Subscribe to Gizbot

ಇಂಟೆಕ್ಸ್ 'ಆಕ್ವಾ 4.5 3G' ಸ್ಮಾರ್ಟ್‌ಫೋನ್‌ ರೂ.3,349 ಕ್ಕೆ ಲಾಂಚ್‌

Written By:

ಇಂಟೆಕ್ಸ್ 'ಆಕ್ವಾ ಕೋಸ್ಟಾ 3G' ಸ್ಮಾರ್ಟ್‌ಫೋನ್ ಅನ್ನು ನೆನ್ನೆ (31 ಆಗಸ್ಟ್‌)ಲಾಂಚ್‌ ಮಾಡಿತ್ತು. ಅದರ ಬೆನ್ನಲ್ಲೇ ಇಂದು (1 ಸೆಪ್ಟೆಂಬರ್‌) ಮತ್ತೊಂದು 3G ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಆಕ್ವಾ ಸೀರೀಸ್‌ನಲ್ಲಿ ಲಾಂಚ್‌ ಆದ ಇಂದಿನ ಸ್ಮಾರ್ಟ್‌ಫೋನ್‌ ಹೆಸರು 'ಆಕ್ವಾ 4.5 3G'. ಇದರ ಬೆಲೆ ರೂ.3,349. ಈ ಸ್ಮಾರ್ಟ್‌ಫೋನ್‌ ಅನ್ನು ಕಂಪನಿ ವೆಬ್‌ಸೈಟ್‌ ಲೀಸ್ಟ್‌ನಲ್ಲಿ ಇಡಲಾಗಿದೆ.

ಇಂಟೆಕ್ಸ್ 'ಆಕ್ವಾ 4.5 3G' ಸ್ಮಾರ್ಟ್‌ಫೋನ್‌ ರೂ.3,349 ಕ್ಕೆ ಲಾಂಚ್‌

ಸ್ಮಾರ್ಟ್‌ಫೋನ್‌ 3 ಬಣ್ಣಗಳು ಚಾಂಪೇನ್‌ ಗೋಲ್ಡ್‌, ಬೂದು ಮತ್ತು ನೀಲಿಯಲ್ಲಿ ಲಭ್ಯ. 'ಆಕ್ವಾ 4.5 3G'. ಸ್ಮಾರ್ಟ್‌ಫೋನ್‌ ಆನ್‌ಲೈನ್‌ ಸಾಫ್ಟ್‌ವೇರ್‌ ಅಪ್‌ಡೇಟ್‌, ಮಾತ್ರಭಾಷಾ ಮತ್ತು ಓಪೆರಾ ಮಿನಿ ಆಪ್‌ಗಳ ಸಹಿತ ಬಂದಿದೆ. 'ಆಕ್ವಾ 4.5 3G' ಸ್ಮಾರ್ಟ್‌ಫೋನ್ ಆಕ್ವಾ 4.5 ಸೀರೀಸ್‌ನ ಮೂರನೇ ಸ್ಮಾರ್ಟ್‌ಫೋನ್‌ ಆಗಿದೆ. ಇತರೆ ಎರಡು ಸ್ಮಾರ್ಟ್‌ಫೋನ್‌ಗಳೆಂದರೆ ಆಕ್ವಾ 4.5 ಪ್ರೊ ಬೆಲೆ ರೂ 4,249 ಮತ್ತು ಆಕ್ವಾ 4.5E ಬೆಲೆ ರೂ. 3,499. ಆದರೆ ಈ ಸ್ಮಾರ್ಟ್‌ಫೋನ್‌ಗಳ ಲಭ್ಯತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಇಂಟೆಕ್ಸ್ 'ಆಕ್ವಾ 4.5 3G' ಸ್ಮಾರ್ಟ್‌ಫೋನ್ 4.5 ಇಂಚಿನ ಟಿಎನ್‌ ಡಿಸ್‌ಪ್ಲೇ ರೆಸಲ್ಯೂಶನ್‌ ಹೊಂದಿದ್ದು, 1.2GHz ಡ್ಯುಯಲ್ ಕೋರ್‌ ಮೀಡಿಯಾ ಟೆಕ್‌ ಪ್ರೊಸೆಸರ್ ಚಾಲಿತವಾಗಿದೆ. ಆಂಡ್ರಾಯ್ಡ್ 4.4.2 ಕಿಟ್‌ ಕ್ಯಾಟ್ ಓಎಸ್‌ನಿಂದ ರನ್‌ ಆಗಲಿದೆ. ಫೋನ್‌ 512MB RAM ಮತ್ತು 4GB ಆನ್‌ಬೋರ್ಡ್‌ ಸ್ಟೋರೇಜ್‌ ಹೊಂದಿದ್ದು, 32GB ವರೆಗೂ ವಿಸ್ತರಣೆ ಮಾಡಬಹುದು.

ಇಂಟೆಕ್ಸ್ 'ಆಕ್ವಾ 4.5 3G' ಸ್ಮಾರ್ಟ್‌ಫೋನ್‌ ರೂ.3,349 ಕ್ಕೆ ಲಾಂಚ್‌

ಇಂಟೆಕ್ಸ್ 'ಆಕ್ವಾ 4.5 3G' ಸ್ಮಾರ್ಟ್‌ಫೋಣ್‌ ಕ್ಯಾಮೆರಾ ಫೀಚರ್‌ ಬಗ್ಗೆ ಹೇಳುವುದಾದರೆ 2MP ಹಿಂಭಾಗ ಕ್ಯಾಮೆರಾ ಮತ್ತು ವಿಜಿಎ ಫ್ರಂಟ್‌ ಕ್ಯಾಮೆರಾ ಸಪೋರ್ಟ್ ಮಾಡುತ್ತದೆ. 1,500mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಸಂಪರ್ಕ ವೈಶಿಷ್ಟಗಳಲ್ಲಿ ಡ್ಯುಯಲ್‌ ಸಿಮ್‌ ಸಪೋರ್ಟ್‌ ಮಾಡುತ್ತದೆ, ವೈಫೈ, ಬ್ಲೂಟೂತ್‌ ಮತ್ತು ಎಜಿಪಿಎಸ್‌ ಸಪೋರ್ಟ್ ಮಾಡುತ್ತದೆ. ಸಾಮಾನ್ಯ ಜನರ ಕೈಗೆಟಕುವ ಬೆಲೆಯಲ್ಲಿ 'ಆಕ್ವಾ 4.5 3G' ಫೋನ್‌ ಲಭ್ಯವಿದೆ.

ರೂ.501 ರ 'ಛಾಂಪ್‌ಒನ್ ಸಿ1' ಫೋನ್‌ ರಿಜಿಸ್ಟರ್‌ ಆರಂಭ: ವಿಶೇಷತೆಗಳೇನು?

 

 

Read more about:
English summary
Intex Aqua 4.5 3G smartphone with Android Kitkat launched for Rs 3,349. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot