1500 ರೂಪಾಯಿಗೆ ಮೊಜಿಲ್ಲಾ ಓಎಸ್‌ ಸ್ಮಾರ್ಟ್‌ಫೋನ್!

Posted By:

ಗೂಗಲ್‌, ಮೈಕ್ರೋಸಾಫ್ಟ್‌,ಆಪಲ್‌ ಕಂಪೆನಿಗಳ ಸ್ಮಾರ್ಟ್‌‌ಫೋನ್‌ಗಳು ದುಬಾರಿಯಾಯಿತು ಎಂಬ ಚಿಂತೆಯಲ್ಲಿದ್ದೀರಾ? ಹಾಗಾದ್ರೆ ಇನ್ನು ಮುಂದೆ ಈ ಚಿಂತೆಯನ್ನು ಬಿಟ್ಟು ಬಿಡಿ.ಮೊಜಿಲ್ಲಾ ಓಎಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ 25 ಡಾಲರ್‌(ಅಂದಾಜು 1500 ರೂ.) ಬೆಲೆಯಲ್ಲಿ ಲಭ್ಯವಾಗಲಿದೆ.

ಆಂಡ್ರಾಯ್ಡ್‌‌,ವಿಂಡೋಸ್‌‌,ಐಓಎಸ್‌ಗೆ ಪ್ರತಿಯಾಗಿ ಮೊಜಿಲ್ಲಾ ಕಂಪೆನಿ ಅಭಿವೃದ್ಧಿ ಪಡಿಸಿರುವ ಫೈರ್‌ಫಾಕ್ಸ್‌ ಓಎಸ್‌ ಹೊಂದಿರುವ ಸ್ಮಾರ್ಟ್‌‌ಫೋನ್‌‌ಗಳು ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌‌ನಲ್ಲಿ ಬಿಡುಗಡೆಯಾಗಿದೆ.

ಝಡ್‌ಇಟಿಇ,ಆಲ್ಕಾಟೆಲ್‌,ಹುವಾವೇ ಕಂಪೆನಿಗಳ ಫೈರ್‌‌ಫಾಕ್ಸ್‌ ಓಎಸ್‌ ಹೊಂದಿರುವ ವಿವಿಧ ಸ್ಮಾರ್ಟ್‌‌ಫೋನ್‌‌ಗಳು ಸ್ಪೈನ್‌ನಲ್ಲಿ ನಡೆಯುತ್ತಿರುವ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌‌ನಲ್ಲಿ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮಾರುಕಟ್ಟೆ ನಮ್ಮ ಗುರಿಯಾಗಿದ್ದು ಅಲ್ಲಿನ ಜನರಿಗಾಗಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌‌ಫೋನ್‌ ನೀಡುವ ಉದ್ದೇಶದಿಂದ ಈ ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಮೊಜಿಲ್ಲಾ ಕಂಪೆನಿ ಸಿಇಒ ಜೆ ಸುಲ್ಲಿವನ್‌(Jay Sullivan) ಹೇಳಿದ್ದಾರೆ.

ಈ ಹಿಂದೆಯೇ ಫೈರ್‌ಫಾಕ್ಸ್‌ ಓಎಸ್‌ನಲ್ಲಿ ಕೆಲವೊಂದು ಕಂಪೆನಿಗಳು ಸ್ಮಾರ್ಟ್‌‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.ಸ್ಪೇನಿನ ಟೆಲಿಫೋನಿಕಾ ಕಂಪೆನಿ ಫೈರ್‌ಫಾಕ್ಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್‌ 2013 ಜುಲೈ ನಲ್ಲಿ ಬಿಡುಗಡೆ ಮಾಡಿತ್ತು. ಆಂಡ್ರಾಯ್ಡ್‌ ಮತ್ತು ಮೊಜಿಲ್ಲಾ ಫೈರ್‌ಫಾಕ್ಸ್‌ ಓಎಸ್‌ ಹೊಂದಿರುವ ವಿಶ್ವದ ಮೊದಲ ಡ್ಯುಯಲ್‌ ಓಎಸ್‌ ಸ್ಮಾರ್ಟ್‌ಫೋನ್‌ನ್ನು ಗೀಕ್ಸ್‌ ಕಂಪೆನಿ ಅಭಿವೃದ್ಧಿ ಪಡಿಸಿದೆ. ಸ್ಪೈನ್‌ನಲ್ಲಿ ನಡೆಯುತ್ತಿರುವ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌‌ನಲ್ಲಿ ಸಮ್ಮೇಳನದಲ್ಲಿ ಸ್ಮಾರ್ಟ್‌‌ಫೋನ್‌ಗಳನ್ನು ಬಿಡುಗಡೆ ಮಾತ್ರ ಮಾಡಿದ್ದು ಬೆಲೆಯನ್ನು ಕಂಪೆನಿಗಳು ಪ್ರಕಟಿಸಿಲ್ಲ.

ಇದನ್ನೂ ಓದಿ: ಫೈರ್‌ಫಾಕ್ಸ್‌ ಓಎಸ್‌ ಯೂಸರ್‌ ಇಂಟರ್‌ಫೇಸ್‌ ಹೇಗಿದೆ ನೋಡಿದ್ದೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಲ್ಕಾಟೆಲ್‌ ಒನ್‌ ಟಚ್‌ ಫೈರ್‌ ಸಿ

ಆಲ್ಕಾಟೆಲ್‌ ಒನ್‌ ಟಚ್‌ ಫೈರ್‌ ಸಿ


ವಿಶೇಷತೆ:
4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(320x480 ಪಿಕ್ಸೆಲ್‌)
ಫೈರ್‌ಫಾಕ್ಸ್‌1.3 ಓಎಸ್‌
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
512 ಎಂಬಿ ರ್‍ಯಾಮ್‌
4ಜಿಬಿ ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಎನ್‌ಎಫ್‌ಸಿ,ಜಿಪಿಎಸ್‌,ಬ್ಲೂಟೂತ್‌
1300 mAh ಬ್ಯಾಟರಿ

 ಝಡ್‌ಇಟಿಇ ಓಪನ್‌ ಸಿ

ಝಡ್‌ಇಟಿಇ ಓಪನ್‌ ಸಿ

ವಿಶೇಷತೆ:

4 ಇಂಚಿನ ಕೆಪಾಸಿಟಿವ್‌ ಸ್ಕ್ರೀನ್(480x800 ಪಿಕ್ಸೆಲ್‌)
ಫೈರ್‌ಫಾಕ್ಸ್ ಓಎಸ್‌
1.2GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌
512 ಎಂಬಿ ರ್‍ಯಾಮ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾವಿಲ್ಲ

 ಹುವಾವೇ ವೈ 300

ಹುವಾವೇ ವೈ 300


ವಿಶೇಷತೆ:
4 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(480x800 ಪಿಕ್ಸೆಲ್‌)
ಫೈರ್‌ ಫಾಕ್ಸ್‌ 1.1 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
512 ಎಂಬಿ ರ್‍ಯಾಮ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
ವೈಫೈ,3ಜಿ,ಜಿಪಿಎಸ್‌,ಬ್ಲೂಟೂತ್‌
1950 mAh ಬ್ಯಾಟರಿ

 ಆಲ್ಕಾಟೆಲ್‌ ಒನ್‌ ಟಚ್‌ ಫೈರ್‌‌ ಇ

ಆಲ್ಕಾಟೆಲ್‌ ಒನ್‌ ಟಚ್‌ ಫೈರ್‌‌ ಇ

ವಿಶೇಷತೆ:
4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(540x960 ಪಿಕ್ಸೆಲ್‌)
ಫೈರ್‌ ಫಾಕ್ಸ್‌ ಓಎಸ್‌
1200 MHz ಪ್ರೊಸೆಸರ್‌
512 ಎಂಬಿ ರ್‍ಯಾಮ್‌
4ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌‌
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1700mAh ಬ್ಯಾಟರಿ

 ಝಡ್‌ಟಿಇ ಓಪನ್‌ II

ಝಡ್‌ಟಿಇ ಓಪನ್‌ II


ವಿಶೇಷತೆ:
3.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(320x480 ಪಿಕ್ಸೆಲ್‌)
ಫೈರ್‌ಫಾಕ್ಸ್‌ ಓಎಸ್‌
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
2ಜಿಬಿ ಆಂತರಿಕ ಮೆಮೊರಿ
256 ಎಂಬಿ ರ್‍ಯಾಮ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot