ಆಪಲ್‌ ಚಿನ್ನದ ವ್ಯಾಮೋಹ ಇನ್ನು ಐಪ್ಯಾಡ್‌ಗೂ

Written By:

ಆಪಲ್‌ ಚಿನ್ನದ ವ್ಯಾಮೋಹವನ್ನು ತನ್ನ ಐಪ್ಯಾಡ್‌ಗೂ ಕಂಪೆನಿ ವಿಸ್ತರಿಸಿದೆ, ಹೊಸ ಆಯ್ಕೆಯಂತೆ ಚಿನ್ನದ ಬಣ್ಣದಲ್ಲಿರುವ ಐಪ್ಯಾಡ್‌ಗಳನ್ನು ಹೊತರುವ ಯೋಜನೆಯಲ್ಲಿ ಕಂಪೆನಿ ಇದೆ. ಈ ಚಿನ್ನದ ಬಣ್ಣದ ಹಿಂಭಾಗ ಕವಚವಿರುವ 9.7 ಇಂಚಿನ ಐಪ್ಯಾಡ್‌ಗಳನ್ನು ಈ ತಿಂಗಳಲ್ಲೇ ಕಂಪೆನಿ ಹೊರತರುವ ನಿರೀಕ್ಷೆ ಇದೆ .

ಈ ಚಿನ್ನದ ಅಥವಾ ಗೋಲ್ಡ್ ಐಪ್ಯಾಡ್ ಮೆಟಲ್ ಅನ್ನು ಬಳಸಿ ತಯಾರಿಸಿರುವಂತಹ ಇತರ ಉತ್ಪನ್ನಗಳಾದ ಐಫೋನ್ 5S ಮತ್ತು ಹೊಸ ಆಪಲ್ ವಾಚ್‌ನೊಂದಿಗೆ ಈ ಚಿನ್ನದ ಐಪ್ಯಾಡ್ ಕೂಡ ಸೇರಿಕೊಳ್ಳಲಿದ್ದು, 18 ಕ್ಯಾರೆಟ್ ಚಿನ್ನದಲ್ಲಿ ಲಭ್ಯವಿದೆ. ಇನ್ನು ಈ ಗೋಲ್ಡ್ ಐಪ್ಯಾಡ್ ಹೇಗೆ ಕಾಣಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕೆಂಬ ಇರಾದೆ ಇದ್ದಲ್ಲಿ 2010 ರಲ್ಲಿ ಸ್ಟುವರ್ಟ್ ಹ್ಯೂಗಸ್ ನಿರ್ಮಿಸಿದ ಚಿನ್ನ ಮತ್ತು ವಜ್ರದ ಮಾದರಿಯ ಐ ಪ್ಯಾಡ್ ಅನ್ನು ನಮಗೆ ನೆನಪಿಸಿಕೊಳ್ಳಬಹುದು.

ಚಿನ್ನದ ಐಪ್ಯಾಡ್ ಆಪಲ್ ಹೊಸ ನಿರೀಕ್ಷೆ

ಇದನ್ನೂ ಓದಿ: ಒಂದರೊಂದಿಗೆ ಇನ್ನೊಂದು ಉಚಿತ ಅದ್ಭುತ ಕೊಡುಗೆಯ ಫೋನ್‌ಗಳು

ಕೆಲವು ಸಮಯಗಳ ಕೆಳಗೆ ಐ ಪ್ಯಾಡ್‌ಗಳ ಮಾರಾಟದಲ್ಲಿ ಆಪಲ್ ಹೆಚ್ಚಿನ ಸೋಲನ್ನು ಅನುಭವಿಸಿತ್ತು. ವರ್ಷಗಳಿಂದ ತನ್ನ ಐಪ್ಯಾಡ್‌ಗಳಲ್ಲಿ ಬದಲಾವಣೆಗಳನ್ನು ಮಾಡುತ್ತಾ ಯಶಸ್ಸನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮಾಡಿತ್ತು.

ಇದನ್ನೂ ಓದಿ: ಇಂಟರ್ನೆಟ್ ಅನ್ನು ಇನ್ನಷ್ಟು ವೇಗಗೊಳಿಸುವ ತಂತ್ರಗಳಿವು

English summary
This article tells about Apple to Add Gold to iPad Lineup, Report Says.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot