ಆಂಡ್ರಾಯ್ಡ್ ಮುಂದಿನ ಆವೃತ್ತಿ: ಲಡ್ಡು ಅಥವಾ ಲಸ್ಸಿ?

Posted By:

ಕಳೆದ ವಾರ ಗೂಗಲ್‌ ಆಂಡ್ರಾಯ್ಡ್ 4.4 ಆಪರೇಟಿಂಗ್‌ ಸಿಸ್ಟಂಗೆ ಕಿಟ್‌ಕ್ಯಾಟ್‌‌ ಹೆಸರನ್ನು ಪ್ರಕಟಿಸಿದ್ದೇ ತಡ,ಈಗ ಕಿಟ್‌ಕ್ಯಾಟ್‌ ನಂತರದ ಆವೃತ್ತಿಗೆ ಯಾವ ಹೆಸರನ್ನು ಇಡಬೇಕು ಎಂಬುದರ ಬಗ್ಗೆ ಇಂಟರ್‌ನೆಟ್‌ನಲ್ಲಿ ಚರ್ಚೆ‌ ಆರಂಭವಾಗಿದೆ. ಈ ಸಂಬಂಧ ಆಂಡ್ರಾಯ್ಡ್‌ ಮುಂದಿನ ಆವೃತ್ತಿಗೆ ಲಡ್ಡು ಹಸರನ್ನು ಇಡಬೇಕು ಎಂದು ಭಾರತೀಯ ಆಂಡ್ರಾಯ್ಡ್‌ ಅಭಿಮಾನಿಗಳು ಇಂಟರ್‌ನೆಟ್‌ನಲ್ಲಿ ಆಂದೋಲನ ಆರಂಭಿಸಿದ್ದಾರೆ.

ಆಂಡ್ರಾಯ್ಡ್‌ ಜೆಲ್ಲಿಬೀನ್‌ ನಂತರದ ಬಿಡುಗಡೆಯಾಗಲಿರುವ ಓಎಸ್‌ಗೆ ಕಾಜುಕಟ್ಲಿ (KajuKatli)ಹೆಸರನ್ನು ಇಡಬೇಕು ಎಂದು ಭಾರತೀಯ ಆಂಡ್ರಾಯ್ಡ್‌ ಅಭಿಮಾನಿಗಳು ಇಂಟರ್‌ನೆಟ್‌ನಲ್ಲಿ ಆಂದೋಲನ ಆರಂಭಿಸಿದ್ದರು.ಇದಕ್ಕಾಗಿ ಹೊಸ ವೆಬ್‌ ಪುಟವನ್ನು ತೆರೆದು ಕಾಜುಕಟ್ಲಿಗೆ ಹೆಸರಿಗೆ ಬೆಂಬಲ ಸೂಚಿಸಬೇಕು ಎಂದು ವಿನಂತಿಸಿದ್ದರು. ಆದರೆ ಗೂಗಲ್‌ ಭಾರತೀಯರ ಆಂದೋಲನವನ್ನು ಲೆಕ್ಕಿಸದೇ ನೆಸ್ಟ್ಲೆಯ ಜನಪ್ರಿಯ ಉತ್ಪನ್ನ ಕಿಟ್‌ಕ್ಯಾಟ್‌‌ ಹೆಸರನ್ನು ಘೋಷಿಸಿತು.

ಆಂಡ್ರಾಯ್ಡ್ ಮುಂದಿನ ಆವೃತ್ತಿ: ಲಡ್ಡು ಅಥವಾ ಲಸ್ಸಿ?

ಈಗ ಮತ್ತೊಮ್ಮೆ ಭಾರತೀಯ ಟೆಕ್ಕಿಗಳು ಮುಂದಿನ ಆಂಡ್ರಾಯ್ಡ್‌ ಓಎಸ್‌ಗೆ 'ಲಡ್ಡು' ಹೆಸರನ್ನು ನಾಮಕರಣ ಮಾಡಬೇಕೆಂದು ಇಂಟರ್‌ನೆಟ್‌ನಲ್ಲಿ ಆಂದೋಲನವನ್ನು ಆರಂಭಿಸಿದ್ದಾರೆ.ಈ ಸಂಬಂಧ ಹೊಸ ಲಡ್ಡು ಪೇಜ್‌ನ್ನು ಓಪನ್‌ ಮಾಡಿದ್ದು,ಭಾರತದ ಸಿಹಿ ತಿಂಡಿ ಲಡ್ಡು ಹೆಸರಿಗಾಗಿ  ladoo.co ನಲ್ಲಿ ಹೋಗಿ ಸಹಿ ಹಾಕುವ ಮೂಲಕ ಬೆಂಬಲಿಸಬಹುದು.

ಈ ಮಧ್ಯೆ ಕಾನ್ಪುರದ ಐಐಟಿ ಖರಗ್‌ಪುರದ ವಿದ್ಯಾರ್ಥಿ‌ಗಳು ಗೂಗಲ್‌ ಆಂಡ್ರಾಯ್ಡ್‌ ಮುಖ್ಯಸ್ಥ ಭಾರತೀಯ ಮೂಲದ ಸುಂದರ್‍ ಪಿಚಾಯ್‌ಗೆ ಪತ್ರ ಬರೆದು ಮುಂದಿನ ಆಂಡ್ರಾಯ್ಡ್ ಆವೃತ್ತಿಗೆ 'ಲಸ್ಸಿ' ಹೆಸರನ್ನು ಇಡಬೇಕೆಂದು ವಿನಂತಿಸಿದ್ದಾರೆ.

ಗೂಗಲ್‌ ಬಿಡುಗಡೆ ಮಾಡಿದ ಆಪರೇಟಿಂಗ್‌ ಸಿಸ್ಟಂಗಳಿಗೆ ಚಾಕಲೇಟ್‌ ಫ್ಲೇವರ್‌ಗಳನ್ನುಇರಿಸಿದ್ದು, ಇಲ್ಲಿಯವರೆಗೆ ಎಂಟು ಚಾಕಲೇಟ್‌ ಫ್ಲೇವರ್‌ಗಳ ಓಎಸ್‌ನ್ನು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೇ ಇಂಗ್ಲಿಷ್‌ ವರ್ಣ‌ಮಾಲೆಯ A,B,C,D,E,F,G,H,I,J,K ಅಕ್ಷರಗಳ ಅನುಸರವಾಗಿ ತನ್ನ ಆಪರೇಟಿಂಗ್‌ ಸಿಸ್ಟಂಗಳ ಹೆಸರನ್ನು ಇರಿಸಿಕೊಂಡು ಬಂದಿರುವುದು ವಿಶೇಷ.

 ಇದನ್ನೂ ಓದಿ: ಗೂಗಲ್ ಟಾಪ್‌ 8 ಪ್ರೊಡಕ್ಟ್‌ಗಳನ್ನು ತಿಳಿದಿದ್ದೀರಾ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot