Just In
Don't Miss
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Movies
"ಕಾಂತಾರ' ಯಾಕೆ ಆಸ್ಕರ್ಗೆ ನಾಮಿನೇಟ್ ಆಗ್ಲಿಲ್ಲ ಅಂದ್ರೆ? ಸೀಕ್ವೆಲ್ಗೆ ಪ್ರಶಸ್ತಿ ಗ್ಯಾರೆಂಟಿ": ವಿಜಯ್ ಕಿರಗಂದೂರ್
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿಮ್ ಕಾರ್ಡ್ ಇಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?
ವಾಟ್ಸಾಪ್ ಮೆಸೆಂಜರ್ ಹೆಚ್ಚು ಜನಪ್ರಿಯವಾಗಿರುವ ಮೊಬೈಲ್ ಅಪ್ಲಿಕೇಶನ್ ಆಗಿದೆ. ನೀವು ಇದನ್ನು ಬಳಸಿ ಸಂದೇಶಗಳು, ಫೋಟೋಗಳು, ವೀಡಿಯೊಗಳು ಮತ್ತು ನಿಮ್ಮ ಇಚ್ಛೆಯ ಏನಾದರೂ ಚಟುವಟಿಕೆಗಳನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ಇನ್ನು ಮೊಬೈಲ್ ಪ್ಲಾಟ್‌ಫಾರ್ಮ್‌ಗಳಾದ ಆಂಡ್ರಾಯ್ಡ್, ಐಫೋನ್, ಬ್ಲ್ಯಾಕ್‌ಬೆರ್ರಿ, ನೋಕಿಯಾಗಳಲ್ಲಿ ಈ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಲಭ್ಯವಿದೆ.
ಓದಿರಿ: ನಿಮ್ಮ ದುಬಾರಿ ಫೋನ್ ಭದ್ರತೆಗಾಗಿ ಟಾಪ್ ಟಿಪ್ಸ್
ಇಂದಿನ ಲೇಖನದಲ್ಲಿ ಸಿಮ್ ಕಾರ್ಡ್ ಇಲ್ಲದೆಯೇ ವಾಟ್ಸಾಪ್ ಅನ್ನು ಬಳಸುವುದು ಹೇಗೆ ಎಂಬುದನ್ನು ಕುರಿತು ಕೆಳಗಿನ ಸ್ಲೈಡರ್‌ನಿಂದ ಅರಿತುಕೊಳ್ಳಿ. ನಿಮ್ಮ ಫೋನ್ ಇಂಟರ್ನೆಟ್‌ಗೆ ಬೆಂಬಲವನ್ನು ಒದಗಿಸುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಸಲಹೆ: 1
ಮೊದಲಿಗೆ ನಿಮ್ಮ ಫೋನ್ ಅನ್ನು ಇಂಟರ್ನೆಟ್‌ಗೆ ಸಂಪರ್ಕ ಪಡಿಸಿಕೊಳ್ಳಿ. ಈಗ ಅಧಿಕೃತ ವಾಟ್ಸಾಪ್ ಮೆಸೆಂಜರ್ ಡೌನ್‌ಲೋಡ್ ಪುಟಕ್ಕೆ ಹೋಗಿ ಮತ್ತು ನಿಮ್ಮ ಡಿವೈಸ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ಡಿವೈಸ್‌ನಲ್ಲಿ ಅದನ್ನು ಡೌನ್‌ಲೋಡ್ ಮಾಡಿಕೊಂಡ ನಂತರ ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ.

ಸಲಹೆ:2
ವಾಟ್ಸಾಪ್ ಇನ್‌ಸ್ಟಾಲೇಶನ್ ಪೂರ್ಣಗೊಂಡ ನಂತರ, ಅಪ್ಲಿಕೇಶನ್ ಆರಂಭಿಸಿ. ಇಲ್ಲಿ ನಿಮಗೆ ವಾಟ್ಸಾಪ್ ಸ್ವಾಗತ ಪರದೆ ಕಾಣುತ್ತದೆ. ಇಲ್ಲಿ ನೀವು ಅದರ ಷರತ್ತು ಮತ್ತು ನಿಬಂಧನೆಗಳಿಗೆ ಸಮ್ಮತಿಯನ್ನು ನೀಡಬೇಕಾಗುತ್ತದೆ.

ಸಲಹೆ:3
ಸಮ್ಮತಿ ಸೂಚಿಸಿ ಮುಂದುವರಿಯಲು "ಅಗ್ರಿ ಮತ್ತು ಕಂಟಿನ್ಯೂ ಬಟನ್ ಒತ್ತಿರಿ.

ಸಲಹೆ: 4
ಮುಂದಿನ ಪರದೆಯಲ್ಲಿ, ದೃಢೀಕರಣಕ್ಕಾಗಿ ವಾಟ್ಸಾಪ್ ನಿಮ್ಮ ಫೋನ್ ಸಂಖ್ಯೆಯನ್ನು ಕೇಳುತ್ತದೆ.

ಸಲಹೆ:5
ಇಲ್ಲಿ ವಾಟ್ಸಾಪ್‌ನಲ್ಲಿ ನೋಂದಾವಣೆಗೊಂಡಿರುವ ಫೋನ್ ಸಂಖ್ಯೆಯನ್ನು ನಮೂದಿಸಿ ಮತ್ತು ಓಕೆ ಕ್ಲಿಕ್ಕಿಸಿ.

ಸಲಹೆ:6
ದೃಢೀಕರಣ ಸಮ್ಮತಿಯಾಗದೇ ಇರಬಹುದು ಆದರೆ ನಿಮ್ಮ ಮೊಬೈಲ್ ಫೋನ್‌ನಲ್ಲಿ ವೆರಿಫಿಕೇಶನ್ ಕೋಡ್ ಅನ್ನು ನೀವು ಪಡೆದುಕೊಳ್ಳುತ್ತೀರಿ. ಈ ಕೋಡ್ ಅನ್ನು ವೆರಿಫಿಕೇಶನ್‌ಗಾಗಿ ಹಾಕಿ.

ಸಲಹೆ:7
ಇದು 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. 15 ನಿಮಿಷಗಳ ಒಳಗಾಗಿ ವಾಟ್ಸಾಪ್‌ನಿಂದ ನಿಮಗೆ ಸಂದೇಶ ದೊರೆತಿಲ್ಲ ಎಂದಾದಲ್ಲಿ, "ಕಾಲ್ ಮಿ" ಕ್ಲಿಕ್ ಮಾಡಿ ಮತ್ತು ವೆರಿಫಿಕೇಶನ್ ಕೋಡ್‌ನೊಂದಿಗೆ ಕರೆಯನ್ನು ಪಡೆದುಕೊಳ್ಳಿ ಮತ್ತು ಅದನ್ನು ಬಳಸಿ ದೃಢೀಕರಿಸಿ.

ಸಲಹೆ: 8
ನಿಮ್ಮ ಮುಕ್ಕಾಲು ಪಾಲು ಕೆಲಸ ಮುಗಿದಂತೆಯೇ. ಇನ್ನು ಮುಂದಿನ ಪರದೆಯಲ್ಲಿ, ನೀವು ಪ್ರದರ್ಶಿಸಲು ಬಯಸುವ ಹೆಸರನ್ನು ನಮೂದಿಸಿ ಮತ್ತು ಸಿಮ್ ಕಾರ್ಡ್ ಇಲ್ಲದೆಯೇ ವಾಟ್ಸಾಪ್ ಬಳಸಲು ಆರಂಭಿಸಿ.

ಸಲಹೆ: 9
ವಾಟ್ಸಾಪ್‌ನಲ್ಲಿ ಸಂದೇಶ ರಚಿಸುತ್ತಿರುವಾಗ, ವಾಟ್ಸಾಪ್ ಅನ್ನು ಒಮ್ಮೆಗೆ ದೃಢೀಕರಿಸಬೇಕು.

ಸಲಹೆ: 10
ಸಿಮ್ ಇಲ್ಲದೆಯೇ ನಿಮ್ಮ ಡಿವೈಸ್‌ನಲ್ಲಿ ವಾಟ್ಸಾಪ್ ಬಳಸಲು ಆರಂಭಿಸಿದ ನಂತರ, ನೀವು ದೃಢೀಕರಣಕ್ಕೆ ಬಳಸಿದ ಫೋನ್ ಸಂಖ್ಯೆಯ ಕುರಿತು ಚಿಂತಿಸಬೇಕಾಗಿಲ್ಲ. ಒಮ್ಮೆ ದೃಢೀಕರಿಸಿದ ನಂತರ ವಾಟ್ಸಾಪ್ ಮೆಸೆಂಜರ್ ಅನ್ನು ನಿಮಗೆ ಎಂದೆಂದಿಗೂ ಬಳಸಬಹುದಾಗಿದೆ!
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470