Home
ಫೀಚರ್ ಸ್ಟೋರೀಸ್

ಆಧುನಿಕ ಟೆಕ್‌ನೊಂದಿಗೆ ಜನರು; ವ್ಯಂಗ್ಯಚಿತ್ರಗಳಲ್ಲಿ ಕಾಣಿಸಿದ್ದು ಹೀಗೆ!

By Suneel

ಗೂಗಲ್‌, ಮೊಬೈಲ್‌, ಲ್ಯಾಪ್‌ಟಾಪ್ ಮತ್ತು ಟೆಲಿವಿಷನ್‌ಗಳನ್ನು ಕೇವಲ ಒಂದು ವಾರ ಬಳಸದೇ ಹಾಗೆ ಇದ್ದಲ್ಲಿ, ನಾವು ಹೇಗ್‌ ಆಗಿರ್‌ತ್ತೀವಿ ಅನ್ನೋದನ್ನ ಒಮ್ಮೆ ಕಲ್ಪಿಸಿಕೊಳ್ಳಲು ಆಗೋದಿಲ್ಲ.

ಅಂದಹಾಗೆ ದಿನನಿತ್ಯದ ಅಲಾರಂಗಾಗಿ, ಮೇಲ್‌ಗಳನ್ನು ಚೆಕ್‌ ಮಾಡುವುದಕ್ಕಾಗಿ, ಫೋನ್‌ನಂಬರ್‌ಗಳಿಗಾಗಿ, ಫೋಟೋಗಳನ್ನು ನೆನಪಿಗಾಗಿ ಇಟ್ಟುಕೊಳ್ಳಲು ಬಳಸುವುದಲ್ಲದೇ, ಸೆಲ್ಫಿ ಬಂದಮೇಲೆ ಸ್ಮಾರ್ಟ್‌ಫೋನ್‌ಗಳೇ ಮಿರರ್‌ಗಳಾಗಿವೆ. ಕೇವಲ ಇಂತಹ ಕೆಲಸಗಳಿಗಾಗಿ ಮಾತ್ರವಲ್ಲದೇ ಟೆಕ್ನಾಲಜಿ ಇಂದು ಪ್ರಮುಖ ಕರ್ತವ್ಯಗಳನ್ನು, ಕೆಲಸಗಳನ್ನು, ಸ್ನೇಹಿತರ ಹುಟ್ಟುಹಬ್ಬದ ದಿನ ನೆನಪಿಸಲು ಸಹ ಸಹಾಯಕವಾಗಿದೆ. ಅಲ್ಲದೇ ಜನರನ್ನು ನೆನಪುಮಾಡಿಕೊಳ್ಳುವ ವಿಷಯದಲ್ಲಿ ಲೇಜಿ ಮಾಡಿದೆ. ಈ ಎಲ್ಲಾ ವಿಷಯಗಳಿಂದ ಟೆಕ್ನಾಲಜಿಯನ್ನು ಅವಲಂಭಿಸಿದ್ದೇವೆ.

ಪ್ರಸ್ತುತದಿನಗಳಲ್ಲಿ ಜನರು ಆಧುನಿಕ ಟೆಕ್ನಾಲಜಿಗೆ ಹೇಗೆ ಒಗ್ಗಿಕೊಂಡಿದ್ದಾರೆ, ಮೊಬೈಲ್‌ ಮತ್ತು ಸಾಮಾಜಿಕ ತಾಣಗಳಿಗೆ ಹೇಗೆ ತಪ್ಪಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದನ್ನು ಫ್ರೆಂಚ್‌ ಚಿತ್ರಕಲಾಕಾರ 'ಜೀನ್‌ ಜುಲ್ಲೈನ್'‌ ಕಾರ್ಟೂನ್‌ ರಚಿಸಿ ತೋರಿಸಿದ್ದಾರೆ. ಟೆಕ್ನಾಲಜಿಯನ್ನು ಬಳಸುವ ಪ್ರತಿಯೊಬ್ಬರು ನಿಮ್ಮನ್ನು ನೀವು ಕಾರ್ಟೂನ್‌ಗಳಲ್ಲಿ ಹೇಗೆ ಕಾಣುತ್ತೀರಿ ಎಂದು ನೋಡಿಕೊಳ್ಳಲು ಉತ್ತಮ ಅವಕಾಶ. ಪ್ರತಿಯೊಂದು ಸ್ಲೈಡರ್‌ಗಳಲ್ಲಿನ ಕಾರ್ಟೂನ್‌ ಚಿತ್ರ ನೋಡಿ ನಿಮಗೆ ನೀವು ಸಹ ವಿಶ್ಲೇಷಿಸಿಕೊಳ್ಳಬಹುದು.
ಚಿತ್ರ ಕೃಪೆ:www.scoopwhoop.com

ಮನೆಯಲ್ಲೇ ನೀರಿನಿಂದ ಬಿಯರ್‌ ತಯಾರಿಸುವ ಮಷಿನ್

1

1

ವಾಚ್ ಬದಲು ಈಗ ಮೊಬೈಲ್‌

2

2

ಅಂದಹಾಗೆ ಮೆದುಳಲ್ಲಿ ಮಾಹಿತಿ ತುಂಬಿರುತ್ತೋ ಇಲ್ವೋ, ಆದ್ರೆ ಮೊಬೈಲ್‌ನಲ್ಲಿ ಮೆಸೇಜ್‌ಗಳಂತು ತುಂಬಿರುತ್ತದೆ.

3

3

ಆರೋಗ್ಯಕ್ಕೆ ಆಪಲ್‌(ಸೇಬು) ಒಳ್ಳೆಯದು. ಆಪಲ್‌ ತಿನ್ನುತ್ತಾರೋ ಇಲ್ವೋ ಡೌಟ್‌, ಆದ್ರೆ ಆಪಲ್‌ ಐಫೋನ್‌ ಬಹುಸಂಖ್ಯಾತರ ಹತ್ತಿರ ಇರುತ್ತೆ.

4

4

ಟೆಕ್ನಾಲಜಿ ಜನರನ್ನು ಹೀಗೆ ತಲೆ ಇಲ್ಲದಂತೆ ಮಾಡುತ್ತಿದೆಯಾ? ನಿಮಗೆ ನೀವೇ ಕೇಳಿಕೊಳ್ಳಿ.

5

5

ಹೆಚ್ಚು ಟೆಕ್ನಾಲಜಿಯೊಂದಿಗೆ ಒಗ್ಗಿಕೊಂಡಲ್ಲಿ ಮಕ್ಕಳ ಮತ್ತು ತಾಯಿ ನಡುವೆ ಭಾಂದವ್ಯ ಹೇಗೆ ಇರುತ್ತೆ ನೋಡಿ.

6

6

ಊಟ ಮಾಡುವಾಗಲು ಆಹಾರದಲ್ಲಿ ಏನಿದೆ ಅಂತ ಜೂಮ್‌ ಹಾಕಿನೋಡುವವರು. ಯಾಕ್‌ ಹೀಗೆ ನೋಡ್ತಾಯಿರಬಹುದು?

7

7

ಸೆಲ್ಫಿ ಬಂದಮೇಲೆ ಯಾರು ಯಾರ್‌ ಫೋಟೋ ಕ್ಯಾಪ್ಚರ್ ಮಾಡ್ತಿದ್ದಾರೆ ಅಂತಾನೇ ತಿಳಿತಿಲ್ಲ.

8

8

ವಾಸ್ತವಕ್ಕಿಂತ ಡಿಜಿಟಲ್‌ನಲ್ಲಿ ನೋಡೋದೆ ಇಷ್ಟವಾಗುತ್ತಿದೆ ಎಲ್ಲರಿಗೂ.

9

9

ಈ ಕಾರ್ಟೂನ್‌ನಲ್ಲಿ ವಿಭಿನ್ನವಾಗಿ ಕಾಣುತ್ತಿರುವುದು ಯಾರು?

10

10

ಈ ಕಾರ್ಟೂನ್‌ ಬಗ್ಗೆ ನೀವೇ ವಿಶ್ಲೇಷಿಸಿಕೊಳ್ಳಿ.

11

11

ಯಾರ್‌ ಯಾರ್‌ QR ಕೋಡ್‌ ಹೇಗೇಗೆ ಇರಬೇಕು ಅಂತ ಅವರೇ ರಚಿಸಿಕೊಳ್ಳಬಹುದು.

12

12

ಊಟಕ್ಕಿಂತ ಹೆಚ್ಚಾಗಿ ಮೊಬೈಲ್‌ನಲ್ಲಿ ಇತರ ತಲೆ ತಿನ್ನೋರೆ ಹೆಚ್ಚಾಗಿದ್ದಾರೆ ಅನಿಸುತ್ತೆ.

13

13

ಟೆಕ್ನಾಲಜಿಯನ್ನು ಮಿತಿಮೀರಿ ಬಳಸಿಕೊಂಡು ಕಂಪ್ಯೂಟರ್‌ನಲ್ಲೇ ಕೈ ಹಿಡಿದು, ಕಂಪ್ಯೂಟರ್‌ನಲ್ಲೇ ಕೈಎತ್ತುವವರು ಇದ್ದಾರೆ.

14

14

ಟೆಕ್ನಾಲಜಿಯಿಂದ ಟ್ರೆಂಡಿಂಗ್ ಅನ್ನೋದು ಹೊಸಹೊಸದಾಗಿ ಹುಟ್ಟಿಕೊಳ್ಳುತ್ತೆ. ಈ ಚಿತ್ರ ನೋಡಿದ್ರೆ ತಿಳಿಯುತ್ತೆ.

15

15

ನ್ಯೂಸ್‌ ಓದುವುದರಲ್ಲಿ ಹೇಗೇಗೆ ಬದಲಾವಣೆ ಆಗಿದೆ ಚಿತ್ರ ನೋಡಿ.

Best Mobiles in India

English summary
These Cartoons Capturing Our Addiction With Modern Technology Are Spot On. Read more about this in kannada.gizbto.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+