ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌ ಹಿಂದಿರುವ ರಹಸ್ಯವೇನು?

By Suneel
|

ದಿನನಿತ್ಯ ಮಾಧ್ಯಮಗಳನ್ನು ನೋಡುವವರಿಗೆ ಉತ್ತರ ಕೋರಿಯಾದ ಸರ್ವಾಧಿಕಾರಿ ಯಾರು ಅಂತ ಬಹುಶಃ ಗೊತ್ತಿರುತ್ತದೆ. ಗೊತ್ತಿಲ್ಲ ಅಂದ್ರೆ ಮೊದಲು ಅವರ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. ಕಾರಣ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್ ಅಂದ್ರೆ ಅಷ್ಟೊಂದು ವಿಶೇಷ. ಆದ್ರೆ ಯಾವ ರೀತಿ ವಿಶೇಷ ಅಂತ ಮಾತ್ರ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡಿ ತಿಳಿಯಿರಿ. ಟೆಕ್ನಾಲಜಿ ನ್ಯೂಸ್‌ನಲ್ಲಿ ಕಿಮ್‌ ಜಾಂಗ್‌ ಉನ್‌ ಬಗ್ಗೆ ಯಾಕ್‌ ಮಾತಾಡ್ತಿದ್ದಾರೆ ಅಂತ ಪ್ರಶ್ನೆ ನಿಮಗೆ ಈಗಾಗಲೇ ಹುಟ್ಟಿರಬಹುದು ಅಲ್ವಾ.

ಅಂದಹಾಗೆ ಈಗ ಪ್ರಪಂಚದ ದೊಡ್ಡ ಸರ್ವಾಧಿಕಾರಿ ಕಿಮ್‌ ಜಾಂಗ್ ಉನ್ ಬಳಸುತ್ತಿರುವ ಮೊಬೈಲ್‌ ಯಾವುದು ಎಂಬ ಬಗ್ಗೆ ಟಾಪ್‌ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಕುತೂಹಲ ಮೂಡಿದೆಯಂತೆ. ಅದು ಯಾಕೆ ಅಂತ ಮಾತ್ರ ಇನ್ನು ಗೊತ್ತಿಲ್ಲಾ. ಅದ್‌ ಸರಿ ಪ್ರಪಂಚದ ಟಾಪ್‌ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಬಳಸುತ್ತಿರುವ ಮೊಬೈಲ್‌ ಆದ್ರು ಯಾವುದು ? ಯಾಕೆ ಕುತೂಹಲ ಮೂಡುತ್ತಿದೆ? ಎಂಬುದನ್ನು ಲೇಖನದಲ್ಲಿ ಓದಿ.

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಅಂದಹಾಗೆ ಇಮ್‌ ಜಾಂಗ್‌ ಉನ್‌ ದೇಶದ ಭದ್ರತಾ ಸಲಹೆಗಾರರು ಮತ್ತು ವಿದೇಶಿ ವ್ಯವಹಾರ ಅಧಿಕಾರಿಗಳನ್ನು ಯಾರಿಗೂ ಬಹಿರಂಗ ಪಡಿಸದ ಸ್ಥಳದಲ್ಲಿ ಭೇಟಿ ಮಾಡಿದ್ದರಂತೆ. ಆ ಸಂಧರ್ಭದಲ್ಲಿ ಕಿಮ್‌ ಜಾಂಗ್‌ ಡೆಸ್ಕ್‌ ಮೇಲೆ ಇದ್ದ ಮೊಬೈಲ್‌ ಯಾವ ಬ್ರ್ಯಾಂಡ್‌ ಎಂದು ತಿಳಿಯದೇ ಸಭೆಯಲ್ಲಿದ್ದ ಎಲ್ಲರಿಗೂ ಕುತೂಹಲ ಮೂಡಿದೆ.

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಉತ್ತರ ಕೊರಿಯಾದ ಮಾಧ್ಯಮಗಳು ಕಿಮ್‌ ಜಾಂಗ್ ಉನ್‌ ಬಳಸುತ್ತಿದ್ದ ಮೊಬೈಲ್‌ ಫೋಟೋವನ್ನು ಈಗ ಬಿಡುಗಡೆ ಮಾಡಿದ್ದಾರೆ. ಸಭೆಯಲ್ಲಿ ಪರಮಾಣು ಪರೀಕ್ಷೆಯ ಕುರಿತು ಪಯೋಂಗ್ಯಾಂಗ್‌ ಬೆದರಿಕೆ ಕೇಂದ್ರಿಕರಿಸಿತು ಎಂದು ಹೇಳಲಾಗಿದೆ.

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಕಿಮ್‌ ಜಾಂಗ್‌ ಉನ್‌ ಡೆಸ್ಕ್‌ ಮುಂದೆ ಕುಳಿತಿರುವ ನಡುವೆ ಕಿಮ್‌ ಕೈಯಲ್ಲಿ ಸಿಗರೇಟ್ ಮತ್ತು ಬ್ಲಾಕ್‌ ಸ್ಮಾರ್ಟ್‌ಫೋನ್‌ ಒಂದನ್ನು ನೋಡಬಹುದಾಗಿದೆ.

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಕಿಮ್‌ ಜಾಂಗ್‌ ಡೆಸ್ಕ್‌ ಮುಂದಿನ ಡಾಕುಮೆಂಟ್‌ಗಳ ಬಲಭಾಗದಲ್ಲಿ ಕಿಮ್‌ ಮೊಬೈಲ್‌ ಇರಿಸಲಾಗಿತ್ತು. ಆದರೆ ಡಿವೈಸ್ ಯಾವ ಬ್ರ್ಯಾಂಡ್‌ ಎಂದು ತಿಳಿಯಲಿಲ್ಲ ಎಂದು ದಕ್ಷಿಣ ಕೊರಿಯಾದ ಸಿಯಾಲ್‌ ಅಧಿಕಾರಿ ಹೇಳಿದ್ದಾರೆ.

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ದಕ್ಷಿಣ ಕೊರಿಯಾ ಇಮ್‌ ಜಾಂಗ್‌ ಉನ್‌ ಮೊಬೈಲ್‌ನ ಸಂಪೂರ್ಣ ಚಿತ್ರಣ ನೀಡಿದ್ದು ಅದು ಯಾವ ಬ್ರ್ಯಾಂಡ್‌ ಎಂದು ವಾದಕ್ಕೆ ಬಿಡಲಾಗಿತ್ತು. ಆದರೆ ಅದು ದಕ್ಷಿಣ ಕೋರಿಯಾದ ಸ್ಯಾಮ್‌ಸಂಗ್‌,ತೈವಾನ್‌ನ ಎಚ್‌ಟಿಸಿ, ಆಪಲ್‌ನ ಐಫೋನ್‌ ಎಂಬ ಎಲ್ಲಾ ಪರಿಕಲ್ಪನೆಗೆ ಗುರಿಯಾಗಿದೆ.

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಪ್ರಪಂಚದ ಟಾಪ್‌ ಸ್ಮಾರ್ಟ್‌ಫೋನ್‌ ಉತ್ಪಾದಕ ಕಂಪನಿ ಸ್ಯಾಮ್‌ಸಂಗ್‌'ನ ವಕ್ತಾರ ಇದು ಸ್ಯಾಮ್‌ಸಂಗ್‌ ಅಲ್ಲ ಎಂದು ಹೇಳಿದ್ದಾರೆ.

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ದಕ್ಷಿಣ ಕೊರಿಯಾದ ಸಿಯಾಲ್‌ ಸರ್ಕಾರದ ಅಧಿಕಾರಿಗಳು ಮತ್ತು ಗುಪ್ತಚರ ಏಜೆನ್ಸಿ ಮೊಬೈಲ್‌ನ ಚಿತ್ರವನ್ನು ವಿಶ್ಲೇಷಿಸಿ ಅದು ಎಚ್‌ಟಿಸಿ ಉತ್ಪಾದಕರದ್ದು ಎಂದು ಹೇಳಿದ್ದಾರೆ.

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ತೈವಾನ್‌ನ ಎಚ್‌ಟಿಸಿ ಕಂಪನಿಯು ಕಿಮ್‌ ಜಾಂಗ್‌ ಉನ್‌ ಮೊಬೈಲ್‌ ನಮ್ಮ ಕಂಪನಿಯದ್ದು ಅಲ್ಲಾ ಎಂದು ಹೇಳಿದ್ದಾರೆ. ಆದರೆ ಕಂಪನಿ "ನಮಗೆ ಬೆಂಬಲ ನೀಡಿದಕ್ಕೆ ಧನ್ಯವಾದಗಳು" ಎಂದು ಹೇಳಿದೆ.

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಕಿಮ್‌ ಜಾಂಗ್‌ ಉನ್‌ ಮೊಬೈಲ್‌ ಕುರಿತು ದಕ್ಷಿಣ ಕೊರಿಯಾ ನ್ಯೂಸ್‌ ಪೇಪರ್‌ "ಛೂಸನ್‌ ಇಲ್ಬೊ" ಮೊಬೈಲ್‌ ಆಯ್ಕೆಯ ಹಿಂದೆ ರಾಜಕೀಯ ಕೈವಾಡವಿದೆ ಎಂದು ಸಲಹೆ ನೀಡಿದೆ.

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಕಿಮ್‌ ಜಾಂಗ್ ಉನ್‌ಗೆ ಅಮೇರಿಕ ಪ್ರಾಡಕ್ಟ್‌ ಬಳಸುವಲ್ಲಿ ರಾಜಕೀಯವಾಗಿ ಅಹಿತಕರವಾಗಿದೆ. ಅಲ್ಲದೇ ದಕ್ಷಿಣ ಕೋರಿಯ ಟೆಕ್ನಾಲಜಿ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ದಿಹೊಂದಿದ್ದು, ಕಿಮ್‌ ಜಾಂಗ್ ಉನ್‌ ಮೊಬೈಲ್‌ ಬ್ರ್ಯಾಂಡ್ ಯಾವುದು ಎಂದು ಹೇಳಿಲ್ಲ ಎಂದು ಡೈಲಿ ಹೇಳಿದೆ. ಆದ್ದರಿಂದ ಇದು ಆಪಲ್‌ ಫೋನ್ ಸಹ ಅಲ್ಲ. ಹಾಗೆ ಸ್ಯಾಮ್‌ಸಂಗ್‌ ಸಹ ಅಲ್ಲ ಎಂಬುದು ಖಚಿತವಾಗಿದೆ.

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಆಪಲ್‌, ಸ್ಯಾಮ್‌ಸಂಗ್‌ ಎರಡು ಸಹ ಅಲ್ಲ ಎಂದ ಮೇಲೆ ಇದು ತೈವಾನ್‌ ಮೂಲದ ಎಚ್‌ಟಿಸಿ ಅಥವಾ ಹುವಾವೆ ಕಂಪನಿಯಾರಿಗಬೇಕು. ಕಾರಣ ಉತ್ತರ ಕೋರಿಯಾದ ಹತ್ತಿರ ಮಿತ್ರನೆಂದರೆ ಚೀನಾ ಅಲ್ವಾ ಅದಿಕ್ಕೆ.

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಕಿಮ್‌ ಜಾಂಗ್‌ ಉನ್‌ ಮೊಬೈಲ್‌ನಲ್ಲಿ ಡೀಸೆಂಟ್‌ ಇಂಟರ್ನೆಟ್‌ ಆಕ್ಸೆಸ್‌ ಹೊಂದಿದ್ದು, ಅಮೇರಿಕದ ಮೇಲೆ ದಾಳಿ ನಡೆಸುವ ಕುರಿತ ಕನಸಿನ ವಿಚಿತ್ರ ವೀಡಿಯೋ ನೋಡಲು ಬಳಸ ಬಹುದಿತ್ತು. ಆದರೆ ಉತ್ತರ ಕೊರಿಯಾ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ಮರುಭೂಮಿಯಾಗಿದೆ.

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌

ಕಾರಣವಿಷ್ಟೆ: ಪ್ರಪಂಚದ ಸರ್ವಾಧಿಕಾರಿ ಉತ್ತರ ಕೋರಿಯಾದ ಕಿಮ್‌ ಜಾಂಗ್‌ ಉನ್ ಚೀನಾ ಹೊರತು ಪಡಿಸಿದರೆ ಮಿಕ್ಕ ಎಲ್ಲಾ ದೇಶಗಳೊಂದಿಗೆ ವೈರತ್ವ ಇಟ್ಟುಕೊಂಡಿದ್ದಾರೆ. ಆದ್ದರಿಂದ ಮೊಬೈಲ್‌ ಯಾವ ಬ್ರ್ಯಾಂಡ್ ಎಂದು ತಿಳಿಯುವ ಕುತೂಹಲ. ಆದರೂ ಸಹ ಉತ್ತರ ಕೊರಿಯಾ ಸೆನ್ಸಾರ್‌ ಮಾಹಿತಿಯನ್ನು ಹೊಂದಿದೆ ಹೊರತು ಸಂಪೂರ್ಣ ಐಟಿ ರಹಿತವೇನಲ್ಲ. ಬ್ರಾಂಡ್‌ ಯಾವುದು ಎಂದು ತಿಳಿಯದಿದ್ದರೂ ಸಹ ಅವರು ಸ್ಮಾರ್ಟ್‌ಫೋನ್‌ ಬಳಸಿ ಉತ್ತರ ಕೋರಿಯಾದ ಇಂಟರ್ನೆಟ್‌ ಮಾತ್ರ ಬಳಸುತ್ತಿರುವುದು ನಿಜ.

ಗಿಜ್‌ಬಾಟ್‌

ಗಿಜ್‌ಬಾಟ್‌

<strong>ಏರ್‌ಟೆಲ್‌ ಬಳಕೆದಾರರು ಉಚಿತ ಇಂಟರ್ನೆಟ್‌ ಪಡೆಯುವುದು ಹೇಗೆ?</strong>ಏರ್‌ಟೆಲ್‌ ಬಳಕೆದಾರರು ಉಚಿತ ಇಂಟರ್ನೆಟ್‌ ಪಡೆಯುವುದು ಹೇಗೆ?

ಕಂಪ್ಯೂಟರ್‌ ವೇಗಗೊಳಿಸಲು ಕೇವಲ 6 ವಿಧಾನಗಳು ಸಾಕುಕಂಪ್ಯೂಟರ್‌ ವೇಗಗೊಳಿಸಲು ಕೇವಲ 6 ವಿಧಾನಗಳು ಸಾಕು

ಸಿಬಿಎಸ್‌ಇ 12ನೇ ತರಗತಿ ಗಣಿತ ಪ್ರಶ್ನೆ ಪತ್ರಿಕೆ ವಾಟ್ಸಾಪ್‌ನಲ್ಲಿ ಬಹಿರಂಗಸಿಬಿಎಸ್‌ಇ 12ನೇ ತರಗತಿ ಗಣಿತ ಪ್ರಶ್ನೆ ಪತ್ರಿಕೆ ವಾಟ್ಸಾಪ್‌ನಲ್ಲಿ ಬಹಿರಂಗ

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

English summary
What smartphone is North Korean leader Kim Jong-Un using? Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X