Subscribe to Gizbot

ಆಪಲ್‌ ಐಫೋನ್‌ 5 vs ಸ್ಯಾಮ್ಸಂಗ್‌ ಗ್ಯಾಲಾಕ್ಸಿ S3

Posted By: Staff
 ಆಪಲ್‌ ಐಫೋನ್‌ 5 vs ಸ್ಯಾಮ್ಸಂಗ್‌ ಗ್ಯಾಲಾಕ್ಸಿ S3

ಕೊನೆಗೂ ಮಾರುಕಟ್ಟೆಗೆ ಆಪಲ್‌ನ ಬಹು ನಿರೀಕ್ಷತ ಐಫೋನ್‌ 5 ಬಂದಾಗಿದೆ. ಆರನೇ ತಲೆಮಾರಿನ ಫೋನ್‌ ಎಂದೇ ಕರೆಸಿಕೊಂಡಿರುವ ಐಫೊನ್‌ 5 ಕೂಡ ಟೀಕೆಗಳಿಂದ ಹೊರತಾಗಿಲ್ಲ. ಆದರೆ ಅದೇನೇ ಟೀಕೆಗಳಿರಲಿ ಐಫೊನ್‌ 5 ಒಂದು ಅದ್ಭುತ ಫೋನ್‌ ಎಂಬುದರಲ್ಲಿ ಸಂಶಯವಿಲ್ಲ. ಅಂದಹಾಗೆ ಇತರೇ ಸ್ಮಾರ್ಟ್‌ಫೊನ್‌ಗಳಿಗೂ ಹಾಗೂ ಐಫೊನ್‌ 5 ನಡುವೇ ಅಂತಹ ವ್ಯತ್ಯಾಸ ಏನಿದೆ ಎಂಬುದನ್ನು ತಿಳಿಸುವ ಸಲುವಾಗಿ ಮಾರುಕಟ್ಟೆಯಲ್ಲನ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಆದಂತಹ ಗ್ಯಾಲಾಕ್ಸಿ S3 ಜೊತೆಗೆ ಹೊಲಿಕೆ ಮಾಡಿ ಗಿಜ್ಬಾಟ್‌ ನಿಮ್ಮೆದುರು ತಂದಿದೆ.

 

ವಿಶೇಷತೆ: ಆಪಲ್‌ ಐಫೋನ್‌ 5 ಡ್ಯೂಯೆಲ್‌-ಕೋರ್‌ ಕಾರ್ಟೆಕ್ಸ್‌ ಪ್ರೊಸೆಸರ್‌ ಚಾಲಿತವಾಗಿದ್ದು ಪವರ್‌ VR GPU ಸೇರಿದಂತೆ 1 GB RAM ಹೊಂದಿದೆ. ಅಲ್ಲದೆ 16GB, 32GB ಹಾಗೂ 64GB ವರೆಗಿನ ಮೆಮೊರಿ ವಿಸ್ತರಣೆಯ ಮಾದರಿಗಳಲ್ಲಿ ಲಭ್ಯವಿದೆ.

ಮತ್ತೊಂದೆಡೆ ಸ್ಯಾಮ್ಸಂಗ್‌ ಗ್ಯಾಲಾಕ್ಸಿ S3, Exynos 4212 ಕ್ವಾಡ್‌-ಕೋರ್‌ CPU, ಜೊತೆಗೆ 1.4GHz ಪ್ರೊಸೆಸರ್‌ ಹಾಗೂ Mali-400MP GPU ನಸೇರಿದಂತೆ 1GB RAM ಹೊಂದಿದೆ. ಹಾಗೂ ಐಫೋನ್‌ ನಂತೆಯೆ 16GB, 32GB ಹಾಗೂ 64GB ವರೆಗಿನ ಮೆಮೊರಿ ವಿಸ್ತರಣೆಯ ಮಾದರಿಗಳಲ್ಲಿ ಲಭ್ಯವಿದೆ.

ದರ್ಶಕ: ಐಫೊನ್‌ 5 4-ಇಂಚಿನ HD ದರ್ಶಕವಿದ್ದು 326PPI ನಷ್ಟು ಪಿಕ್ಸೆಲ್‌ ಡೆನ್ಸಿಟಿ ಹೊಂದಿದೆ. ಇದು ಗ್ಯಾಲಾಕ್ಸಿ S3 ಯ 306PPI ಗಿಂತಲೂ ಉತ್ತಮವಾಗಿದೆ.

ಸಾಫ್ಟ್‌ವೇರ್‌: ಆಪಲ್‌ ಐಫೋನ್‌ 5 iOS6 ಚಾಲಿತ ವಾಗಿದ್ದರೆ, ಗ್ಯಾಲಾಕ್ಸಿ S3 ಆಂಡ್ರಾಯ್ಡ್‌ 4.0 ಜೊತೆಗೆ ಟಚ್‌ವಿಜ್‌ 5.0 ಒಳಗೊಂಡಿದೆ. ಆದರೇ ಆಪಲ್‌ ಐಫೊನ್‌ನಲ್ಲಿರುವ ಆಪ್ಸ್‌ ಸ್ಟೋರ್‌ನಲ್ಲಿ ಆಕರ್ಷಕ 725,000 ಆಪ್ಸ್‌ಗಳು ಲಭ್ಯವಿದೆ. ಆದರೆ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಈ ಸೌಲಭ್ಯ ವಿಲ್ಲದೇ ಇರುವ ಕಾರಣ ಗೂಗಲ್‌ ಪ್ಲೇ ಮೂಲಕ ಡೌನ್ಲೋಡ್‌ ಮಾಡಿಕೊಳ್ಳ ಬೇಕಾಗುತ್ತದೆ.

ಕ್ಯಾಮೆರಾ: ಆಪಲ್‌ ಐಫೋನ್‌ 5, 8MP ಕ್ಯಾಮೆರಾ ಹೊಂದಿದ್ದು  3,264 x 2,448 ಬ್ಯಾಕ್‌ ಸೈಡ್‌ ಇಲ್ಯೂಮಿನೇಷನ್‌ ಸೆನ್ಸರ್‌ ಒಳಗೊಂಡಿದೆ. ಅಲ್ಲದೆ 5 ರೀತಿಯ ಲೆನ್ಸಗಳೊಂದಿಗೆ f/2.4 ಅಪೇಚರ್‌ ಹೊಂದಿದೆ.

ಸ್ಯಾಮ್ಸಂಗ್‌ ಗ್ಯಾಲಾಕ್ಸಿ S3 ಕೂಡ 8-MP ಕ್ಯಾಮೆರಾ ಹೊಂದಿದ್ದು 1.9-MP ಸಾಮರ್ತ್ಯದ ಸೆಕೆಂಡರೀ ಕ್ಯಾಮೆರಾ ಇದ್ದು 720P ವಿಡಿಯೋ ಸೆರೆಹಿಡಿಯಬಲ್ಲದು. ಆದರೂ ಕೂಡ ಕ್ಯಾಮೆರಾ ವಿಚಾರದಲ್ಲಿ ಸ್ಯಾಮ್ಸಂಗ್‌ ಐಫೋನ್‌ನ್ನು ಮೀರಿಸಲಾರದು.

ಬ್ಯಾಟರಿ: ಈ ವಿಚಾರದಲ್ಲಿ ಐಫೊನ್‌ 5 Li-Po ಬ್ಯಾಟರಿ ಹೊಂದಿದ್ದು 225 ಗಂಟೆಗಳ ಸ್ಟಾಂಡ್‌ಬೈ ಹಾಗೂ 8 ಗಂಟೆಗಳ ಟಾಕ್‌ಟೈಮ್‌ ನೀಡುತ್ತದೆ. ಹಾಗೂ ಗ್ಯಾಲಾಕ್ಸಿ S3, 2,100 mAh Li-ion ಬ್ಯಾಟರಿ ಹೊಂದಿದ್ದು 11.5 ಗಂಟೆಗಳ ಟಾಕ್‌ಟೈಮ್‌ ಗಾಗೂ 790 ಗಂಟೆಗಳ ಸ್ಟಾಂಡ್‌ಬೈ ನೀಡುತ್ತದೆ.

ಬೆಲೆ: ಅಮೇರಿಕಾದ ಮಾರುಕಟ್ಟೆ ದರದಂತೆ  ಐಫೊನ್‌ 5 $199 (ಸುಮಾರು Rs 11,000), 16 GB, $299 (ಸುಮಾರು. Rs 16,500), 32 GB ಹಾಗೂ 64GB $399 (ಸುಮಾರು. Rs 22,000) ಹೊಂದಿದೆ. ಮತ್ತೊಂದೆಡೆ ಗ್ಯಾಲಾಕ್ಸಿ S3, 16GB ರೂ.36,900 ಹಾಗೂ 32GB ರೂ 38,900 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot