ಅಮೇರಿಕದ ಮೇಲೆ ಉತ್ತರ ಕೊರಿಯಾ ನ್ಯೂಕ್ಲಿಯಾರ್ ದಾಳಿ: ವೀಡಿಯೋ ವೈರಲ್‌

By Suneel
|

ದಿನನಿತ್ಯ ದಿನಪತ್ರಿಕೆ ಓದುವವರಿಗೆ ಅಥವಾ ಇಂಟರ್ನೆಟ್‌ನಲ್ಲೇ ಮಾಹಿತಿ ತಿಳಿಯುವವರಿಗೆ ಹಾಗೂ ನ್ಯೂಸ್‌ ಚಾನೆಲ್‌ ನೋಡುವವರಿಗೆ ಬಹುಶಃ ಉತ್ತರ ಕೊರಿಯಾ, ಉತ್ತರ ಕೊರಿಯಾದ ಸರ್ವಾಧಿಕಾರಿ ಯಾರು, ಸರ್ವಾಧಿಕಾರಿಯ ವಿಶೇಷತೆ ಏನು ಎಂದು ತಿಳಿದಿರಬಹುದು. ಅಥವಾ ಇನ್ನೂ ಸಹ ಕೆಲವರಿಗೆ ಉತ್ತರ ಕೊರಿಯಾ ಬಗ್ಗೆ ತಿಳಿದಿಲ್ಲ ಅಂದ್ರೆ, ಸರಳವಾಗಿ ಹೇಳಬೇಕೆಂದರೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್.‌ ಇತರ ದೇಶದ ಸಂಪರ್ಕ ಉತ್ತರ ಕೊರಿಯಾಗೆ ಇಲ್ಲ. ಅದರಲ್ಲೂ ಅಮೇರಿಕ ಅಂದ್ರೆ 'ಕಿಮ್‌ ಜಾಂಗ್‌ ಉನ್'ಗೆ ಎಲ್ಲಿಲ್ಲದ ಕೋಪ. ಅದಕ್ಕೆ ಸಾಕ್ಷಿಯಾಗಿ ಈಗ ಕಿಮ್‌ ಜಾಂಗ್‌ ಉನ್‌ ಅಮೇರಿಕದ 'ವಾಷಿಂಗ್ಟನ್‌ ಡಿಸಿ' ಮೇಲೆ ನ್ಯೂಕ್ಲಿಯಾರ್‌ ಬಾಂಬ್‌ ದಾಳಿ ಮಾಡಿದರೆ ಹೇಗಿರುತ್ತದೆ ಎಂಬ ಪ್ರಚಾರ ವೀಡಿಯೋವನ್ನು ಉತ್ತರ ಕೊರಿಯಾ ಬಿಡುಗಡೆ ಮಾಡಿದೆ. ಅಲ್ಲದೇ ಪ್ರಪಂಚದ ದೊಡ್ಡಣ್ಣನಾರಿರುವ "ಅಮೇರಿಕ ಸಾರ್ವಭೌಮತ್ವಕ್ಕೆ" ‌ಕಿಮ್‌ ಜಾನ್‌ ಉನ್‌ ಸರ್ವಾಧಿಕಾರಿ ಎಚ್ಚರಿಕೆ ನೀಡಿದ್ದಾನೆ. ಉತ್ತರ ಕೊರಿಯಾ ಬಿಡುಗಡೆ ಮಾಡಿದ ವೀಡಿಯೋ ಆದ್ರೂ ಏನು, ಅಮೇರಿಕಕ್ಕೆ ನೀಡಿದ ಎಚ್ಚರಿಕೆ ಏನು ಎಂಬಿತ್ಯಾದಿ ಮಾಹಿತಿಗಳನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

1

1

ಉತ್ತರ ಕೊರಿಯಾ 'Last Chance' ಹೊಸ ಪ್ರಚಾರ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ. ಉತ್ತರ ಕೊರಿಯಾ ಒಂದು ಜಲಾಂತರ್ಗಾಮಿ ಮೂಲಕ ಪರಮಾಣು ಕ್ಷಿಪಣಿಯನ್ನು ಅಮೇರಿಕ 'ವಾಷಿಂಗ್ಟನ್‌ ಡಿಸಿ' ಮೇಲೆ ಆರಿಸಿ ಅಮೇರಿಕದ ಧ್ವಜ ಬೆಂಕಿಯಲ್ಲಿ ಉರಿಯುತ್ತಿರುವುದರೊಂದಿಗೆ ವೀಡಿಯೋ ಕೊನೆಗೊಂಡಿದೆ.
ಚಿತ್ರ ಕೃಪೆ: DPRK Today

2

2

ಉತ್ತರ ಕೊರಿಯಾ ಬಿಡುಗಡೆ ಮಾಡಿರುವ ವೀಡಿಯೋ 4 ನಿಮಿಷವಿದೆ. ವೀಡಿಯೋದಲ್ಲಿ ಅಮೇರಿಕ ಮತ್ತು ಕೊರಿಯಾ ಐತಿಹಾಸಿಕ ಸಂಬಂಧ ಹೇಗಿತ್ತು ಎಂದು ಮತ್ತು ಕೊನೆಯಲ್ಲಿ ಡಿಜಿಟಲ್‌ ಸೃಜನಶೀಲತೆಯಿಂದ ತಯಾರಿಸಿದ 'ಪರಮಾಣು ಬಾಂಬ್ ಆರಿಸಿ ಅದು ವಾಷಿಂಗ್ಟನ್‌ ಲಿಂಕನ್‌ ಸ್ಮಾರಕದ ಮುಂದೆ ಅಪ್ಪಳಿಸುವ"ದೃಶ್ಯವನ್ನು ಒಳಗೊಂಡಿದೆ.
ಚಿತ್ರ ಕೃಪೆ: DPRK Today

3

3

ಅಮೇರಿಕದ ವಾಷಿಂಗ್ಟನ್‌ ಡಿಸಿ ಬಿಲ್ಡಿಂಗ್‌ ಸ್ಟೋಟಗೊಳ್ಳುತ್ತದೆ. ಅದರ ಸಂದೇಶ ಕೊರಿಯಾದ ಪರದೆಯ ಮೇಲೆ ಬೀಳುತ್ತದೆ. ಆಗ ಅಮೇರಿಕದ ಸಾರ್ವಭೌಮತ್ವ ನಮ್ಮ ಕಡೆಗೆ ಬರುತ್ತದೆ. ಆದ್ದರಿಂದ ತಕ್ಷಣ ನಾವು ಪರಮಾಣು ವೆಪನ್‌ಗಳನ್ನು ಅಮೇರಿಕ ಮೇಲೆ ಉಪಯೋಗಿಸಬೇಕು ಎಂದು ಸಹ ಹೇಳಲಾಗಿದೆ.

4

ಉತ್ತರ ಕೊರಿಯಾ ಬಿಡುಗಡೆ ಮಾಡಿರುವ ಪ್ರಚಾರ ವೀಡಿಯೋವನ್ನು ಉತ್ತರ ಕೊರಿಯಾ ಪ್ರಚಾರ ವೆಬ್‌ಸೈಟ್‌ "DPRK" ಅಲ್ಲಿ ಬಿಡುಗಡೆ ಮಾಡಲಾಗಿದೆ.

5

5

ಉತ್ತರ ಕೋರಿಯಾ ವೆಬ್‌ಸೈಟ್‌ ಕೊರಿಯನ್‌ ಯುದ್ಧದ ಚಿತ್ರಗಳನ್ನು ಪ್ರದರ್ಶಿಸುತ್ತದೆ. 1968 ರಲ್ಲಿ ಸೆರೆಹಿಡಿದ ಅಮೇರಿಕಾದ ಪತ್ತೇದಾರಿ ಹಡಗು ಪುಯೆಬ್ಲೊ ಮತ್ತು ಉತ್ತರ ಕೊರಿಯಾದ ಮೊದಲ ಪರಮಾಣು ಕಾರ್ಯಕ್ರಮವನ್ನು ತೋರಿಸುತ್ತದೆ.

6

6

ವೀಡಿಯೋ ತುಣುಕುಗಳು "ಅವಮಾನಕರ ಸೋಲು" ಮತ್ತು ಹಲವು ವರ್ಷಗಳ ನಂತರ ಅಮೇರಿಕ 'ಉತ್ತರ ಕೊರಿಯಾ'ದಿಂದ ಅನುಭವಿಸುವಂತಹ ಡಿಜಿಟಲ್‌ ವಿನ್ಯಾಸ ದೃಶ್ಯಗಳನ್ನು ಹೊಂದಿದೆ.

7

7

"ಅಮೇರಿಕ ಕಡ್ಡಾಯವಾಗಿ ಭೂಮಿಯ ಮೇಲೆ ಇರಬೇಕೋ ಬೇಡವೋ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು" ಎಂದು ವೀಡಿಯೋ ಹೇಳಲಾಗಿದೆ. ಇದು ಎಚ್ಚರಿಕೆಯ ಸಂದೇಶವಾಗಿದೆ.

8

8

ವೀಡಿಯೋದಲ್ಲಿ ತೋರಿಸಲಾದ ಜಲಾಂತರ್ಗಾಮಿ ದೊಡ್ಡ ಕ್ಷಿಪಣಿ ಮೋಡದ ಒಳಗೆ ಹಾರುತ್ತಾ ವಾಷಿಂಗ್ಟನ್‌ ಡಿಸಿ ಕಡೆಗೆ ಹೋಗುತ್ತಿರುವುದು.
ಚಿತ್ರ ಕೃಪೆ: DPRK Today

9

9

ಕ್ಷಿಪಣಿ ಅಮೇರಿಕದ ಲಿಂಕನ್‌ ಸ್ಮಾರಕಕ್ಕೆ ಅಪ್ಪಳಿಸಿ ಸ್ಫೋಟಗೊಂಡು ಕಿತ್ತಳೆ ಮತ್ತು ಕೆಂಪು ಬಣ್ಣದಲ್ಲಿ ಕಾಣುವ ಡಿಜಿಟಲ್‌ ವಿನ್ಯಾಸದ ದೃಶ್ಯ.
ಚಿತ್ರ ಕೃಪೆ: DPRK Today

10

10

ಅಮೇರಿಕದ ರಾಜಧಾನಿ ಬಿಲ್ಡಿಂಗ್ ಸ್ಫೋಟಗೊಂಡು ಅದರ ಪರಿಣಾಮ ವೀಡಿಯೋ ಮತ್ತು ಸಂದೇಶ ಉತ್ತರ ಕೊರಿಯಾದ ಪರದೆ ಮೇಲೆ ಹೇಗೆ ಕಾಣುತ್ತದೆ ವಾಸ್ತವವಾಗಿ ದಾಳಿ ಮಾಡಿದರೆ ಎಂದು ತೋರಿಸುವ ದೃಶ್ಯ.
ಚಿತ್ರ ಕೃಪೆ: DPRK Today

11

11

ಉತ್ತರ ಕೋರಿಯಾ ಪರೀಕ್ಷಿಸದ ಮಾಧ್ಯಮವೊಂದು ಅಲ್ಲಿನ ಬಹುದೂರದ ಫಿರಂಗಿಗಳ ತಂಗುದಾಣದ ಸ್ಥಳವನ್ನು ಬಹಿರಂಗ ಪಡಿಸಿದ ಚಿತ್ರವಿದು.
ಚಿತ್ರ ಕೃಪೆ : AFP/Getty images

ಗಿಜ್‌ಬಾಟ್‌

ಗಿಜ್‌ಬಾಟ್‌

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌ ಹಿಂದಿರುವ ರಹಸ್ಯವೇನು?ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌ ಹಿಂದಿರುವ ರಹಸ್ಯವೇನು?

ಉತ್ತರ ಕೊರಿಯಾದಲ್ಲಿ ಗುಟ್ಟಾಗಿ ಸೆರೆಹಿಡಿದ ಫೋಟೋ: ನೋಡುವಂತಿಲ್ಲಾ ಏಕೆ?ಉತ್ತರ ಕೊರಿಯಾದಲ್ಲಿ ಗುಟ್ಟಾಗಿ ಸೆರೆಹಿಡಿದ ಫೋಟೋ: ನೋಡುವಂತಿಲ್ಲಾ ಏಕೆ?

10 ಲಕ್ಷ ಅಶ್ಲೀಲ ವೀಡಿಯೋ/ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೈಡ್‌10 ಲಕ್ಷ ಅಶ್ಲೀಲ ವೀಡಿಯೋ/ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೈಡ್‌

ಶಾಲೆ ಬಿಟ್ಟು ವಿದ್ಯುತ್‌ ರಹಿತ ಮಣ್ಣಿನ ಫ್ರಿಜ್ ತಯಾರಿಸಿದ ಭಾರತೀಯ ಶಾಲೆ ಬಿಟ್ಟು ವಿದ್ಯುತ್‌ ರಹಿತ ಮಣ್ಣಿನ ಫ್ರಿಜ್ ತಯಾರಿಸಿದ ಭಾರತೀಯ

ಗಿಜ್‌ಬಾಟ್‌

ಗಿಜ್‌ಬಾಟ್‌

ಫೇಸ್‌ಬುಕ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
North Korea propaganda video depicts nuclear attack on America. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X