Subscribe to Gizbot

ಬ್ಲ್ಯಾಕ್‌ಬೆರಿ ಕ್ಯೂ 5 ಬೆಲೆ ದಿಢೀರ್‌ ಇಳಿಕೆ

Written By:

ಬ್ಲ್ಯಾಕ್‌ಬೆರಿ ತನ್ನ ಕ್ವರ್ಟಿ‌ ಕೀಪ್ಯಾಡ್‌ ಹೊಂದಿರುವ ಕ್ಯೂ5 ಸ್ಮಾರ್ಟ್‌‌ಫೋನಿನ ಬೆಲೆಯನ್ನು ದಿಢೀರ್‌ ಇಳಿಕೆ ಮಾಡಿದೆ. ಮೇ ತಿಂಗಳಿನಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್‌‌‌ಫೋನಿಗೆ ಈ ಹಿಂದೆ 24,990 ರೂಪಾಯಿ ಬ್ಲ್ಯಾಕ್‌ಬೆರಿ ನಿಗದಿ ಮಾಡಿತ್ತು.ಆದರೆ ಈಗ ಐದು ಸಾವಿರ ರೂಪಾಯಿ ಕಡಿಮೆ ಮಾಡಿ 19,990 ಬೆಲೆಯನ್ನು ನಿಗದಿ ಮಾಡಿದೆ.

ಬ್ಲ್ಯಾಕ್‌ಬೆರಿ ಈ ಹಿಂದೆ ಬಿಡುಗಡೆ ಮಾಡಿದ್ದ ಬ್ಲ್ಯಾಕ್‌ಬೆರಿ 10.1 ಆಪರೇಟಿಂಗ್ ಸಿಸ್ಟಂ ಹೊಸ ಸ್ಮಾರ್ಟ್‌ಫೋನ್‌ ಬ್ಲ್ಯಾಕ್‌ಬೆರಿ ಝಡ್‌ 10ಮತ್ತು ಕ್ಯೂ 10 ಫೋನಿನ ಬೆಲೆಯನ್ನು ಈ ಹಿಂದೆ ಇಳಿಕೆ ಮಾಡಿತ್ತು. ಎಚ್‌ಡಿ ಸ್ಕ್ರೀನ್ ಹೊಂದಿರುವ ಬ್ಲ್ಯಾಕ್‌ಬೆರಿ ಝಡ್‌ 10ಗೆ ಫೆಬ್ರವರಿಯಲ್ಲಿ 43,490 ರೂಪಾಯಿ ಮಾರುಕಟ್ಟೆಯಲ್ಲಿ ನಿಗದಿಯಾಗಿತ್ತು.ಆದರೆ ಈಗ ಈ ಸ್ಮಾರ್ಟ್‌ಫೋನ್‌ 24999 ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನೂ ಜೂನ್‌ನಲ್ಲಿ ಬ್ಲ್ಯಾಕ್‌ಬೆರಿ ಕ್ಯೂ 10ಗೆ 44ಸಾವಿರ ರೂಪಾಯಿ ನಿಗದಿಯಾಗಿತ್ತು. ಆದರೆ ಈಗ ಈ ಸ್ಮಾರ್ಟ್‌ಫೋನ್‌ 35,999 ರೂ.ಬೆಲೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

 ಬ್ಲ್ಯಾಕ್‌ಬೆರಿ ಕ್ಯೂ 5 ಬೆಲೆ ದಿಢೀರ್‌ ಇಳಿಕೆ

ಬ್ಲ್ಯಾಕ್‌ಬೆರಿ ಕ್ಯೂ5
ವಿಶೇಷತೆ
ಸಿಂಗಲ್‌ ಸಿಮ್‌
3.1 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(720 x 720 ಪಿಕ್ಸೆಲ್‌)
ಬ್ಲ್ಯಾಕ್‌ಬೆರಿ 10.1 ಆಪರೇಟಿಂಗ್ ಸಿಸ್ಟಂ
1.2 GHz ಡ್ಯುಯಲ್‌ ಕೋರ್‍ ಪ್ರೊಸೆಸರ್‍
2ಜಿಬಿ ರ್‍ಯಾಮ್‌
8 ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಗ್ಲೋನಾಸ್‌
2180 mAh ಬ್ಯಾಟರಿ

ಇದನ್ನೂ ಓದಿ: ಹೊಸ ವರ್ಷ‌ಕ್ಕೆ ಬೆಲೆ ಇಳಿಕೆಯಾಗಿರುವ ಸ್ಮಾರ್ಟ್‌‌ಫೋನ್‌ಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot