಕ್ಟಿವೇಶನ್‌ ಮೂಲಕ ಕೇವಲ 15 ನಿಮಿಷಗಳಲ್ಲಿ ಆಕ್ಟಿವೇಟ್‌ ಆಗುತ್ತದೆ. ಆದರೆ ಬಳಕೆದಾರರು 20 ದಿನಗಳು ಆದರೂ ಸಹ ಸಿಮ್‌ ಆಕ್ಟಿವೇಶನ್‌ ಆಗಿಲ್ಲ ಎಂದು ದೂರು ಹೇಳುತ್ತಿದ್ದಾರೆ.

ಆನ್‌ಲೈನ್‌ನಲ್ಲಿ ಜಿಯೋ 4G ಸಿಮ್‌ ಖರೀದಿಸಬಹುದೇ?

ಆನ್‌ಲೈನ್‌ನಲ್ಲಿ ಜಿಯೋ 4G ಸಿಮ್‌ ಖರೀದಿಸಬಹುದೇ?

ಆನ್‌ಲೈನ್‌ನಲ್ಲಿ ರಿಲಾಯನ್ಸ್ ಜಿಯೋ 4G ಸಿಮ್‌ ಖರೀದಿಸಲು ಅವಕಾಶ ಇಲ್ಲ. ಆದರೆ Shopclues ಆನ್‌ಲೈನ್‌ ರೀಟೇಲರ್ ಟೀಮ್, 'ರಿಲಾಯನ್ಸ್ 4G ಸ್ಮಾರ್ಟ್‌ಫೋನ್‌ ಅನ್ನು ವೆಬ್‌ಸೈಟ್‌ ಮೂಲಕ ಖರೀದಿಸುವವರಿಗೆ, ಸರ್ವೀಸ್‌ ಪ್ರೊವೈಡರ್ ಉಚಿತ 4G ಸಿಮ್‌ ಆಫರ್‌ ಮಾಡುತ್ತದೆ' ಎಂದು ಹೇಳಿದೆ.

ಆಕ್ಟಿವೇಟ್‌ ಆದ ಜಿಯೋ 4G ಸಿಮ್‌ ಅನ್ನು ಇತರೆ ಡಿವೈಸ್‌ಗಳಲ್ಲಿ ಬಳಸಬಹುದೇ?

ಆಕ್ಟಿವೇಟ್‌ ಆದ ಜಿಯೋ 4G ಸಿಮ್‌ ಅನ್ನು ಇತರೆ ಡಿವೈಸ್‌ಗಳಲ್ಲಿ ಬಳಸಬಹುದೇ?

ಜಿಯೋ 4G ಸಿಮ್ ಅನ್ನು ಸಪೋರ್ಟ್ ಮಾಡುವ ಯಾವುದೇ ಫೋನ್‌ನಲ್ಲಿ ಬಳಸಬಹುದು. ಅಂತಿಮವಾಗಿ, ಆಕ್ಟಿವೇಟ್‌ ಆದ ಸಿಮ್ ಅನ್ನು ಯಾವುದೇ ಸಪೋರ್ಟೆಡ್ ಸ್ಮಾರ್ಟ್‌ಫೋನ್‌ನಲ್ಲಿ ಬಳಸಬಹುದು. ಆಕ್ಟಿವೇಟ್ ಆದ ಫೋನ್‌ನಲ್ಲೇ ಬಳಸಬೇಕು ಎಂಬ ನಿರ್ಬಂಧವಿಲ್ಲ.

3G ಫೋನ್‌ಗಳಲ್ಲಿ ಜಿಯೋ 4G ಸಿಮ್‌ ವರ್ಕ್‌ ಆಗುತ್ತದೆಯೇ?

3G ಫೋನ್‌ಗಳಲ್ಲಿ ಜಿಯೋ 4G ಸಿಮ್‌ ವರ್ಕ್‌ ಆಗುತ್ತದೆಯೇ?

ಅಂದಹಾಗೆ ಪ್ರಾಕ್ಟಿಕಲ್‌ ಆಗಿ ಹೇಳೋದಾದ್ರೆ ಜಿಯೋ 4G ಸಿಮ್, 3G ಫೋನ್‌ಗಳಲ್ಲಿ ವರ್ಕ್‌ ಆಗುವುದಿಲ್ಲ. ಆದ್ರೆ ಕೆಲವು ಟ್ರಿಕ್ಸ್‌ಗಳನ್ನು ಬಳಸಿ 3G ಸಪೋರ್ಟ್‌ ಫೋನ್‌ಗಳಲ್ಲಿ ಬಳಸಬಹುದು. ಜಿಯೋ 4G ನೆಟ್‌ವರ್ಕ್‌ ಬೆನಿಫಿಟ್‌ಗಳನ್ನು ಎಂಜಾಯ್‌ ಮಾಡಲು ಸಾಧ್ಯವಾಗದಿದ್ದರೇ, ಕೆಲವು ರಿಲಾಯನ್ಸ್ ಜಿಯೋ ಸರ್ವೀಸ್‌ ಫೀಚರ್ 3G ಫೋನ್‌ಗೆ ವರ್ಕ್‌ ಆಗುತ್ತವೆ.

ಜಿಯೋ 4G ಸಿಮ್ ಸಿಗ್ನಲ್‌ ಬಾರ್ ಪ್ರದರ್ಶಿಸದಿದ್ದಲ್ಲಿ ಏನು ಮಾಡಬೇಕು?

ಜಿಯೋ 4G ಸಿಮ್ ಸಿಗ್ನಲ್‌ ಬಾರ್ ಪ್ರದರ್ಶಿಸದಿದ್ದಲ್ಲಿ ಏನು ಮಾಡಬೇಕು?

ಜಿಯೋ 4G ಸಿಮ್ ಈಗಾಗಲೇ ಆಕ್ಟಿವೇಟ್ ಮಾಡಿ, ಸಿಗ್ನಲ್‌ ಬಾರ್ ಪ್ರದರ್ಶನವಾಗುತ್ತಿಲ್ಲವಾದಲ್ಲಿ, ನೆಟ್‌ವರ್ಕ್‌ ಮೋಡ್‌ ಅನ್ನು 4G ಸೆಟ್ಟಿಂಗ್ಸ್‌ ಮೆನುವಿನಲ್ಲಿ ಬದಲಿಸಬಹುದು. ಅಲ್ಲದೇ ಫೋನ್‌ ರೀಸ್ಟಾರ್ಟ್‌ ಮಾಡಿ ನೆಟ್‌ವರ್ಕ್‌ ಸಿಗ್ನಲ್‌ ಪಡೆಯಬಹುದು.

ರಿಲಾಯನ್ಸ್ ಜಿಯೋ 4G ಸಿಮ್, ಸಿಮ್ ಕಾರ್ಡ್ ಸ್ಲಾಟ್‌ ಲಾಕ್‌ ಮಾಡುತ್ತದೆಯೇ?

ರಿಲಾಯನ್ಸ್ ಜಿಯೋ 4G ಸಿಮ್, ಸಿಮ್ ಕಾರ್ಡ್ ಸ್ಲಾಟ್‌ ಲಾಕ್‌ ಮಾಡುತ್ತದೆಯೇ?

ಇದೊಂದು ಗಾಳಿಸುದ್ದಿ. ಇತರೆ ಟೆಲಿಕಾಂ ಸೇವೆದಾರರು ನೀಡುವ ಸಿಮ್‌ ನಂತೆಯೇ ರಿಲಾಯನ್ಸ್ ಜಿಯೋ ಸಿಮ್‌ ಕಾರ್ಡ್‌ ಸಹ. ಇದು ಸಿಮ್‌ ಸ್ಲಾಟ್‌ ಅನ್ನು ಲಾಕ್‌ ಮಾಡುವುದಿಲ್ಲ. ಅದೇ ಸ್ಲಾಟ್‌ನಲ್ಲಿ ಇತರೆ ಸಿಮ್‌ಗಳನ್ನು ಜಿಯೋ ಸಿಮ್‌ ತೆಗೆದು ಬಳಸಬಹುದು.

Best Mobiles in India

English summary
Reliance Jio 4G SIM Card: 7 Common FAQs and Answers to Them. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X