Just In
- 15 hrs ago
WhatsApp: ವಾಟ್ಸಾಪ್ ಮ್ಯಾಕ್ಒಎಸ್ (MacOS) ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- 15 hrs ago
ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?
- 17 hrs ago
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- 18 hrs ago
ಕೈಗೆಟಕುವ ಬೆಲೆಯಲ್ಲಿ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 12i! ಸ್ಟೈಲಿಶ್ ಲುಕ್!
Don't Miss
- Movies
ಇಂದುಮತಿಯಾಗಿ ಕಿರುತೆರೆಗೆ ಮರಳಿದ ತೇಜಸ್ವಿನಿಗೆ ನಟನೆಯೆಂದರೆ ಪ್ರೀತಿ
- News
Kamal Haasan: ಕಾಂಗ್ರೆಸ್ನಿಂದ ಕಣಕ್ಕಿಳಿಯಲಿದ್ದಾರಾ ಕಮಲ್ ಹಾಸನ್? ಅವರ ಮಾತು ಇಲ್ಲಿದೆ
- Sports
U-19 Women's World Cup 2023: ಸೆಮಿಫೈನಲ್ ಪ್ರವೇಶಿಸಿದ ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ
- Lifestyle
Horoscope Today 26 Jan 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವಾಟ್ಸಾಪ್ ಸಂಪರ್ಕ ಹೊಂದದೇ ಇದ್ದಾಗ' ಏನು ಮಾಡಬೇಕು?
ವಾಟ್ಸಾಪ್ ಸಾಮಾಜಿಕ ಜಾಲತಾಣವನ್ನು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಬಳಸಿಕೊಳ್ಳುತ್ತಿದ್ದಾರೆ. ಈ ಅಪ್ಲಿಕೇಶನ್ ದೈತ್ಯ ಹಲವಾರು ನವೀನ ಫೀಚರ್‌ಗಳನ್ನು ತನ್ನಲ್ಲಿ ಪ್ರಸ್ತುಪಡಿಸಿಕೊಂಡು ಬಳಕೆದಾರರಿಗೆ ಇನ್ನಷ್ಟು ಸಮೀಪವಾಗುತ್ತಿದೆ. ವಾಟ್ಸಾಪ್‌ನಿಂದ ಸಂದೇಶ ಕಳುಹಿಸುವುದರಿಂದ ಹಿಡಿದು, ಕರೆ ಮಾಡುವುದು, ಫೋಟೋ, ವೀಡಿಯೊ ಕಳುಹಿಸುವುದು ಪಿಡಿಎಫ್ ಫೈಲ್‌ಗಳನ್ನು ಲಗತ್ತಿಸಿ ಅದನ್ನು ಅಪ್ಲಿಕೇಶನ್‌ಗಳು ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಈ ತಾಣದಲ್ಲಿ ಈಗ ನಾವು ಪಡೆದುಕೊಂಡಿರುವೆವು.
ಓದಿರಿ: ಸಿಮ್ ಕಾರ್ಡ್ ಇಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?
ಇದೆಲ್ಲಾದರ ಫಲವೆಂಬಂತೆ ವಾಟ್ಸಾಪ್ ಬಳಸುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇನ್ನಷ್ಟು ಅಭಿವೃದ್ಧಿ ಹಂತಗಳನ್ನು ತಾಣದಲ್ಲಿ ತರುವ ಯೋಚನೆಯನ್ನು ಡೆವಲಪರ್‌ಗಳು ಮಾಡುತ್ತಿದ್ದು ಅದಿನ್ನೂ ಕಾರ್ಯನಿರ್ವಹಣೆಯ ಹಂತದಲ್ಲಿದೆ. ವಾಟ್ಸಾಪ್ ನಿಮ್ಮ ಫೋನ್‌ನಲ್ಲಿ ಕನೆಕ್ಟ್ ಆಗುತ್ತಿಲ್ಲ ಎಂಬ ಸಮಸ್ಯೆ ಎದುರಾದಲ್ಲಿ ಅದನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತಿದ್ದೇವೆ. ಬನ್ನಿ ಅದೇನು ಎಂಬುದನ್ನು ಅರಿತುಕೊಳ್ಳೋಣ.

ಫೋನ್ ರೀಸ್ಟಾರ್ಟ್ ಮಾಡಿ
ನೀವು ವೈಫೈ ಬಳಸಿಕೊಳ್ಳುತ್ತಿದ್ದೀರಿ ಎಂದಾದಲ್ಲಿ, ಮೊದಲಿಗೆ ಕನೆಕ್ಶನ್ ಅನ್ನು ಆಫ್ ಮಾಡಿಕೊಳ್ಳಿ ಇಲ್ಲವೇ ಸ್ಮಾರ್ಟ್‌ಫೋನ್‌ನಲ್ಲಿ ಫ್ಲೈಟ್ ಮೋಡ್ ಸಕ್ರಿಯಗೊಳಿಸಿ. ನಿಮ್ಮ ಫೋನ್ ಅನ್ನು ರೀಸ್ಟಾರ್ಟ್ ಮಾಡಿಕೊಳ್ಳುವುದೂ ಕೂಡ ನಿಮಗೆ ಸಹಕಾರಿಯಾಗಲಿದೆ.

ವೈಫೈ ಆನ್ ಆಗಿಯೇ ಇರಲಿ
ನಿಮ್ಮ ಫೋನ್ ವೈಫೈಗೆ ಸಂಪರ್ಕವನ್ನು ಪಡೆದುಕೊಂಡಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. 'ಕೀಪ್ ವೈಫೈ ಆನ್ ಡ್ಯೂರಿಂಗ್ ಸ್ಲೀಪ್' ಆಯ್ಕೆಯನ್ನು ಖಾತ್ರಿಪಡಿಸಿಕೊಂಡು ಇದನ್ನು ತಡೆಗಟ್ಟಬಹುದಾಗಿದೆ. ಸೆಟ್ಟಿಂಗ್ಸ್ > ವೈಫೈ ಹೀಗೆ ಮಾಡಿ.

ಡೇಟಾ ಕನೆಕ್ಶನ್ ಬಲವಾಗಿರಲಿ
ನೀವು ಡೇಟಾ ಕನೆಕ್ಶನ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ಡೇಟಾ ಸಂಪರ್ಕ ಆನ್ ಆಗಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಿ ಮತ್ತು ವಾಟ್ಸಾಪ್ ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು ಸಮರ್ಥವಾಗಿರುವಂತೆ ಈ ಸಂಪರ್ಕವಿರಬೇಕು.

ಹಿನ್ನಲೆ ಡೇಟಾವನ್ನು ನಿರ್ಬಂಧಿಸದಿರಿ
ವಾಟ್ಸಾಪ್ ಸೇವೆಯಲ್ಲಿ ಹಿನ್ನಲೆ ಡೇಟಾವನ್ನು ನಿರ್ಬಂಧಿಸಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಡೇಟಾ ಯೂಸೇಜ್ ಮೆನುವಿಗೆ ಹೋಗುವುದರ ಮೂಲಕ ಅಪ್ಲಿಕೇಶನ್‌ನಲ್ಲಿ ಇದನ್ನೇ ಕಾನ್ಫಿಗರ್ ಮಾಡಿ ನಿಮಗಿದನ್ನು ನೆರವೇರಿಸಿಕೊಳ್ಳಬಹುದಾಗಿದೆ. ವೈಫೈಯಲ್ಲಿ ಚೆನ್ನಾಗಿ ವಾಟ್ಸಾಪ್ ಕೆಲಸ ಮಾಡುತ್ತಿದೆ ಡೇಟಾ ಕನೆಕ್ಶನ್‌ನಲ್ಲಿ ಮಾಡುತ್ತಿಲ್ಲ ಎಂದಾದಲ್ಲಿ ನಿಮ್ಮ ಸರ್ವೀಸ್ ಪ್ರೊವೈಡರ್ ಅನ್ನು ಭೇಟಿ ಮಾಡಿ ಎಪಿಎನ್ ಸೆಟ್ಟಿಂಗ್ ಅನ್ನು ನೀವು ಕಾನ್ಫಿಗರ್ ಮಾಡಬೇಕಾಗುತ್ತದೆ.

ವಾಟ್ಸಾಪ್ ಅಪ್‌ಡೇಟ್ ಮಾಡಿ
ಇಂಟರ್ನೆಟ್ ಸಂಪರ್ಕ ಯಾವುದೇ ಸಮಸ್ಯೆಯನ್ನು ಹೊಂದಿಲ್ಲ ಎಂದಾದಲ್ಲಿ, ವಾಟ್ಸಾಪ್ ಅಪ್ ಟು ಡೇಟ್ ಆಗಿದೆ ಎಂಬುದನ್ನು ಖಾತ್ರಿಪಡಿಸಿ. ನಿಮ್ಮ ಅಪ್ಲಿಕೇಶನ್ ಸ್ಟೋರ್‌ನಲ್ಲಿ ಅಪ್ಲಿಕೇಶನ್ ಅಪ್‌ಡೇಟ್ ಮಾಡುವ ಮೂಲಕ ಇದನ್ನು ನಿರ್ವಹಿಸಬಹುದಾಗಿದೆ.

ಅನ್‌ಇನ್‌ಸ್ಟಾಲ್ ಮತ್ತು ರಿಇನ್‌ಸ್ಟಾಲ್
ಮೇಲೆ ತಿಳಿಸಿದ ಯಾವುದೇ ಪರಿಹಾರಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ, ಅಪ್ಲಿಕೇಶನ್ ಅನ್‌ಇನ್‌ಸ್ಟಾಲ್ ಮತ್ತು ರಿಇನ್‌ಸ್ಟಾಲ್ ಮಾಡಿ. ಇದು ಎಲ್ಲಾ ಚಾಟ್‌ಗಳನ್ನು ಕ್ಲಿಯರ್ ಮಾಡುತ್ತದೆ, ವಾಟ್ಸಾಪ್ ಸೆಟ್ಟಿಂಗ್ಸ್‌ನಲ್ಲಿ ಚಾಟ್‌ಗಳನ್ನು ಮರುಪಡೆದುಕೊಳ್ಳಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470