ಉತ್ತರ ಕೊರಿಯಾದಲ್ಲಿ ಗುಟ್ಟಾಗಿ ಸೆರೆಹಿಡಿದ ಫೋಟೋ: ನೋಡುವಂತಿಲ್ಲಾ ಏಕೆ?

Posted By: Staff

ಭಾರತಕ್ಕೆ ವಿದೇಶಿಗರು ಬಂದು ಪ್ರವಾಸಿ ತಾಣಗಳನ್ನು ಸುತ್ತುತ್ತಾ ಸೆರೆಹಿಡಿದ ಫೋಟೋಗಳನ್ನು ಯಾವುದೇ ಭಯವಿಲ್ಲದೇ ಇಂಟರ್ನೆಟ್‌ನಲ್ಲಿ ಅಪ್‌ಲೋಡ್‌ ಮಾಡಬಹುದು. ಇದು ಈ ದೇಶದಲ್ಲಿರುವ ಸ್ವತಂತ್ರ. ಆದ್ರೆ ಒಮ್ಮೆ ನೀವು ಉತ್ತರ ಕೊರಿಯಾಕ್ಕೆ ಇಂತಹ ಸಣ್ಣ ಸ್ವತಂತ್ರವನ್ನು ಹೋಲಿಸಿದಲ್ಲಿ ನೂರಕ್ಕೆ ನೂರು ಶೇಕಡ ವಿರುದ್ಧ. ಉತ್ತರ ಕೊರಿಯಾ ಕೇವಲ ಸರ್ವಾಧಿಕಾರಕ್ಕೆ ಮಾತ್ರ ಉದಾಹರಣೆ ಅಲ್ಲ, ಮಾನವ ಹಕ್ಕುಗಳ ದಮನಕ್ಕೂ ಸಹ ಉದಾಹರಣೆ.

ಇನ್ನೊಂದು ವಿಷಯ ಏನಪ್ಪಾ ಅಂದ್ರೆ ಅಲ್ಲಿಗೆ ಇತರ ದೇಶದವರು ಹೋದ್ರೆ ಅಪ್ಪಣೆಯಿಲ್ಲದೇ ಯಾವುದೇ ಫೋಟೋಗಳನ್ನು ಸೆರೆಹಿಡಿವ ಹಾಗಿಲ್ಲ. ಸೆರೆಹಿಡಿದ ಫೋಟೋಗಳನ್ನು ವಾಪಸು ಅಲ್ಲಿನ ಸರ್ಕಾರಕ್ಕೆ ನೀಡಬೇಕು ಹೊರತು ಅದನ್ನು ಇಟ್ಟುಕೊಳ್ಳುವ ಹಾಗಿಲ್ಲ. ಭೇಟಿ ನೀಡಿದವರು ಅವರು ನೀಡಿದ ಸ್ಥಳದಲ್ಲೇ ಉಳಿಯಬೇಕು. ಅಲ್ಲಿ ಅಲ್ಲಿನ ಮಾಧ್ಯಮಗಳು ಬಿಟ್ರೆ ಬೇರೇ ಯಾವ ಮಾಧ್ಯಮಗಳು ಸಹ ಇಲ್ಲ. ಉತ್ತರ ಕೊರಿಯಾ ಇತರ ದೇಶಗಳೊಂದಿಗಿನ ಸಂಪರ್ಕವನ್ನೇ ಕಡಿತಗೊಳಿಸಿದೆ. ಅಲ್ಲಿನ ಇಂಟರ್ನೆಟ್‌ ಸೇವೆಯನ್ನು ಮಾತ್ರ ಬಳಸುತ್ತದೆ.

ಇನ್ನು ಅಲ್ಲಿನ ಜನತೆ ಸರ್ವಾಧಿಕಾರಿಯ ಪ್ರತಿಯೊಂದು ನೀತಿಗೂ ಸಹ ಬದ್ದರಾಗಿರಬೇಕು. ಇಲ್ಲವಾದರೆ ಅವರಿಗೆ ಅಲ್ಲಿ ಬದುಕುವ ಹಕ್ಕು ಬಹಳಷ್ಟು ಕಡಿಮೆ. ಇಂತಹ ಪರಿಸ್ಥಿತಿಯಲ್ಲೂ ಸಹ ಕಿಮ್‌ ಜಾನ್‌ ಉನ್‌ ದೇಶದ ಚಿತ್ರಣವನ್ನು ಯಾರಿಗೂ ನೋಡಲು ಅವಕಾಶ ನೀಡದಿರುವ ವ್ಯವಸ್ಥೆಯಿದ್ದರು ಸಹ ಅಲ್ಲಿಗೆ ಭೇಟಿ ನೀಡಿದ ಫೋಟೋಗ್ರಾಫರ್‌ ಗುಟ್ಟಾಗಿ ತೆಗೆದ ಫೋಟೋಗಳನ್ನು ಈಗ ಬಹಿರಂಗಪಡಿಸಲಾಗಿದೆ. ಅಲ್ಲದೇ ಫೋಟೋಗ್ರಾಫರ್‌ ಅನ್ನು ಬ್ಯಾನ್‌ ಮಾಡಲಾಗಿದೆ. ಉತ್ತರ ಕೋರಿಯಾದ ಪೌಷ್ಟಿಕತೆ ರಹಿತ ಜನರು ಹೇಗಿದ್ದಾರೆ, ಬಾಲಕಾರ್ಮಿಕರು ಹೇಗಿದ್ದಾರೆ, ಕಿತ್ತು ತಿನ್ನುವ ಬಡತನ ಹೇಗಿದೆ, ಮಿಲಿಟರಿ ಸೈನಿಕರು ಅಲ್ಲಿ ಏನು ಮಾಡುತ್ತಾರೆ ಎಂಬ ಅಘಾತಕಾರಿ ಚಿತ್ರಣವನ್ನು ನೀವು ಒಮ್ಮೆ ಈ ಲೇಖನದಲ್ಲಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ಉತ್ತರ ಕೋರಿಯಾ ಮಿಲಿಟರಿ ಪ್ರಖ್ಯಾತವಾದುದು. ಆದರೆ ಅಲ್ಲಿನ ಸೈನಿಕರು ಚಿತ್ರದಲ್ಲಿರುವ ನೀವು ನೋಡುತ್ತಿರುವ ಕೆಲಸಗಳನ್ನು ಸಹ ಮಾಡಬೇಕು.
ಚಿತ್ರ ಕೃಪೆ : Eric Lafforgue

2

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ಈ ಚಿತ್ರ ನೊಡಿದರೆ ಬಹುಶಃ ಅಧಿಕಾರಿಗಳಿಗೆ ಮರುಕ ಹುಟ್ಟಬಹುದು. ಆದರೆ ಇದು ಉತ್ತರ ಕೊರಿಯಾದಲ್ಲಿನ ವಾಸ್ತವ ಜೀವನ ಸಂಗತಿಯಾಗಿದೆ.
ಚಿತ್ರ ಕೃಪೆ : Eric Lafforgue

3

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ಭಾರತದಲ್ಲಿ ಬಾಲಕಾರ್ಮಿಕ ಪದ್ದತಿಯನ್ನು ಕಟ್ಟುನಿಟ್ಟಾಗಿ ವಿರೋಧಿಸಲಾಗುತ್ತದೆ. ಆದರೆ ಉತ್ತರ ಕೋರಿಯಾದ ಪರಿಸ್ಥಿತಿ ನೋಡಿ. ಅಲ್ಲಿ ಕಾರ್ಮಿಕರೆ ಬಾಲ್ಯದವರು.
ಚಿತ್ರ ಕೃಪೆ : Eric Lafforgue

4

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ಅಲ್ಲಿ ಅಧಿಕಾರಿಗಳು ಸಹ ಪೌಷ್ಠಿಕ ಆಹಾರ ರಹಿತರೆ. ಇದಕ್ಕೆ ಸಾಕ್ಷಿ ಈ ಫೋಟೋಗಳು.
ಚಿತ್ರ ಕೃಪೆ : Eric Lafforgue

5

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ಉತ್ತರ ಕೋರಿಯಾದಲ್ಲಿ ಸಾಮಾನ್ಯ ಜನರು ಉತ್ತಮವಾಗಿ ಡ್ರೆಸ್‌ ಮಾಡುವುದೇ ಇಲ್ಲ. ಆದರೆ ಎರಿಕ್'ರವರಿಗೆ ಈ ಡ್ರೆಸ್‌ ಫೋಟೋಗೆ ಸಾಕಾಯಿತು.
ಚಿತ್ರ ಕೃಪೆ : Eric Lafforgue

6

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ವಾಸ್ತವವಾಗಿ ಈ ಚಿತ್ರ ಎರಿಕ್‌ರವರು ಗುಟ್ಟಿನಲ್ಲಿ ತೆಗೆದ ಫೋಟೋ. ಮಕ್ಕಳು ಬೀದಿಯೊಂದರಲ್ಲಿ ಮೆಕ್ಕೆಜೋಳ ಸಂಗ್ರಹಿಸುತ್ತಿರುವುದು.
ಚಿತ್ರ ಕೃಪೆ : Eric Lafforgue

7

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ಮಿಲಿಟರಿ ಫೋಟೋವನ್ನು ತೆಗೆಯಲು ಅವಕಾಶವೆ ಇಲ್ಲ. ಆದರೂ ಸಹ ಈ ಫೋಟೋವನ್ನು ತೆಗೆಯಲಾಗಿದೆ.
ಚಿತ್ರ ಕೃಪೆ : Eric Lafforgue

8

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ದೇಶ ಕಾಯಲು ಮಿಲಿಟರಿ ಪಡೆಗಳನ್ನು ಹೊಂದುವುದು ರೂಢಿ. ಆದರೆ ಇಲ್ಲಿ ಮಿಲಿಟರಿ ಪಡೆಯವರೇ ಕೆಟ್ಟ ಬಸ್ಸುಗಳನ್ನು ತಳ್ಳಬೇಕು. ಇದು ಸಹ ಗುಟ್ಟಾಗಿ ತೆಗೆದ ಫೋಟೋ.
ಚಿತ್ರ ಕೃಪೆ : Eric Lafforgue

9

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ಮಿಲಿಟರಿ ರಹಿತ ವಲಯದಲ್ಲಿ ಫೋಟೋ ತೆಗೆಯಬಹುದು. ಆದರೆ ತುಂಬಾ ಹತ್ತಿರದಿಂದ ಫೋಟೋ ತೆಗೆಯಲು ಪ್ರಯತ್ನಿಸಿದರೆ ಸೈನಿಕರು ಅವಕಾಶ ನೀಡುವುದಿಲ್ಲ.
ಚಿತ್ರ ಕೃಪೆ : Eric Lafforgue

10

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ಉತ್ತರ ಕೊರಿಯಾದ ಡಾಲ್ಫನೇರಿಯಂಗೆ ಭೇಟಿ ನೀಡಿ ಅಲ್ಲಿನ ಪ್ರಾಣಿಗಳ ಫೋಟೋ ತೆಗೆಯಬಹುದು. ಆದರೆ ಅಲ್ಲಿನ ಸೈನಿಕರನ್ನು ಫೋಟೋ ತೆಗೆಯೋಹಾಗಿಲ್ಲ.
ಚಿತ್ರ ಕೃಪೆ : Eric Lafforgue

11

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ಛಾಯಾಗ್ರಾಹಕಿ ಎರಿಕ್‌'ರನ್ನು ಅಲ್ಲಿಂದ ಬ್ಯಾನ್‌ಮಾಡಲು ಕಾರಣವಾದ ಫೋಟೋ ಇದು ಎಂದು ಅವರೇ ಹೇಳಿದ್ದಾರ. ಕಾರಣ ಅಲ್ಲಿನ ಸೈನಿಕರು ವಿಶ್ರಾಂತಿ ಪಡೆಯುವ ಫೋಟೊವನ್ನು ತೆಗೆಯುವಂತಿಲ್ಲ.
ಚಿತ್ರ ಕೃಪೆ : Eric Lafforgue

12

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ಉತ್ತರ ಕೋರಿಯಾದಲ್ಲಿ ಸಣ್ಣ ಕೆರೆಗಳಲ್ಲಿ ಮೀನು ಹಿಡಿಯಬಹುದು. ಆದ್ದರಿಂದ ಈ ವ್ಯಕ್ತಿಯು ದೋಣಿಗಾಗಿ ಹಳೆ ಟೈರ್‌ ಅನ್ನು ಬಳಸಿ ಮೀನು ಹಿಡಿಯುತ್ತಿದ್ದಾರೆ.
ಚಿತ್ರ ಕೃಪೆ : Eric Lafforgue

13

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ಅಲ್ಲಿ ಸರಿಯಾದ ಬಸ್‌ಗಳ ವ್ಯವಸ್ಥೆ ಇಲ್ಲ ಅದಕ್ಕೆ ಈ ಚಿತ್ರವೇ ಸಾಕ್ಷಿ ಎಂದು ಚೋಂಗ್‌ಜಿನ್‌ ಪ್ರದೇಶಕ್ಕೆ ಭೇಟಿ ನೀಡಿದ ಎರಿಕ್‌ ಹೇಳಿದ್ದಾರೆ.
ಚಿತ್ರ ಕೃಪೆ : Eric Lafforgue

14

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ಅಂದಹಾಗೆ ಈ ವ್ಯಕ್ತಿಯು ಸಣ್ಣ ನಿದ್ರೆಗೆ ತೆರಳಿದ್ದಾನೆ. ಆದರೆ ಅಲ್ಲಿನ ಮೀಡಿಯಾಗಳು ಈತ ನಿಧನಹೊಂದಿದ್ದಾನೆ ಎಂದು ಹೇಳಿದ್ದವಂತೆ ಎಂದು ಎರಿಕ್ ಮಾರ್ಗದರ್ಶಕರು ಹೇಳಿದ್ದರಂತೆ.
ಚಿತ್ರ ಕೃಪೆ : Eric Lafforgue

15

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ಉತ್ತರ ಕೊರಿಯಾ ಜನರು ಹುಲ್ಲು ತಿನ್ನುತಾರೆ ಎಂದರೆ ನಂಬುತ್ತಿರಾ. ಖಂಡಿತ ಇಲ್ಲ. ಆದರೆ ಈಗ ನಂಬಿ. ಅಲ್ಲಿ ಎಷ್ಟು ಜನರು ಹುಲ್ಲು ತಿನ್ನುತಾರೋ ಗೊತ್ತಿಲ್ಲ. ಆದರೆ ಈ ಚಿತ್ರದಲ್ಲಿರುವ ವ್ಯಕ್ತಿ ಹುಲ್ಲು ತಿನ್ನುತ್ತಾರೆ ಎಂದು ಶೀರ್ಷಿಕೆಯನ್ನು ಎರಿಕ್‌ ನೀಡಿದ್ದರಂತೆ.
ಚಿತ್ರ ಕೃಪೆ : Eric Lafforgue

16

ಛಾಯಾಗ್ರಾಹಕರಾದ ಎರಿಕ್‌ ಲಾಫ್ಫೋಗೀ ಗುಟ್ಟಾಗಿ ಸೆರೆಹಿಡಿದ ಫೋಟೋಗಳು

ಉತ್ತರ ಕೊರಿಯಾದ ರಾಷ್ಟ್ರೀಯ ಕ್ರೀಡೆ ಯಾವುದೆಂದರೆ ಸಾಲಿನಲ್ಲಿ ನಿಲ್ಲುವುದು ಅಂತ ಹೇಳಬಹುದು. ಕಾರಣ ಅವರು ಕೆಲಸಕ್ಕೆ ಹೋಗುವಾಗ ಬಸ್‌ ಹತ್ತಲು ಹೀಗೆ ಸಾಲಿನಲ್ಲಿ ನಿಲ್ಲುತ್ತಾರೆ.
ಚಿತ್ರ ಕೃಪೆ : Eric Lafforgue

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌ ಹಿಂದಿರುವ ರಹಸ್ಯವೇನು?

1

2

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The images Kim Jong Un doesn't want you to see: Haunting pictures inside North Korea... taken by a photographer who has now been banned from the rogue state for life. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot