Home
ಮೊಬೈಲ್

ಇಎಮ್ಐ ದರವಿಲ್ಲದೆ ಖರೀದಿಸಿ ಟಾಪ್ 10 ಸ್ಮಾರ್ಟ್‌ಫೋನ್ಸ್

By Shwetha

ಸ್ಮಾರ್ಟ್‌ಫೋನ್‌ಗೆ ಇಂದಿನ ದಿನಗಳಲ್ಲಿ ದೊರೆಯುತ್ತಿರುವ ಬೇಡಿಕೆಯನ್ನು ಗಮನಿಸುವಾಗ ಬಳಕೆದಾರರು ಹೆಚ್ಚಿನ ಆದ್ಯತೆಗಳನ್ನು ತಮ್ಮ ಮೆಚ್ಚಿನ ಡಿವೈಸ್‌ಗಳನ್ನು ಖರೀದಿಸುತ್ತಿರುವುದನ್ನು ಇಲ್ಲಿ ಕಂಡುಕೊಳ್ಳಬಹುದಾಗಿದೆ. ಅದಾಗ್ಯೂ ದರಕಡಿತ, ವಿಶೇಷ ಆಫರ್‌ಗಳು, ಹಬ್ಬದ ಖರೀದಿ ಇಂತಹ ಡೀಲ್‌ಗಳ ಸಮಯದಲ್ಲೂ ಫೋನ್ ಖರೀದಿದಾರರು ಮೆಚ್ಚಿನ ಡಿವೈಸ್‌ಗಳಿಗಾಗಿ ಆನ್‌ಲೈನ್ ಅನ್ನು ತಡಕಾಡುತ್ತಾರೆ.

ಬಳಕೆದಾರರ ಇಂತಹ ಮನದಿಂಗಿತವನ್ನೇ ಕಂಡುಕೊಂಡು ರೀಟೈಲ್ ತಾಣಗಳು ಅದ್ಭುತ ಆಫರ್‌ಗಳನ್ನು ಪ್ರಸ್ತುತಪಡಿಸುವುದರ ಮೂಲಕ ಬಳಕೆದಾರರ ಮನವನ್ನು ಆಕರ್ಷಿಸಿಕೊಳ್ಳುತ್ತಿವೆ. ಆನ್‌ಲೈನ್ ಡೀಲ್ ಎಂದಾಗ ಬಳಕೆದಾರರು ಆನ್‌ಲೈನ್‌ನಲ್ಲಿಯೇ ತಮಗೆ ಬೇಕಾದ ಡಿವೈಸ್‌ಗಳನ್ನು ಮತ್ತು ಆಫರ್‌ಗಳನ್ನು ಕಂಡುಕೊಳ್ಳಬಹುದಾಗಿದೆ. ಪ್ರಸ್ತುತ ಅಮೆಜಾನ್ ಕೂಡ 'ಗ್ರೇಟ್ ಇಂಡಿಯನ್ ಫೆಸ್ಟಿವಲ್' ಎಂಬ ಡೀಲ್ ಅನ್ನು ಹಬ್ಬದ ಸೀಸನ್‌ಗಾಗಿಯೇ ಪ್ರಸ್ತುತಪಡಿಸಿದ್ದು ಇಲ್ಲಿ ಹೆಚ್ಚಿನ ಟಾಪ್ ಡಿವೈಸ್‌ಗಳನ್ನು ವಿನಾಯಿತಿ ದರದಲ್ಲಿ ಫೋನ್ ಪ್ರಿಯರಿಗೆ ಖರೀದಿಸಿಕೊಳ್ಳಬಹುದಾಗಿದೆ.

ಓದಿರಿ: ಅಮೆಜಾನ್ ಸೇಲ್: ಹೊಸ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮೇಲೆ ವಿನಾಯಿತಿ

ಇಂದಿನ ಲೇಖನದಲ್ಲಿ ಅಮೆಜಾನ್ ಬಳಕೆದಾರರಿಗೆ 0% ಇಎಮ್ಐ ದರದಲ್ಲಿ ಟಾಪ್ ಡಿವೈಸ್‌ಗಳ ಮಾಹಿತಿಯನ್ನು ನೀಡುತ್ತಿದೆ. ಇದರಿಂದ ಇಂಟ್ರೆಸ್ಟ್ ದರವಿಲ್ಲದೆ ಮಾಸಿಕ ಪಾವತಿಯನ್ನು ಮಾಡುವುದರ ಮೂಲಕ ಡಿವೈಸ್‌ಗಳ ಖರೀದಿ ಮಾಡಬಹುದಾಗಿದೆ. ಹಾಗಿದ್ದರೆ 0% ಇಎಮ್ಐ ದರದ ಡಿವೈಸ್‌ಗಳು ಯಾವುವು ಎಂಬುದನ್ನು ಇಂದಿಲ್ಲಿ ಕಂಡುಕೊಳ್ಳೋಣ.

ಆಪಲ್ ಐಫೋನ್ 7

ಆಪಲ್ ಐಫೋನ್ 7

ರೂ 70,000 ದಲ್ಲಿ ಆಪಲ್ ಐಫೋನ್ 7 ಲಭ್ಯವಾಗುತ್ತಿದ್ದು 0% ಇಎಮ್ಐ ದರದಲ್ಲಿ ನಿಮಗೆ ಇದನ್ನು ಖರೀದಿಸಬಹುದಾಗಿದೆ. ನಿಮ್ಮ ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ರೂ 11,000 ಕ್ಯಾಶ್ ಬ್ಯಾಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. 4.7 ಇಂಚಿನ ರೆಟೀನಾ 3ಡಿ ಟಚ್ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ ಮತ್ತು ಹೋಮ್ ಬಟನ್ 1334 x750 ರೆಸಲ್ಯೂಶನ್, 2ಜಿಬಿ RAM, 128 ಜಿಬಿ ಎಸ್‌ಡಿ ಕಾರ್ಡ್, 12ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 7 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಹೊಂದಿದೆ.

ಲೆನೊವೊ Z2 ಪ್ಲಸ್

ಲೆನೊವೊ Z2 ಪ್ಲಸ್

ಬೆಲೆ ರೂ 19,999 ಆಗಿದ್ದು, ಹೆಚ್ಚುವರಿ ಕ್ಯಾಶ್ ಬ್ಯಾಕ್ 15% ಅನ್ನು ಎಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ನಿಮಗೆ ಪಡೆದುಕೊಳ್ಳಬಹುದಾಗಿದೆ. 5 ಇಂಚಿನ ಎಲ್‌ಸಿಡಿ ಕ್ಯಾಪಸಿಟೀವ್ ಟಚ್ ಸ್ಕ್ರೀನ್, 13 ಎಮ್‌ಪಿ ರಿಯರ್ ಕ್ಯಾಮೆರಾ, 8 ಎಮ್‌ಪಿ ಮುಂಭಾಗ ಕ್ಯಾಮೆರಾ, ಆಂಡ್ರಾಯ್ಡ್ 6.0.1., 3500mAh ಬ್ಯಾಟರಿ ಇದರಲ್ಲಿದೆ.

ಮೋಟೋ ಜಿ ಪ್ಲಸ್

ಮೋಟೋ ಜಿ ಪ್ಲಸ್

ಈ ವರ್ಷದ ಮೇನಲ್ಲಿ ಘೋಷಣೆಗೊಂಡಿರುವ ಮೋಟೋ ಜಿ ಪ್ಲಸ್ 4ನೇ ಜನರೇಶನ್ ಸ್ಮಾರ್ಟ್‌ಫೋನ್ ಆಗಿ ಮೋಟೋ ಜಿ ಸಿರೀಸ್‌ನಲ್ಲಿ ಬಂದಿದೆ. 3ಜಿಬಿ RAM, ಸ್ನ್ಯಾಪ್‌ಡ್ರ್ಯಾಗನ್ 617 ಪ್ರೊಸೆಸರ್, 16 ಎಮ್‌ಪಿ ರಿಯರ್ ಕ್ಯಾಮೆರಾ. ಫಿಂಗರ್ ಪ್ರಿಂಟ್ ಸೆನ್ಸಾರ್‌ನೊಂದಿಗೆ ಬಂದಿರುವ ಪ್ರಥಮ ಮೋಟೋರೋಲಾ ಸ್ಮಾರ್ಟ್‌ಫೋನ್ ಕೂಡ ಇದಾಗಿದೆ. ಇದರ ಮೂಲ ಬೆಲೆ ರೂ 14,999 ಆಗಿದ್ದು, ಮಾರಾಟ ಬೆಲೆ ರೂ 13,499 ಎಂದೆನಿಸಿದೆ. ನಿಮಗೆ 15% ಕ್ಯಾಶ್ ಬ್ಯಾಕ್ ಅನ್ನು ಎಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ನಿಮಗೆ ಪಡೆದುಕೊಳ್ಳಬಹುದಾಗಿದೆ.

ಒನ್ ಪ್ಲಸ್ 3

ಒನ್ ಪ್ಲಸ್ 3

ಒನ್ ಪ್ಲಸ್ 3 ಮೂಲ ಬೆಲೆ ರೂ 27,999 ಆಗಿದ್ದು ಎಚ್‌ಡಿಎಫ್‌ಸಿ ಕ್ಯಾಶ್ ಬ್ಯಾಕ್ 15% ಅನ್ನು ನಿಮಗೆ ಡಿವೈಸ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ. 16 ಎಮ್‌ಪಿ ಪ್ರೈಮರಿ ಕ್ಯಾಮೆರಾ, 8 ಎಮ್‌ಪಿ ಮುಂಭಾಗ ಕ್ಯಾಮೆರಾ ಇದರಲ್ಲಿದೆ. 5. 5 ಇಂಚಿನ ಅಮೋಲೆಡ್ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಅನ್ನು ಡಿವೈಸ್ ಪಡೆದುಕೊಂಡಿದೆ. ಮಾರ್ಶ್ ಮಲ್ಲೊ 6.0.1. ಓಎಸ್ ಈ ಡಿವೈಸ್‌ನಲ್ಲಿದ್ದು 64 ಜಿಬಿ ಆಂತರಿಕ ಮೆಮೊರಿಯನ್ನು ಫೋನ್ ಹೊಂದಿದೆ.

ಮೋಟೋ ಜಿ ಪ್ಲೇ

ಮೋಟೋ ಜಿ ಪ್ಲೇ

0% ಇಎಮ್ಐ ಯೊಂದಿಗೆ ಹೆಚ್‌ಡಿಎಫ್‌ಸಿ ಹೆಚ್ಚುವರಿ ಕ್ಯಾಶ್ ಬ್ಯಾಕ್ 15% ವನ್ನು ಈ ಡಿವೈಸ್ ಖರೀದಿಯಲ್ಲಿ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಬೆಲೆ ರೂ 8,999 ಆಗಿದ್ದು 8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಪಡೆದುಕೊಂಡಿದೆ. 5 ಇಂಚಿನ ಎಚ್‌ಡಿ ಡಿಸ್‌ಪ್ಲೇ, 6.0.1 ಮಾರ್ಶ್ ಮಲ್ಲೊ, 2ಜಿಬಿ RAM, 16 ಜಿಬಿ ಆಂತರಿಕ ಮೆಮೊರಿ, 2800mAh ಬ್ಯಾಟರಿ ಇದರಲ್ಲಿದೆ.

ಸ್ಯಾಮ್‌ಸಂಗ್ ಆನ್7 ಪ್ರೊ

ಸ್ಯಾಮ್‌ಸಂಗ್ ಆನ್7 ಪ್ರೊ

0% ಇಎಮ್ಐ ಯೊಂದಿಗೆ ಹೆಚ್‌ಡಿಎಫ್‌ಸಿ ಹೆಚ್ಚುವರಿ ಕ್ಯಾಶ್ ಬ್ಯಾಕ್ 15% ವನ್ನು ಈ ಡಿವೈಸ್ ಖರೀದಿಯಲ್ಲಿ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಆನ್7 ಪ್ರೊ ಸ್ಯಾಮ್‌ಸಂಗ್‌ನ ಬೆಲೆ ಕಡಿತ ಆಫರ್‌ಗೆ ಉತ್ತಮ ಉದಾಹರಣೆ ಎಂದೆನಿಸಿದ್ದು ಉತ್ತಮ ಬ್ಯಾಟರಿ ಲೈಫ್ ಉಳ್ಳ ಡಿವೈಸ್ ಅನ್ನು ಕೈಗೆಟಕುವ ದರದಲ್ಲಿ ನೀಡುತ್ತಿದೆ. ಸ್ಮಾರ್ಟ್‌ಫೋನ್ ಬೆಲೆ ರೂ 11,190 ಆಗಿದ್ದು, ಅಮೆಜಾನ್ 15 ಶೇಕಡಾ ಕಡಿತದಲ್ಲಿ ಡಿವೈಸ್ ಅನ್ನು ಒದಗಿಸುತ್ತಿದೆ. ಸ್ಮಾರ್ಟ್‌ಫೋನ್ ಬೆಲೆ ರೂ 9,990 ಆಗಿದೆ.

ಶ್ಯೋಮಿ ಎಮ್ಐ ಮ್ಯಾಕ್ಸ್

ಶ್ಯೋಮಿ ಎಮ್ಐ ಮ್ಯಾಕ್ಸ್

0% ಇಎಮ್ಐ ಯೊಂದಿಗೆ ಹೆಚ್‌ಡಿಎಫ್‌ಸಿ ಹೆಚ್ಚುವರಿ ಕ್ಯಾಶ್ ಬ್ಯಾಕ್ 15% ವನ್ನು ಈ ಡಿವೈಸ್ ಖರೀದಿಯಲ್ಲಿ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ರೂ 13,999 ಕ್ಕೆ ಈ ಡಿವೈಸ್ ಅಮೆಜಾನ್‌ನಲ್ಲಿ ಲಭ್ಯವಾಗುತ್ತಿದ್ದು 6.44 ಇಂಚಿನ ಐಪಿಎಸ್ ಕ್ಯಾಪಸಿಟೀವ್ ಟಚ್ ಸ್ಕ್ರೀನ್, ಆಂಡ್ರಾಯ್ಡ್ 6.0.1 ಮಾರ್ಶ್ ಮಲ್ಲೊವನ್ನು ಡಿವೈಸ್ ಒಳಗೊಂಡಿದೆ. 16 ಎಮ್‌ಪಿ ಪ್ರೈಮರಿ ಕ್ಯಾಮೆರಾ, 5 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಪಡೆದಿದೆ.

ಲೆನೊವೊ Zuk Z1

ಲೆನೊವೊ Zuk Z1

ಈ ಡಿವೈಸ್ ಬೆಲೆ ರೂ 12,499 ಆಗಿದ್ದು ಹೆಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಗರಿಷ್ಟ 1500 ಕ್ಯಾಶ್ ಬ್ಯಾಕ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. 0%ಇಎಮ್ಐ ದರದಲ್ಲಿ ಈ ಡಿವೈಸ್ ಲಭ್ಯವಾಗುತ್ತಿದ್ದು 5.5 ಇಂಚಿನ ಸ್ಕ್ರೀನ್, ಆಂಡ್ರಾಯ್ಡ್ ಆವೃತ್ತಿ 5.1.1 ಅನ್ನು ಡಿವೈಸ್ ಒಳಗೊಂಡಿದೆ. 3ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ, ರಿಯರ್ ಕ್ಯಾಮೆರಾ 13 ಎಮ್‌ಪಿ, 8 ಎಮ್‌ಪಿ ಮುಂಭಾಗ ಕ್ಯಾಮೆರಾ ಇದರಲ್ಲಿದೆ.

ಆಪಲ್ ಐಫೋನ್ 6ಎಸ್

ಆಪಲ್ ಐಫೋನ್ 6ಎಸ್

ಈ ಡಿವೈಸ್ ಬೆಲೆ ರೂ 39,499 ಆಗಿದ್ದು ಹೆಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಗರಿಷ್ಟ 1500 ಕ್ಯಾಶ್ ಬ್ಯಾಕ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. 0%ಇಎಮ್ಐ ದರದಲ್ಲಿ ಈ ಡಿವೈಸ್ ಲಭ್ಯವಾಗುತ್ತಿದ್ದು 4.7 ಇಂಚಿನ ಸ್ಕ್ರೀನ್, ಐಓಎಸ್ 9 ಆವೃತ್ತಿಯನ್ನು ಡಿವೈಸ್ ಒಳಗೊಂಡಿದೆ. 2 ಜಿಬಿ RAM, 16 ಜಿಬಿ ಆಂತರಿಕ ಮೆಮೊರಿ, ರಿಯರ್ ಕ್ಯಾಮೆರಾ 12 ಎಮ್‌ಪಿ, 5 ಎಮ್‌ಪಿ ಮುಂಭಾಗ ಕ್ಯಾಮೆರಾ ಇದರಲ್ಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್

ಈ ಡಿವೈಸ್ ಬೆಲೆ ರೂ 50,900 ಆಗಿದ್ದು ಹೆಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಗರಿಷ್ಟ 1500 ಕ್ಯಾಶ್ ಬ್ಯಾಕ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. 0%ಇಎಮ್ಐ ದರದಲ್ಲಿ ಈ ಡಿವೈಸ್ ಲಭ್ಯವಾಗುತ್ತಿದ್ದು 5.5 ಇಂಚಿನ ಸ್ಕ್ರೀನ್, ಆಂಡ್ರಾಯ್ಡ್ ಆವೃತ್ತಿ 6 ಮಾರ್ಶ್ ಮಲ್ಲೊವನ್ನು ಡಿವೈಸ್ ಒಳಗೊಂಡಿದೆ. 4 ಜಿಬಿ RAM, 32 ಜಿಬಿ ಆಂತರಿಕ ಮೆಮೊರಿ ಇದನ್ನು 200 ಜಿಬಿಗೆ ವಿಸ್ತರಿಸಬಹುದು, ರಿಯರ್ ಕ್ಯಾಮೆರಾ 12 ಎಮ್‌ಪಿ, 5 ಎಮ್‌ಪಿ ಮುಂಭಾಗ ಕ್ಯಾಮೆರಾ ಇದರಲ್ಲಿದೆ.

ಸೋನಿ ಎಕ್ಸ್‌ಪೀರಿಯಾ ಎಕ್ಸ್ಎ ಡ್ಯುಯಲ್

ಸೋನಿ ಎಕ್ಸ್‌ಪೀರಿಯಾ ಎಕ್ಸ್ಎ ಡ್ಯುಯಲ್

ಈ ಡಿವೈಸ್ ಬೆಲೆ ರೂ 17,399 ಆಗಿದ್ದು ಹೆಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಗರಿಷ್ಟ 1500 ಕ್ಯಾಶ್ ಬ್ಯಾಕ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. 0%ಇಎಮ್ಐ ದರದಲ್ಲಿ ಈ ಡಿವೈಸ್ ಲಭ್ಯವಾಗುತ್ತಿದ್ದು 5 ಇಂಚಿನ ಸ್ಕ್ರೀನ್, ಆಂಡ್ರಾಯ್ಡ್ ಆವೃತ್ತಿ 6.0.1 ಮಾರ್ಶ್ ಮಲ್ಲೊವನ್ನು ಡಿವೈಸ್ ಒಳಗೊಂಡಿದೆ. 2 ಜಿಬಿ RAM, 16 ಜಿಬಿ ಆಂತರಿಕ ಮೆಮೊರಿ ಇದನ್ನು 200 ಜಿಬಿಗೆ ವಿಸ್ತರಿಸಬಹುದು, ರಿಯರ್ ಕ್ಯಾಮೆರಾ 13 ಎಮ್‌ಪಿ, 8 ಎಮ್‌ಪಿ ಮುಂಭಾಗ ಕ್ಯಾಮೆರಾ ಇದರಲ್ಲಿದೆ.

Click here to buy Mobile Accessories at up to 65% Discount

Click here to buy International Branded Gadgets at up to 50 Percent Discount

Click here to buy TVs at up to 40 Percent Discount

Best Mobiles in India

English summary
Amazon great Indian festival Buy Top 10 Smartphones at 0% EMI..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+