Home
ಮೊಬೈಲ್

ಅಕ್ಟೋಬರ್‌ನಲ್ಲಿ ಆಂಡ್ರಾಯ್ಡ್ ಕಿಟ್‌ಕ್ಯಾಟ್‌ ಓಎಸ್‌ ಬಿಡುಗಡೆ!

By Ashwath

ಆಪಲ್‌ ಐಓಎಸ್‌7 ಮೊನ್ನೆ ವಿಶ್ವದೆಲ್ಲೆಡೆ ಬಿಡುಗಡೆಯಾಗಿದೆ.ಈಗ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಸರದಿ.ಗೂಗಲ್‌ ಈಗಾಗಲೇ ಮುಂದೆ ಬರಲಿರುವ ಆಂಡ್ರಾಯ್ಡ್‌ ಓಎಸ್‌ಗೆ ಕಿಟ್‌ಕ್ಯಾಟ್‌ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ.ಆದರೆ ಇದು ಯಾವಾಗ ಅಧಿಕೃತವಾಗಿ ಮಾರಕಟ್ಟೆಗ ಬರಲಿದೆ ಎನ್ನುವುದನ್ನು ಇದುವರೆಗೂ ತಿಳಿಸಿರಲಿಲ್ಲ.ಆದರೆ ಮುಂದಿನ ತಿಂಗಳು ಗೂಗಲ್‌ ಹೊಸ ಆಂಡ್ರಾಯ್ಡ್‌ ಓಎಸ್‌ನ್ನು ಬಿಡುಗಡೆ ಮಾಡಲಿದೆಯಂತೆ!

ಈ ಸಂಬಂಧ ಜರ್ಮನಿಯ ನೆಸ್ಟ್ಲೆಯ ಫೇಸ್‌ಬುಕ್‌ ಪೇಜ್‌ನಲ್ಲಿ ಹೊಸ ಆಂಡ್ರಾಯ್ಡ್ ಕಿಟ್‌ಕ್ಯಾಟ್‌ ಓಎಸ್‌ ಬಗ್ಗೆ ಮಾಹಿತಿ ಪ್ರಕಟಿಸಿದ್ದು ಮುಂದಿನ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಿದೆ ಎಂದು ಹೇಳಿದೆ. ಆದರೆ ಗೂಗಲ್‌ ಈ ಸುದ್ದಿಯ ಬಗ್ಗೆ ಎಲ್ಲಿಯೂ ಮಾಹಿತಿ ಪ್ರಕಟಿಸಿಲ್ಲ. ಸದ್ಯದಲ್ಲೇ ಮಾಹಿತಿ ಪ್ರಕಟಿಸುವ ಸಾಧ್ಯತೆ ಇದೆ.

 ಅಕ್ಟೋಬರ್‌ನಲ್ಲಿ ಆಂಡ್ರಾಯ್ಡ್ ಕಿಟ್‌ಕ್ಯಾಟ್‌ ಓಎಸ್‌ ಬಿಡುಗಡೆ!

ಇದೇ ತಿಂಗಳ ಆರಂಭದಲ್ಲಿ ಗೂಗಲ್‌ ತನ್ನ ಹೊಸ 4.4 ಆಂಡ್ರಾಯ್ಡ್‌ ಓಎಸ್‌ಗೆ ಕಿಟ್‌ಕ್ಯಾಟ್‌ ಎಂದು ಹೆಸರನ್ನಿರಿಸಿದೆ ಎಂದು ಆಂಡ್ರಾಯ್ಡ್‌ ಮುಖ್ಯಸ್ಥ ಭಾರತೀಯ ಮೂಲದ ಸುಂದರ್‌ ಪಿಚಾಯ್‌ ತಮ್ಮ ಗೂಗಲ್‌ ಪ್ಲಸ್‌ನಲ್ಲಿ ಪ್ರಕಟಿಸಿದ್ದರು.

ಇದೇ ಜುಲೈನಲ್ಲಿ ಆಂಡ್ರಾಯ್ಡ್‌ ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ ಅಪ್‌ಡೇಟ್‌ ಆವೃತ್ತಿಯನ್ನು ಗೂಗಲ್‌ ಬಿಡುಗಡೆ ಮಾಡಿತ್ತು. ಅಪ್‌ಡೇಟ್‌ ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌ನ್ನು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ನೆಕ್ಸಸ್‌ 7 ಟ್ಯಾಬ್ಲೆಟ್‌ 2 ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆ ಮಾಡಿದ್ದು,ಬಿಡುಗಡೆಯಾಗಿರುವ ನೆಕ್ಸಸ್‌ 7 ಟ್ಯಾಬ್ಲೆಟ್‌ ಈಗ ಹೊಸದಾಗಿ ಬಂದಿರುವ ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌ ಆವೃತ್ತಿಯಲ್ಲಿ ಮಾರುಕಟ್ಟೆಗೆ ಬಂದಿದೆ.

ಇದನ್ನೂ ಓದಿ: ಆಂಡ್ರಾಯ್ಡ್ ಮುಂದಿನ ಆವೃತ್ತಿ: ಲಡ್ಡು ಅಥವಾ ಲಸ್ಸಿ?

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+