ಐಫೋನ್‌ಗೆ ಡುಪ್ಲಿಕೇಟ್‌ ಚಾರ್ಜರ್ ಬಳಸಿದಲ್ಲಿ ಆಗುವ ಅನಾಹುತಗಳು ಏನು ಗೊತ್ತೇ?

By Suneel
|

ಗಿಜ್‌ಬಾಟ್‌ ಲೇಖನದಲ್ಲಿ ಬ್ಯಾಟರಿ, ಮೊಬೈಲ್ ಚಾರ್ಜಿಂಗ್ ಸಂಬಂಧಿಸಿದಂತೆ ಮತ್ತು ಡುಪ್ಲಿಕೇಟ್‌ ಚಾರ್ಜರ್‌ಗಳನ್ನು ಕಂಡುಹಿಡಿಯುವುದು ಹೇಗೆ? ಎಂಬ ಹಲವು ವಿಷಯಗಳನ್ನು ಈಗಾಗಲೇ ಓದಿರಬಹುದು. ಅಂದಹಾಗೆ ಇಂದಿನ ಲೇಖನದಲ್ಲಿ ಐಫೋನ್ 5S ಗೆ ಡುಪ್ಲಿಕೇಟ್‌ ಚಾರ್ಜರ್ ಬಳಸಿದಲ್ಲಿ ಆಗುವ ಅನಾಹುತಗಳು ಏನು ಎಂಬುದನ್ನು ನಿಮಗೆ ತಿಳಿಸುತ್ತಿದ್ದೇವೆ. ಈ ಮಾಹಿತಿಯು ಕೇವಲ ಐಫೋನ್‌ 5S ಗೆ ಮಾತ್ರವಲ್ಲದೇ ಯಾವುದೇ ಮೊಬೈಲ್‌ಗಳಿಗೆ ಡುಪ್ಲಿಕೇಟ್‌ ಚಾರ್ಜರ್ ಬಳಸಿದಲ್ಲಿ ಆಗುವ ಅನಾಹುತಗಳು ಏನು ಎಂಬುದನ್ನು ಸಹ ತಿಳಿಸುತ್ತಿದ್ದೇವೆ.

ಅಂದಹಾಗೆ ಅನಧಿಕೃತವಾಗಿ ಥರ್ಡ್‌ ಪಾರ್ಟಿ ಚಾರ್ಜರ್‌ಗಳನ್ನು ಯಾವುದೇ ಮೊಬೈಲ್‌ಗಳನ್ನು ಚಾರ್ಜ್‌ ಮಾಡಲು ಬಳಸುವುದು, ಸೆಕ್ಯುರಿಟಿ ಕಾರಣಗಳಿಂದ ಸೂಕ್ತವಲ್ಲ. ಥರ್ಡ್‌ ಪಾರ್ಟಿ ಚಾರ್ಜರ್‌ ಬಳಸಿದ ಕಾರಣ ಹಲವು ಐಫೋನ್‌ಗಳು ಬೆಂಕಿ ಹೊತ್ತಿ ಉರಿದ ಹಲವು ವರದಿಗಳನ್ನು ಈಗಾಗಲೇ ಓದಿರಬಹುದು.

ಕೇವಲ ಗಾಯಗಳು ಮಾತ್ರ ಅಲ್ಲದೇ ಡುಪ್ಲಿಕೇಟ್‌ ಐಫೋನ್‌ ಚಾರ್ಜರ್‌ ಬಳಸಿ ಅನಾಹುತಗಳಿಂದ ಮರಣ ಹೊಂದಿದ ಘಟನೆಗಳು ಸಹ ನಡೆದಿವೆ. ನಿಮ್ಮ ಐಫೋನ್ ಮತ್ತು ಯಾವುದೇ ಸ್ಮಾರ್ಟ್‌ಫೋನ್‌ಗೆ ಕಂಪನಿಯಿಂದ ಬಂದ ಚಾರ್ಜರ್‌ ಬದಲಾಗಿ ಡುಪ್ಲಿಕೇಟ್‌ ಚಾರ್ಜರ್‌ ಬಳಸಿದಲ್ಲಿ ಆಗುವ ಅನಾಹುತಗಳು ಏನು ಎಂಬುದನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಆಪಲ್‌ ಚಿನ್ನದ ವ್ಯಾಮೋಹ ಇನ್ನು ಐಪ್ಯಾಡ್‌ಗೂ

ಫೋನ್‌ ಚಾರ್ಜ್‌ ಆಗುವುದಿಲ್ಲ

ಫೋನ್‌ ಚಾರ್ಜ್‌ ಆಗುವುದಿಲ್ಲ

ಐಫೋನ್‌ ಖರೀದಿಸಿದಾಗ ನೀಡಿದ ಕಂಪನಿ ಚಾರ್ಜರ್‌ ಬದಲಾಗಿ ಥರ್ಡ್‌ ಪಾರ್ಟಿ ಚಾರ್ಜರ್ ಬಳಸುವುದರಿಂದ ಐಫೋನ್‌ ಚಾರ್ಜ್‌ ಅಗುವುದಕ್ಕೆ ಅಡ್ಡಿಪಡಿಸಿದಂತೆ ಆಗುತ್ತದೆ. ಅಲ್ಲದೇ ಚಾರ್ಜ್‌ ಆಗುವುದಿಲ್ಲ. ಚಾರ್ಜ್‌ ಆದರೂ ಸಹ ನಿಧಾನಗತಿಯಲ್ಲಿ ಚಾರ್ಜ್‌ ಅಗುವುದರಿಂದ ಐಫೋನ್‌ ಶಾಖಗೊಂಡು ಸ್ಫೋಟಗೊಳ್ಳಬಹುದು.

ಕೇಬಲ್‌ ಸಂಪೂರ್ಣ ಬ್ಲಾಕ್‌ ಆಗುತ್ತದೆ.

ಕೇಬಲ್‌ ಸಂಪೂರ್ಣ ಬ್ಲಾಕ್‌ ಆಗುತ್ತದೆ.

ಆಪಲ್‌ ಐಓಎಸ್ 7 ಬೀಟಾ ವರ್ಸನ್‌ ಬಿಡುಗಡೆ ಮಾಡಿದಾಗ ಫೋನ್‌ ಮೇಲೆ "ನಾನ್‌-ಸರ್ಟಿಪೈಡ್‌ ಚಾರ್ಜರ್‌ ಬಳಸಿದಲ್ಲಿ ಐಫೋನ್‌ ಸರಿಯಾಗಿ ವರ್ಕ್‌ ಆಗುವುದಿಲ್ಲ" ಎಂದು ಸೂಚನೆ ನೀಡಿತ್ತು. ಐಫೋನ್‌ 7 ಚಾರ್ಜ್‌ ಸಂಪೂರ್ಣ ಬ್ಲಾಕ್ ಆಗಿರುವ ವರದಿಗಳು ಇವೆ. ಕಡಿಮೆ ಬೆಲೆ ಎಂದು ಡುಪ್ಲಿಕೇಟ್‌ ಚಾರ್ಜರ್‌ ಖರೀದಿಸಿದಲ್ಲಿ ಹಣ ನಿರುಪಯುಕ್ತವಾಗುತ್ತದೆ.

ಆಪಲ್ ಚಾರ್ಜರ್ ಮತ್ತು USB

ಆಪಲ್ ಚಾರ್ಜರ್ ಮತ್ತು USB

ಆಪಲ್‌ ಚಾರ್ಜರ್‌ ಮತ್ತು USB ಯು ಉತ್ತಮ ಮಟ್ಟದಲ್ಲಿ ವೋಲ್ಟೇಜ್‌ ಮತ್ತು ವಿದ್ಯುತ್‌ ನಿಯಂತ್ರಿಸಿ ಮೌಲ್ಯಯುತ ಐಫೋನ್ ಅನ್ನು ಸುರಕ್ಷಿತವಾಗಿ ಕಾಪಾಡುತ್ತವೆ. ಅಲ್ಲದೇ ಹಾನಿಯನ್ನು ತಡೆಗಟ್ಟುತ್ತವೆ. ಥರ್ಡ್‌ ಪಾರ್ಟಿ ಚಾರ್ಜರ್‌ ಮತ್ತು USB ಬಳಕೆಯು ವಿದ್ಯುತ್‌ ಮತ್ತು ವೋಲ್ಟೇಜ್‌ ನಿಯಂತ್ರಿಸಲು ಸಾಧ್ಯವಾಗದೇ U2 IC ಹಾನಿಮಾಡಿ ಐಫೋನ್‌ ವರ್ಕ್‌ ಆಗದಂತೆ ಮಾಡುತ್ತವೆ.

ಫೋನ್‌ ಆನ್‌ ಆಗುವುದಿಲ್ಲ

ಫೋನ್‌ ಆನ್‌ ಆಗುವುದಿಲ್ಲ

ನಿಮ್ಮ ಐಫೋನ್ ಚಾರ್ಜ್‌ ಇಲ್ಲದೇ ಡೆಡ್ ಅಗಿದ್ದಾಗ, ಥರ್ಡ್‌ ಪಾರ್ಟಿ ಚಾರ್ಜರ್‌ ಅಥವಾ ನಾನ್‌ ಸರ್ಟಿಫೈಡ್ ಕೇಬಲ್‌ ಬಳಸಿ ಚಾರ್ಜ್‌ ಮಾಡಿದರೆ ಐಫೋನ್‌ ಆನ್‌ ಆಗುವುದಿಲ್ಲ. ನಂತರದಲ್ಲಿ ಐಫೋನ್‌ ಆನ್‌ ಮಾಡಲು ಹೊಸ ಬ್ಯಾಟರಿಯನ್ನೇ ಖರೀದಿಸಬೇಕಾಗುತ್ತದೆ. ಆದ್ದರಿಂದ ಸರಿಯಾದ ಐಫೋನ್ ಚಾರ್ಜರ್‌ ಬಳಸುವುದು ಉತ್ತಮ.

ಐಫೋನ್‌

ಐಫೋನ್‌

ಡುಪ್ಲಿಕೇಟ್‌ ಚಾರ್ಜರ್‌ ಬಳಸಿದಲ್ಲಿ ಐಫೋನ್‌ನಲ್ಲಿನ ಚಾರ್ಜಿಂಗ್ ಘಟಕಗಳಿಗೆ ಹಾನಿಯುಂಟಾಗುತ್ತವೆ.

ಚಾರ್ಜಿಂಗ್‌

ಚಾರ್ಜಿಂಗ್‌

ಐಫೋನ್‌ ಅನ್ನು ಸಿಂಗ್‌ ಮಾಡಲು ಆಗುವುದಿಲ್ಲ ಮತ್ತು ಪುನಃ ಚಾರ್ಜ್‌ ಮಾಡಲು ಸಾಧ್ಯವಾಗುವುದಿಲ್ಲ.

ವಿದ್ಯುತ್‌ ಪ್ರವಾಹ

ವಿದ್ಯುತ್‌ ಪ್ರವಾಹ

ಡುಪ್ಲಿಕೇಟ್‌ ಚಾರ್ಜರ್‌ ಬಳಸಿದಲ್ಲಿ ನಿಮ್ಮ ಐಫೋನ್ ಹೆಚ್ಚಿನ ವಿದ್ಯುತ್‌ ಪ್ರವಾಹ ಪಡೆದು, ಐಫೋನ್ ಹೆಚ್ಚಿನ ಶಾಖ ಪಡೆದು ಸ್ಪೋಟಗೊಳ್ಳುತ್ತವೆ.

ರಿಯಲ್ ಹಾಗು ಫೇಕ್ ಚಾರ್ಜರ್‌

ರಿಯಲ್ ಹಾಗು ಫೇಕ್ ಚಾರ್ಜರ್‌

ಕಂಪನಿ ಚಾರ್ಜರ್‌ ಮತ್ತು ಫೇಕ್‌ ಚಾರ್ಜರ್‌ಗಳ ವ್ಯತ್ಯಾಸವನ್ನು ಫೋಟೋದಲ್ಲಿ ನೋಡಿ.

Best Mobiles in India

Read more about:
English summary
What Problems will I face if I Use Duplicate iPhone Charger for 5s. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X