ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ವಿಶೇಷತೆ ಏನು?

Written By:

ಸ್ಯಾಮ್‌ಸಂಗ್‌ ಹೊಸ ಹೊಸ ಸ್ಮಾರ್ಟ್‌‌‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದರೊಂದಿಗೆ ದುಬಾರಿ ಬೆಲೆಯ,ಇದುವರೆಗೂ ಯಾವುದೇ ಫೋನ್‌ಗೆ ನೀಡದ ವಿಶೇಷತೆ ಹೊಂದಿರುವ ಒಂದು ಸ್ಮಾರ್ಟ್‌‌ಫೋನ್‌ನ್ನು ಪ್ರತಿವರ್ಷ‌ ಬಿಡುಗಡೆ ಮಾಡುತ್ತದೆ.ಕಳೆದ ವರ್ಷ‌ ಬಿಡುಗಡೆ ಮಾಡಿದ ಎಸ್‌4 ಅಕ್ಟಾ ಕೋರ್‌ ಪ್ರೊಸೆಸರ್‌,ಕೆಲವು ಕ್ಯಾಮೆರಾ ವಿಶೇಷತೆ ಗ್ರಾಹಕರಿಗೆ ಇಷ್ಟವಾಗಿತ್ತು ಜೊತೆಗೆ ಈ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿತ್ತು.

ಗೆಲಾಕ್ಸಿ ಎಸ್‌4 ಮೈಲಿಗಲ್ಲು ಜೊತೆಗೆ ಕೆಲ ತಿಂಗಳ ಹಿಂದೆ ಬಿಡುಗಡೆ ಮಾಡಿದ್ದ ನೋಟ್‌ 3 ಫ್ಯಾಬ್ಲೆಟ್‌ ಸಹ ಮಾರಾಟದಲ್ಲಿಹೊಸ ಮೈಲಿಗನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಸ್ಯಾಮ್‌ಸಂಗ್‌ ವರ್ಷ ಬಿಡುಗಡೆ ಮಾಡಲಿರುವ ಗೆಲಾಕ್ಸಿ ಎಸ್‌5 ಫೋನಿನ ವಿಶೇಷತೆ ಬಗ್ಗೆ ಬಹಳ ನಿರೀಕ್ಷೆಯಿದೆ.ಜೊತೆಗೆ ವಿಶ್ವದ ನಂಬರ್‌ ಒನ್‌ ಮೊಬೈಲ್‌ ಬ್ರ್ಯಾಂಡ್‌ ಕಂಪೆನಿ ಎಂಬ ಪಟ್ಟವು ಸ್ಯಾಮ್‌ಸಂಗ್‌ಗೆ ದೊರಕಿರುವುದರಿಂದ ಗೆಲಾಕ್ಸಿ ಎಸ್‌5 ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

ಈಗ ಸ್ಮಾರ್ಟ್‌ಫೋನಿಗೆ ಸಂಬಂಧಿಸಿದಂತೆ ಸ್ಯಾಮ್‌ಸಂಗ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷ ಲೀ ಯಂಗ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಈ ಫೋನಿನ ಕೆಲವು ವಿಶೇಷತೆಯ ಬಗ್ಗೆ ಮಾತನಾಡಿದ್ದಾರೆ. ಮುಂದಿನ ಪುಟದಲ್ಲಿ ಲೀ ಯಂಗ್ ಗೆಲಾಕ್ಸಿ ಎಸ್‌5 ಬಗ್ಗೆ ಹೇಳಿದ ಮಾಹಿತಿ ಜೊತೆಗೆ ಈ ಫೋನಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿರುವ ವದಂತಿಯ ಸುದ್ದಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಮಾರ್ಟ್‌‌ಫೋನ್‌ನಲ್ಲಿ ಕಣ್ಣಿನ ಸ್ಕ್ಯಾನರ್‍!

ಸ್ಮಾರ್ಟ್‌‌ಫೋನ್‌ನಲ್ಲಿ ಕಣ್ಣಿನ ಸ್ಕ್ಯಾನರ್‍!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ವಿಶೇಷತೆ ಏನು?


ಗೆಲಾಕ್ಸಿ ಎಸ್‌ 5 ಕಣ್ಣನ್ನು ಸ್ಕ್ಯಾನ್‌ ಮಾ‍ಡುವ ಸೆನ್ಸರ್‌ನೊಂದಿಗೆ ಬರಲಿರುವುದನ್ನು ಲೀ ಯಂಗ್ ಖಚಿತಪಡಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಹೊಸ ಡಿಸ್ಪ್ಲೇಯೊಂದಿಗೆ ಬರಲಿದೆ ಎಂಬುದನ್ನು ಹೇಳಿದ್ದಾರೆ. ಆದರೆ ನಿಖರವಾಗಿ ಈ ವಿಚಾರವನ್ನು ಸ್ಪಷ್ಟವಾಗಿ ಹೇಳಿಲ್ಲ. ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ ಫೋನ್‌ 1440x2560 ಪಿಕ್ಸೆಲ್‌ ರೆಸೂಲೂಶನ್‌(2ಕೆ), 587 ಪಿಪಿಐ(ಪಿಕ್ಸೆಲ್‌ ಪರ್‌ ಇಂ‌ಚ್‌) ಇರುವ ಸ್ಕ್ರೀನ್‌ ಒಳಗೊಂಡಿರುತ್ತದೆ ಹೇಳಲಾಗುತ್ತಿದೆ.

 ಎರಡು ದೇಹದಲ್ಲಿ ಬಿಡುಗಡೆ !

ಎರಡು ದೇಹದಲ್ಲಿ ಬಿಡುಗಡೆ !

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ವಿಶೇಷತೆ ಏನು?


ಈ ಸ್ಮಾರ್ಟ್‌ಫೋನ್‌ ಎರಡು ದೇಹದಲ್ಲಿ ಬಿಡುಗಡೆಯಾಗಲಿದ್ದು, ಕಡಿಮೆ ಬೆಲೆ ಫೋನ್‌ನ್ನು ಪ್ಲ್ಯಾಸ್ಟಿಕ್‌ನಿಂದ ತಯಾರಿಸಿದ್ದರೆ, ದುಬಾರಿ ಬೆಲೆಯ ಫೋನ್‌ನ್ನು ಮೆಟಲ್‌‌ ತಯಾರಿಸಲಾಗುವುದು ಎನ್ನುವದನ್ನು ಈ ಸಂದರ್ಭಲ್ಲಿ ಲೀ ಯಂಗ್ ಹೇಳಿದ್ದಾರೆ.

 64 ಬಿಟ್‌ ಪ್ರೊಸೆಸರ್‌!

64 ಬಿಟ್‌ ಪ್ರೊಸೆಸರ್‌!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ವಿಶೇಷತೆ ಏನು?


ಸದ್ಯ ವಿಶ್ವದ ವೇಗದ ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಆಪಲ್‌ನ ಐಫೋನ್‌ 5ಎಸ್‌ 64 ಬಿಟ್‌ ಪ್ರೊಸೆಸರ್‌ ಹೊಂದಿದೆ. ಹೀಗಾಗಿ ಐಫೋನ್‌ 5ಎಸ್‌ಗೆ ಪ್ರತಿಯಾಗಿ ಸ್ಯಾಮ್‌ಸಂಗ್‌ ತನ್ನ ಗೆಲಾಕ್ಸಿ ಎಸ್‌5ಗೆ 64 ಬಿಟ್‌ ಪ್ರೊಸೆಸರ್ ನೀಡುವ ಸಾಧ್ಯತೆ ಇದೆ.

 4ಜಿಬಿ ರ್‍ಯಾಮ್‌!

4ಜಿಬಿ ರ್‍ಯಾಮ್‌!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ವಿಶೇಷತೆ ಏನು?


ಸ್ಯಾಮ್‌ಸಂಗ್‌ ಈಗಾಗಲೇ 4ಜಿಬಿ ರ್‍ಯಾಮ್‌ ತಯಾರಿಸುತ್ತಿರುವುದನ್ನು ಸ್ಯಾಮ್‌ಸಂಗ್‌ ಟುಮಾರೋ ವೆಬ್‌ಸೈಟ್‌ ಪ್ರಕಟಿಸಿದೆ. ಹೀಗಾಗಿ ಗೆಲಾಕ್ಸಿ ಎಸ್‌5 ಸ್ಯಾಮ್‌ಸಂಗ್‌ನ ದುಬಾರಿ ಫೋನ್‌ ಆಗಿರುವುದರಿಂದ 4ಜಿಬಿ ರ್‍ಯಾಮ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಏಪ್ರಿಲ್‌ನಲ್ಲಿ ಬಿಡುಗಡೆ!

ಏಪ್ರಿಲ್‌ನಲ್ಲಿ ಬಿಡುಗಡೆ!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ವಿಶೇಷತೆ ಏನು?


ಈ ಹಿಂದೆ ಗೆಲಾಕ್ಸಿ ಎಸ್‌5 ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಮಾಧ್ಯಮಗಳು ಪ್ರಕಟಿಸಿದ್ದವು. ಆದರೆ ಈಗ ಪ್ರಕಟಗೊಳ್ಳುತ್ತಿರುವ ವದಂತಿ ಪ್ರಕಾರ ಏಪ್ರಿಲ್‌ ಮೊದಲ ವಾರ ಅಥವಾ ಮಾರ್ಚ್‌ ಕೊನೆಯ ವಾರದಲ್ಲಿ ಸ್ಯಾಮ್‌ಸಂಗ್‌ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಸಾಧ್ಯತೆಯಿದೆ.

 16 ಎಂಪಿ ಕ್ಯಾಮೆರಾ:

16 ಎಂಪಿ ಕ್ಯಾಮೆರಾ:

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ವಿಶೇಷತೆ ಏನು?


ಗೆಲಾಕ್ಸಿ ಎಸ್‌5 ಹಿಂದುಗಡೆ 16 ಎಂಪಿ ಕ್ಯಾಮೆರಾ ಸೆನ್ಸರ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot