ಉತ್ತರ ಕೊರಿಯಾ 21 ನ್ಯೂಕ್ಲಿಯಾರ್ ವೆಪನ್ ಹೊಂದಲಿದೆ; ಸ್ಕೆಚ್ ಏನು?
ಉತ್ತರ ಕೊರಿಯಾ ದಿನದಿಂದ ದಿನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರಂಕುಶ ಪ್ರಭುತ್ವ ಮತ್ತು ಅಲ್ಲಿನ ಹುಚ್ಚು ನಿಯಮಗಳ ಹುಚ್ಚು ದೊರೆಯಿಂದ ಹೆಚ್ಚು ಪ್ರಖ್ಯಾತವಾಗುತ್ತಿದೆ. ಆದರೆ ಜನ ಸಾಮಾನ್ಯರ ಉತ್ತಮ ಜೀವನ ಮಟ್ಟದಿಂದ ಮಾತ್ರ ಅಲ್ಲ.
ಇತ್ತೀಚೆಗಷ್ಟೆ ಗಿಜ್‌ಬಾಟ್‌ನಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ 'ಕಿಮ್ ಜಾಂಗ್ ಉನ್' ಬಗ್ಗೆ, ಅಲ್ಲಿನ ನಿಯಮಗಳ ಬಗ್ಗೆ, ಅಲ್ಲಿನ ಸ್ಥಿತಿಯನ್ನು ಬಿಂಬಿಸುವ ಫೋಟೋಗಳನ್ನು ಸಹ ಪರಿಚಯಿಸಿದ್ದೆವು. ಆದ್ರೆ ಈಗ ಉತ್ತರ ಕೊರಿಯಾದ ಬಗ್ಗೆ ಹೊಸ ಮಾಹಿತಿಯೊಂದು ಹರಿದಾಡುತ್ತಿದೆ.
ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್ ಹಿಂದಿರುವ ರಹಸ್ಯವೇನು?
ಉತ್ತರ ಕೊರಿಯಾ ಕಳೆದ 18 ತಿಂಗಳಲ್ಲಿ 6 ಅಥವಾ ಅದಕ್ಕಿಂತ ಹೆಚ್ಚು ನ್ಯೂಕ್ಲಿಯಾರ್ ಬಾಂಬ್‌ಗಳನ್ನು ನಿರ್ಮಾಣ ಮಾಡಿದೆ. ವಿಶೇಷ ಅಂದ್ರೆ ಪುನಃ ಮತ್ತೊಂದು ಹೆಜ್ಜೆ ಮುಂದೆ ಇಟ್ಟು ತನ್ನ ಶಸ್ತ್ರಾಗಾರದಲ್ಲಿ 21 ನ್ಯೂಕ್ಲಿಯಾರ್ ಬಾಂಬ್‌ಗಳನ್ನು ಹೊಂದಲಿದೆ ಎಂದು ಅಮೆರಿಕ ಚಿಂತಕರ ಚಾವಡಿ ಹೇಳಿದೆ.
ಪ್ರಪಂಚದ ಇತರೆ ದೇಶಗಳಿಗೆ ನ್ಯೂಕ್ಲಿಯಾರ್ ಬಾಂಬ್ ಹಾಕುತ್ತೇನೆ ಎಂದು ಆಗಾಗ ಹೇಳುವ ಉತ್ತರ ಕೊರಿಯಾ ಅಧ್ಯಕ್ಷ 'ಕಿಮ್ ಜಾಂಗ್ ಉನ್' 21 ನ್ಯೂಕ್ಲಿಯಾರ್ ಬಾಂಬ್ ಹೊಂದುವುದರ ಹಿಂದಿರುವ ಹೊಸ ಐಡಿಯಾ ಏನು ಎಂಬುದನ್ನು ಹಾಗೆ ಒಮ್ಮೆ ಸ್ಲೈಡರ್ ಕ್ಲಿಕ್ಲಿಸಿ ಮಾಹಿತಿ ಓದಿರಿ.
ಉತ್ತರ ಕೊರಿಯಾದಲ್ಲಿ ಗುಟ್ಟಾಗಿ ಸೆರೆಹಿಡಿದ ಫೋಟೋ: ನೋಡುವಂತಿಲ್ಲಾ ಏಕೆ?

1
'ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಇಂಟರ್‌ನ್ಯಾಷನಲ್ ಸೆಕ್ಯೂರಿಟಿ (ISIS)' ಅಂದಾಜಿನ ಪ್ರಕಾರ ಉತ್ತರ ಕೊರಿಯಾ ತನ್ನ 'ಯಾಂಗ್‌ಬ್ಯೋಂಗ್' ನ್ಯೂಕ್ಲಿಯಾರ್ ಕಾಂಪ್ಲೆಕಸ್‌ನಲ್ಲಿ ಪ್ಲುಟೋನಿಯಂ ಮತ್ತು ಯುರೇನಿಯಂ ದರ್ಜೆಯ ಉನ್ನತ ಮಟ್ಟದ ವೆಪನ್‌ಗಳನ್ನು ನಿರ್ಮಾಣ ಮಾಡಲಿದೆಯಂತೆ.

2
'ಇಂಟರ್‌ನ್ಯಾಷನಲ್ ಆಟೋಮಿಕ್ ಎನರ್ಜಿ ಏಜೆನ್ಸಿ (IAEA)' ಮುಖ್ಯಸ್ಥ 'ಯುಕಿಯಾ ಅಮನೊ' ಕಳೆದ ವಾರ 'ಉತ್ತರ ಕೊರಿಯಾ ತನ್ನ 'ಯಾಂಗ್‌ಬ್ಯೋಂಗ್' ನಲ್ಲಿ ವೆಪನ್ ಕಾಂಪ್ಲೆಕ್ಸ್ ಪುನರಾರಂಭಿಸುತ್ತಿದ್ದು, ನ್ಯೂಕ್ಲಿಯಾರ್ ವೆಪನ್‌ಗಳಲ್ಲಿ ಪ್ಲುಟೋನಿಯಂ ಬಳಸಲು ಪುನರ್‌ಪ್ರಕ್ರಿಯೆ ಆರಂಭಿಸಿದೆ" ಎಂದು ಹೇಳಿದ್ದಾರೆ.

3
2014 ರಲ್ಲಿ ಐಎಸ್‌ಐಎಸ್ 'ಉತ್ತರ ಕೊರಿಯಾ ತನ್ನ ಶಸ್ತ್ರಾಗಾರಗಳಲ್ಲಿ ಎಲ್ಲಿಯಾದರೂ ಸಹ 10-16 ನಡುವೆ ನ್ಯೂಕ್ಲಿಯಾರ್ ವೆಪನ್‌ಗಳನ್ನು ಹೊಂದಬಹುದು ಎಂದು ಅಂದಾಜಿಸಿತ್ತು. ಆದರೆ ಈಗ 13 ರಿಂದ 21 ನ್ಯೂಕ್ಲಿಯಾರ್ ವೆಪನ್‌ಗಳನ್ನು ಹೊಂದುತ್ತಿದೆ ಎಂದು ಐಎಸ್‌ಐಎಸ್ ಹೇಳಿದೆ.

4
ಉತ್ತರ ಕೊರಿಯಾ 21 ನ್ಯೂಕ್ಲಿಯಾರ್ ವೆಪನ್‌ಗಳನ್ನು ನಿರ್ಮಾಣ ಮಾಡುತ್ತದೆ ಎಂಬುದನ್ನು ಈಗ ಲೆಕ್ಕಕ್ಕೆ ತೆಗೆದುಕೊಳ್ಳದೇ ಯುರೇನಿಯಂ ಗ್ರೇಡ್ ವೆಪನ್‌ಗಳನ್ನು ಉತ್ಪಾದಿಸಬಹುದು. ಅಲ್ಲದೇ ಹೆಚ್ಚು ಹೆಚ್ಚು ನ್ಯೂಕ್ಲಿಯಾರ್ ವೆಪನ್‌ಗಳನ್ನು ನಿರ್ಮಾಣ ಮಾಡಬಹುದಾದ ಸಾಮರ್ಥ್ಯ ಎಂದು ವಾಷಿಂಗ್ಟನ್ ಮೂಲದ ಚಿಂತಕರ ಚಾವಡಿ ಹೇಳಿದೆ.

5
ನ್ಯೂಕ್ಲಿಯಾರ್ ವೆಪನ್ ಬಳಕೆಯಲ್ಲಿ ಪ್ಲುಟೋನಿಯಂ ಬಳಸುವುದರಿಂದ ರಿಯಾಕ್ಟರ್‌ನಿಂದ ಇಂಧನ ಹೊರತೆಗೆಯುತ್ತದೆ.

6
IAEA ಇನ್ಸ್‌ಪೆಕ್ಟರ್ 2009 ರಲ್ಲಿ ಕಸಿದುಕೊಂಡಿತ್ತು. ಅಮನೊ, ಉಪಗ್ರಹದ ಮೂಲಕ ಚಟುವಟಿಕೆ ಯಾವಾಗ ಕೈಗೊಳ್ಳಲಾಗಿತ್ತು ಎಂದು ಮಾತ್ರ ಹೇಳಿಲ್ಲ.

ಗಿಜ್‌ಬಾಟ್



Click it and Unblock the Notifications








