ರಿಲಾಯನ್ಸ್ ಜಿಯೋ 4ಜಿ ಟ್ರಯಲ್ ಸೇವೆ ಇಂದಿನಿಂದ ಆರಂಭ

By Shwetha
|

ರಿಲಾಯನ್ಸ್ ಜಿಯೋ 4ಜಿ ಸೇವೆಯು ಇಂದಿನಿಂದ ಅಧಿಕೃತವಾಗಿ ತನ್ನ ಸೇವೆಯನ್ನು ಆರಂಭಿಸಲಿದೆ. ಅದದಾಗ್ಯೂ ಸೇವೆಯು ಟ್ರಯಲ್ ಆಧಾರದಲ್ಲಿ ಮಾತ್ರವೇ ಬಳಕೆದಾರರಿಗೆ ದೊರೆಯಲಿದೆ. ಸಂಸ್ಥೆಯ ಚೇರ್‌ಮೆನ್ ಮತ್ತು ಎಮ್‌ಡಿ ಮುಕೇಶ್ ಅಂಬಾನಿ ಮುಂಬೈನಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ವಾಣಿಜ್ಯ ಸೇವೆಗಳನ್ನು ಜಿಯೋ ಯೋಜನೆಗಳು ಹೇಗೆ ಒದಗಿಸಲಿದೆ ಎಂಬುದರ ವಿವರಗಳನ್ನು ಘೋಷಣೆಯು ಒಳಗೊಂಡಿದೆ.

ಓದಿರಿ: ಜಿಯೋಮನಿ ವ್ಯಾಲೆಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿಲ್ಲವೇ?

ಡೇಟಾ ಸೇವೆಗಳನ್ನು ಬಳಸಿಕೊಂಡು, ದೈನಂದಿನ ಸಂಖ್ಯೆಗಳಲ್ಲಿಯೇ ಈ ಯೋಜನೆಗಳನ್ನು ಪಡೆದುಕೊಳ್ಳುವ ಅವಕಾಶವನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ವಿಷದವಾಗಿ ಮಾಹಿತಿಗಳನ್ನು ನೀಡುತ್ತಿದ್ದೇವೆ.

ವೋಲ್ಟ್ ಕರೆಗಳ ಸ್ವಭಾವ

ವೋಲ್ಟ್ ಕರೆಗಳ ಸ್ವಭಾವ

ವೋಲ್ಟ್ ಕರೆಗಳ ಸ್ವಭಾವವನ್ನು ಅನುಸರಿಸಿ, ಜಿಯೋ ಇದನ್ನು ಉಚಿತ ಕರೆಗಳ ಫೀಚರ್ ಅನ್ನಾಗಿ ಹೊಂದಿಸಲಿದೆ. ಡೇಟಾ ದರಗಳ ಮಾದರಿಯಲ್ಲಿ ಬಳಕೆದಾರರು ಇದನ್ನು ಪಾವತಿ ಮಾಡಬೇಕಾಗುತ್ತದೆ. ನಿಯಮಿತ ಕರೆಗಳಿಗೆ ಬಳಕೆದಾರರು ನೀಡುವ ದರವೇ ಇದಕ್ಕೂ ಅನ್ವಯವಾಗುತ್ತದೆ.

ಜಿಯೋ ಯೋಜನೆ

ಜಿಯೋ ಯೋಜನೆ

ಕಮರ್ಶಿಯಲ್ ಜಿಯೋ ಯೋಜನೆಗಳನ್ನು ಸದ್ಯಕ್ಕೆ ಘೋಷಿಸುತ್ತಿಲ್ಲ. 4ಜಿ ಫೋನ್ ಹೊಂದಿರುವ ಎಲ್ಲಾ ಬಳಕೆದಾರರಿಗೂ ಟ್ರಯಲ್ ಆವೃತ್ತಿಯನ್ನು ಇದು ನೀಡಲಿದೆ. ಸಪ್ಟೆಂಬರ್‌ನಿಂದ ಜನವರಿಯವರೆಗೆ ಈ ಟ್ರಯಲ್ ಅವಧಿ ನಡೆಯಲಿದೆ.

ಭಾರತೀಯ ಟೆಲಿಕಾಮ್ ಕ್ಷೇತ್ರ

ಭಾರತೀಯ ಟೆಲಿಕಾಮ್ ಕ್ಷೇತ್ರ

ಭಾರತೀಯ ಟೆಲಿಕಾಮ್ ಕ್ಷೇತ್ರದಲ್ಲಿ ಇದು ಸುಂಟರಗಾಳಿಯನ್ನು ಎಬ್ಬಿಸಲಿದೆ. ಜಿಯೋ ಒಂದು ಚಾಲೆಂಜಿನಂತೆ ಈ ಸವಾಲನ್ನು ಸ್ವೀಕರಿಸಿದ್ದು, ಡೇಟಾ ಸೇವೆಗಳ ಮೂಲಕವೇ ಇದು ಹಣ ಮಾಡಲಿದೆ. ಇತರ ಟೆಲಿಕಾಮ್ ಆಪರೇಟರ್‌ಗಳು ತಮ್ಮ ನಿಯಮಿತ ಕರೆಗಳ ಮೂಲಕವೇ ಹಣ ಗಳಿಸಲಿದ್ದಾರೆ.

ಪ್ರಿವ್ಯೂ ಪ್ರೊಗ್ರಾಮ್‌

ಪ್ರಿವ್ಯೂ ಪ್ರೊಗ್ರಾಮ್‌

ಇಂದಿನಿಂದ ತೊಡಗಿ ಕೆಲವು ತಿಂಗಳವರೆಗೆ, ಜಿಯೋ ತನ್ನ ಸೇವೆಯನ್ನು ಇನ್ನಷ್ಟು ಜನರಿಗೆ ಪ್ರಿವ್ಯೂ ಪ್ರೊಗ್ರಾಮ್‌ನಂತೆ ನೀಡಲಿದೆ. ಮೊದಲಿಗೆ ಇದು ತನ್ನ ಸಂಸ್ಥೆಯ ಉದ್ಯೋಗಿಗಳಿಗೆ ಮಾತ್ರವೇ ನೀಡಿತ್ತು.

4ಜಿ ಫೋನ್‌

4ಜಿ ಫೋನ್‌

ನಂತರ ಉಚಿತ ಜಿಯೋ ಸಿಮ್ ಅನ್ನು ಎಲ್‌ವೈಎಫ್ ಫೋನ್‌ಗಳಿಗೆ ನೀಡಲಾಗಿತ್ತು, ನಂತರ ಈ ಯೋಜನೆಯನ್ನು ಇತರ ಫೋನ್ ತಯಾರಕರಿಂದ ಮಾಡಲ್ಪಟ್ಟ 4ಜಿ ಫೋನ್‌ಗಳಿಗೆ ವಿಸ್ತರಿಸಲಾಗಿತ್ತು.

19 ಬ್ರ್ಯಾಂಡ್‌ಗಳ 4ಜಿ ಫೋನ್‌ಗಳಿಗೆ ಅಧಿಕೃತವಾಗಿ ಲಭ್ಯವಿದೆ

19 ಬ್ರ್ಯಾಂಡ್‌ಗಳ 4ಜಿ ಫೋನ್‌ಗಳಿಗೆ ಅಧಿಕೃತವಾಗಿ ಲಭ್ಯವಿದೆ

ಪ್ರಸ್ತುತ ಉಚಿತ ಜಿಯೋ ಸಿಮ್ 19 ಬ್ರ್ಯಾಂಡ್‌ಗಳ 4ಜಿ ಫೋನ್‌ಗಳಿಗೆ ಅಧಿಕೃತವಾಗಿ ಲಭ್ಯವಿದೆ. ಪ್ರತೀ ಸಿಮ್ ಕೂಡ 90 ದಿನಗಳ ಪ್ರಿವ್ಯೂ ಆಫರ್ ಅನ್ನು ಒಳಗೊಂಡಿದ್ದು ಇದು ಬಳಕೆದಾರರಿಗೆ ಅನಿಯಮಿತ 4ಜಿ ಡೇಟಾ ಮತ್ತು ವೋಲ್ಟ್ ಕಾಲ್ಸ್ ಅನ್ನು 90 ದಿನಗಳಿಗೆ ನೀಡಲಿದೆ.

ಡೇಟಾ ಯೋಜನೆ

ಡೇಟಾ ಯೋಜನೆ

ಡೇಟಾ ಯೋಜನೆಗಳ ಜೊತೆಗೆ, ಹೆಚ್ಚಿನ ಅಪ್ಲಿಕೇಶನ್‌ಗಳೊಂದಿಗೆ ಜಿಯೋ ಬಂದಿದೆ ಇದರಲ್ಲಿ ಸಂದೇಶ ಮತ್ತು ಮಲ್ಟಿಮೀಡಿಯಾ ಅಪ್ಲಿಕೇಶನ್‌ಗಳು ಒಳಗೊಂಡಿದೆ. ಇದು ಜಿಯೋ ಸಂಪರ್ಕಗಳ ಯೋಜನೆಗಳ ಕೊಡುಗೆಯೊಂದಿಗೆ ಬಂದಿದೆ.

ಜಿಯೊಫೈ

ಜಿಯೊಫೈ

ಸಿಮ್ ಕಾರ್ಡ್ ಮತ್ತು ಎಲ್‌ವೈಎಫ್ ಫೋನ್‌ಗಳಲ್ಲದೆ, ಕಂಪೆನಿಯು ಜಿಯೊಫೈ ಡಿವೈಸ್‌ಗಳನ್ನು ಕೂಡ ಮಾರಾಟ ಮಾಡಲಿದೆ, ಇದೊಂದು ರೀತಿಯ ವೈಫೈ ರೂಟರ್ ಆಗಿದ್ದು ಜಿಯೋ ಸಿಮ್ ಕಾರ್ಡ್‌ನ ಒಳಗೆ ಇರುತ್ತದೆ ಮತ್ತು ಇದನ್ನು ಬಳಸಿಕೊಂಡು ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳನ್ನು ಜಿಯೋ ನೆಟ್‌ವರ್ಕ್‌ಗೆ ಬಳಕೆದಾರರು ಸಂಪರ್ಕಪಡಿಸಿಕೊಳ್ಳಬಹುದಾಗಿದೆ.

Best Mobiles in India

English summary
Reliance Industries Limited (RIL) will formally launch the Jio 4G service from September 1.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X