ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್ ಹೇಗಿದೆ ಗೊತ್ತೇ?

|

ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿರುವ ಐಫೋನ್ 7 ಫೋನಿನಲ್ಲಿ ಇರುವ ಗುಣ ವೈಶಿಷ್ಟ್ಯತೆಗಳ ಬಗ್ಗೆ ಅನೇಕ ಮಾತುಗಳು ಕೇಳಿಬರುತ್ತಿವೆ. ಈ ಬಾರಿ ಆ್ಯಪಲ್ ಹೊಸ ಬಣ್ಣದೊಂದಿಗೆ ಫೋನನ್ನು ಹೊರತರಬಹುದು ಎಂಬ ನಿರೀಕ್ಷೆಗಳಿವೆ.

ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್ ಹೇಗಿದೆ ಗೊತ್ತೇ?

ಈಗಿರುವ ಸ್ಪೇಸ್ ಗ್ರೇ ಬಣ್ಣದ ಬದಲಿಗೆ ಹೊಸ ಬಣ್ಣದಲ್ಲಿ ಐಫೋನ್ 7 ಹೊರಬರುತ್ತದೆ ಎಂಬ ವರದಿಗಳು ನಿರಂತರವಾಗಿವೆ. ಕಡು ನೀಲಿ ಬಣ್ಣದ ಫೋನ್ ಬರುತ್ತದೆ ಎಂಬ ಗಾಳಿ ಸುದ್ದಿಗಳು ಇದ್ದವು, ಸ್ಪೇಸ್ ಕಪ್ಪು ಬಣ್ಣದ ಫೋನ್ ಬರುತ್ತದೆ ಎಂದು ನಂತರದಲ್ಲಿ ಹೇಳಲಾಗುತ್ತಿತ್ತು. ಹೊಸ ಐಫೋನುಗಳು ಸ್ಪೇಸ್ ಗ್ರೆ, ಗೋಲ್ಡ್, ಸಿಲ್ವರ್ ಹಾಗೂ ರೋಸ್ ಗೋಲ್ಡ್ ಬಣ್ಣದ್ದಾಗಿರುತ್ತದೆ ಎಂದೂ ಹೇಳಲಾಗುತ್ತದೆ.

ಓದಿರಿ: ಆಪಲ್ ಐಫೋನ್ 7 ರ ಬಗೆಗಿನ ಹೊಸ ಸುದ್ದಿ ವಿಶೇಷತೆಗಳನ್ನು ಖಚಿತಪಡಿಸುತ್ತದೆ : 7 ಮುಖ್ಯ ತಿಳಿಯಬೇಕಾದ ಸಂಗತಿ
ಈಗ, ಸೋರಿಕೆಯಾದ ಮಾಹಿತಿಯ ಪ್ರಕಾರ ಐಫೋನ್ 7 ಪ್ಲಸ್ ಹೊಸ ಬಣ್ಣದಲ್ಲಿ ಆಯ್ಕೆಗೆ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ. ಅದ್ಭುತವಾಗಿರುವ ಕಡು ನೀಲಿ ಬಣ್ಣದಲ್ಲಿ ಐಫೋನ್ 7ಪ್ಲಸ್ ಆಕರ್ಷಿಸುತ್ತದೆ. ಇದು ಕಾರ್ಯನಿರ್ವಹಿಸುತ್ತಿದೆ ಮತ್ತು ಸಾಧ್ಯವಿರುವ ಎಲ್ಲಾ ಕೋನಗಳಿಂದಲೂ ಇದರ ಚಿತ್ರಗಳನ್ನು ತೆಗೆಯಲಾಗಿದೆ.

ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್ ಹೇಗಿದೆ ಗೊತ್ತೇ?

ಇದು ನಿಜಕ್ಕೂ ಐಫೋನ್ 7 ಪ್ಲಸ್ ಫೋನೇ ಹೌದಾ ಇಲ್ಲವಾ ಎಂಬುದಿನ್ನೂ ಖಾತರಿಯಾಗಿಲ್ಲವಾದರೂ ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್ ನ ಸೋರಿಕೆಯಾದ ಚಿತ್ರಗಳನ್ನಿಲ್ಲಿ ನೀಡುತ್ತಿದ್ದೇವೆ. ಈ ಅತ್ಯಾಕರ್ಷಕ ಮೊಬೈಲಿನ ಚಿತ್ರಗಳನ್ನು ನೀವೂ ನೋಡಿ ಆನಂದಿಸಿ.

ಅತ್ಯಾಕರ್ಷಕವಾಗಿ ಕಾಣುವ ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್.

ಅತ್ಯಾಕರ್ಷಕವಾಗಿ ಕಾಣುವ ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್.

ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್ ಆಕರ್ಷಕವಾಗಿದೆ. ಇದನ್ನು ಸಂಪೂರ್ಣವಾಗಿ ಚಿತ್ರಿಸಲಾಗಿದೆ.

ಸಂಪೂರ್ಣ ವೈಭವವನ್ನು ಕಾಣಿರಿ.

ಸಂಪೂರ್ಣ ವೈಭವವನ್ನು ಕಾಣಿರಿ.

ಹೊಸ ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್ ಅನ್ನು ಸಾಧ್ಯವಿರುವ ಎಲ್ಲಾ ಕೋನಗಳಿಂದಲೂ ಚಿತ್ರಿಸಲಾಗಿದೆ. ಹೊಸ ಫೋನಿನ ಎಲ್ಲಾ ಗುಣಲಕ್ಷಣಗಳನ್ನೂ ಈ ಚಿತ್ರಗಳಲ್ಲಿ ಕಾಣಬಹುದು.

ಡುಯಲ್ ಕ್ಯಾಮೆರಾ ಪೋನ್ ಎನ್ನುವುದು ಖಚಿತ.

ಡುಯಲ್ ಕ್ಯಾಮೆರಾ ಪೋನ್ ಎನ್ನುವುದು ಖಚಿತ.

ಹೊಸ ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್ ಫೋನಿನ ಸೋರಿಕೆಯಾದ ಫೋಟೋಗಳು ಈ ಹೊಸ ಸ್ಮಾರ್ಟ್ ಫೋನಿನ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳು ಇರುವುದನ್ನು ಖಚಿತಪಡಿಸಿವೆ. ಈ ವರುಷ ಹೊರಬರುವ ಐಫೋನಿನಲ್ಲಿ ಈ ಸೌಕರ್ಯ ಇರುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಕೆಳಗಿನ ಭಾಗದಲ್ಲಿ 3.5ಎಂ.ಎಂ ಹೆಡ್ ಫೋನ್ ಜ್ಯಾಕ್ ಇದೆ.

ಕೆಳಗಿನ ಭಾಗದಲ್ಲಿ 3.5ಎಂ.ಎಂ ಹೆಡ್ ಫೋನ್ ಜ್ಯಾಕ್ ಇದೆ.

ಲೈಟ್ನಿಂಗ್ ಪೋರ್ಟ ಹೊಂದಿರುವ ಹಿಯರ್ ಪಾಡ್ ಗಳನ್ನು ಇರಿಸಿ 3.5 ಎಂ.ಎಂ ಹೆಡ್ ಫೋನ್ ಜ್ಯಾಕನ್ನು ಆ್ಯಪಲ್ ತೆಗೆದು ಹಾಕಿಬಿಡುತ್ತದೆ ಎಂಬ ಸುದ್ದಿಗಳಿದ್ದವು, ಆದರೆ ಇದು ಆಗಿಲ್ಲವೆನ್ನಿಸುತ್ತದೆ. ಹೊಸ ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್ ನ ಫೋಟೋಗಳಲ್ಲಿ ಕೆಳಗಿನ ಭಾಗದಲ್ಲಿ 3.5ಎಂ.ಎಂ ಹೆಡ್ ಫೋನ್ ಜ್ಯಾಕ್ ಇದೆ.

ಡುಯಲ್ ಸ್ಪೀಕರ್ ಗ್ರಿಲ್.

ಡುಯಲ್ ಸ್ಪೀಕರ್ ಗ್ರಿಲ್.

ಐಫೋನ್ 7 ಪ್ಲಸ್ ನ ಸೋರಿಕೆಯಾದ ಚಿತ್ರವೊಂದರಲ್ಲಿ, ಫೋನಿನ ಬದಿಯಲ್ಲಿ ಎರಡು ಸ್ಪೀಕರ್ ಗ್ರಿಲ್ ಇರುವುದು ಕಂಡುಬಂದಿದೆ.

ಐ.ಒಎಸ್ 10 ಬೀಟಾ.

ಐ.ಒಎಸ್ 10 ಬೀಟಾ.

ಐಫೋನ್ 7 ಪ್ಲಸ್ ಐ.ಒಎಸ್ 10ನೇ ಆವೃತ್ತಿಯ ಬೀಟಾ ಆವೃತ್ತಿಯನ್ನು ಹೊಂದಿದೆ ಎನ್ನುವುದು ಹೊಸ ನೋಟಿಫಿಕೇಷನ್ ಕಾರ್ಡ್ಸ್ ಮತ್ತು ವಾಲ್ ಪೇಪರ್ ನೋಡಿದಾಗ ತಿಳಿಯುತ್ತದೆ. ಐ.ಒಎಸ್ 10ರ ಬಿಡುಗಡೆಯೊಂದಿಗೆ ಆ್ಯಪಲ್ ಇನ್ನೂ ಹೆಚ್ಚಿನ ಬ್ಯಾಕ್ ಗ್ರೌಂಡ್ ಚಿತ್ರಗಳನ್ನು ಬಿಡುಗಡೆಗೊಳಿಸುತ್ತದೆ.

ಐಫೋನ್ 6ಎಸ್ ಹಾಗೂ 6ಎಸ್ ಪ್ಲಸ್ ಜೊತೆಗೆ ಚಿತ್ರಿಸಲಾಗಿದೆ.

ಐಫೋನ್ 6ಎಸ್ ಹಾಗೂ 6ಎಸ್ ಪ್ಲಸ್ ಜೊತೆಗೆ ಚಿತ್ರಿಸಲಾಗಿದೆ.

ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್ ಅನ್ನು 2015ರ ಸಾಧನಗಳಾದ ಐಫೋನ್ 6ಎಸ್ ಹಾಗೂ 6ಎಸ್ ಪ್ಲಸ್ ಜೊತೆಗೆ ಚಿತ್ರಿಸಲಾಗಿದೆ. ಹೊಸ ಸ್ಮಾರ್ಟ್ ಫೋನುಗಳು ಹಳೆಯ ಸ್ಮಾರ್ಟ್ ಫೋನಿನಷ್ಟೇ ಗಾತ್ರ ಹೊಂದಿರುತ್ತದೆ.

ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್ ನೋಡಲು ಚೆನ್ನಾಗಿದೆ.

ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್ ನೋಡಲು ಚೆನ್ನಾಗಿದೆ.

ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್ ನೋಡಲು ಮುದ್ದಾಗಿ, ಚೆನ್ನಾಗಿದೆ. ಬ್ಲೂ ಐಫೋನನ್ನು ಆ್ಯಪಲ್ ನಿಜಕ್ಕೂ ತಯಾರಿಸಿದರೆ ಅದು ಈ ಕಡು ನೀಲಿ ಬಣ್ಣದಲ್ಲೇ ಇರುತ್ತದೆ.

ಸ್ಮಾರ್ಟ್ ಕನೆಕ್ಟರ್ ಎಲ್ಲೂ ಕಾಣಿಸುತ್ತಿಲ್ಲ.

ಸ್ಮಾರ್ಟ್ ಕನೆಕ್ಟರ್ ಎಲ್ಲೂ ಕಾಣಿಸುತ್ತಿಲ್ಲ.

ಐಫೋನ್ 7 ಪ್ಲಸ್ ನ ಕೆಳಭಾಗದಲ್ಲಿ ಐಪ್ಯಾಡ್ ಪ್ರೋ ಲೈನ್ ಅಪ್ ನಲ್ಲಿರುವಂತೆ ಸ್ಮಾರ್ಟ್ ಕನೆಕ್ಟರ್ ಇರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಸೋರಿಕೆಯಾಗಿರುವ ಕಡು ನೀಲಿ ಬಣ್ಣದ ಐಫೋನ್ 7 ಪ್ಲಸ್ ನ ಚಿತ್ರಗಳಲ್ಲಿ ಸ್ಮಾರ್ಟ್ ಕನೆಕ್ಟರ್ ಕಾಣಿಸುತ್ತಿಲ್ಲ.

ಆ್ಯಪಲ್ ಲೋಗೋದ ಸುತ್ತ ಹೆಚ್ಚಿನ ಆಳವಿದೆ.

ಆ್ಯಪಲ್ ಲೋಗೋದ ಸುತ್ತ ಹೆಚ್ಚಿನ ಆಳವಿದೆ.

ಐಫೋನ್ 7 ಪ್ಲಸ್ ಎಂದು ಹೇಳಲಾದ ಫೋನಿನ ಹಿಂಬದಿಯಲ್ಲಿರುವ ಆ್ಯಪಲ್ ಲೋಗೋದ ಸುತ್ತ ಹೆಚ್ಚಿನ ಆಳವಿದೆ. ಜೊತೆಗೆ, ವಾಲ್ಯೂಮ್ ಬಟನ್, ಫ್ಲಾಷ್ ಹಾಗೂ ಮ್ಯೂಟ್ ಸ್ವಿಚ್ಚಿನ ಸುತ್ತ ತಯಾರಿಕೆಯ ಹಂತದ ಗುರುತುಗಳಿದ್ದಂತೆ ಕಾಣುತ್ತದೆ.

Best Mobiles in India

English summary
The Deep Blue color variant of the iPhone 7 Plus has been leaked by means of a slew of photos. The photos show the possible design of the smartphone in full glory. Take a look at the photos of the Deep Blue iPhone 7 Plus from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X